ಮೆಟಾ 'ಥ್ರೆಡ್ಸ್' ಇದು 'ಟ್ವಿಟರ್' ಕಿಲ್ಲರ್!..ಈ ಆಪ್ ಬಳಕೆ ಹೇಗೆ ಗೊತ್ತಾ?
ಟ್ವಿಟರ್‌ಗೆ ಆಪ್‌ಗೆ ನೇರ ಸೆಡ್ಡು ಹೊಡೆಯಲು ಮೆಟಾ ಸಂಸ್ಥೆಯು ಥ್ರೆಡ್ಸ್ (Threads) ಅಪ್ಲಿಕೇಶನ್ ಬಿಡುಗಡೆ ಮಾಡಿದೆ. ಈ ಅಪ್ಲಿಕೇಶನ್ ಟ್ವಿಟರ್‌ನ ಪ್ರಬಲ ಪ್ರತಿಸ್ಪರ್ಧಿ ಆಗಿದ್ದು, ಭಾರತ ಸೇರಿದಂತೆ ಜಾಗತಿಕವಾಗಿ ಅಧಿಕೃತವಾಗಿ ಲಭ್ಯ ಇದೆ. ಆಂಡ್ರಾಯ್ಡ್ ಹಾಗೂ ಐಓಎಸ್ ಬಳಕೆದಾರರು ಈ ಆಪ್ ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ಅಷ್ಟಕ್ಕೂ ಥ್ರೆಡ್ಸ್ ಆಪ್‌ನ ಫೀಚರ್ಸ್ ಏನು?
ಹೌದು, ಮೆಟಾ ಸಂಸ್ಥೆಯು ನೂತನವಾಗಿ ಥ್ರೆಡ್ಸ್ ಅಪ್ಲಿಕೇಶನ್ ಅನ್ನು ಲಾಂಚ್ ಮಾಡಿದ್ದು, ಈ ಆಪ್ ಟ್ವಿಟರ್ ಕಿಲ್ಲರ್ ಆಪ್ ಎಂದು ಗುರುತಿಸಿಕೊಂಡಿದೆ. ಟ್ವಿಟರ್ ಆಪ್‌ಗೆ ನೇರ ಪೈಪೋಟಿ ನೀಡಲಿರುವ ಥ್ರೆಡ್ಸ್ ಆಪ್ ಆಯ್ಕೆಗಳು ಬಹುತೇಕ ಟ್ವಿಟರ್ ಆಪ್‌ನ ಫೀಚರ್ಸ್‌ಗಳನ್ನು ಹೋಲುವಂತಿವೆ. ಇನ್‌ಸ್ಟಾಗ್ರಾಮ್ ಬಳಕೆದಾರರನ್ನು ಆಕರ್ಷಿಸಲು, ಇನ್‌ಸ್ಟಾಗ್ರಾಂನಲ್ಲಿ ಈಗಾಗಲೇ ವೈರಿಫೈಡ್ ಆದ ಬಳಕೆದಾರರು ಆಟೋಮ್ಯಾಟಿಕ್ ಆಗಿ ಥ್ರೆಡ್ಸ್ ಆಪ್‌ನಲ್ಲಿ ಬ್ಲೂ ಟಿಕ್ ಪಡೆಯುತ್ತಾರೆ.

ಥ್ರೆಡ್ಸ್ ಅಪ್ಲಿಕೇಶನ್ ಲಭ್ಯತೆ?
ಮೆಟಾ ಸಂಸ್ಥೆಯ ನೂತನ ಥ್ರೆಡ್ಸ್ ಆಪ್ ಆಂಡ್ರಾಯ್ಡ್ (Android) ಮತ್ತು ಆಪಲ್ ಐಫೋನ್ (iPhone) ಗಳಿಗೂ ಲಭ್ಯ ಇದೆ. ಆಂಡ್ರಾಯ್ಡ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ನಿಂದ ಹಾಗೂ ಐಫೋನ್ ಬಳಕೆದಾರರು ಆಪಲ್ ಸ್ಟೋರ್‌ನಿಂದ ಥ್ರೆಡ್ಸ್ ಆಪ್ ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.
ಏನಿದು ಥ್ರೆಡ್ಸ್ ಅಪ್ಲಿಕೇಶನ್?
ಮೆಟಾ ಬಿಡುಗಡೆ ಮಾಡಿರುವ ಈ ಆಪ್ ಟ್ವಿಟರ್‌ನ ಪ್ರತಿಸ್ಪರ್ಧಿ ಆಗಿದೆ. ಥ್ರೆಡ್ಸ್ 500 ಅಕ್ಷರಗಳವರೆಗಿನ ಕಿರು ಪೋಸ್ಟ್‌ಗಳು ಅಥವಾ ಅಪ್‌ಡೇಟ್‌ಗಳನ್ನು ಪೋಸ್ಟ್ ಮಾಡಲು ಬಳಕೆದಾರರಿಗೆ ಅನುಮತಿಸುವ ವೇದಿಕೆಯಾಗಿದೆ. ಬಳಕೆದಾರರು 5 ನಿಮಿಷಗಳವರೆಗೆ ಲಿಂಕ್‌ಗಳು, ಫೋಟೋಗಳು ಅಥವಾ ವೀಡಿಯೊಗಳನ್ನು ಪೋಸ್ಟ್‌ನಲ್ಲಿ ಸೇರಿಸಬಹುದಾಗಿದೆ. ಹಾಗೆಯೇ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಗೆ ಥ್ರೆಡ್ಸ್ ಪೋಸ್ಟ್‌ಗಳನ್ನು ಶೇರ್ ಮಾಡಬಹುದಾಗಿದೆ.
