JioPhone Next ಫೋನಿನ ನಿಜವಾದ ಬೆಲೆ 1999ರೂ. ಅಥವಾ 6499ರೂ?
ಭಾರೀ ಕುತೂಹಲ ಮೂಡಿಸಿದ್ದ JioPhone Next ಜಿಯೋಫೋನ್ ನೆಕ್ಸ್ಟ್ ಅಂತೂ ದೀಪಾವಳಿಗೆ ಸಿಗಲಿದೆ ಎನ್ನುವುದು ಪಕ್ಕಾ ಆಗಿದ್ದು, ಗ್ರಾಹಕರು ಖುಷಿಯಾಗಿದ್ದಾರೆ. ಟೆಕ್ ದೈತ್ಯ ಗೂಗಲ್ ಹಾಗೂ ಜಿಯೋ ಜಂಟಿಯಾಗಿ ಈ ಫೋನ್ ಅನ್ನು ಅಭಿವೃದ್ಧಿ ಪಡಿಸಿರುವುದು ಗ್ರಾಹಕರ ಆಸಕ್ತಿ ಹೆಚ್ಚಾಗಿಸಿದೆ. ಇದರೊಂದಿಗೆ ಕೆಲವೊಂದು ಫೀಚರ್ಸ್‌ಗಳು ಈಗಾಗಲೇ ಗ್ರಾಹಕರ ಗಮನ ಸೆಳೆದಿವೆ. ಜೊತೆಗೆ ಜಿಯೋಫೋನ್ ನೆಕ್ಸ್ಟ್ ಬೆಲೆಯು ಅಚ್ಚರಿ ಮೂಡಿಸಿದೆ.

ಹೌದು, ಜಿಯೋಫೋನ್ ನೆಕ್ಸ್ಟ್ ಬೆಲೆಯು ಗ್ರಾಹಕರನ್ನು ತಬ್ಬಿಬ್ಬಾಗಿಸಿದೆ. ಜಿಯೋಫೋನ್ ನೆಕ್ಸ್ಟ್ ಫೋನಿನ ಬೆಲೆಯು ಭಾರತದಲ್ಲಿ 6,499 ರೂ. ಆಗಿದೆ. ಅದಾಗ್ಯೂ ಗ್ರಾಹಕರಿಗೆ ಅನುಕೂಲ ಆಗಲೆಂದು ಸಂಸ್ಥೆಯು EMI ಅವಕಾಶ ಮಾಡಿಕೊಟ್ಟಿದೆ. ಗ್ರಾಹಕರು ಒಂದೇ ಬಾರಿ ಪೂರ್ಣ ಹಣ ಕೊಟ್ಟು ಖರೀದಿಸಬಹುದು. ಇಲ್ಲವೇ ಅನುಕೂಲಕರ EMI ಸೌಲಭ್ಯ ಪಡೆಯಬಹುದಾಗಿದೆ.

EMI ಸೌಲಭ್ಯ ಪಡೆಯುವ ಗ್ರಾಹಕರು JioPhone Next ಗೆ ಮುಂಗಡವಾಗಿ 1,999 ರೂಪಾಯಿಗಳನ್ನು ಪಾವತಿಸಬಹುದು. ಉಳಿದ ಮೊತ್ತವನ್ನು ತಿಂಗಳಿಗೆ 24 ತಿಂಗಳವರೆಗೆ EMI ಆಯ್ಕೆ ಪಡೆಯಬಹುದು ಅಥವಾ 18 ತಿಂಗಳ ಪಾವತಿ ಆಯ್ಕೆ ಪಡೆಯಬಹುದು.

ಜಿಯೋಫೋನ್ ನೆಕ್ಸ್ಟ್‌ನ ಲಭ್ಯತೆ:
* ನಿಮ್ಮ ಜಿಯೋಫೋನ್ ನೆಕ್ಸ್ಟ್‌ಗಾಗಿ ನೋಂದಾಯಿಸಿಕೊಳ್ಳಲು
* ಹತ್ತಿರದ ಜಿಯೋ ಮಾರ್ಟ್ ಡಿಜಿಟಲ್ ರಿಟೇಲರ್ ಅನ್ನು ಭೇಟಿಮಾಡಿ
* ಅಥವಾ WWW.JIO.COM/NEXTಗೆ ಭೇಟಿ ನೀಡಿ
* ಅಥವಾ ವಾಟ್ಸಾಪ್‌ನಲ್ಲಿ - 70182-70182 ಸಂಖ್ಯೆಗೆ 'HI' ಎಂದು ಕಳುಹಿಸಿ
- ದೃಢೀಕರಣ ಬಂದ ನಂತರ, ನಿಮ್ಮ ಜಿಯೋಫೋನ್ ನೆಕ್ಸ್ಟ್ ಅನ್ನು ಪಡೆದುಕೊಳ್ಳಲು ಹತ್ತಿರದ ಜಿಯೋಮಾರ್ಟ್ ರೀಟೇಲರ್ ಅನ್ನು ಭೇಟಿಮಾಡಿ
- ಉತ್ಪನ್ನದ ವೈಶಿಷ್ಟ್ಯಗಳು ಮತ್ತು ಮೌಲ್ಯದ ವಿವರಗಳು ಇಲ್ಲಿವೆ. WWW.JIO.COM/NEXT

