ಐಫೋನ್ 15 ಪ್ರೊ ಫೋನ್‌ನಲ್ಲಿ ಇಷ್ಟೆಲ್ಲಾ ಬದಲಾವಣೆ ಆಗಲಿದೆಯಾ!?
ಇನ್ನೇನು ಶೀಘ್ರದಲ್ಲೇ ಐಫೋನ್‌ನ ಮುಂದಿನ ಸರಣಿಯಾಗಿರುವ ಐಫೋನ್ 15 (iPhone 15) ಫೋನ್‌ಗಳ ಲಾಂಚ್‌ಗೆ ಕ್ಷಣಗಣನೆ ಆರಂಭ ಆಗಿದೆ. ಈ ನಡುವೆ ಈ ಫೋನ್‌ಗಳ ಲೀಕ್ ಫೀಚರ್ಸ್ ಮಾರುಕಟ್ಟೆಯಲ್ಲಿ ದೊಡ್ಡ ಸಂಚಲವನ್ನೇ ಉಂಟು ಮಾಡಿದ್ದು, ಅದರಲ್ಲೂ ಐಫೋನ್ 15 ಪ್ರೊ (iPhone 15 Pro) ಬಗ್ಗೆ ಕೆಲವು ಅಚ್ಚರಿ ಮಾಹಿತಿ ತಿಳಿದುಬಂದಿದೆ.
ಹೌದು, ವಿಶ್ಲೇಷಕ ಜೆಫ್ ಪು ನ ಇತ್ತೀಚಿನ ಮಾಹಿತಿ ಪ್ರಕಾರ ಐಫೋನ್ 15 ಪ್ರೊ ವೇರಿಯಂಟ್ ಯಾವೆಲ್ಲಾ ಫೀಚರ್ಸ್ ಅನ್ನು ಹೊಂದಿರಲಿದೆ ಹಾಗೂ ಯಾವೆಲ್ಲಾ ಫೀಚರ್ಸ್ ನಿಂದ ಮುಕ್ತವಾಗಲಿದೆ ಎಂಬಿತ್ಯಾದಿ ಮಾಹಿತಿಯನ್ನು ಉಲ್ಲೇಖಿಸಲಾಗಿದೆ. ಅಂದರೆ ಐಫೋನ್ 15 ಪ್ರೊ ಆವೃತ್ತಿಯು ಕೆಲವು ಹಳೆಯ ಫೀಚರ್ಸ್‌ಗಳನ್ನು ಕಳೆದುಕೊಳ್ಳಬಹುದು ಎಂದು ಸೂಚಿಸುತ್ತದೆ. ಹಾಗಿದ್ರೆ, ಈ ಮುಂಬರುವ ಫೋನ್‌ನಲ್ಲಿ ಯಾವೆಲ್ಲಾ ಫೀಚರ್ಸ್ ಇರುವುದಿಲ್ಲ, ಹೊಸ ಫೀಚರ್ಸ್ ಏನು ಎನ್ನುವುದನ್ನು ತಿಳಿಯೋಣ ಬನ್ನಿ.

ಮುಂದಿನ ವರ್ಷದ ಐಫೋನ್ 16 ಪ್ರೊ(iPhone 16 Pro) ಮಾದರಿಗಳಿಗಾಗಿ ಆಪಲ್ ಕೆಲವು ಬದಲಾವಣೆ ಮಾಡುವ ಸಲುವಾಗಿ ಈಗ ಲಾಂಚ್ ಆಗಲಿರುವ ಐಫೋನ್ 15 ಪ್ರೊ ಕೆಲವು ಫೀಚರ್ಸ್‌ಗಳನ್ನು ಕಳೆದುಕೊಳ್ಳಬಹುದು ಎಂದು ತೋರುತ್ತದೆ. ದೊಡ್ಡ ಡಿಸ್‌ಪ್ಲೇನಿಂದ ಹಿಡಿದು ಹೆಚ್ಚಿನ ರೆಸಲ್ಯೂಶನ್ ಆಯ್ಕೆಯ ರಿಯರ್ ಕ್ಯಾಮೆರಾಗಳವರೆಗೆ 2024ರ ಐಫೋನ್‌ಗಳು ಕೆಲವು ವಿಭಾಗದಲ್ಲಿ ಪ್ರಮುಖ ನವೀಕರಣಗಳನ್ನು ಪಡೆಯುತ್ತವೆ ಎಂದು ಹೇಳಲಾಗುತ್ತದೆ.
