Home
ಸುದ್ದಿಜಾಲ

ಸ್ಮಾರ್ಟ್‌ಫೋನ್‌ಗಳಲ್ಲಿನ ಸೆನ್ಸರ್‌ಗಳ ಬಗ್ಗೆ ನಿಮಗೆ ಗೊತ್ತಾ?..ಇವುಗಳಿಂದ ಲಾಭವೇನು?

ಸ್ಮಾರ್ಟ್‌ಫೋನ್‌ನಲ್ಲಿ ನೀವು ಸಂಚರಿಸಿದ ದೂರವನ್ನು ತಿಳಿದುಕೊಳ್ಳಬಹುದು, ದಿಕ್ಕುಗಳ ಬಗ್ಗೆ ಮಾಹಿತಿ ಪಡೆಯಬಹುದು. ಹಾಗೆಯೇ ತಂತಾನೆ ಸುತ್ತಮುತ್ತಲಿನ ಪರಿಸರದ ಬೆಳಕನ್ನು ಆಧರಿಸಿ ಬ್ರೈಟ್‌ನೆಸ್‌ ಅನ್ನು ಸೆಟ್‌ ಮಾಡಿಕೊಳ್ಳುವುದನ್ನು ಗಮನಿಸಿರಬಹುದು, ಅಷ್ಟೆಲ್ಲಾ ಯಾಕೆ ಪ್ರತಿ ಸಲವೂ ನೀವು ನಿಮ್ಮ ಫೋನ್‌ ಅನ್ನು ಅನ್‌ಲಾಕ್‌ ಮಾಡಬೇಕು ಎಂದರೆ ಫಿಂಗರ್‌ಪ್ರಿಂಟ್‌ ಆಯ್ಕೆ ಕೇಳುವುದನ್ನು ನೋಡಿರಬಹುದು. ಈ ಕಾರ್ಯಗಳು ನಿಮ್ಮ ಫೋನ್‌ನಲ್ಲಿ ಯಾವ ಸೆನ್ಸರ್‌ನಿಂದ ಕೆಲಸ ಮಾಡುತ್ತವೆ ಎಂಬುದರ ಬಗ್ಗೆ ನಿಮಗೇನಾದರೂ ಗೊತ್ತಿದೆಯೇ?.

ಸ್ಮಾರ್ಟ್‌ಫೋನ್‌ಗಳಲ್ಲಿನ ಸೆನ್ಸರ್‌ಗಳ ಬಗ್ಗೆ ನಿಮಗೆ ಗೊತ್ತಾ?..ಇವುಗಳಿಂದ ಲಾಭವೇನು

ಹೌದು, ಸ್ಮಾರ್ಟ್‌ಫೋನ್‌ ವಿಚಾರಕ್ಕೆ ಬಂದರೆ ಕ್ಯಾಮೆರಾ, ಫೋನ್ ಶೈಲಿ, ಬ್ಯಾಟರಿ ಸಾಮರ್ಥ್ಯ ಹಾಗೂ ಇನ್ನಿತರೆ ಮಾಹಿತಿಯನ್ನು ಸಾಮಾನ್ಯವಾಗಿ ತಿಳಿದುಕೊಳ್ಳಲಾಗುತ್ತದೆ.ಆದರೆ, ಬಳಕೆದಾರರಿಗೆ ಅನುವು ಮಾಡಿಕೊಡುವ ಉದ್ದೇಶದಿಂದ ಹಲವಾರು ರೀತಿಯ ಸೆನ್ಸರ್‌ಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂಬುದು ಬಹುಪಾಲು ಮಂದಿಗೆ ತಿಳಿದಿಲ್ಲ. ಹಾಗಿದ್ರೆ, ಯಾವೆಲ್ಲಾ ಸೆನ್ಸರ್‌ಗಳು ಹೇಗೆ ಕೆಲಸ ಮಾಡಲಿವೆ, ಇವು ಬಳಕೆದಾರರಿಗೆ ಯಾವ ರೀತಿ ಉಪಯೋಗ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಅಕ್ಸೆಲೆರೊಮೀಟರ್(Accelerometer)

ಅಕ್ಸೆಲೆರೊಮೀಟರ್‌ಅನ್ನು ಸಾಮಾನ್ಯವಾಗಿ ಎಲ್ಲಾ ಸ್ಮಾರ್ಟ್‌ಫೋನ್‌ಗಳಿಗೂ ನೀಡಲಾಗುತ್ತದೆ. ಈ ಸೆನ್ಸರ್‌ ಬಳಕೆದಾರರು ತಮ್ಮ ಫೋನ್‌ ಅನ್ನು ಯಾವ ರೀತಿ ಹಿಡಿದುಕೊಂಡಿದ್ದಾರೆ ಎನ್ನುವುದನ್ನು ಫೈಂಡ್‌ ಮಾಡಲಾಗುತ್ತದೆ. ಈ ಮೂಲಕ ಸಾಫ್ಟ್‌ವೇರ್‌ಗೆ ಈ ಸೆನ್ಸರ್‌ ಮಾಹಿತಿ ರವಾನಿಸಿ ತಕ್ಷಣವೇ ಫೋನ್‌ ಡಿಸ್‌ಪ್ಲೇ ನಿಮಗೆ ಅಗತ್ಯವಾಗುವ ಹಾಗೆ ಟರ್ನ್‌ ಆಗುವಂತೆ ಮಾಡಲಾಗುತ್ತದೆ.

