Just In
- 13 hrs ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್‌ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 15 hrs ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
- 15 hrs ago
ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಬೆಂಗಳೂರಿನ 8 ವರ್ಷದ ಆಂಡ್ರಾಯ್ಡ್ ಆಪ್ ಡೆವಲಪರ್!
- 17 hrs ago
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
Don't Miss
- Movies
ವಿಷ್ಣು ಸ್ಮಾರಕ ಉದ್ಘಾಟನೆ: ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತಿದೆ ಎಂದ ಕಿಚ್ಚ ಸುದೀಪ್
- News
Breaking; ಪಿಎಸ್ಐ ನೇಮಕಾತಿ ಮರು ಪರೀಕ್ಷೆ, ಪ್ರವೀಣ್ ಸೂದ್ ಟ್ವೀಟ್
- Sports
U-19 Women's T20 World Cup 2023: ಭಾರತ ತಂಡವನ್ನು ಭೇಟಿ ಮಾಡಿದ 'ಚಿನ್ನದ ಹುಡುಗ' ನೀರಜ್ ಚೋಪ್ರಾ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಆಂಡ್ರಾಯ್ಡ್ ನ್ಯೂಗಾ ಓಎಸ್ ಅಪ್‌ಡೇಟ್ ಮಿಸ್‌ಮಾಡಲೇಬಾರದು: 7 ಕಾರಣಗಳು
ಗೂಗಲ್ ತನ್ನ ಲೇಟೆಸ್ಟ್ ಓಎಸ್ ಆಂಡ್ರಾಯ್ಡ್ 7.0 ನ್ಯೂಗಾ ಅಪ್‌ಡೇಟ್ ಅನ್ನು ಆರಂಭಿಸಿದೆ. ಆಂಡ್ರಾಯ್ಡ್ ಮಾರ್ಷ್‌ಮಲ್ಲೊ ನಂತರ ಅಭಿವೃದ್ದಿಪಡಿಸಿರುವ ಹೊಸ ಓಎಸ್ ನ್ಯೂಗಾ ಹಲವು ವಿಶೇಷತೆಗಳನ್ನು ಹೊಂದಿದೆ. ನ್ಯೂಗಾ ಓಏಸ್ ಅಪ್‌ಡೇಟ್ ಆದ ಸ್ಮಾರ್ಟ್‌ಫೋನ್‌ಗಳಲ್ಲಿ ಮಲ್ಟಿ ವಿಂಡೋಸ್‌ಗಳನ್ನು ಓಪನ್ ಮಾಡಿ ಒಂದೇ ಸಮಯದಲ್ಲಿ ಎರಡು ಆಪ್‌ಗಳನ್ನು ಎರಡು ಸೈಡ್‌ಗಳಲ್ಲೂ ಸಹ ಉಪಯೋಗಿಸಬಹುದಾಗಿದೆ.
ಅಂದಹಾಗೆ ಸ್ಮಾರ್ಟ್‌ಫೋನ್ ಬಳಕೆದಾರರು ಗೂಗಲ್‌ನ ಹೊಸ ಓಎಸ್ 'ಆಂಡ್ರಾಯ್ಡ್ 7.0 ನ್ಯೂಗಾ'ವನ್ನು ಅಪ್‌ಡೇಟ್ ಮಾಡಿಕೊಳ್ಳಲು ಮಿಸ್ ಮಾಡಲೇಬಾರದು. ಏಕೆ ಎಂದು ಲೇಖನದ ಕೆಳಗಿನ ಸ್ಲೈಡರ್‌ಗಳನ್ನು ಓದಿರಿ. ಹಲವು ಸ್ಮಾರ್ಟ್‌ಫೋನ್ ಬಳಕೆದಾರರು ನ್ಯೂಗಾ ಓಎಸ್‌ನಲ್ಲಿ ಹೊಸ ವಿಶೇಷತೆಗಳು ಏನಿವೆ ಎಂದು ಪ್ರಶ್ನೆ ಕೇಳಿದ್ದರು. ಪ್ರಶ್ನೆಗಳಿಗೆ ಉತ್ತರವು ಸಹ ಲೇಖನದಲ್ಲಿದೆ.
ಆಂಡ್ರಾಯ್ಡ್ 7.0 'ನ್ಯೂಗಾ' ಓಎಸ್ ನೆಕ್ಸಸ್ ಸ್ಮಾರ್ಟ್‌ಫೋನ್‌ಗೆ ಇಂದಿನಿಂದ ಅಪ್‌ಡೇಟ್

ಮಲ್ಟಿ ವಿಂಡೋ ಮೋಡ್
ಆಂಡ್ರಾಯ್ಡ್ ಎನ್ ಓಎಸ್‌ನ ಪ್ರಮುಖ ಫೀಚರ್ ಆಗಿ ಬಳಕೆದಾರರು ಮಲ್ಟಿವಿಂಡೋ ಮೋಡ್ ಪಡೆಯಬಹುದು. ಹಲವು ಆಪ್‌ಗಳನ್ನು ಒಮ್ಮೆಯೇ ಓಪನ್ ಮಾಡಿ ಆಪ್‌ಗಳ ಸ್ಕ್ರೀನ್ ಸೈಜ್ ಹೊಂದಿಸಬಹುದು, ಟೆಕ್ಸ್ಟ್ ಮಾಡಬಹುದು. ಆಪ್‌ಗಳನ್ನು ಸ್ಲೈಡರ್‌ಗಳಲ್ಲಿ ಓಪನ್ ಮಾಡಬಹುದು. ಚಿತ್ರ ಗಮನಿಸಿ.

