ಏನಿದು ಕ್ರಿಪ್ಟೋ ಕರೆನ್ಸಿ?..ಬಿಟ್ ಕಾಯಿನ್ ವ್ಯವಹಾರ ಹೇಗೆ?

|

ಇತ್ತೀಚಿನ ದಿನಗಳಲ್ಲಿ ಕ್ರಿಪ್ಟೋ ಕರೆನ್ಸಿ ಕುರಿತಾದ ಸುದ್ದಿ ಸಮಾಚಾರಗಳನ್ನು ಕೇಳಿರುತ್ತಿರಿ. ಹಾಗೆಯೇ ಬಿಟ್‌ ಕಾಯಿನ್ ಮೌಲ್ಯ ಏರಿಕೆ, ಬಿಟ್ ಕಾಯಿನ್ ದರಲ್ಲಿ ಇಳಿಕೆ ಇಂತಹ ಸುದ್ದಿಗಳನ್ನು ಕೇಳಿರುತ್ತಿರಿ. ಆದರೆ ಅನೇಕರಿಗೆ ಕ್ರಿಪ್ಟೋ ಕರೆನ್ಸಿ ಎಂದರೇನು?..ಏನಿದು ಬಿಟ್ ಕಾಯಿನ್?..ಇವುಗಳ ವ್ಯವಹಾರ ಹೇಗೆ?..ಎನ್ನುವ ಹಲವು ಪ್ರಶ್ನೆಗಳು ಮೂಡಿರುತ್ತವೆ.

ಕರೆನ್ಸಿಗಳು

ಕೆಲವು ವರ್ಷಗಳ ಈಚೆಗೆ ಈ ಕ್ರಿಪ್ಟೋ ಕರೆನ್ಸಿಗಳು ಹೆಚ್ಚಾಗಿ ಮುನ್ನೆಲೆಗೆ ಬಂದಿವೆ. ಕ್ರಿಪ್ಟೋ ಕರೆನ್ಸಿಗಳಲ್ಲಿ ಹೆಚ್ಚು ಜನಪ್ರಿಯವಾಗಿರುವ ಬಿಟ್‌ ಕಾಯಿನ್ ಮತ್ತು ಡಾಗ್‌ ಕಾಯಿನ್‌ಗಳ ಮೌಲ್ಯವು ಹೊಸ ದಾಖಲೆಗಳನ್ನು ನಿರ್ಮಿಸುತ್ತಿದ್ದಂತೆ, ಜನರಿಗೆ ಅವುಗಳ ಮೇಲಿನ ಆಸಕ್ತಿಯೂ ಏರಿತು. ಕ್ರಿಪ್ಟೋ ಕರೆನ್ಸಿಗಳ ಬಗ್ಗೆ ತಿಳಿದ ಅನೇಕರು ಹೂಡಿಕೆ ಮಾಡಿ ದೊಡ್ಡ ಲಾಭವನ್ನು ಗಳಿಸಿದ್ದಾರೆ. ಹಾಗೆಯೇ ಕೆಲವರು ಕೆಲವು ಹೂಡಿಕೆದಾರರು ತಮ್ಮ ಹಣವನ್ನು ಕಳೆದುಕೊಂಡಿದ್ದಾರೆ. ಹಾಗಾದರೇ ಕ್ರಿಪ್ಟೋ ಕರೆನ್ಸಿ ಎಂದರೇನು ಎನ್ನುವ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಕ್ರಿಪ್ಟೋ ಕರೆನ್ಸಿ ಎಂದರೇನು?

ಕ್ರಿಪ್ಟೋ ಕರೆನ್ಸಿ ಎಂದರೇನು?

ಅತೀ ಸರಳವಾಗಿ ಹೇಳುವುದಾದರೇ ಕ್ರಿಪ್ಟೋ ಕರೆನ್ಸಿ ಎಂದರೇ ಡಿಜಿಟಲ್ ಕರೆನ್ಸಿ. ಇದು ಇಂಟರ್ನೆಟ್ ಆಧಾರಿತವಾಗಿದ್ದು, ವಿನಿಮಯಕ್ಕೆ ಹೆಚ್ಚಾಗಿ ಬಳಕೆ ಮಾಡುತ್ತಾರೆ. ನಾಣ್ಯ ಅಥವಾ ನೋಟಿನ ರೂಪದಲ್ಲಿ ಇದು ಲಭ್ಯವಾಗುವುದಿಲ್ಲ. ಡಿಜಿಟಲ್ ತಂತ್ರಜ್ಞಾನ ಬಳಸಿ ವ್ಯವಹಾರ ಮಾಡಲಾಗುತ್ತದೆ.

ಬ್ಲಾಕ್‌ ಚೈನ್ ತಂತ್ರಜ್ಞಾನ

ಬ್ಲಾಕ್‌ ಚೈನ್ ತಂತ್ರಜ್ಞಾನ

ಬ್ಲಾಕ್‌ ಚೈನ್ ಎಂಬ ತಂತ್ರಜ್ಞಾನ ಬಳಸಿ ಕ್ರಿಪ್ಟೋ ಕರೆನ್ಸಿಗೆ ಡಿಜಿಟಲ್ ರಕ್ಷಣೆ ನೀಡಲಾಗಿರುತ್ತದೆ. ಕಂಪ್ಯೂಟರ್ ನೆಟ್‌ವರ್ಕ್‌ ಕೂಡಾ ವಿಕೇಂದ್ರೀಕೃತ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಕ್ರಿಪ್ಟೋ ಕರೆನ್ಸಿಯನ್ನು ನೀಡುವ ಹಲವು ಖಾಸಗಿ ಸಂಸ್ಥೆಗಳಿವೆ ಕಾರ್ಯನಿರ್ವಹಿಸುತ್ತಿವೆ. ಆದ್ರೆ, ಸರ್ಕಾರಗಳು ಈ ವ್ಯವಹಾರ ನಡೆಸೋದಿಲ್ಲ ಮತ್ತು ಭಾಗಿಯಾಗುವುದಿಲ್ಲ.