ಆಂಬಿಯೆಂಟ್ ಲೈಟ್ ಸೆನ್ಸರ್

ಸದ್ಯಕ್ಕೆ ಫೋನ್‌ಗಳಲ್ಲಿ ಹೆಚ್ಚಿನ ಬ್ರೈಟ್‌ನೆಸ್‌ ಆಯ್ಕೆ ನೀಡುವುದು ವಿಶೇಷ ಫೀಚರ್ಸ್‌ಗಳಲ್ಲಿ ಒಂದಾಗಿದೆ. ಆದರೆ, ಈ ವಿಚಾರದಲ್ಲಿ ಕೆಲಸ ಮಾಡುವುದು ಆಂಬಿಯೆಂಟ್ ಲೈಟ್ ಸೆನ್ಸರ್. ಇದು ನಿಮ್ಮ ಸ್ಮಾರ್ಟ್‌ಫೋನ್‌ನ ಬ್ರೈಟ್‌ನೆಸ್‌ ಅನ್ನು ಕಂಟ್ರೋಲ್‌ ಮಾಡುತ್ತದೆ. ಈ ಮೂಲಕ ಆಟೋಮ್ಯಾಟಿಕ್‌ ಆಗಿ ಬಳಕೆದಾರರ ಸುತ್ತಮುತ್ತಲಿನ ಬೆಳಕನ್ನು ಆಧಾರವಾಗಿರಿಸಿಕೊಂಡು ಬ್ರೈಟ್‌ನೆಸ್ ಸೆಟ್‌ ಮಾಡುವ ಕೆಲಸವನ್ನು ಈ ಸೆನ್ಸರ್‌ ಮಾಡುತ್ತದೆ.

ಸ್ಮಾರ್ಟ್‌ಫೋನ್‌ಗಳಲ್ಲಿನ ಸೆನ್ಸರ್‌ಗಳ ಬಗ್ಗೆ ನಿಮಗೆ ಗೊತ್ತಾ?..ಇವುಗಳಿಂದ ಲಾಭವೇನು

ಗೈರೊಸ್ಕೋಪ್ (Gyroscope)

ಗೈರೊಸ್ಕೋಪ್ ಇತ್ತೀಚಿನ ದಿನಗಳಲ್ಲಿ ಹೆಚ್ಚು ಬಳಕೆಯಾಗುತ್ತಿರುವ ಸೆನ್ಸರ್‌ ಆಗಿದೆ. ಯಾಕೆಂದರೆ ಇಂದು ಬಹುಪಾಲು ಮಂದಿ 360 ಡಿಗ್ರಿ ವಿಡಿಯೋಗಳನ್ನು ವೀಕ್ಷಣೆ ಮಾಡುತ್ತಾರೆ. ಹಾಗೆಯೇ ಚಿತ್ರೀಕರಿಸುತ್ತಾರೆ. ಇದಕ್ಕೆ ಬೆಂಬಲ ನೀಡುವುದು ಗೈರೊಸ್ಕೋಪ್. ಈ ಮೂಲಕ ಬಳಕೆದಾರರು ಫೋನ್ ಅನ್ನು ಯಾವ ಕೋನದಿಂದ ಹಿಡಿದುಕೊಂಡಿದ್ದಾರೆ, ಹಾಗೆಯೇ ಫೋನ್ ಎಷ್ಟು ಡಿಗ್ರಿ ವಾಲುತ್ತದೆ ಎಂಬುದನ್ನು ಆಧಾರವಾಗಿರಿಸಿಕೊಂಡು ಬಳಕೆಗೆ ಅನುಕೂಲ ಮಾಡಿಕೊಡುತ್ತದೆ.

ಫಿಂಗರ್‌ಪ್ರಿಂಟ್ ಸೆನ್ಸರ್‌

ಫಿಂಗರ್‌ಪ್ರಿಂಟ್ ಸೆನ್ಸರ್‌ ಸದ್ಯಕ್ಕೆ ಹೆಚ್ಚಾಗಿ ಬಳಕೆಯಾಗುತ್ತಿರುವ ಸೆನ್ಸರ್‌ ಆಗಿದೆ. ಯಾಕೆಂದರೆ ಈ ಸೆನ್ಸರ್‌ನಿಂದ ಬಳಕೆದಾರರ ಸ್ಮಾರ್ಟ್‌ಡಿವೈಸ್‌ಗಳು ಹೆಚ್ಚು ಭದ್ರತೆಯಿಂದ ಕೂಡಿರಲಿವೆ. ಅದರಲ್ಲೂ ಈಗಂತೂ ಯಾವುದೇ ಸ್ಮಾರ್ಟ್‌ಫೋನ್‌ ಅನ್ನು ಅನ್‌ಲಾಕ್‌ ಮಾಡಲು ಈ ಆಯ್ಕೆಯನ್ನು ಅತ್ಯಂತ ಸುರಕ್ಷಿತವೆಂದು ಪರಿಗಣಿಸಲಾಗುತ್ತಿದೆ. ಈ ಕಾರಣಕ್ಕಾಗಿಯೇ ಬಳಕೆದಾರರು ಸಹ ಈ ಫೀಚರ್ಸ್‌ ಇರುವ ಸ್ಮಾರ್ಟ್‌ಫೋನ್‌ಗಳ ಖರೀದಿಗೆ ಹೆಚ್ಚು ಒಲವು ತೋರುತ್ತಾರೆ.