ಥ್ರೆಡ್ಸ್ ಆಪ್ ಬಳಕೆ ಹೇಗೆ?
ಮೆಟಾ ಸಂಸ್ಥೆಯ ಹೊಸ ಆಪ್ ಆದ ಥ್ರೆಡ್ಸ್ (Threads) ಆಪ್ ಸೇರಲು ಬಳಕೆದಾರರು ಇನ್‌ಸ್ಟಾಗ್ರಾಮ್ (Instagram) ಖಾತೆಯನ್ನು ಹೊಂದಿರುವುದು ಅಗತ್ಯ. ಏಕೆಂದರೆ ಥ್ರೆಡ್ಸ್ ಆಪ್‌ಗೆ ಸೈನ್ ಇನ್ ಮಾಡಲು ಬಳಕೆದಾರರು ಇನ್‌ಸ್ಟಾಗ್ರಾಮ್ ಲಾಗಿನ್ (login credentials) ಯೂಸರ್ ಐಡಿ ಮತ್ತು ಪಾಸ್‌ವರ್ಡ್ ಬಳಸಬೇಕಾಗುತ್ತದೆ.
ಬಳಕೆದಾರರು ಒಮ್ಮೆ ಖಾತೆಯನ್ನು ಪ್ರಾರಂಭಿಸಿ, ಇನ್‌ಸ್ಟಾಗ್ರಾಮ್ ಬಳಕೆದಾರ ಹೆಸರನ್ನು ಪೋರ್ಟ್ ಮಾಡಲಾಗುತ್ತದೆ. ಆದರೆ ಬಳಕೆದಾರರು ತಮ್ಮ ಪ್ರೊಫೈಲ್ ಅನ್ನು ಕಸ್ಟ್‌ಮೈಸ್ ಆಗಿ ರಚಿಸಲು ಅವಕಾಶ ಇದೆ. ಆದರೂ ಮೆಟಾ ನೋಟ್‌ಗಳನ್ನು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಯುಕೆ ಬಳಕೆದಾರರು ಡೀಫಾಲ್ಟ್ ಆಗಿ ಖಾಸಗಿ ಪ್ರೊಫೈಲ್ ಅನ್ನು ಸ್ವೀಕರಿಸುತ್ತಾರೆ ಎನ್ನಲಾಗಿದೆ.
ಇನ್‌ಸ್ಟಾಗ್ರಾಮ್ ನಲ್ಲಿ ಬಳಕದಾರರು ಈಗಾಗಲೇ ಅನುಸರಿಸುವ ಖಾತೆಗಳನ್ನು ಕೆಲವು ಕ್ಲಿಕ್ ಮೂಲಕ ಸುಲಭವಾಗಿ ಫಾಲೋ ಮಾಡಬಹುದು. ಥ್ರೆಡ್ಸ್‌ನಲ್ಲಿ ಬಳಕೆದಾರರು ಪೋಸ್ಟ್ ಅಥವಾ 'ಥ್ರೆಡ್' ಅನ್ನು ಕ್ರಿಯೆಟ್ ಮಾಡಿದಾಗ, ಅದನ್ನು ಯಾರು ವೀಕ್ಷಿಸಬಹುದು ಎಂಬುದನ್ನು ಅವರು ಆಯ್ಕೆ ಮಾಡಬಹುದಾಗಿದೆ. ಅದು ಪಬ್ಲಿಕ್ ಅಥವಾ ಫಾಲೋವರ್ಸ್ ಮಾತ್ರ ಆಗಿರಬಹುದು.
ಇನ್ನು ಬಳಕೆದಾರರಿಗೆ ಪ್ರೊಫೈಲ್ ರಿಸ್ಟ್ರೀಕ್ ಮಾಡುವ, ರಿಪೋರ್ಟ್ ಮಾಡುವ, ನಿರ್ಬಂಧಿಸುವ ಸಾಮರ್ಥ್ಯ ಆಯ್ಕೆಗಳು ಇರಲಿವೆ. ಮೂರು ಚುಕ್ಕೆಗಳ ಡ್ರಾಪ್-ಡೌನ್ ಮೆನುವನ್ನು ಬಳಸಿಕೊಂಡು ಅದನ್ನು ಆಕ್ಸಸ್ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಬ್ಲಾಕ್ ಮಾಡಿರುವ ಖಾತೆಗಳನ್ನು ಆಟೋಮ್ಯಾಟಿಕ್ ಆಗಿ ಥ್ರೆಡ್ಸ್‌ಗಳಲ್ಲಿಯೂ ಬ್ಲಾಕ್ ಮಾಡಬಹುದಾಗಿದೆ. ಹಾಗೆಯೇ ಈ ಆಪ್ ಸ್ಕ್ರೀನ್ ರೀಡರ್ ಸಪೋರ್ಟ್ ಮತ್ತು AI- ರಚಿತ ಫೋಟೋ ವಿವರಣೆ ಆಯ್ಕೆ ಒಳಗೊಂಡಿದೆ.


Click it and Unblock the Notifications








