ಅಬ್ಬಬ್ಬಾ... ಐಫೋನ್ 15 ಸರಣಿ ಫೋನ್‌ಗಳಲ್ಲಿ ಈ ಕ್ಯಾಮೆರಾ ಫೀಚರ್ಸ್ ಇವೆಯಾ?
ಐಫೋನ್ 15 ಸರಣಿ ಫೋನ್‌ಗಳ (iPhone 15 series) ಲಾಂಚ್‌ಗೆ ದಿನಗಣನೆ ಆರಂಭ ಆಗಿದೆ. ಈ ನಡುವೆ ಹೊಸ ಐಫೋನ್‌ಗೆ ಅಪ್‌ಗ್ರೇಡ್ ಆಗಲು ಹಲವಾರು ಆಪಲ್ ಪ್ರಿಯರು ತುದಿಗಾಲಲ್ಲಿ ತಿಂತಿದ್ದಾರೆ. ಅಂದರೆ ಐಫೋನ್ 15 ಸರಣಿಯು ಸೆಪ್ಟೆಂಬರ್ 12 ರಂದು ಆಪಲ್ ಈವೆಂಟ್‌ನಲ್ಲಿ ಘೋಷಣೆ ಆಗಲಿದ್ದು, ಇದಕ್ಕೂ ಮೊದಲೇ ಈ ಫೋನ್‌ಗಳ ಕ್ಯಾಮೆರಾ ಫೀಚರ್ಸ್ ಬಗ್ಗೆ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಬಹಳ ಚರ್ಚೆ ನಡೆಯುತ್ತಿವೆ.
ಹೌದು, ಬಿಡುಗಡೆಗೆ ಕೆಲವೇ ದಿನಗಳು ಉಳಿದಿರುವ ಬೆನ್ನಲ್ಲೇ ಐಫೋನ್ 15 ಸರಣಿ ಫೋನ್‌ಗಳ ಕ್ಯಾಮೆರಾ ಫೀಚರ್ಸ್ ಹೇಗಿರಲಿವೆ ಎಂದು ಆಪಲ್ ಪ್ರಿಯರು ತಮ್ಮದೇ ಆದ ರೀತಿಯಲ್ಲಿ ಬಣ್ಣಿಸುತ್ತಿದ್ದಾರೆ. ಈ ಸಮಾರಂಭದಲ್ಲಿ ಆಪಲ್ ಸಂಸ್ಥೆಯು ನಾಲ್ಕು ಮಾದರಿಗಳಾದ ಐಫೋನ್ 15, ಐಫೋನ್ 15 ಪ್ಲಸ್, ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ (iPhone 15, iPhone 15 Plus, iPhone 15 Pro and iPhone 15 Pro Max)ಅನ್ನು ಲಾಂಚ್ ಆಗಲಿವೆ ಎನ್ನಲಾಗಿದೆ. ಹಾಗಿದ್ರೆ ಈ ಫೋನ್‌ಗಳಲ್ಲಿ ಕ್ಯಾಮೆರಾ ಫೀಚರ್ಸ್ ಹೇಗಿರಲಿದೆ ಎಂದು ನೋಡೋಣ ಬನ್ನಿ.

ಐಫೋನ್ 15 ಸರಣಿ ಫೋನ್: ಆಪಲ್‌ನ ನೆಕ್ಸ್ಟ್ ಜನರೇಷನ್ ಐಫೋನ್ ವೇರಿಯಂಟ್‌ಗೆ ಸಂಬಂಧಿಸಿದ ಹಲವು ಲೀಕ್ ಮಾಹಿತಿಗಳು ಈಗಾಗಲೇ ವರದಿಯಾಗಿವೆ. ಇದೇ ಸಮಯದಲ್ಲಿ ಲಾಂಚ್‌ಗೆ ಇನ್ನು ಕೆಲವೇ ದಿನಗಳು ಮಾತ್ರ ಉಳಿದಿದ್ದು, ಈ ಫೋನ್‌ಗಳ ಲೀಕ್ ಮಾಹಿತಿಗಳ ವರದಿ ಮಾತ್ರ ನಿಂತಿಲ್ಲ. ಇತ್ತೀಚಿನ ಲೀಕ್ ವರದಿಯಲ್ಲಿ, ಐಫೋನ್ 15 ಸರಣಿಯಲ್ಲಿನ ಕ್ಯಾಮೆರಾ ಫೀಚರ್ಸ್‌ಗಳ ಬಗ್ಗೆ ಮಾಹಿತಿ ಬಹಿರಂಗಪಡಿಸಲಾಗಿದೆ.