ಸ್ಮಾರ್ಟ್‌ಫೋನ್‌ಗಳಲ್ಲಿನ ಸೆನ್ಸರ್‌ಗಳ ಬಗ್ಗೆ ನಿಮಗೆ ಗೊತ್ತಾ?..ಇವುಗಳಿಂದ ಲಾಭವೇನು

ಪ್ರಾಕ್ಸಿಮಿಟಿ( Proximity)

ಪ್ರಾಕ್ಸಿಮಿಟಿ ಸೆನ್ಸರ್‌ ಸಹ ಬಹುತೇಕ ಎಲ್ಲಾ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯ. ಈ ಸೆನ್ಸರ್‌ ಮೂಲಕ ಬಳಕೆದಾರರು ಹಲವಾರು ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಅಂದರೆ, ಈ ಪೋನ್‌ ಬಳಕೆದಾರರ ಬಳಕೆಯ ಸ್ಥಿತಿಗತಿಗಳ ಮೇಲೆ ಕಣ್ಣಿಟ್ಟಿರುತ್ತದೆ. ಉದಾಹರಣೆಗೆ ಹೇಳಬೇಕೆಂದರೆ ಕರೆ ಬಂದ ತಕ್ಷಣ ಫೋನ್ ಅನ್ನು ಕಿವಿ ಬಳಿ ತೆಗೆದುಕೊಂಡು ಹೋದಾಗ ಕರೆ ಸ್ವೀಕಾರ ಆಗುತ್ತದೆ. ಹಾಗೆಯೇ ಡಿಸ್‌ಪ್ಲೇ ಆಫ್‌ ಸಹ ಆಗುತ್ತದೆ.

ಮ್ಯಾಗ್ನೆಟೋಮೀಟರ್

ಮ್ಯಾಗ್ನೆಟೋಮೀಟರ್ ಸೆನ್ಸರ್ ಮೂಲಕ ಬಳಕೆದಾರರು ಗೂಗಲ್‌ ಮ್ಯಾಪ್‌ ಹಾಗೂ ಇನ್ನಿತರೆ ವಿಭಾಗದಲ್ಲಿ ಹಲವು ಸೌಲಭ್ಯ ಪಡೆದುಕೊಳ್ಳಬಹುದಾಗಿದೆ. ಇದು ಆಯಸ್ಕಾಂತಗಳ ಸಹಾಯದಿಂದ ಕೆಲಸ ಮಾಡಲಿದ್ದು, ಗೂಗಲ್‌ ಮ್ಯಾಪ್ಸ್‌ನಲ್ಲಿ ನಿರ್ದೇಶನಗಳನ್ನು ಸರ್ಚ್‌ ಮಾಡಲು ಮತ್ತು ಬಳಕೆದಾರರ ಪ್ರಸ್ತುತ ಸ್ಥಳವನ್ನು ತಿಳಿದುಕೊಳ್ಳಲು ಇದನ್ನು ಬಳಕೆ ಮಾಡಲಾಗುತ್ತದೆ.

ಇನ್ನು ಇದೇ ರೀತಿಯ ಹಲವಾರು ಸೆನ್ಸರ್‌ಗಳು ಇಂದು ಸ್ಮಾರ್ಟ್‌ವಾಚ್‌ಗಳಲ್ಲಿ ಹೆಚ್ಚು ಬಳಕೆಯಾಗುತ್ತಿವೆ. ಈ ಸೆನ್ಸರ್‌ಗಳಿಂದಾಗಿ ಸ್ಮಾರ್ಟ್‌ವಾಚ್‌ ಬಳಕೆದಾರರು ತಮ್ಮ ಆರೋಗ್ಯ ಮೇಲ್ವಿಚಾರಣೆ ಹಾಗೂ ಇನ್ನಿತರೆ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಅದರಲ್ಲೂ ಹೃದಯ ಬಡಿತದ ಸೆನ್ಸರ್‌, ಅಕ್ಸೆಲೆರೊಮೀಟರ್‌, ಬಾರೋಮೀಟರ್‌ ಹಾಗೂ ಗೈರೊಸ್ಕೋಪ್‌ ಸೆನ್ಸರ್‌ಗಳಿಂದ ಸಾಕಷ್ಟು ಪ್ರಯೋಜನ ಪಡೆಯಬಹುದಾಗಿದೆ.

Best Mobiles in India

English summary
There are many sensor in the smartphone and the user is going to get various facilities from it. Details in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+