Home
ಸುದ್ದಿಜಾಲ

ಶಿಯೋಮಿ ಈಗ ಸಾಲ ಕೂಡಲು ಮುಂದಾಗಿದೆ!

By Gizbot Bureau

ಭಾರತದ ಎಲೆಕ್ಟ್ರಾನಿಕ್ ಮಾರುಕಟ್ಟೆಯನ್ನು ಸ್ಮಾರ್ಟ್ ಫೋನ್ ಗಳು, ಟಿವಿಗಳು ಮತ್ತು ಇತರೆ ಪ್ರಮುಖ ಎಲ್ಲಾ ಎಲೆಕ್ಟ್ರಾನಿಕ್ ವಸ್ತುಗಳಿಂದ ಆಳಲು ಪ್ರಾರಂಭಿಸಿದ ನಂತರ ಶಿಯೋಮಿ ತನ್ನ ಛಾಪನ್ನು ಎರಡು ಹೊಸ ಸೇವೆಗಳ ಮೂಲಕ ಫೈನಾನ್ಶಿಯಲ್ ಜಾಗಕ್ಕೂ ಕಾಲಿಟ್ಟಿದೆ. ಹೌದು ಅದುವೇ ಎಂಐ ಪೇ ಮತ್ತು ಎಂಐ ಕ್ರೆಡಿಟ್.

ಎಂಐ ಪೇ ಯುಪಿಐ ಆಧಾರಿತ ಪಾವತಿ ಆಯ್ಕೆ ಮತ್ತು ಪ್ರಿಪೇಯ್ಡ್ ಸೇವೆಗಳಿಗೆ ಅನುಕೂಲಕಾರಿಯಾಗಿರುತ್ತದೆ ಇನ್ನು ಎಂಐ ಕ್ರೆಡಿಟ್ ಹಣವನ್ನು ಸಾಲವಾಗಿ ಪಡೆಯುವುದಕ್ಕೆ ನೆರವಾಗುತ್ತದೆ.ಕಳೆದ ವರ್ಷದ ಸೆಪ್ಟೆಂಬರ್ ನಲ್ಲಿ ಎಂಐ ಕ್ರೆಡಿಟ್ ನ್ನು ಪ್ರಕಟಿಸಲಾಗಿತ್ತು.ಆಯ್ದ ಕೆಲವು ಎಂಐಯುಐ ಬಳಕೆದಾರರಿಗೆ ಮಾರುಕಟ್ಟೆಯ ಪ್ರತಿಕ್ರಿಯೆಯನ್ನು ಪರೀಕ್ಷಿಸುವ ಸಲುವಾಗಿ ಲಭ್ಯವಾಗಿತ್ತು. ಇದೀಗ ಶಿಯೋಮಿ ಎಂಐ ಕ್ರೆಡಿಟ್ ಆಪ್ ನ್ನು ಎಲ್ಲಾ ಎಂಐಯುಐ ಶಿಯೋಮಿ ಬಳಕೆದಾರರಿಗಾಗಿ ಬಿಡುಗಡೆಗೊಳಿಸಿದೆ.

ಎಂಐ ಕ್ರೆಡಿಟ್ ನಲ್ಲಿ ಗ್ರಾಹಕರು 1 ಲಕ್ಷಧ ವರೆಗೆ ಪರ್ಸನಲ್ ಲೋನ್(ವಯಕ್ತಿಕ ಸಾಲ) ವನ್ನು ಪಡೆಯುವುದಕ್ಕೆ ಅವಕಾಶವಿರುತ್ತದೆ. ಇದು ಇನ್ಸ್ಟೆಂಟ್ ಆಗಿ ಅವರ ಬ್ಯಾಂಕ್ ಖಾತೆಗೆ ಕ್ರೆಡಿಟ್ ಆಗುತ್ತದೆ ಮತ್ತು ಈ ಸಂಪೂರ್ಣ ಪ್ರೊಸೆಸ್ ಡಿಜಿಟಲ್ ಆಗಿರುತ್ತದೆ. ಹಾಗಾದ್ರೆ ಎಂಐ ಕ್ರೆಡಿಟ್ ಮೂಲಕ ನೀವು ಹೇಗೆ ಇನ್ಸೆಂಟ್ ಲೋನ್ ನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತದೆ ಎಂಬುದನ್ನು ಈ ಲೇಖನದಲ್ಲಿ ವಿವರಿಸುತ್ತೇವೆ. ಮುಂದೆ ಓದಿ.

