ಏನಿದು ಒನ್ ನೇಷನ್ ಒನ್ ರೇಷನ್ ಕಾರ್ಡ್;..ಸಿಗುವ ಪ್ರಯೋಜನಗಳೇನು?
ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ 'ಒನ್ ನೇಷನ್, ಒನ್ ರೇಷನ್ ಕಾರ್ಡ್'('One Nation, One Ration Card') ಯೋಜನೆ ಸಹ ಒಂದಾಗಿದೆ. ದೇಶದಾದ್ಯಂತ ಒಂದೇ ಪಡಿತರ ಕಾರ್ಡ್ ವ್ಯವಸ್ಥೆಯನ್ನು ಅನುಷ್ಠಾನ ಮಾಡುವ ಉದ್ದೇಶದಿಂದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೇಂದ್ರ ಬಜೆಟ್‌ನಲ್ಲಿ ಈ ಯೋಜನೆಯನ್ನು ಘೋಷಣೆ ಮಾಡಿದ್ದರು. ಇದೀಗ ಕೇಂದ್ರ ಸರ್ಕಾರ ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆಗಾಗಿ ''ಮೇರಾ ರೇಷನ್ ಕಾರ್ಡ್'' -Mera Ration Card App ಅಪ್ಲಿಕೇಶನ್ ಬಿಡುಗಡೆ ಮಾಡಿದ್ದಾರೆ.

ಹೌದು, ಕೇಂದ್ರ ಸರ್ಕಾರ ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆಗಾಗಿ ''ಮೇರಾ ರೇಷನ್ ಕಾರ್ಡ್'' ಸ್ಮಾರ್ಟ್‌ಫೋನ್ ಅಪ್ಲಿಕೇಶನ್ ಅನ್ನು ಲಾಂಚ್ ಮಾಡಿದೆ. ವಲಸೆ ಕಾರ್ಮಿಕರು ಒಂದು ಸ್ಥಳದಿಂದ ಬೇರೊಂದು ಸ್ಥಳಕ್ಕೆ ಹೋದಾಗ ಪಡಿತರ ಪಡೆಯಲು ಈ ಆಪ್ ನೆರವಾಗಲಿದೆ. ಸದ್ಯ ಈ ಅಪ್ಲಿಕೇಶನ್ ಇಂಗ್ಲೀಷ ಹಾಗೂ ಹಿಂದಿ ಭಾಷೆಯ ಸಪೋರ್ಟ್ ಪಡೆದಿದ್ದು, ಮುಂದಿನ ದಿನಗಳಲ್ಲಿ ರಾಷ್ಟ್ರ 14 ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯ ಆಗಲಿದೆ.

ಕರ್ನಾಟಕ ಸೇರಿದಂತೆ ದೇಶದ ಇತರೆ ಕೆಲವು ರಾಜ್ಯಗಳು ಒಂದು ದೇಶ ಒಂದು ಪಡಿತರ ಕಾರ್ಡ್ ವ್ಯವಸ್ಥೆ ಅನುಷ್ಠಾನಗೊಳಿಸಿದೆ. ಈ ರಾಜ್ಯಗಳಲ್ಲಿ ದೇಶದ ಯಾವುದೇ ಭಾಗದ ನಾಗರಿಕರು ಪಡಿತರ ಅಂಗಡಿಗಳಿಂದ ಪಡಿತರ ಧಾನ್ಯವನ್ನು ಖರೀದಿಸಲು ಸಾಧ್ಯವಾಗುತ್ತದೆ. ಇದರಿಂದ ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬ ಸದಸ್ಯರಿಗೆ ಈ ವ್ಯವಸ್ಥೆಯ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗಲಿದೆ.

