ಮೊಬೈಲ್‌ಗೆ ಬರುವ 'ಬಹುಮಾನದ ಆಮಿಷ' ಸಂದೇಶಗಳ ಬಗ್ಗೆ ನಿಮಗೆಷ್ಟು ಗೊತ್ತು?
ನೀವು ಹೆಚ್ಚು ಪ್ರಚಲಿತವಲ್ಲದ ಯಾವುದೋ ಒಂದು ಅಪರಿಚಿತ ವೆಬ್‌ಸೈಟ್ ತೆರೆದರೆ ಸಾಕು, ನೀವು ಐಫೋನ್ ಗೆದ್ದಿದ್ದೀರಾ, ನೀವು ದೊಡ್ಡ ಮೊತ್ತದ ಬಹುಮಾನ ಗೆದ್ದಿರುವ ಅದೃಷ್ಟಶಾಲಿಗಳು ಎಂಬ ಸಂದೇಶಗಳು ಬರುತ್ತವೆ. ಹಾಗೆಯೇ, ಬಳಕೆದಾರರ ಇ-ಮೇಲ್ ಅಥವಾ ಮೊಬೈಲ್‌ಗಳಿಗಳಿಗೆ ಮೇಲಿಂದ ಮೇಲೆ ಈ ರೀತಿಯ ಸಂದೇಶಗಳೂ ಬರುತ್ತಲೇ ಇರುತ್ತವೆ.
ಪ್ರತಿಯೋರ್ವ ಮೊಬೈಲ್ ಮತ್ತು ಬಳಕೆದಾರನಿಗೂ ಬಹುಮಾನ ಆಮಿಷದ ಸಂದೇಶಗಳು ಬರುತ್ತಿರುತ್ತವೆ. ಬಹುಮಾನ ಆಮಿಷ ನೀಡುವ ಎಂಬ ಸಂದೇಶಗಳು ಏಕೆ, ಎಲ್ಲಿಂದ ಮತ್ತು ಯಾರಿಂದ ಬರುತ್ತವೆ ಎನ್ನುವುದು ಬಹುತೇಕರನ್ನು ಕಾಡುವ ಪ್ರಶ್ನೆಗಳಾಗಿವೆ. ಅಂತಹ ಸಂದೇಶಗಳು ಏಕೆ ಬರುತ್ತವೆ ಎಂದು ಅನೇಕರು ಸುಮ್ಮನೆ ತಲೆಕೆಡಿಸಿಕೊಂಡಿರುತ್ತಾರೆ.

ನಿಮಗೆ ಗೊತ್ತಾ? ಈ ಬಹುಮಾನದ ಆಮಿಷ ಸಂದೇಶಗಳು ದುರುದ್ದೇಶಪೂರಿತ ಜಾಹೀರಾತು ಪ್ರದರ್ಶನದ ಭಾಗವಾಗಿರುತ್ತವೆ. ಇದನ್ನು 'ಮಾಲ್ವರ್ಟೈಸಿಂಗ್' (Malvertising) ಎಂದು ಕರೆಯುತ್ತಾರೆ. ಇವು ಕಂಪ್ಯೂಟರ್ ಅನ್ನು ಜಾಲಾಡಿದಾಗ ಕಾಣಿಸಿಕೊಳ್ಳುತ್ತವೆ. ಬಹುತೇಕ ಟೆಲಿಕಾಂ ಕಂಪೆನಿಗಳೇ ಇಂತಹ ಮೋಸದಲ್ಲಿ ಭಾಗವಾಗಿರುತ್ತದೆ.
ಇಂತಹ ಸಂದೇಶಗಳಿಂದ ವಿಶ್ವದಾಧ್ಯಂತ ಈಗಾಗಲೇ ಲಕ್ಷಾಂತರ ಜನರು ಹಣಕಳೆದುಕೊಂಡಿದ್ದಾರೆ. ಇಂತಹ ಸಂದೇಶಗಳ ಪಾಪ್ ಅಪ್‌ಗೆ ಓಕೆ ಅಥವಾ ಡಿಸ್ಮಿಸ್ ಆಯ್ಕೆ ಒತ್ತಿದರೆ ದೊಡ್ಡ ಮೊತ್ತದ ಬಹುಮಾನಗಳ ಆಮಿಷ ಒಡ್ಡುವ ಜಾಲತಾಣಕ್ಕೆ ಕರೆದೊಯ್ಯುತ್ತವೆ. ಆ ಜಾಲತಾಣಗಳ ಪ್ರಶ್ನೋತ್ತರ ಸರಣಿಗೆ ಉತ್ತರಿಸಲು ಪ್ರಯತ್ನಿಸಿದರೆ ನೀವು ಅವರ ಹಳ್ಳಕ್ಕೆ ಬಿದ್ದಂತೆ.
ಕೆಲ ವರ್ಷಗಳವರೆಗೆ ಈ ರೀತಿಯ ಸಂದೇಶಗಳನ್ನು ನಿರ್ಲಕ್ಷಿಸಲಾಗಿತ್ತು. ಆದರೆ ಇತ್ತೀಚೆಗೆ ಈ ಸಮಸ್ಯೆ ಮೊಬೈಲ್ ಸಾಧನಗಳಿಗೆ ವ್ಯಾಪಕವಾಗಿ ಹರಡಿದ್ದು, ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಅಧಿಕೃತ ಜಾಲತಾಣಗಳಲ್ಲಿ ನಕಲಿ ಜಾಹೀರಾತು ಪ್ರಕಟಿಸುವ ಕೆಲ ಸಂಸ್ಥೆಗಳಿಂದ ಈಗ ದುರುದ್ದೇಶಪೂರಕ ಸಂದೇಶಗಳು ಹೆಚ್ಚೆಚ್ಚು ಹರಿದಾಡುತ್ತವೆ .

ಇಂತಹ ಸಂದೇಶಗಳು ಬಂದಾಗ ವಹಿಸಬೇಕಾದ ಕ್ರಮಗಳ ಕುರಿತು ಕೆಲ ಸೂಚನೆಗಳಿವೆ. ಹಾಗಾಗಿ, ನಿಮಗೆ ಈ ರೀತಿಯ ಬಹುಮಾನ ಮತ್ತು ಶುಭಾಶಯ ಸಂದೇಶ ಬಂದಾಗ ಕಂಪ್ಯೂಟರ್ ಅಥವಾ ಮೊಬೈಲ್‌ನ ಬ್ರೌಸರ್ ಅಪ್ಲಿಕೇಷನ್ ಅಂತ್ಯಗೊಳಿಸಿಬಿಡಿ. ಇಲ್ಲವಾದಲ್ಲಿ ಬೇರೆ ಪರಿಹಾರವಿಲ್ಲದೆ ನಿಮ್ಮ ಕಂಪ್ಯೂಟರ್‌ಗೆ ವೈರಸ್ ದಾಳಿ ಆಗಬಹುದು.
ಓದಿರಿ: 10 ಸಾವಿರಕ್ಕಿಂತ ಕಡಿಮೆ ಬೆಲೆಯಲ್ಲಿ ಲಭ್ಯವಿವೆ ಈ ಬೆಸ್ಟ್ ಡ್ಯುಯಲ್ ಕ್ಯಾಮೆರಾ ಫೋನ್‌ಗಳು!!


Click it and Unblock the Notifications