ಎಂಐ ಕ್ರೆಡಿಟ್ ಅಂದರೆ ಏನು?

ಎಂಐ ಕ್ರೆಡಿಟ್ ಅಂದರೆ ಏನು?

ಎಂಐ ಕ್ರೆಡಿಟ್ ವಯಕ್ತಿಕ ಹಣಕಾಸು ಸೇವೆ ಒದಗಿಸುವ ತಾಣ. ಇಲ್ಲಿ ಗ್ರಾಹಕರು ತಮ್ಮ ಮೊಬೈಲ್ ಫೋನ್ ನಿಂದಲೇ ಹಣ ಪಡೆಯಬಹುದು ಮತ್ತು ತಿಂಗಳ ಕಂತಿನ ರೂಪದಲ್ಲಿ ಮರುಪಾವತಿ ಮಾಡಬಹುದು. ಇದೊಂದು ಸಾಂಪ್ರದಾಯಿಕ ಬ್ಯಾಂಕಿಂಗ್ ವ್ಯವಸ್ಥೆಯಂತೆಯೇ ಕಾರ್ಯ ನಿರ್ವಹಿಸುತ್ತದೆ. ಆದರೆ ಈ ಪ್ರೊಸೆಸ್ ಸಂಪೂರ್ಣ ಡಿಜಿಟಲ್ ಆಗಿರುತ್ತದೆ. ಲೋನ್ ನೀಡುವಿಕೆ ಕೂಡ ಬಹಳ ವೇಗವಾಗಿರುತ್ತದೆ. ಈ ಸೇವೆಯನ್ನು ಬಳಸುವ ಮುನ್ನ ನೀವು ತಿಳಿದುಕೊಳ್ಳಬೇಕಾಗಿರುವ ಕೆಲವು ಅಂಶಗಳು ಇಲ್ಲಿವೆ.

• ಎಂಐ ಕ್ರೆಡಿಟ್ ಶಿಯೋಮಿಯ ಸೆಕ್ಯೂರ್ ಆಗಿರುವ ಇನ್ಸೆಂಟ್ ವಯಕ್ತಿಕ ಸಾಲ ಸೌಲಭ್ಯದ ಸೇವೆ ನೀಡುವ ಜಾಗ

• ಎಂಐಯುಐ ನಲ್ಲಿ ರನ್ ಆಗುವ ಎಲ್ಲಾ ಶಿಯೋಮಿ ಬಳಕೆದಾರರಿಗೆ ಇದು ಲಭ್ಯವಾಗುತ್ತದೆ.

• ರಿಯಲ್ ಟೈಮ್ ನಲ್ಲಿ ನೀವು 1 ಲಕ್ಷ ರುಪಾಯಿ ವರೆಗೆ ಸಾಲವನ್ನು ಇಲ್ಲಿ ಪಡೆಯಬಹುದು.

• ಬಡ್ಡಿದರವು 1.3% ದಿಂದ 2.5% ದ ವರೆಗೆ ಪ್ರತಿ ತಿಂಗಳಿಗೆ ಲಭ್ಯವಿರುತ್ತದೆ. ಸಾಲ ಮರುಪಾವತಿಸಲು ಇರುವ ಗರಿಷ್ಟ ಕಾಲಾವಕಾಶ 36 ತಿಂಗಳು.

• ನಿಮ್ಮ ಪಾನ್ ಸಂಖ್ಯೆ, ವಿಳಾಸ, ಆದಾಯದ ಮೂಲ ಮತ್ತು ಬ್ಯಾಂಕ್ ಖಾತೆಯ ವಿವರಗಳನ್ನು ನೀಡಬೇಕಾಗುತ್ತದೆ.

• ನೀವು ಇಎಂಐ ಯನ್ನು ಪ್ರತಿ ತಿಂಗಳ 5ನೇ ತಾರೀಕಿನ ಒಳಗೆ ಪಾವತಿ ಮಾಡಬೇಕಾಗುತ್ತದೆ.