ಮ್ಯಾಕ್ ರೂಮರ್ಸ್ (Macrumors) ತನ್ನ ಇತ್ತೀಚಿನ ವರದಿಯಲ್ಲಿ ಐಫೋನ್ 15 ಸರಣಿಯ ಕ್ಯಾಮೆರಾ ಫೀಚರ್ಸ್‌ಗಳ ಬಗ್ಗೆ ಮಾಹಿತಿ ಉಲ್ಲೇಖಿಸಿದೆ. ವರದಿಯ ಪ್ರಕಾರ, ಐಫೋನ್ 15 ಅಂದರೆ ಐಫೋನ್ 15 ಮತ್ತು ಐಫೋನ್ 15 ಪ್ಲಸ್ ಮಾದರಿಗಳು ಕಳೆದ ವರ್ಷದಂತೆ ಈ ವರ್ಷವೂ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆಯೊಂದಿಗೆ ಕಾಣಿಸಿಕೊಳ್ಳಲಿವೆ ಎಂದು ಹೇಳಲಾಗಿದೆ. ಈ ಕ್ಯಾಮೆರಾ ಸೆನ್ಸರ್ 48MP ಇರಲಿದ್ದು, ಇದು f/1.6 ರ ಅಪರ್ಚರ್ ಹೊಂದಿರುತ್ತದೆ. ಜೊತೆಗೆ 12MP ಅಲ್ಟ್ರಾ-ವೈಡ್ ಸೆನ್ಸರ್ f / 2.4 ಅಪರ್ಚರ್ ನೊಂದಿಗೆ ಕಾಣಿಸಿಕೊಳ್ಳುತ್ತದೆ ಎಂದು ತಿಳಿದುಬಂದಿದೆ.
ಇನ್ನೊಂದು ಕಡೆ ಪ್ರೊ ಮಾದರಿಗಳ ವಿಚಾರಕ್ಕೆ ಬಂದರೆ ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆಯೊಂದಿಗೆ ಇದು 48MP IMX803 ಪ್ರಾಥಮಿಕ ಕ್ಯಾಮೆರಾದೊಂದಿಗೆ f / 1.78 ಅಪರ್ಚರ್ ಲಭ್ಯವಿರುತ್ತದೆ. ಇದರೊಂದಿಗೆ 12.7MP ಪೆರಿಸ್ಕೋಪ್ ಸೆನ್ಸರ್ ಇರಲಿದ್ದು, ಇದು f/2.8 ರ ಅಪರ್ಚರ್ ಆಯ್ಕೆ ಪಡೆದಿರಲಿದೆ ಎಂದು ತಿಳಿದುಬಂದಿದೆ.