1. ವಾಯ್ಸ್ ಫಸ್ಟ್
ಸಾಮರ್ಥ್ಯಗಳು ಬಳಕೆದಾರರು ಸಾಧನದೊಂದಿಗೆ ಮಾತನಾಡುವ ಮೂಲಕ (ಆಪ್ ತೆರೆಯಿರಿ, ಸೆಟ್ಟಿಂಗ್‌ಗಳನ್ನು ನಿರ್ವಹಿಸಿ ಇತ್ಯಾದಿ) ಅದನ್ನು ನಿರ್ವಹಿಸಲು ಗೂಗಲ್ ಅಸಿಸ್ಟೆಂಟ್ ಸಹಾಯ ಮಾಡುತ್ತದೆ. ಬಳಕೆದಾರರು ತಮಗೆ ತಿಳಿದಿರುವ ಭಾಷೆಯಲ್ಲಿ ಮಾಹಿತಿ/ಕಂಟೆಂಟ್ ಅನ್ನು ಇಂಟರ್‌ನೆಟ್‌ನಿಂದ ಸುಲಭವಾಗಿ ಪಡೆಯಬಹುದು.

2. ರೀಡ್ ಅಲೌಡ್
ರೀಡ್ ಅಲೌಡ್ ಸೌಲಭ್ಯವು ಬಳಕೆದಾರರಿಗೆ ತಮ್ಮ ಪರದೆಯ ಮೇಲಿರುವ ಯಾವುದೇ ವಿಷಯವನ್ನು ಓದಿಸಿ, ಕೇಳಲು ಅನುವು ಮಾಡಿಕೊಡುತ್ತದೆ. ಬಳಕೆದಾರರು ಸರಳವಾಗಿ ತಮ್ಮ ಆದ್ಯತೆಯ ಭಾಷೆಯಲ್ಲಿ ಕೇಳುವ ಮೂಲಕ ವಿಷಯವನ್ನು ಸುಲಭವಾಗಿ ಪಡೆದುಕೊಳ್ಳುವುದನ್ನು ಇದು ಸಾಧ್ಯವಾಗಿಸುತ್ತದೆ.

3. ಟ್ರಾನ್ಸ್‌ಲೇಟ್ ನೌ
ಟ್ರಾನ್ಸ್‌ಲೇಟ್ ನೌ ಸೌಲಭ್ಯವು ಯಾವುದೇ ಪರದೆಯನ್ನು ಭಾರತದ 10 ಜನಪ್ರಿಯ ಭಾಷೆಗಳ ಪೈಕಿ ತಮ್ಮ ಆಯ್ಕೆಯ ಭಾಷೆಗೆ ಅನುವಾದಿಸಿಕೊಳ್ಳಲು ಬಳಕೆದಾರರಿಗೆ ಅನುವುಮಾಡಿಕೊಡುತ್ತದೆ. ಇದರಿಂದ ಬಳಕೆದಾರರು ತಮ್ಮ ಆದ್ಯತೆಯ ಭಾಷೆಯಲ್ಲಿ ಯಾವುದೇ ವಿಷಯವನ್ನು ಓದುವುದು ಸಾಧ್ಯವಾಗುತ್ತದೆ.