• ನಿಮ್ಮ ಜಾಗದ ಯಾವುದೇ ದಾಖಲಾತಿಯನ್ನು ನೀಡುವ ಅಥವಾ ನಿಮ್ಮ ಲೋನಿಗೆ ಕೊಲ್ಯಾಟ್ರಲ್ ಒದಗಿಸುವ ಅಗತ್ಯವಿಲ್ಲ. ಆದರೆ ಪ್ರೊಸೆಸಿಂಗ್ ಫೀಸ್ ನ್ನು ಲೋನ್ ಪಡೆಯುವುದಕ್ಕಾಗಿ ಪಾವತಿ ಮಾಡಬೇಕಾಗುತ್ತದೆ.

ಎಂಐ ಕ್ರೆಡಿಟ್ ನ್ನು ಬಳಸುವುದು ಹೇಗೆ?

1.ಶಿಯೋಮಿ ಡಿವೈಸ್ ನಲ್ಲಿ ಎಂಐ ಆಪ್ ನ್ನು ತೆರೆಯಿರಿ ಮತ್ತು ಎಂಐ ಕ್ರೆಡಿಟ್ ನ್ನು ಹುಡುಕಾಡಿ ಮತ್ತು ಆಪ್ ನ್ನು ಇನ್ಸ್ಟಾಲ್ ಮಾಡಿ.

2. ಎಂಐ ಕ್ರೆಡಿಟ್ ಆಪ್ ನ್ನು ಲಾಂಚ್ ಮಾಡಿ ಮತ್ತು ವೆಲ್ ಕಂ ಸ್ಕ್ರೀನ್ ಗೆ ತೆರಳಿ. ಆದಾದ ನಂತರ ಎಲ್ಲಾ ಪರ್ಮಿಷನ್ ಗಳನ್ನು ಒದಗಿಸಿ.

3. ಮುಂದಿನ ಸ್ಕ್ರೀನ್ ನಲ್ಲಿ ಗೆಟ್ ನೌ ಬಟನ್ ನ್ನು ಟ್ಯಾಪ್ ಮಾಡಿ ಮತ್ತು ನಿಮ್ಮ ಫೋನ್ ನಂಬರ್ ನ್ನು ಒದಗಿಸಿ. ಇದೀಗ ಓಟಿಪಿಯನ್ನು ಎಂಟರ್ ಮಾಡಿ ಮತ್ತು ಮುಂದುವರಿಸಿ.

4. ಇಲ್ಲಿ ನೀವು ಎಲ್ಲಾ ಅಗತ್ಯ ಡಾಕ್ಯುಮೆಂಟ್ ಗಳನ್ನು ಒದಗಿಸಬೇಕು. ಮೊದಲಿಗೆ ಪ್ಯಾನ್ ಡಾಂಕ್ಯುಮೆಂಟ್ ನ್ನು ಸ್ಕ್ಯಾನ್ ಮಾಡಿ ಮತ್ತು ವಿವರಗಳನ್ನು ಎಂಟರ್ ಮಿ. ನಂತರ ನಿಮ್ಮ ವಿಳಾಸ ದಾಖಲಾತಿಗಳನ್ನು ಎಂಟರ್ ಮಾಡಿ.

5.ಅಂತಿಮವಾಗಿ ನಿಮ್ಮ ಸೆಲ್ಫೀಯನ್ನು ಅಪ್ ಲೋಡ್ ಮಾಡಿ ಮತ್ತು ಮುಂದುವರಿಸಿ. ನಿಮ್ಮ ಲೋನ್ ಪ್ರೊಫೈಲ್ ಕ್ರಿಯೇಟ್ ಆಗುತ್ತದೆ ಮತ್ತು ನಿಮ್ಮ ಅರ್ಹತೆಯನ್ನು ಪರೀಕ್ಷಿಸಲಾಗುತ್ತದೆ.

