4G ಗಿಂತಲೂ 10 ಪಟ್ಟು ವೇಗ: 30 ಸೆಕೆಂಡ್ಸ್‌ನಲ್ಲಿ 3D ಸಿನಿಮಾ ಡೌನ್‌ಲೋಡ್ ಮಾಡಿ..!
ದೇಶಿಯ ಟೆಲಿಕಾಂ ಮಾರುಕಟ್ಟೆಯಲ್ಲಿ 4G ನೆಟ್‌ವರ್ಕ್ ಮಾಡಿದ ಕ್ರಾಂತಿಯನ್ನು ಯಾರು ಸಹ ಮರೆಯಲು ಸಾಧ್ಯವಿಲ್ಲ. ಇದರ ಬೆನ್ನಲ್ಲೇ ಇನ್ನು ಕೆಲವೇ ದಿನಗಳಲ್ಲಿ 5G ಸೇವೆಯೂ ದೇಶದಲ್ಲಿ ಆರಂಭವಾಗಲಿದ್ದು, ಈ ಹಿನ್ನಲೆಯಲ್ಲಿ 5G ಸೇವೆಯಲ್ಲಿ ಬಳಕೆದಾರರಿಗೆ ದೊರೆಯುವುದೇನು..? ಕೇವಲ ವೇಗದ ಇಂಟರ್ನೆಟ್ ಮಾತ್ರವೇ..? ಇಲ್ಲ ಇದಕ್ಕಿಂತಲೂ ಹೆಚ್ಚಿನದನ್ನು ನಿರೀಕ್ಷಿಬಹುದೇ ಎನ್ನುವ ನಿಮ್ಮ ಹಲವು ಪ್ರಶ್ನೆಗಳಿಗೆ ಉತ್ತರವನ್ನು ನೀಡುವ ಪ್ರಯತ್ನವು ಇದಾಗಿದೆ.

ದೇಶದಲ್ಲಿ 5G ಸೇವೆಯೂ ಆರಂಭವಾದರೆ ನೀವು ಊಹಿಸಲು ಅಸಾಧ್ಯವಾದವುಗಳು ನಿಮ್ಮ ನಿತ್ಯ ಜೀವನದಲ್ಲಿ ನಡೆಯಲಿದೆ. 5G ನೆಟ್‌ವರ್ಕ್ ವೇಗದ ಇಂಟರ್ನೆಟ್ ನೀಡುವುದರಿಂದ ಆಗುವ ಪ್ರಯೋಜನಗಳು ಹಲವು, ಕೇವಲ ಮೊಬೈಲ್ ಮಾತ್ರವಲ್ಲ ಸುತ್ತಮುತ್ತಲಿನ ಎಲ್ಲಾ ವಸ್ತುಗಳು ಸ್ಮಾರ್ಟ್ ಆಗಲಿದೆ. ಈ ಹಿನ್ನಲೆಯಲ್ಲಿ 5G ಕುರಿತ ಮಾಹಿತಿಯೂ ಈ ಮುಂದಿನಂತೆ ಇದೆ.
ಓದಿರಿ: ಬಂಪರ್ ಆಫರ್ ಕೊಟ್ಟ ಜಿಯೋ: ಮಾರುಕಟ್ಟೆಯಲ್ಲಿಯೇ ಅತೀ ಕಡಿಮೆ ಬೆಲೆಗೆ ಆಡ್‌ಆನ್ ಡೇಟಾ..!