ಎರಡು ಆಪ್‌ಗಳು ಒಂದು ಸ್ಕ್ರೀನ್
ಆಂಡ್ರಾಯ್ಡ್ ನ್ಯೂಗಾ ಓಎಸ್ ಅಪ್‌ಡೇಟ್ ಮಾಡಿಕೊಂಡವರಿಗೆ ಅಲ್ಟಿಮೇಟ್ ಟಾಸ್ಕ್ ಮಾಡುವ ಅವಕಾಶ ಸಿಗುತ್ತದೆ. ಒಂದೇ ಸ್ಕ್ರೀನ್‌ನಲ್ಲಿ ಎರಡು ಆಫ್‌ಗಳನ್ನು ಓಫನ್ ಮಾಡಿಕೊಳ್ಳಬಹುದು. ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್ ಸೀರೀಸ್‌ಗಳಲ್ಲಿ ಈಗಾಗಲೇ ಪ್ರಯೋಗಮಾಡಲಾಗಿದೆ. ಚಿತ್ರ ಗಮನಿಸಿ.

ಗೂಗಲ್ ಕ್ಯಾಮೆರಾ ಅಪ್ಲಿಕೇಶನ್
ಗೂಗಲ್ ಕ್ಯಾಮೆರಾ ಆಪ್ ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಇದೆ. ಗೂಗಲ್ ಕೆಲವು ಬದಲಾವಣೆಗಳನ್ನು ಬಟನ್‌ಗಳು ಮತ್ತು ಫೀಚರ್‌ನಲ್ಲಿ ಬದಲಾವಣೆ ಮಾಡಿದ್ದು, ನ್ಯೂಗಾ ಅಪ್‌ಡೇಟ್ ಮಾಡಿಕೊಂಡಲ್ಲಿ ಗೂಗಲ್ ಕ್ಯಾಮೆರಾ ಆಕ್ಸೆಸ್ ಸುಲಭವಾಗುತ್ತದೆ.

ನೋಟಿಫಿಕೇಶನ್ ವರ್ಧನೆ
ನೀವು ಇತರೆ ಯಾವುದೋ ವಿಂಡೋ ಓಪನ್ ಮಾಡಿರುವಾಗ ಬಂದ ಮೆಸೇಜ್‌ಗೆ ರೀಪ್ಲೇ ಮಾಡಲು ಆ ವಿಂಡೋವನ್ನು ಕ್ಲೋಸ್ ಮಾಡುವ ಅವಶ್ಯಕತೆ ಇಲ್ಲ. ಸ್ಕ್ರೀನ್ ಟಾಪ್‌ನಲ್ಲಿ ನೋಟಿಫಿಕೇಶನ್ ಬಂದ ತಕ್ಷಣ ಪ್ರಸ್ತುತ ವಿಂಡೋ ಕ್ಲೋಸ್ ಮಾಡದೇ ಮೆಸೇಜ್‌ಗೆ ರೀಪ್ಲೇ ಮಾಡಬಹುದು. ಈ ಫೀಚರ್ ನ್ಯೂಗಾ ಅಪ್‌ಡೇಟ್‌ನಿಂದ ಮಾತ್ರ ಸಾಧ್ಯ.

ಗ್ರೂಪ್ ನೋಟಿಫಿಕೇಶನ್
ನೀವು ಹೆಚ್ಚು ನೋಟಿಫಿಕೇಶನ್‌ಗಳನ್ನು ಆಂಡ್ರಾಯ್ಡ್ ಎನ್'ನಲ್ಲಿ ಪಡೆದಿದ್ದಲ್ಲೇ ಆದಲ್ಲಿ, ಆ ಎಲ್ಲಾ ನೋಟಿಫಿಕೇಶನ್‌ಗಳು ಒಂದೇ ಸ್ಮಾರ್ಟ್‌ಫೋನ್ ಆಪ್‌ನಿಂದ ಬಂದಿರುತ್ತವೆ. ಉದಾಹರಣೆಗೆ ನೋಟಿಫಿಕೇಶನ್‌ಗಳು ನ್ಯೂಗಾ ಮ್ಯೂಸಿಕ್ ಪ್ಲೇಯರ್‌ನಿಂದ ಬಂದಿದ್ದರೇ ಎಲ್ಲಾ ನೋಟಿಫಿಕೇಶನ್‌ಗಳು ಒಂದೇ ಶೇಡ್‌ನಲ್ಲಿ ಮರೆಯಾಗಿರುತ್ತವೆ. ಇವುಗಳನ್ನು ಕೇವಲ ಎರಡು ಫಿಂಗರ್ ಗೆಸ್ಚರ್ ಮೂಲಕ ನೋಡಬಹುದು.