ಪ್ರಮುಖ ಕ್ರಿಪ್ಟೋ ಕರೆನ್ಸಿಯ ವಿಧಗಳು:

ಪ್ರಮುಖ ಕ್ರಿಪ್ಟೋ ಕರೆನ್ಸಿಯ ವಿಧಗಳು:

* ಬಿಟ್‌ ಕಾಯಿನ್
* ಎಥೆರಿಯಮ್
* ಎಕ್ಸ್ಆರ್‌ಪಿ
* ಟೆದರ್
* ಡಾಗ್ ಕಾಯಿನ್
* ಬಿಟ್‌ ಕಾಯಿನ್‌ ಕ್ಯಾಶ್‌

ಅತ್ಯಂತ ಜನಪ್ರಿಯ ಕ್ರಿಪ್ಟೋ ಕರೆನ್ಸಿ

ಅತ್ಯಂತ ಜನಪ್ರಿಯ ಕ್ರಿಪ್ಟೋ ಕರೆನ್ಸಿ

ಹಲವು ಬಗೆಯ ಕ್ರಿಪ್ಟೋ ಕರೆನ್ಸಿಗಳಿವೆ. ಆದರೆ ಬಿಟ್ ಕಾಯಿನ್ ಹೆಚ್ಚು ಜನಪ್ರಿಯ ಹಾಗೂ ಮುಂಚೂಣಿಯಲ್ಲಿ ಗುರುತಿಸಿಕೊಂಡಿದೆ. ಇತ್ತೀಚಿಗೆ ಪ್ರಮುಖ ಐದು ಕ್ರಿಪ್ಟೋ ಕರೆನ್ಸಿಗಳ ಲಿಸ್ಟ್‌ನಲ್ಲಿ ಡಾಗ್ ಕಾಯಿನ್ ಕಾಣಿಸಿಕೊಂಡಿದೆ. ಈ ಡಾಗ್ ಕಾಯಿನ್ 2013ರಲ್ಲಿ ಪರಿಚಿತವಾಗಿದೆ.

ನಕಮೋಟೋ

ಅದೇ ರೀತಿ 2009ರಲ್ಲಿ ಸಂತೋಷಿ ನಕಮೋಟೋ ಎಂಬ ಹೆಸರಿನ ಸಂಸ್ಥೆಯೊಂದು ಬಿಟ್ ಕಾಯಿನ್ ವ್ಯವಸ್ಥೆಯನ್ನು ಪರಿಚಯಿಸಿತು. ಇದೀಗ ಮಾರ್ಚ್‌ 2021ರ ಅಂಕಿಅಂಶವನ್ನು ಗಮನಿಸಿದರೆ ಇಡೀ ವಿಶ್ವದಲ್ಲಿ ಒಟ್ಟು 18.6 ದಶ ಲಕ್ಷ ಬಿಟ್ ಕಾಯಿನ್‌ಗಳು ಬಳಕೆಯಲ್ಲಿವೆ. ಇದರ ಒಟ್ಟು ಮಾರುಕಟ್ಟೆ ಮೌಲ್ಯ 927 ಬಿಲಿಯನ್ ಅಮೆರಿಕನ್ ಡಾಲರ್ ಆಗಿದೆ.

ಕ್ರಿಪ್ಟೋ ಕರೆನ್ಸಿ ಮಾನ್ಯತೆ

ಕ್ರಿಪ್ಟೋ ಕರೆನ್ಸಿ ಮಾನ್ಯತೆ

ಅನೇಕ ದೇಶಗಳು ಕ್ರಿಪ್ಟೋ ಕರೆನ್ಸಿಯನ್ನು ಬೆಂಬಲಿಸಲು ಪ್ರಾರಂಭಿಸಿವೆ. ಆದರೆ ಅನೇಕ ಸಂದರ್ಭಗಳಲ್ಲಿ, ಕ್ರಿಪ್ಟೋ ಕರೆನ್ಸಿಗಳ ಸುತ್ತ ಇನ್ನೂ ಸೂಕ್ತ ನಿಯಂತ್ರಣವಿಲ್ಲ. ಭಾರತದಲ್ಲಿ, ಆರಂಭದಲ್ಲಿ ಕ್ರಿಪ್ಟೋ ಕರೆನ್ಸಿ ನಿಷೇಧದ ಕುರಿತು ಮಾತುಕತೆ ನಡೆದಿತ್ತು. ಆದರೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) 2018 ರಲ್ಲಿ ಕ್ರಿಪ್ಟೋ ವಹಿವಾಟನ್ನು ನಿರ್ಬಂಧಿಸಿದ್ದರೂ, ಕಳೆದ ವರ್ಷ ಸುಪ್ರೀಂ ಕೋರ್ಟ್ ಆರ್‌ಬಿಐ ಆದೇಶವನ್ನು ರದ್ದುಗೊಳಿಸಿತು. ಆರ್‌ಬಿಐ ಈಗ ತನ್ನದೇ ಆದ ಕ್ರಿಪ್ಟೋ ಕರೆನ್ಸಿಯನ್ನು ಹಂತ ಹಂತವಾಗಿ ಬಿಡುಗಡೆ ಮಾಡುವ ಪ್ರಕ್ರಿಯೆಯಲ್ಲಿದೆ ಎಂದು ಹೇಳಿದೆ.

Best Mobiles in India

English summary
What Is Cryptocurrency? You Need to Know About Bitcoin, Dogecoin and More.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X