ಕ್ರಿಕೆಟಿಗ ವಿರಾಟ್ ಕೊಹ್ಲಿ ಬಳಸುವ ಇಯರ್‌ಬಡ್ಸ್ ಇದು, ಬೆಲೆ ಎಷ್ಟು ಗೊತ್ತಾ!?
ಸಾಮಾನ್ಯವಾಗಿ ನಮ್ಮ ಭಾರತದಲ್ಲಿ ಸೆಲೆಬ್ರಿಟಿಗಳು (Celebrities) ಯಾವೆಲ್ಲಾ ಸ್ಮಾರ್ಟ್ ಡಿವೈಸ್‌ಗಳನ್ನು ಬಳಕೆ ಮಾಡುತ್ತಾರೆ ಎಂಬ ಕುತೂಹಲ ಜನರಲ್ಲಿ ಹೆಚ್ಚಾಗಿರುತ್ತದೆ. ಅದರಲ್ಲೂ ತಮ್ಮಿಷ್ಟದ ಹೀರೋ ಬಳಕೆ ಮಾಡುವ ಡಿವೈಸ್ ಅನ್ನೇ ಅಭಿಮಾನಿಗಳು ಖರೀದಿ ಮಾಡಿ ಬಳಕೆ ಮಾಡುವುದು ಸರ್ವೇ ಸಾಮಾನ್ಯ. ಈ ನಡುವೆ ವಿರಾಟ್ ಕೊಹ್ಲಿ(Virat Kohli) ಬಳಕೆ ಮಾಡುವ ಈ ಡಿವೈಸ್ ಬಗ್ಗೆ ಮಾಹಿತಿ ತಿಳಿದುಬಂದಿದೆ.
ಹೌದು, ವಿರಾಟ್ ಕೊಹ್ಲಿ ಅವರು ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಸ್ಟಾರ್ ಆಗಿದ್ದಾರೆ. ಇವರ ಅಭಿಮಾನಿಗಳು ಪ್ರತಿ ಹಳ್ಳಿಗಳಲ್ಲೂ ಇದ್ದು, ಆ ಅಭಿಮಾನಿಗಳಲ್ಲಿ ಕೊಹ್ಲಿ ಅವರ ಸ್ಟೈಲ್ ಹಾಗೂ ಅವರ ಡ್ರೆಸ್ ಕೋಡ್ ಅನ್ನೇ ಅನುಸರಿಸುವ ಅದೆಷ್ಟೋ ಯುವಕರನ್ನು ನಾವು ನೋಡಿರಬಹುದು. ಅದರಂತೆ ಈಗ ಕೊಹ್ಲಿ ಯಾವ ಇಯರ್‌ಬಡ್ಸ್ ಬಳಕೆ ಮಾಡುತ್ತಾರೆ?, ಅದು ಏನೆಲ್ಲಾ ಫೀಚರ್ಸ್ ಹೊಂದಿದೆ ಎಂಬ ಅಚ್ಚರಿ ಮಾಹಿತಿ ಇಲ್ಲಿದೆ ನೋಡಿ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಇತ್ತೀಚೆಗೆ ವೆಸ್ಟ್ ಇಂಡೀಸ್ ಬ್ಯಾಟರ್ ಜೋಶುವಾ ಡಾ ಸಿಲ್ವಾ (Joshua Da Silva)ಅವರ ತಾಯಿ ವಿರಾಟ್ ಕೊಹ್ಲಿಯನ್ನು ಭೇಟಿ ಮಾಡಿದ ವಿಡಿಯೋವನ್ನು ಶೇರ್ ಮಾಡಿಕೊಂಡಿದೆ. ಆ ವಿಡಿಯೋದಲ್ಲಿ ವೆಸ್ಟ್ ಇಂಡೀಸ್ ವಿಕೆಟ್ ಕೀಪರ್ ಸಿಲ್ವಾ ಅವರ ತಾಯಿ ಕೊಹ್ಲಿಯನ್ನು ತಬ್ಬಿಕೊಳ್ಳುತ್ತಿರುವುದನ್ನು ಕಾಣಬಹುದು. ಇದಾದ ನಂತರ ಅವರು ಕಣ್ಣೀರು ಹಾಕಿದ್ದಾರೆ. ಇನ್ನು ಸಿಲ್ವಾ ಅವರ ತಾಯಿ ವಿರಾಟ್ ಕೊಹ್ಲಿಗಾಗಿ ಪಂದ್ಯವನ್ನು ವೀಕ್ಷಣೆ ಮಾಡಲು ಬರುತ್ತಿದ್ದೇವೆ ಎಂದೇ ತಿಳಿಸಿ ಬಂದಿದ್ದರಂತೆ.