ಫೋಲ್ಡರ್‌ಗಳ ಮರುವಿನ್ಯಾಸ
ಆಂಡ್ರಾಯ್ಡ್ ಎನ್ ಫೋಲ್ಡರ್‌ಗಳನ್ನು ಸ್ಮಾರ್ಟ್ ಆಗಿ ಕಾಣಲು ಮರುವಿನ್ಯಾಸ ಮಾಡಬಹುದು. ಹೋಮ್ ಸ್ಕೀನ್‌ನಲ್ಲಿ ಪೋಲ್ಡರ್‌ಗಳು ಸ್ಮಾರ್ಟ್ ಆಗಿ ಕಾಣುವಂತೆ ವ್ಯವಸ್ಥೆಗೊಳಿಸಬಹುದು.

ಇತ್ತೀಚಿನ ಉತ್ತಮ ಆಪ್‌ಗಳು
ಆಂಡ್ರಾಯ್ಡ್ ಎನ್ ಓಎಸ್ ಅಪ್‌ಗ್ರೇಡ್ ಆದರೆ ನಿಮ್ಮ ಡಿವೈಸ್‌ನಲ್ಲಿ ಇತ್ತೀಚಿನ ಎಲ್ಲಾ ಆಪ್‌ಗಳನ್ನು ಒಮ್ಮೆಲೇ ಸ್ಕ್ರೀನ್‌ನ ಟಾಪ್‌ನಲ್ಲಿ "Clear All Button' ಟ್ಯಾಪ್ ಮಾಡಿ ಕ್ಲಿಯರ್ ಮಾಡಬಹುದು. ಅಲ್ಲದೇ 'Recent apps' ಬಟನ್ ಮೇಲೆ ಡಬಲ್ ಕ್ಲಿಕ್ ಮಾಡಿದರೆ ನೀವು ಬಳಸಿದ ಇತ್ತೀಚಿನ ಆಪ್‌ಗೆ ಜಂಪ್ ಆಗಬಹುದು.

ಸ್ಮಾಟರ್ ಕ್ವಿಕ್ ಸೆಟ್ಟಿಂಗ್ಸ್
ಯಾವುದೇ ಒಂದು ಫೀಚರ್ ಅಥವಾ ಸೆಟ್ಟಿಂಗ್ಸ್ ಮೇಲೆ ಶಾರ್ಟ್ ಟ್ಯಾಪ್ ಮಾಡಿದರೆ ಸೆಟ್ಟಿಂಗ್ಸ್ ಐಕಾನ್ ಅಗತ್ಯ ಮಾಹಿತಿ ತೋರಿಸುತ್ತದೆ, ಸೆಟ್ಟಿಂಗ್ಸ್ ಪ್ಯಾನೆಲ್ ಮೇಲೆ ಲಾಂಗ್ ಟ್ಯಾಪ್ ಮಾಡಿದರೆ ನಿರ್ಧಿಷ್ಟ ಫೀಚರ್‌ನ ಎಲ್ಲಾ ಮಾಹಿತಿಗಳನ್ನು ತೋರಿಸುತ್ತದೆ. ಮಾರ್ಷ್‌ಮಲ್ಲೊ ಕ್ವಿಕ್ ಸೆಟ್ಟಿಂಗ್ಸ್ ಹೊಂದಿತ್ತು, ಆದರೆ ಆಂಡ್ರಾಯ್ಡ್ ಎನ್ ಡೈನಾಮಿಕ್ ಕ್ವಿಕ್ ಸೆಟ್ಟಿಂಗ್ಸ್ ಅನ್ನು ಹೊಂದಿದೆ.

ಹೆಚ್ಚಿನ ಮಾಹಿತಿಯ ಸೆಟ್ಟಿಂಗ್ಸ್ ಪ್ಯಾನೆಲ್
ಆಂಡ್ರಾಯ್ಡ್ ಎನ್ ಸೆಟ್ಟಿಂಗ್ಸ್ ಪ್ಯಾನೆಲ್ ಮಾರ್ಷ್‌ಮಲ್ಲೊ ವರ್ಸನ್ ರೀತಿಯಲ್ಲಿಯೇ ಪ್ರದರ್ಶನಗೊಂಡರೂ ಸಹ ಪ್ರತಿಯೊಂದು ಕೆಟಗರಿಗಳಲ್ಲು ಮಾಹಿತಿಯ ತುಣುಕುಗಳನ್ನು ಕಾಣಬಹುದು. ಹಾಗೆ ಒಮ್ಮೆ ಡಾಟಾ ಕ್ಯಾಪ್ ಮೇಲೆ ಕ್ಲಿಕ್ ಮಾಡಿದರೆ ಬಿಲ್ಲಿಂಗ್ ಸಮಯದಲ್ಲಿ ಎಷ್ಟು ಗಿಗಾಬೈಟ್ ಡಾಟಾ ಬಳಸಿದ್ದೀರಿ ಎಂದು ನೋಡಬಹುದು.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470