2G ಇಂದ 5G ವರೆಗೆ:
1991ರಲ್ಲಿ ಕಾಣಿಸಿಕೊಂಡ 2G ಸೇವೆಯೂ ಬಳಕೆದಾರರಿಗೆ ಕರೆ ಮಾಡುವದರೊಂದಿಗೆ ಟೆಕ್ಸ್ಟ್ ಕಳುಹಿಸುವ ಅವಕಾಶವನ್ನು ಮಾಡಿಕೊಟ್ಟಿತ್ತು. ಇದಾದ ನಂತರದಲ್ಲಿ 1998ರಲ್ಲಿ ಕಾಣಿಸಿಕೊಂಡ 3G ಸೇವೆಯೂ ಬಳಕೆದಾರರ ಟೆಕ್ಸ್ಟ್ ಜೊತೆಗೆ ಇಂಟರ್ನೆಟ್ ಬಳಕೆ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿತ್ತು. ನಂತರದಲ್ಲಿ 2008ರಲ್ಲಿ ಕಾಣಿಸಿಕೊಂಡ 4G ಸೇವೆಯೂ ಬಳಕೆದಾರರಿಗೆ ವಿಡಿಯೋ ಕಾಲಿಂಗ್ ಮಾಡುವ ಅವಕಾಶವನ್ನು ಕಲ್ಪಿಸಿತ್ತು. ಸದ್ಯ ಈಗ 5G ಜಪ ಶುರುವಾಗಿದೆ.

5Gಯಲ್ಲಿ ಎನ್ನು ಇರಲಿದೆ:
5G ಸೇವೆಯಲ್ಲಿ ಬಳಕೆದಾರರು ಟೆಕ್ಸ್ಟ್ ಮಾಡುವದರ ಜೊತೆಗೆ ಇಂಟರ್ನೆಟ್ ಕೆನೆಕ್ಷನ್ ಪಡೆದುಕೊಳ್ಳಿದ್ದಾರೆ. ಇದಾದ ಮೇಲೆ HD-3D ವಿಡಿಯೋ ಕರೆ ಮಾಡುವ ಅವಕಾಶವನ್ನು ತಮ್ಮದಾಗಿಸಿಕೊಳ್ಳಲಿದ್ದಾರೆ. ಅಲ್ಲದೇ ಸ್ಮಾರ್ಟ್ ಹೋಂ ಆಯ್ಕೆಯನ್ನು ಪಡೆದುಕೊಳ್ಳಲಿದ್ದಾರೆ ಒಟ್ಟಿನಲ್ಲಿ ಇದು ಭವಿಷ್ಯದ ತಂತ್ರಜ್ಞಾನವಾಗಲಿದೆ.


5Gಯಲ್ಲಿ ಏನು ಸಾಧ್ಯ:
5G ಸೇವೆಯೂ ಆರಂಭವಾದ ನಂತರದಲ್ಲಿ ಸೆಲ್ಫ್ ಡ್ರೈವಿಂಗ್ ಕಾರು, ವರ್ಚುವಲ್ ರಿಯಾಲಿಟಿ, ಸ್ಮಾರ್ಟ್ ಸಿಟಿ, ರೋಬೊಟ್‌ಗಳು ಸೇರಿದಂತೆ ಹಲವು ಸೇವೆಗಳು ಕಾಣಿಸಿಕೊಳ್ಳಲಿದ್ದು, ನಮ್ಮ ಜೀವನ ಕ್ರಮವನ್ನು ಅತ್ಯಂತ ಸರಳ ಮಾಡಲಿದೆ ಎನ್ನುವ ನಿರೀಕ್ಷೆಯನ್ನು ಹುಟ್ಟುಹಾಕಿದೆ.

4G ಗಿಂತಲೂ 10ಪಟ್ಟು ವೇಗ:
2020ಯಲ್ಲಿ ಕಾರ್ಯರಂಭವನ್ನು ಮಾಡಿಲಿದೆ ಎನ್ನುವ 5G ಸೇವೆಯೂ ಸದ್ಯದ 4G ವೇಗಕ್ಕಿಂತಲೂ 10 ಪಟ್ಟು ಹೆಚ್ಚಾಗಿರಿಲಿದೆ ಎನ್ನಲಾಗಿದೆ. 8K ಗುಣಮಟ್ಟದ 3D ಸಿನಿಮಾದ ವಿಡಿಯೋ 30 ಸೆಕೆಂಡ್‌ನಲ್ಲಿ ಡೌನ್‌ಲೋಡ್ ಮಾಡಬಹುದಾಗಿದೆ.


Click it and Unblock the Notifications