ಇದರೊಂದಿಗೆ 13.4MP ಅಲ್ಟ್ರಾ-ವೈಡ್ ಸೆನ್ಸರ್ f / 2.2 ಅಪರ್ಚರ್ ಆಯ್ಕೆ ಪಡೆದಿದ್ದು, ಇದು ಬಹುನಿರೀಕ್ಷಿತ ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ ಸೆನ್ಸರ್ ಆಯ್ಕೆ ಪಡೆದುಕೊಂಡಿದೆ. ಉಳಿದಂತೆ 5X ನಿಂದ 10X ವರೆಗೆ ಆಪ್ಟಿಕಲ್ ಜೂಮ್ ಆಯ್ಕೆಯನ್ನೂ ಸಹ ನೀಡಲಾಗುತ್ತದೆ ಎಂದು ಲೀಕ್ ಆದ ಮಾಹಿತಿಯಲ್ಲಿ ಉಲ್ಲೇಖ ಮಾಡಲಾಗಿದೆ. ಆದಾಗ್ಯೂ ಈ ಫೋನ್‌ಗಳು ಲಾಂಚ್ ಆದ ಮೇಲೆಯೇ ಇದರ ಸತ್ಯಾಸತ್ಯತೆ ಏನೆಂದು ತಿಳಿದುಬರಲಿದೆ.
ಇತರೆ ಫೀಚರ್ಸ್: ಇನ್ನು ಕ್ಯಾಮೆರಾ ಹೊರತುಪಡಿಸಿ ಇತರೆ ವಿಷಯಗಳ ಕಡೆ ಕಣ್ಣಾಯಿಸುವುದಾದರೆ ಈ ಫೋನ್‌ಗಳು ಯುಎಸ್‌ಬಿ ಟೈಪ್-ಸಿ (USB Type-C) ಪೋರ್ಟ್ ಸಂಬಂಧ ದೊಡ್ಡ ಬದಲಾವಣೆ ಪಡೆಯಲಿವೆ ಎನ್ನಲಾಗಿದೆ. ಅಂದರೆ ಐಫೋನ್ 15 ಸರಣಿಯ ಎಲ್ಲಾ ಮಾದರಿಗಳು ಚಾರ್ಜಿಂಗ್‌ಗಾಗಿ ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಪಡೆಯುತ್ತವೆ ಎಂದು ತಿಳಿದುಬಂದಿದೆ. ಅದಾಗ್ಯೂ ಆಪಲ್ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಇದರೊಂದಿಗೆ ವಿಭಿನ್ನ ಚಾರ್ಜಿಂಗ್ ವೇಗಗಳ ಆಯ್ಕೆ ಸಹ ಇರಲಿದೆ ಎನ್ನಲಾಗಿದದ್ದು, ಪ್ರೊ ಮತ್ತು ಪ್ರೊ ಅಲ್ಲದ ರೂಪಾಂತರಗಳಲ್ಲಿಯೂ ಇದು ಲಭ್ಯವಿರುತ್ತವೆ ಎಂದು ಹೇಳಲಾಗಿದೆ. ಜೊತೆಗೆ ಕಳೆದ ವರ್ಷವಷ್ಟೇ ಪ್ರೊ ವೇರಿಯಂಟ್‌ಗಳಿಗೆ ಸೀಮಿತವಾಗಿದ್ದ ಡೈನಾಮಿಕ್ ಐಲ್ಯಾಂಡ್ ಫೀಚರ್ಸ್ ಅನ್ನು ಈ ಬಾರಿ ಎಲ್ಲಾ ವೇರಿಯಂಟ್‌ಗಳಿಗೂ ನೀಡಲು ಆಪಲ್ ಸಜ್ಜಾಗಿದೆ ಎಂದು ತಿಳಿದುಬಂದಿದೆ. ಇದೆಲ್ಲಕ್ಕಿಂತ ಪ್ರಮುಖವಾಗಿ ಗಮನಿಸಬೇಕಾದ ವಿಷಯ ಏನೆಂದರೆ ಮೇಡ್-ಇನ್-ಇಂಡಿಯಾ ಐಫೋನ್ 15 ಮಾದರಿಗಳನ್ನು ಜಾಗತಿಕ ಮಾರಾಟದ ಜೊತೆಗೆ ಲಭ್ಯವಾಗುವಂತೆ ಮಾಡಬಹುದು ಎಂದು ಹೇಳಲಾಗುತ್ತಿದೆ.


Click it and Unblock the Notifications