4. ಸುಲಭ ಮತ್ತು ಸ್ಮಾರ್ಟ್ ಕ್ಯಾಮೆರಾ
ಜಿಯೋಫೋನ್ ನೆಕ್ಸ್ಟ್‌ನಲ್ಲಿರುವ ಸ್ಮಾರ್ಟ್ ಮತ್ತು ಶಕ್ತಿಯುತ ಕ್ಯಾಮೆರಾ ಪೋರ್ಟ್ರೇಟ್ ಮೋಡ್‌ನಂತಹ ವಿವಿಧ ಫೋಟೋಗ್ರಫಿ ಮೋಡ್‌ಗಳನ್ನು ಬೆಂಬಲಿಸುತ್ತದೆ, ಹಾಗೂ ಇದು ಮಸುಕಾದ ಹಿನ್ನೆಲೆಯಿರುವ ಉತ್ತಮ ಫೋಟೋಗಳನ್ನು ಸ್ವಯಂಚಾಲಿತವಾಗಿ ಸೆರೆಹಿಡಿಯಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಕಡಿಮೆ ಬೆಳಕಿನಲ್ಲಿಯೂ ಉತ್ತಮ ಫೋಟೋಗಳನ್ನು ಸೆರೆಹಿಡಿಯಲು ನೈಟ್ ಮೋಡ್ ನೆರವಾಗುತ್ತದೆ. ಭಾವನೆಗಳು ಮತ್ತು ಸಂಭ್ರಮಾಚರಣೆಯೊಂದಿಗೆ ತಮ್ಮ ಸೆಲ್ಫಿಗಳನ್ನು ಉತ್ತಮಗೊಳಿಸಲು ವಿಶಿಷ್ಟವಾದ ಭಾರತ-ಕೇಂದ್ರಿತ ಲೆನ್ಸ್‌ಗಳನ್ನೂ ಕ್ಯಾಮೆರಾ ಒಳಗೊಂಡಿದೆ.

5. ಲಕ್ಷಾಂತರ ಆಪ್‌ಗಳನ್ನು ಬಳಸುವ ಅವಕಾಶ
ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದಾದ ಎಲ್ಲ ಆಂಡ್ರಾಯ್ಡ್ ಆಪ್‌ಗಳನ್ನೂ ಈ ಸಾಧನವು ಬೆಂಬಲಿಸುತ್ತದೆ ಮತ್ತು ಆ ಮೂಲಕ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಲಕ್ಷಾಂತರ ಆಪ್‌ಗಳ ಪೈಕಿ ತಮಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಅವರಿಗೆ ನೀಡುತ್ತದೆ. ಅನೇಕ ಜಿಯೋ ಮತ್ತು ಗೂಗಲ್ ಆಪ್‌ಗಳನ್ನು ಈ ಸಾಧನದಲ್ಲಿ ಮುಂಚಿತವಾಗಿ ಲೋಡ್ ಮಾಡಲಾಗಿದೆ.

6. ಸ್ವಯಂಚಾಲಿತ ಫೀಚರ್ ಅಪ್‌ಡೇಟ್‌ಗಳು
ಹೊಸ ವೈಶಿಷ್ಟ್ಯಗಳು, ಕಸ್ಟಮೈಸೇಶನ್, ಭದ್ರತಾ ಅಪ್‌ಡೇಟ್‌ಗಳು ಹಾಗೂ ಇನ್ನೂ ಹೆಚ್ಚಿನದಕ್ಕಾಗಿ ಜಿಯೋಫೋನ್ ನೆಕ್ಸ್ಟ್‌ನಲ್ಲಿ ಓವರ್ ದಿ ಏರ್ ಅಪ್‌ಡೇಟ್ಸ್ ಬೆಂಬಲವಿದ್ದು, ಇದು ಕಾಲಕ್ರಮೇಣ ಫೋನ್ ಅನುಭವವನ್ನು ವರ್ಧಿಸುತ್ತಲೇ ಹೋಗುತ್ತದೆ.

7. ಸ್ನೇಹಿತರೊಂದಿಗೆ ಸುಲಭವಾಗಿ ಹಂಚಿಕೊಳ್ಳಿ
ಆಪ್‌ಗಳು, ಫೈಲ್‌ಗಳು, ಫೋಟೋಗಳು, ವೀಡಿಯೊಗಳು, ಹಾಡುಗಳು ಮತ್ತು ಇನ್ನೂ ಹೆಚ್ಚಿನದನ್ನು ಕುಟುಂಬದವರು ಮತ್ತು ಸ್ನೇಹಿತರೊಂದಿಗೆ, ಇಂಟರ್‌ನೆಟ್ ಇಲ್ಲದಿದ್ದರೂ ಸಹ, ನಿಯರ್‌ಬೈ ಶೇರ್ ವೈಶಿಷ್ಟ್ಯವನ್ನು ಬಳಸಿ ತ್ವರಿತವಾಗಿ ಹಂಚಿಕೊಳ್ಳಿ.