6.ಒಂದು ವೇಳೆ ನೀವು ಅರ್ಹರಾಗಿದ್ದಲ್ಲಿ, ಮುಂದಿನ ಅಗತ್ಯ ದಾಖಲಾತಿಗಳನ್ನು ಒದಗಿಸುವುದಕ್ಕೆ ಇದು ಅವಕಾಶ ನೀಡುತ್ತದೆ ಉದಾಹರಣೆಗೆ ಬ್ಯಾಂಕ್ ಖಾತೆಯ ವಿವರ ಮತ್ತು ಸಂಬಳದ ವಿವರ ಇತ್ಯಾದಿಗಳು. ಅದಾದ ನಂತರ ನಿಮಗೆ ನೇರವಾಗಿ ಬ್ಯಾಂಕ್ ಖಾತೆಯಲ್ಲಿ ಹಣ ಪಡೆಯುತ್ತೀರಿ.

ನಮ್ಮ ಟೆಸ್ಟಿಂಗ್ ನಲ್ಲಿ ಅರ್ಹತೆಯನ್ನು ಸಿಸ್ಟಮ್ ನಲ್ಲಿ ನಾವೂ ಸ್ವತಃ ಪರೀಕ್ಷಿಸುವುದಕ್ಕೆ ಸಾಧ್ಯವಾಗಿಲ್ಲ ಮತ್ತು 60 ದಿನಗಳ ನಂತರ ಪುನಃ ಅಪ್ಲೈ ಮಾಡುವುದಕ್ಕೆ ತಿಳಿಸಲಾಯಿತು.

ಎಂಐ ಕ್ರೆಡಿಟ್ vrs ಇತರೆ ಇನ್ಸೆಂಟ್ ವಯಕ್ತಿಕ ಸಾಲ ಸೌಲಭ್ಯ ನೀಡುವ ಸೇವೆಗಳು:

ಎಂಐ ಕ್ರೆಡಿಟ್ vrs ಇತರೆ ಇನ್ಸೆಂಟ್ ವಯಕ್ತಿಕ ಸಾಲ ಸೌಲಭ್ಯ ನೀಡುವ ಸೇವೆಗಳು:

ಎಂಐ ಕ್ರೆಡಿಟ್ ಹೊಸದಾಗಿ ಬಂದಿರುವ ಇನ್ಸೆಂಟ್ ಲೋನ್ ಸೇವೆಯಾಗಿದ್ದು ತನ್ನದೇ ಸ್ವಂತ ಎಂಐಯುಐ ಬಳಕೆದಾರರನ್ನು ಟಾರ್ಗೆಟ್ ಮಾಡಿದೆ. ಇದೀಗ ಭಾರತೀಯ ಮಾರುಕಟ್ಟೆಯು ಡಿಜಿಟಲ್ ಸಾಲ ಸೇವೆಯಲ್ಲಿ ಮುನ್ನುಗ್ಗುತ್ತಿದ್ದು ಯಾರೂ ಬೇಕಿದ್ದರೂ ಕೂಡ ಆದಾಯದ ಸ್ಧಿರ ಮೂಲವನ್ನು ತೋರಿಸಿ ಪಡೆಯಲು ಅವಕಾಶವಿರುತ್ತದೆ. ಇಂಡಿಯಾಬುಲ್ಸ್ ಧನಿ, ಕ್ರೆಡಿಟ್ ಬಿ ಮತ್ತು ಲೇಝಿಪೇ ಇತ್ಯಾದಿ ಸೇವೆಗಳು ಸದ್ಯ ಬಹಳ ಪ್ರಸಿದ್ಧವಾಗಿದೆ. ಈ ವಿಭಾಗದಲ್ಲಿ ನಾವು ಇತರೆ ಸಾಲ ಸೌಲಭ್ಯ ನೀಡುವ ಸೇವೆಗಳಿಗೆ ಹೊಸದಾಗಿ ಬಂದಿರುವ ಎಂಐ ಕ್ರೆಡಿಟ್ ನ್ನು ಹೋಲಿಸಿ ನೋಡೋಣ.