ಈ ವಿಡಿಯೋದಲ್ಲಿ ಇದು ಒಂದು ಕಡೆ ಭಾವನಾತ್ಮಕ ಸನ್ನವೇಶ ಕಂಡುಬಂದರೆ ಮತ್ತೊಂದೆಡೆ ಕೊಹ್ಲಿ ಅವರು ಕಿವಿಯಲ್ಲಿ ಧರಿಸಿದ್ದ ಡಿವೈಸ್ ಬಗ್ಗೆಯೂ ಚರ್ಚೆ ಆಗುತ್ತಿದೆ. ಅದರಲ್ಲಿ ಕೆಲವರು ಅದನ್ನು ಆಪಲ್ ಡಿವೈಸ್ ಎಂದು ಹೇಳುತ್ತಿದ್ದಾರೆ. ಆದರೆ, ಖಂಡಿತಾ ಅದು ಆಪಲ್‌ನ ಏರ್‌ಪಾಡ್ಸ್, ಏರ್‌ಪಾಡ್ಸ್ ಪ್ರೊ ಅಥವಾ ಏರ್‌ಪಾಡ್ಸ್ ಪ್ರೊ ಮ್ಯಾಕ್ಸ್ ಅಲ್ಲ ಬದಲಾಗಿ ಬೀಟ್ಸ್ ಪವರ್‌ಬೀಟ್ಸ್ ಪ್ರೊ TWS (Beats Powerbeats Pro TWS) ಆಗಿದೆ.
ನೀವಂದುಕೊಂಡಿರಬಹುದು ದೊಡ್ಡ ದೊಡ್ಡ ಸೆಲೆಬ್ರಿಟಿಗಳೆಲ್ಲಾ ಕೇವಲ ಆಪಲ್ ಡಿವೈಸ್‌ಗಳನ್ನು(Apple device) ಬಳಕೆ ಮಾಡುತ್ತಾರೆ ಎಂದು. ಅದಾಗ್ಯೂ ಇದರಲ್ಲಿ ಗಮನಿಸಬೇಕಾದ ವಿಷಯ ಏನೆಂದರೆ ಬೀಟ್ಸ್ ಕಂಪೆನಿಯು ಬೇರೆ ಯಾವುದೇ ಮಾಲೀಕತ್ವದ ಕಂಪೆನಿಯಲ್ಲ ಬದಲಾಗಿ ಆಪಲ್ ಸ್ವಾದೀನಪಡಿಸಿಕೊಂಡ ಕಂಪೆನಿಯಾಗಿದೆ. ಇದು ಜನಪ್ರಿಯ ಬೀಟ್ಸ್ ಹೆಡ್‌ಫೋನ್‌ಗಳು, ಸ್ಪೀಕರ್‌ಗಳು ಮತ್ತು ಆಡಿಯೊ ಸಾಫ್ಟ್‌ವೇರ್‌ಗಳನ್ನು ನಿರ್ಮಾಣ ಮಾಡುವ ಕೆಲಸ ಮಾಡುತ್ತದೆ.
ಇನ್ನು ಕೆಲವು ಬೀಟ್ಸ್ TWS ಇಯರ್‌ಬಡ್‌ಗಳು ಮತ್ತು ಹೆಡ್‌ಫೋನ್‌ಗಳು ಕೆಲವು ಆಪಲ್ ಇಮ್ಯಾಜಿನ್ ಸ್ಟೋರ್‌ಗಳಲ್ಲಿ ಮತ್ತು ಕೆಲವು ಇ-ಕಾಮರ್ಸ್ ವೆಬ್‌ಸೈಟ್‌ಗಳಲ್ಲಿ ಲಭ್ಯ ಇವೆ. ಬೀಟ್ಸ್ ಪವರ್‌ಬೀಟ್ಸ್ ಪ್ರೊ TWS ಇಯರ್‌ಬಡ್‌ಗಳು ಅಮೆಜಾನ್ ಇಂಡಿಯಾ ವೆಬ್‌ಸೈಟ್‌ನಲ್ಲಿ 31,500ರೂ. ಗಳಿಗೆ ಲಿಸ್ಟ್ ಮಾಡಿದ್ದರೆ. ಪವರ್ ಬಿಟ್ಸ್ ಪ್ರೊ TWS ಇಯರ್‌ಬಡ್‌ಗಳನ್ನು ಫ್ಲಿಪ್‌ಕಾರ್ಟ್‌ನಲ್ಲಿ ಲಿಸ್ಟ್ ಮಾಡಲಾಗಿದೆ. ಆದರೆ, ಸದ್ಯಕ್ಕೆ ಅವುಗಳು ಲಭ್ಯವಿಲ್ಲ ಎಂದು ತೋರಿಸಲಾಗುತ್ತಿದೆ.