ಜಿಯೋ ಸಂಸ್ಥೆಯು ಅಗ್ಗದ ಪ್ರೈಸ್‌ಟ್ಯಾಗ್‌ನಿಂದ ದುಬಾರಿ ಬೆಲೆಯಲ್ಲಿ ಹಲವು ಭಿನ್ನ ಪ್ರೀಪೇಯ್ಡ್ ಪ್ಲ್ಯಾನ್‌ಗಳ ಆಯ್ಕೆಯನ್ನು ಹೊಂದಿದೆ. ಅವುಗಳಲ್ಲಿ ಕೆಲವು ಅಲ್ಪಾವಧಿಯ ಯೋಜನೆಗಳಾಗಿದ್ದು, ಇನ್ನು ಕೆಲವು ದೀರ್ಘಾವಧಿಯ ವ್ಯಾಲಿಡಿಟಿ ಪ್ರಯೋಜನದ ಪ್ಲ್ಯಾನ್‌ಗಳಾಗಿವೆ. ಆ ಪೈಕಿ ಜಿಯೋ 555ರೂ ಮತ್ತು ಜಿಯೋ 599ರೂ. ಪ್ರೀಪೇಯ್ಡ್ ಯೋಜನೆಗಳು ಹೆಚ್ಚು ಟ್ರೆಂಡಿ ಎನಿಸಿದ್ದು, ಹಲವು ಪ್ರಯೋಜನಗಳನ್ನು ಪಡೆದಿವೆ. ಈ ಎರಡು ಯೋಜನೆಗಳು ಎಲ್ಲ ಬಳಕೆದಾರರಿಗೂ ಸೂಕ್ತ ಎನಿಸಲಿವೆ.

ಜಿಯೋ 555ರೂ. ಪ್ರೀಪೇಯ್ಡ್ ಪ್ಲಾನ್ ಪ್ರಯೋಜನಗಳು
ಜಿಯೋ 555ರೂ. ಪ್ರೀಪೇಯ್ಡ್ ಪ್ಲ್ಯಾನ್ ಆಲ್-ಇನ್-ಒನ್ ಕೊಡುಗೆಯ ಪ್ಲ್ಯಾನ್ ಆಗಿದ್ದು, ಈ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 1.5GB ಡೇಟಾ ಪ್ರಯೋಜನ ಲಭ್ಯವಾಗಲಿದ್ದು ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ದೊರೆಯುತ್ತದೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಹೆಚ್ಚುವರಿಯಾಗಿ ಜಿಯೋಕ್ಲೌಡ್, ಜಿಯೋ ಸೆಕ್ಯುರಿಟಿ, ಜಿಯೋ ಸಿನಿಮ, ಜಿಯೋನ್ಯೂಸ್ ಮತ್ತು ಜಿಯೋಟಿವಿ ಸೇರಿದಂತೆ ಜಿಯೋ ಅಪ್ಲಿಕೇಶನ್‌ಗಳ ಹೆಚ್ಚುವರಿ ಪ್ರಯೋಜನವನ್ನು ಹೊಂದಿವೆ.

ಜಿಯೋ 599ರೂ. ಪ್ರೀಪೇಯ್ಡ್ ಪ್ಲಾನ್ ಪ್ರಯೋಜನಗಳು
ಜಿಯೋ 599ರೂ. ಪ್ರೀಪೇಯ್ಡ್ ಪ್ಲ್ಯಾನ್ ಒಟ್ಟು 84 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್ಎಮ್ಎಸ್ ಸೌಲಭ್ಯ ಸಹ ಒಳಗೊಂಡಿದೆ. ಇದರೊಂದಿಗೆ ಜಿಯೋ ಸೇರಿದಂತೆ ಇತರೆ ನೆಟವರ್ಕ್‌ಗಳಿಗೂ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ. ಹೆಚ್ಚುವರಿಯಾಗಿ ಜಿಯೋಕ್ಲೌಡ್, ಜಿಯೋ ಸೆಕ್ಯುರಿಟಿ, ಜಿಯೋ ಸಿನಿಮ, ಜಿಯೋನ್ಯೂಸ್ ಮತ್ತು ಜಿಯೋಟಿವಿ ಸೇರಿದಂತೆ ಜಿಯೋ ಅಪ್ಲಿಕೇಶನ್‌ಗಳ ಹೆಚ್ಚುವರಿ ಪ್ರಯೋಜನವನ್ನು ಹೊಂದಿವೆ.


Click it and Unblock the Notifications