ಮುಂದಿನ ವರ್ಷದಲ್ಲಿ ಐಫೋನ್ 16 ಪ್ರೊ ಬಿಡುಗಡೆಗೆ ಎದುರುನೋಡುತ್ತಿರುವಾಗಲೇ ಈ ಬೆಳವಣಿಗೆ ಕಂಡುಬಂದಿದೆ. ಈ ವಿಭಾಗದಲ್ಲಿ 48 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಲಭ್ಯ ಇರಲಿದೆ ಎನ್ನಲಾಗಿದೆ. ಸದ್ಯಕ್ಕೆ 12 ಮೆಗಾಪಿಕ್ಸೆಲ್ ಸೆನ್ಸರ್ ನೀಡಲಾಗಿತ್ತು. ಜೊತೆಗೆ ವೈ-ಫೈ 7 ಕನೆಕ್ಟಿವಿಟಿ, ಸುಧಾರಿತ ಬ್ಲೂಟೂತ್ ಮತ್ತು ಸುಧಾರಿತ ಅಲ್ಟ್ರಾ ವೈಡ್‌ಬ್ಯಾಂಡ್ ಚಿಪ್ ಆಯ್ಕೆಗಳನ್ನೂ ಸಹ ಈ ಫೋನ್‌ನಲ್ಲಿ ಕಾಣಬಹುದಾಗಿದೆ ಎನ್ನಲಾಗಿದೆ.
ಅದರಲ್ಲೂ ಐಫೋನ್ 16 ಪ್ರೊ ಆಪಲ್‌ನ A18 ಬಯೋನಿಕ್ ಚಿಪ್ ಅನ್ನು ಪ್ಯಾಕ್ ಮಾಡುವ ಸಾಧ್ಯತೆಯಿದ್ದು, ಇದು ಪ್ರಮಾಣಿತ ಐಫೋನ್ 16 ಗಾಗಿ ನಿಗದಿಪಡಿಸಲಾದ A17 ಬಯೋನಿಕ್ ಚಿಪ್‌ಗೆ ವ್ಯತಿರಿಕ್ತವಾಗಿರಲಿದೆ. ಅದರಲ್ಲೂ ವೈ- ಫೈ 7 ಬಳಕೆ ಮಾತ್ರ ಗಣನೀಯ ಪ್ರಗತಿಯಾಗಿದೆ ಎಂದೇ ಹೇಳಬಹುದು. ಇದರ ಗರಿಷ್ಠ ಡೇಟಾ ದರಗಳು 40Gbps ಅನ್ನು ಮೀರುತ್ತದೆ. ಇದು ವೈ-ಫೈ 6e ಸೇರಿದಂತೆ ವೈ-ಫೈ 6 ಗಿಂತ ನಾಲ್ಕು ಪಟ್ಟು ಹೆಚ್ಚು ವೇಗವನ್ನು ನೀಡಲಿದೆ ಎಂದು ತಿಳಿದುಬಂದಿದೆ. ಅದರಲ್ಲೂ ವೈ-ಫೈ 5 ಗಿಂತ ಸುಮಾರು ಆರು ಪಟ್ಟು ವೇಗವನ್ನು ನೀಡಲಿದೆ.
ಇದರೊಂದಿಗೆ ಲೀಕ್ ಮಾಹಿತಿ ಪ್ರಕಾರ ಐಫೋನ್ 16 ಪ್ರೊ ಮತ್ತು ಐಫೋನ್ 16 ಪ್ರೊ ಮ್ಯಾಕ್ಸ್ ಹಿಂದೆಂದಿಗಿಂತಲೂ ಈಗ ದೊಡ್ಡ ಡಿಸ್‌ಪ್ಲೇನಲ್ಲಿ ಕಾಣಿಸಿಕೊಳ್ಳಲಿವೆ ಎಂದು ಹೇಳಲಾಗುತ್ತದೆ. ಗಾತ್ರಗಳು ಕ್ರಮವಾಗಿ 6.4 ಇಂಚು ಮತ್ತು 6.9 ಇಂಚು ಇರಲಿದೆ ಎಂದು ತಿಳಿದುಬಂದಿದೆ. ಈ ನಡುವೆ, ಐಫೋನ್ 15 ಪ್ರೊ ವೇರಿಯಂಟ್‌ಗಳು ಹಳೆಯ ಡಿಸ್‌ಪ್ಲೇಯನ್ನೇ ಉಳಿಸಿಕೊಳ್ಳುತ್ತವೆ ಎಂದು ಹೇಳಲಾಗುತ್ತಿದೆ.