ಎಂಐ ಕ್ರೆಡಿಟ್ ನ ಲಭ್ಯತೆ:

ಲಭ್ಯತೆಯ ವಿಚಾರಕ್ಕೆ ಬಂದರೆ ಎಂಐ ಕ್ರೆಡಿಟ್ ಕೇವಲ ಎಂಐಯುಐ ಬಳಕೆದಾರರಿಗೆ ಮಾತ್ರವೇ ಲಭ್ಯವಿದ್ದು ಆಂಡ್ರಾಯ್ಡ್ ನಲ್ಲಿ ಮಾತ್ರ ಸಿಗುತ್ತದೆ. ಕ್ರೆಡಿಟ್ ಬಿ(KreditBee) ಕೂಡ ಕೇವ ಆಂಡ್ರಾಯ್ಡ್ ಗೆ ಮಾತ್ರವೇ ಸೀಮಿತ. ಇನ್ನು ಇಂಡಿಯಾಬುಲ್ಸ್ ಧನಿ ಮತ್ತು ಲೇಝಿಪೇ ಗಳು ಆಂಡ್ರಾಯ್ಡ್ ಮತ್ತು ಐಓಎಸ್ ಎರಡರಲ್ಲೂ ಲಭ್ಯವಾಗುತ್ತದೆ.ಆದರೆ ಎಂಐ ಕ್ರೆಡಿಟ್ ಇದೇ ರೀತಿ ಕೇವಲ ಕೆಲವೇ ಮಂದಿಗೆ ಸೀಮಿತಗೊಳಿಸಿಕೊಂಡಲ್ಲಿ ಮಾರುಕಟ್ಟೆಯಲ್ಲಿ ಬದುಕುವುದು ಕಷ್ಟವಾಗಬಹುದು. ಸಾಕಷ್ಟು ಮಂದಿಯಿಂದ ಈಗಾಗಲೇ ಡಿಜಿಟಲ್ ಜಗತ್ತು ಸ್ಪರ್ಧೆಗೆ ಒಳಪಡುತ್ತಿದೆ. ಒಂದು ವೇಳೆ ಎಲ್ಲರಿಗೂ ಶಿಯೋಮಿ ಈ ಸೇವೆಯನ್ನು ಲಭ್ಯಗೊಳಿಸಿದರೆ ಮಾತ್ರವೇ ಮಾರುಕಟ್ಟೆಯಲ್ಲಿ ಮುನ್ನುಗ್ಗುವುದಕ್ಕೆ ಅವಕಾಶವಾಗುತ್ತದೆ.

ಇತರೆ ಡಿವೈಸ್ ಗಳಲ್ಲಿ ಕಾರ್ಯ ನಿರ್ವಹಿಸುತ್ತದೆಯೇ?

ಇತರೆ ಡಿವೈಸ್ ಗಳಲ್ಲಿ ಕಾರ್ಯ ನಿರ್ವಹಿಸುತ್ತದೆಯೇ?

ಟೆಸ್ಟಿಂಗ್ ನ ಕಾರಣದಿಂದಾಗಿ ನಾವು ಎಂಐ ಕ್ರೆಡಿಟ್ ಎಪಿಕೆಯನ್ನು ರೆಡ್ಮಿ ನೋಟ್ 7 ಪ್ರೋ ದಿಂದ ಎಕ್ಸ್ ಟ್ರ್ಯಾಕ್ಟ್ ಮಾಡಿ ನಾನ್-ಶಿಯೋಮಿ ಡಿವೈಸ್ ನಲ್ಲಿ ಇನ್ಸ್ಟಾಲ್ ಮಾಡಿ ನೋಡಿದ್ದೇವೆ ಮತ್ತು ಇದು ಇನ್ಸ್ಟಾಲೇಷನ್ ನಲ್ಲಿ ಪಾಸ್ ಆಗಿದೆ. ನಾವು ಎಂಐ ಎ1 ನಲ್ಲಿ ಎಪಿಕೆಯನ್ನು ಇನ್ಸ್ಟಾಲ್ ಮಾಡಿದೆವು ಮತ್ತು ರೂಟೆಡ್ ಓರಿಯೋದಲ್ಲಿ ರನ್ ಮಾಡಿದೆವು. ರೆಡ್ಮಿ ನೋಟ್ 5 ಪ್ರೋ ಕಸ್ಟಮ್ ROM ನಲ್ಲಿ ರನ್ ಆಗುತ್ತದೆ ಮತ್ತು ಪಿಕ್ಸಲ್ 2ಎಕ್ಸ್ ಎಲ್ ನಲ್ಲಿ ಆಂಡ್ರಾಯ್ಡ್ ಪೈ ರನ್ ಆಗುತ್ತದೆ. ಎಲ್ಲಾ ಡಿವೈಸ್ ನಲ್ಲೂ ನಾವು ರಿಜಿಸ್ಟರ್ ಮಾಡಿಕೊಂಡು ಡಾಕ್ಯುಮೆಂಟೇಷನ್ ವರೆಗೆ ಮುಂದುವರಿಯಲು ಸಾಧ್ಯವಾಗಿದೆ. ಇನ್ನಷ್ಟು ಕುತೂಹಲಕಾರಿಯಾಗಿಸಲು ನಾವು ಗೂಗಲ್ ಪ್ಲೇ ಸ್ಟೋರ್ ನ ಆಪ್ ನ ಎಫ್ಎಕ್ಯೂ ಸೆಕ್ಷನ್ ನಲ್ಲಿ ಕೆಲವು ಅಂಶಗಳನ್ನು ಗಮನಿಸಿದ್ದೇವೆ.ಹೌದು ಎಂಐ ಕ್ರೆಡಿಟ್ ಎಲ್ಲಾ ಆಂಡ್ರಾಯ್ಡ್ ಡಿವೈಸ್ ಗಳಲ್ಲೂ ಬರುತ್ತದೆ ಆದರೆ ನೀವು ಅಧಿಕೃತ ಬಿಡುಗಡೆಗಾಗಿ ಕಾಯಬೇಕಷ್ಟೇ!