ಏನಿದು ಒನ್ ನೇಷನ್, ಒನ್ ರೇಷನ್ ಕಾರ್ಡ್?
ಒನ್ ನೇಷನ್, ಒನ್ ರೇಷನ್ ಕಾರ್ಡ್ ಕೇಂದ್ರ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾಗಿದೆ. ದೇಶದಾದ್ಯಂತ ಒಂದೇ ರೀತಿಯ ಪಡಿತರ ಕಾರ್ಡ್ ವ್ಯವಸ್ಥೆ ಅನುಷ್ಠಾನ ಇದರ ಉದ್ದೇಶ. ಒನ್ ನೇಷನ್, ಒನ್ ರೇಷನ್ ಕಾರ್ಡ್ ಪಡಿತರ ಚೀಟಿ ಹೊಂದಿರುವವರು ದೇಶದ ಯಾವುದೇ ಭಾಗದಲ್ಲಿರುವ ಸರ್ಕಾರಿ ಪಡಿತರ ಅಂಗಡಿಗಳಿಂದ ಪಡಿತರ ಧಾನ್ಯವನ್ನು ಖರೀದಿಸಲು ಸಾಧ್ಯವಾಗುತ್ತದೆ. ಹಾಗೆಯೇ ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬ ಸದಸ್ಯರಿಗೆ ಈ ವ್ಯವಸ್ಥೆಯ ಪ್ರಯೋಜನಗಳನ್ನು ಪಡೆಯಲು ಸಾಧ್ಯ.

ಒನ್ ನೇಷನ್, ಒನ್ ರೇಷನ್ ಕಾರ್ಡ್ ಪ್ರಯೋಜನ
* ಕಾರ್ಮಿಕರು, ದಿನಗೂಲಿ ನೌಕರರು, ಬಡ ಜನರು, ಬೀದಿ ಬದಿ ವ್ಯಾಪಾರಿಗಳಿಗೆ ಈ ಯೋಜನೆ ಸಹಾಯಕ.
* ನಗರ ಪ್ರದೇಶಗಳಲ್ಲಿ ವಾಸಿಸುವ ಬಡವರು, ಅರೆಕಾಲಿಕ ಖಾಸಗಿ ನೌಕರರು, ಅಸಂಘಟಿತ ವಲಯದ ಕಾರ್ಮಿಕ ವರ್ಗದ ಜನರಿಗೆ ಹೆಚ್ಚು ನೆರವಾಗಿದೆ.
* ನಕಲಿ ಕಾರ್ಡ್ ಮೂಲಕ ಪಡಿತರ ಸೋರಿಕೆ ತಡೆಯಲು ನೆರವಾಗಲಿದೆ.
* ವಲಸೆ ಕಾರ್ಮಿಕರು ಮತ್ತು ಅವರ ಕುಟುಂಬ ಸದಸ್ಯರಿಗೆ ಪಡಿತರ ಪಡೆಯಲು ಅನುಕೂಲ.
* ಬಡವರಿಗೆ ಹೆಚ್ಚಿನ ಲಾಭ ದೊರೆಯಲಿದೆ.
* ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸ್ಥಳಾಂತರಗೊಂಡವರಿಗೆ ಪಡಿತರ ಪಡೆಯಲು ಅನುಕೂಲವಾಗಲಿದೆ.
* ನಕಲಿ ಪಡಿತರ ಚೀಟಿಗಳಿಗೆ ಬ್ರೇಕ್ ಮಾಡಲು ಒನ್ ನೇಷನ್, ಒನ್ ರೇಷನ್ ಕಾರ್ಡ್ ಯೋಜನೆ ಸಹಾಯಕ.
* ಎಲ್ಲಾ ಪಡಿತರ ಚೀಟಿಗಳನ್ನು ಆಧಾರ್ ಕಾರ್ಡ್‌ಗೆ ಸಂಪರ್ಕಿಸುವ ಮತ್ತು ಪಾಯಿಂಟ್ ಆಫ್ ಸೇಲ್, ಪಿಒಎಸ್ ಯಂತ್ರದ ಮೂಲಕ ಆಹಾರ ಧಾನ್ಯಗಳನ್ನು ವಿತರಿಸುವ ವ್ಯವಸ್ಥೆ ಒನ್ ನೇಷನ್, ಒನ್ ರೇಷನ್ ಕಾರ್ಡ್ ನಲ್ಲಿ ಸೇರಲಿದೆ.


Click it and Unblock the Notifications