ಅದಾಗ್ಯೂ ಐಫೋನ್ 15 ಮತ್ತು ಪ್ರೊ ಮಾದರಿಯು 6.1 ಇಂಚಿನ OLED ಡಿಸ್‌ಪ್ಲೇ ಹೊಂದಿರಲಿದೆ ಎನ್ನಲಾಗಿದ್ದು, ಪ್ಲಸ್ ಮತ್ತು ಪ್ರೊ ಮ್ಯಾಕ್ಸ್ ಮಾದರಿಗಳು 6.7 ಇಂಚಿನ OLED ಡಿಸ್‌ಪ್ಲೇ ಮೂಲಕ ಕಾಣಿಸಿಕೊಳ್ಳಲಿವೆ ಎಂದು ತಿಳಿದುಬಂದಿದೆ. ಅದರಲ್ಲೂ ಐಫೋನ್ 15 ಪ್ರೊ ಮ್ಯಾಕ್ಸ್‌ಗೆ ಹೋಲುವ ಪೆರಿಸ್ಕೋಪ್ ಲೆನ್ಸ್ ಅನ್ನು ಐಫೋನ್ 16 ಪ್ರೊ ನಲ್ಲೂ ಇರಿಸಲಾಗುತ್ತದೆ ಎಂದು ಸೂಚಿಸಲಾಗಿದೆ. ಇದರೊಂದಿಗೆ ಐಫೋನ್ 16 ಪ್ರೊ ಮಾದರಿಯಲ್ಲಿ ಅಂಡರ್ ಡಿಸ್ಪ್ಲೇ ಫೇಸ್ ಐಡಿ ಇರಲಿದೆ ಎಂಬ ವದಂತಿಗಳಿವೆ.

ಐಫೋನ್ 15 ಪ್ರೊ ವೇರಿಯಂಟ್‌ನಲ್ಲಿ ಟೈಟಾನಿಯಂ ವಿನ್ಯಾಸ ಇರಲಿದ್ದು, ಪ್ರೊ ಮ್ಯಾಕ್ಸ್ ವೇರಿಯಂಟ್‌ಗಾಗಿ ಪೆರಿಸ್ಕೋಪ್ ಲೆನ್ಸ್ ಅನ್ನು ಸಂಯೋಜಿಸುತ್ತದೆ ಮತ್ತು ಚಾರ್ಜ್ ಮಾಡಲು ಯುಎಸ್‌ಬಿ ಟೈಪ್-ಸಿ ಪೋರ್ಟ್ ಅನ್ನು ಅಳವಡಿಸಿಕೊಳ್ಳುತ್ತದೆ ಎಂದು ತಿಳಿದುಬಂದಿದ್ದು, ಇದರೊಂದಿಗೆ 8GB RAM ಅನ್ನು ಹೊಂದಿದೆ ಹೊಂದಿರಲಿದೆ ಎನ್ನಲಾಗಿದೆ. ಇದೆಲ್ಲದರ ಜೊತೆಗೆ ಈ ಫೋನ್ A17 ಬಯೋನಿಕ್ ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದೆ ಎಂದು ಮಾಹಿತಿ ತಿಳಿದುಬಂದಿದೆ. ಈ ಮೂಲಕ ಐಫೋನ್ 15 ಹಾಗೂ ಐಫೋನ್ 16 ಗೂ ಕೆಲವು ಸಾಮ್ಯತೆ ಕಾಣಬಹುದಾಗಿದೆ.


Click it and Unblock the Notifications