ಸೂಚನೆ: ನೀವು ಕೂಡ ಎಂಐ ಕ್ರೆಡಿಟ್ ನ್ನು ನಾನ್ ಶಿಯೋಮಿ ಡಿವೈಸ್ ಗಳಲ್ಲಿ ಟೆಸ್ಟ್ ಮಾಡಲು ಮುಂದಾಗುವುದಾದರೆ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಯಾಕೆಂದರೆ ಇದು ಹಣಕಾಸಿಗೆ ಸಂಬಂಧಿಸಿದ ಆಪ್ ಅನ್ನುವುದನ್ನು ಮರೆಯಬೇಡಿ.

ಎಂಐ ಕ್ರೆಡಿಟ್ ನ ಬಡ್ಡಿದರ :

ಮಾಸಿಕ ಬಡ್ಡಿದರದ ವಿಚಾರವನ್ನು ಹೇಳುವುದಾದರೆ ಇಂಡಿಯಾಬುಲ್ಸ್ ಧನಿಯಲ್ಲಿ 1% ದಿಂದ 3.17% ದ ವರೆಗೆ ಚಾರ್ಜ್ ಮಾಡಲಾಗುತ್ತದೆ ಮತ್ತು 36 ತಿಂಗಳ ಮರುಪಾವತಿ ಅವಧಿ ಇರುತ್ತದೆ. ಕ್ರೆಡಿಟ್ ಬೀನಲ್ಲಿ ಬಡ್ಡಿದರ 2% ದಿಂದ 3% ಇರುತ್ತದೆ ಮತ್ತು 6 ತಿಂಗಳ ಮರುಪಾವತಿ ಅವಧಿ ಇರುತ್ತದೆ. ಲೇಝಿಪೇನಲ್ಲಿ ಬಡ್ಡಿದರ 1.25% ದಿಂದ 2.3% ಇದ್ದು 24 ತಿಂಗಳ ಮರುಪಾವತಿ ಅವಧಿ ಇರುತ್ತದೆ.ಇನ್ನು ಎಂಐ ಕ್ರೆಡಿಟ್ ಇದೆಲ್ಲದಕ್ಕಿಂತ ಉತ್ತಮವಾಗಿದ್ದು ಕೇವಲ 1.3% ದಿಂದ 2.5% ಬಡ್ಡಿದರವಿದ್ದು 36 ತಿಂಗಳ ಅವಧಿಯನ್ನು ನೀಡಲಾಗುತ್ತದೆ. ಅಷ್ಟೇ ಅಲ್ಲ ಅತ್ಯಂತ ಕಡಿಮೆ ಪ್ರೊಸೆಸಿಂಗ್ ಫೀಸ್ ಮೂಲಕ ಇತರೆ ಸೇವೆಗಳಿಗೆ ಶಿಯೋಮಿ ಸ್ಪರ್ಧೆಯೊಡ್ಡುತ್ತದೆ. ಉತ್ತಮ ಗ್ರಾಹಕ ಸೇವೆಯನ್ನು ಕೂಡ ಒದಗಿಸುವ ಭರವಸೆ ಇದೆ.