ಅದಗ್ಯೂ ಈ ಡಿವೈಸ್‌ಗಳನ್ನು ಯುಎಸ್‌ನಲ್ಲಿನ ಆಪಲ್ ಸ್ಟೋರ್‌ಗಳ ಮೂಲಕ ಖರೀದಿ ಮಾಡಿರಬಹುದು ಎಂದು ಹೇಳಲಾಗುತ್ತಿದೆ. ಅಮೆಜಾನ್‌ನಲ್ಲಿ ಮತ್ತು ಇತರ ರಿಟೇಲರ್ ಸ್ಟೋರ್‌ಗಳಲ್ಲಿ ಈ ಡಿವೈಸ್ ಲಭ್ಯ ಇವೆ. ಅದರಲ್ಲೂ ಪವರ್‌ಬೀಟ್ಸ್ ಪ್ರೊ ಅನ್ನು ಮೊದಲು 2018 ರಲ್ಲಿ ಲಾಂಚ್ ಮಾಡಲಾಗಿದ್ದು, ಆಪಲ್ ಬೀಟ್ಸ್ ಪವರ್‌ಬೀಟ್ಸ್ ಪ್ರೊ TWS ನ ಇತ್ತೀಚಿನ ಆವೃತ್ತಿಯನ್ನು ನವೆಂಬರ್ 2022 ರಲ್ಲಿ ಲಾಂಚ್ ಮಾಡಲಾಗಿದೆ.
ಈ ಡಿವೈಸ್‌ನ ಫೀಚರ್ಸ್ ವಿಷಯಕ್ಕೆ ಬಂದರೆ ಬಡ್‌ಗಳು ಸಕ್ರಿಯ ಶಬ್ದ ರದ್ದತಿಯೊಂದಿಗೆ ಟ್ರೂ ವಾಯರ್‌ಲೆಸ್ ಇಯರ್‌ಬಡ್‌ಗಳಾಗಿದ್ದು, ಡಾಲ್ಬಿ ಅಟ್ಮಾಸ್ ಫಾರ್ಮ್ಯಾಟ್‌ನೊಂದಿಗೆ ಕಂಪನಿಯ ಪ್ರಾದೇಶಿಕ ಆಡಿಯೊಗೆ ಬೆಂಬಲ ನೀಡಲಿವೆ. ಇದರೊಂದಿಗೆ IPX4 ರೇಟಿಂಗ್ ಹೊಂದಿದ್ದು, ವಾಟರ್ ರೆಸಿಸ್ಟೆಂಟ್ ಸೌಲಭ್ಯ ಪಡೆದುಕೊಂಡಿವೆ. ಈ ನಡುವೆ ಕೋಹ್ಲಿ ಫೋನ್ ಬಗ್ಗೆಯೂ ಹಲವಾರು ಚರ್ಚೆಗಳು ನಡೆದಿವೆ.
ಈ ಹಿಂದೆ ವೈರಲ್ ಆದ ಫೋಟೋ ಪ್ರಕಾರ, ವಿರಾಟ್ ಕೊಹ್ಲಿ ಎರಡು ಮೊಬೈಲ್ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಅಂದರೆ ಒಂದು ಆಪಲ್ ಐಫೋನ್ ಮತ್ತು ಇನ್ನೊಂದು ಫೋಲ್ಡಬಲ್ ಫೋನ್ ಇರಲಿದೆ ಎಂದು ತಿಳಿದುಬಂದಿದೆ. ಈ ಪ್ರತಿ ಫೋನ್‌ಗಳ ಬೆಲೆ ಲಕ್ಷಕ್ಕೂ ಅಧಿಕವಾಗಿದೆ. ಅದಾಗ್ಯೂ ನಿಖರವಾಗಿ ಯಾವ ಮಾಡೆಲ್ ಎಂದು ತಿಳಿದುಬಂದಿಲ್ಲ.
ವಿರಾಟ್ ಕೊಹ್ಲಿ ವಿಶ್ವದ ಅತ್ಯಂತ ಪ್ರಸಿದ್ಧ ಆಟಗಾರರಲ್ಲಿ ಒಬ್ಬರಾಗಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ 242 ಮಿಲಿಯನ್ ಫಾಲೋವರ್ಸ್ ಹೊಂದಿದ್ದಾರೆ. ವಿರಾಟ್ ಅವರ ಜನಪ್ರಿಯತೆ ಭಾರತದಲ್ಲಿ ಮಾತ್ರವಲ್ಲ, ವಿಶ್ವಾದ್ಯಂತ ಇದೆ. ಕ್ರಿಕೆಟ್ ಕ್ಷೇತ್ರದಿಂದ ಹಿಡಿದು ವಿರಾಟ್ ತಮ್ಮ ವೈಯಕ್ತಿಕ ಜೀವನದಲ್ಲಿ ಏನೆನೆಲ್ಲಾ ಬಳಕೆ ಮಾಡುತ್ತಾರೆ ಎಂಬುದು ಪ್ರತಿ ಕ್ಷಣಕ್ಕೂ ಸಾಕಷ್ಟು ಚರ್ಚೆಯಾಗುತ್ತಿರುತ್ತದೆ.


Click it and Unblock the Notifications