ಇತರೆ ಸೇವೆಗಳೊಂದಿಗೆ ಏಕೀಕರಣ:

ಆಹಾರ ಸರಬರಾಜು, ಟ್ಯಾಕ್ಸಿ ಮತ್ತು ಶಾಪಿಂಗ್, ಇತ್ಯಾದಿಗಳೊಂದಿಗಿ ಕೈಜೋಡಿಸುವಿಕೆಯಲ್ಲಿ ಲೇಝಿಪೇ ಹಿನ್ನಡೆಯಲ್ಲಿದೆ.ಶಿಯೋಮಿ ಮೇಕ್ ಮೈ ಟ್ರಿಪ್, ಫ್ಲಿಪ್ ಕಾರ್ಟ್, ಸ್ವಿಗ್ಗಿ, ಬುಕ್ ಮೈ ಶೋ, ಮತ್ತು ಇತರೆ ಪ್ರಸಿದ್ಧ ಸೇವೆಗಳ ಜೊತೆಗೆ ಏಕೀಕರಣವನ್ನು ಹೊಂದಿದೆ. ಎಂಐ ಕ್ರೆಡಿಟ್, ಇಂಡಿಯಾ ಬುಲ್ಸ್ ಧನಿ ಅಥವಾ ಕ್ರೆಡಿಟ್ ಬೀ ಗಳು ಯಾವುದೇ ರೀತಿಯ ಪೇಲೇಟರ್ ಆಯ್ಕೆಯನ್ನು ಒದಗಿಸುವುದಿಲ್ಲ. ಮುಂದಿನ ದಿನಗಳಲ್ಲಿ ಎಂಐ ಕ್ರೆಡಿಟ್ ಹೆಚ್ಚಿನ ಸೇವೆಯನ್ನು ಒದಗಿಸುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ. ಒಂದೇ ಸೂರಿನಡಿ ಸಾಕಷ್ಟು ಸೇವೆಯ ನಿರೀಕ್ಷೆ ಕೂಡ ಇದೆ.

ನೀವು ಕೂಡ ಎಂಐ ಕ್ರೆಡಿಟ್ ಸೇವೆಗಾಗಿ ಕಾತರರಾಗಿದ್ದೀರಾ?

ನೀವು ಕೂಡ ಎಂಐ ಕ್ರೆಡಿಟ್ ಸೇವೆಗಾಗಿ ಕಾತರರಾಗಿದ್ದೀರಾ?

ಸ್ಮಾರ್ಟ್ ಫೋನ್ ನಲ್ಲಿಯೇ ಸಾಲ ಸೌಲಭ್ಯ ಪಡೆಯುವ ಈ ಶಿಯೋಮಿಯ ಸೇವೆಗಾಗಿ ನೀವು ಕೂಡ ಕಾತರರಾಗಿದ್ದೀರಾ? ಕಡಿಮೆ ಬಡ್ಡಿದರದಲ್ಲಿ ಮಾರುಕಟ್ಟೆಯ ಗುಣಮಟ್ಟಕ್ಕೆ ಹೊಂದಿಕೆಯಾಗುವಂತಿದ್ದು, ಯಾವುದೇ ಗುಪ್ತ ಶುಲ್ಕಗಳು, ಉತ್ತಮ ಗ್ರಾಹಕ ಸೇವೆಗಳು ಲಭ್ಯವಾದರೆ ಖಂಡಿತ ಶಿಯೋಮಿ ಈ ವಿಚಾರದಲ್ಲಿ ಮೈಲಿಗಲ್ಲನ್ನು ಸಾಧಿಸಲಿದೆ. ಭಾರತೀಯರಿಗೆ ಅನುಕೂಲವಾಗುವ ಇನ್ನಷ್ಟು ಸೇವೆಗಳನ್ನು ಶಿಯೋಮಿ ಒದಗಿಸಲಿದೆ ಎಂಬ ವಿಶ್ವಾಸ ಎಲ್ಲರದ್ದೂ ಆಗಿದೆ.

Best Mobiles in India

English summary
What is Mi Credit and How to Use It
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+