Home
ಸುದ್ದಿಜಾಲ

BSNL ಹಾಗೂ Vi ನಿಂದ ಒಂದೇ ದರದ ಪ್ಲ್ಯಾನ್‌: ಯಾವುದು ಬೆಸ್ಟ್‌?

ಟೆಲಿಕಾಂ ವಲಯದಲ್ಲಿ ಏರ್‌ಟೆಲ್‌ ಹಾಗೂ ಜಿಯೋ ಒಂದು ಕಡೆಯಾದರೆ BSNL ಹಾಗೂ ವಿ (Vi) ಟೆಲಿಕಾಂ ಮತ್ತೊಂದು ಕಡೆ ನಿಲ್ಲುತ್ತವೆ. ಯಾಕೆಂದರೆ ಇವು ಇನ್ನು ತಮ್ಮ ಗ್ರಾಹಕರಿಗೆ 5G ಪರಿಚಯಿಸಿಲ್ಲ. ಜೊತೆಗೆ ಅಗ್ಗದ ದರದಲ್ಲಿ ಅತ್ಯುತ್ತಮ ಸೇವೆ ನೀಡುವ ಮೂಲಕ ಚಂದಾದಾರರನ್ನು ಹೆಚ್ಚಿಗೆ ಮಾಡಿಕೊಳ್ಳುವ ಪ್ರಯತ್ನ ಮಾಡುತ್ತಲೇ ಇವೆ. ಈ ನಡುವೆ ಬಿಎಸ್‌ಎನ್‌ಎಲ್‌ ಹಾಗೂ ವಿ ಟೆಲಿಕಾಂನ ಒಂದೇ ಬೆಲೆಯ ಪ್ಲ್ಯಾನ್‌ ಜನಪ್ರಿಯತೆ ಪಡೆಯುತ್ತಿದೆ.

ಹೌದು, ದೀರ್ಘಾವಧಿಯ ಪ್ರಿಪೇಯ್ಡ್ ಪ್ಲ್ಯಾನ್‌ಗಳಿಗಾಗಿ ಹುಡುಕುವವರಿಗೆ ಭಾರತ್ ಸಂಚಾರ ನಿಗಮ ಲಿಮಿಟೆಡ್ ಮತ್ತು ವೊಡಾಫೋನ್‌ ಐಡಿಯಾ ಗ್ರಾಹಕರಿಗೆ ಸ್ಪರ್ಧಾತ್ಮಕ ಆಯ್ಕೆಗಳನ್ನು ನೀಡುತ್ತವೆ. ಈ ಎರಡು ಟೆಲಿಕಾಂಗಳು 1,999 ರೂ.ಗಳ ಪ್ರಿಪೇಯ್ಡ್ ಪ್ಲ್ಯಾನ್‌ ಪರಿಚಯಿಸಿದ್ದು, ಜನರು ಈ ಪ್ಲ್ಯಾನ್‌ಕಡೆ ಹೆಚ್ಚು ಮುಖ ಮಾಡುತ್ತಿದ್ದಾರೆ. ಹಾಗಿದ್ರೆ, ಬನ್ನಿ ಈ ಎರಡೂ ಟೆಲಿಕಾಂಗಳು ಪರಿಚಯಿಸಿರುವ ಒಂದೇ ಬೆಲೆಯ ಪ್ಲ್ಯಾನ್‌ನ ವ್ಯತ್ಯಾಸಗಳನ್ನು ಗಮನಿಸೋಣ.

BSNL ಹಾಗೂ Vi ನಿಂದ ಒಂದೇ ದರದ ಪ್ಲ್ಯಾನ್‌: ಯಾವುದು ಬೆಸ್ಟ್‌?

BSNL ನ 1,999 ರೂ.ಗಳ ಪ್ಲ್ಯಾನ್‌: ಬಿಎಸ್‌ಎನ್‌ಎಲ್‌ನ ಈ 1,999ರೂ.ಗಳ ಪ್ಲ್ಯಾನ್‌ನಲ್ಲಿ 600GB ಯ ಒಟ್ಟು ಡೇಟಾ ಪ್ರಯೋಜನವನ್ನು ಪಡೆದುಕೊಳ್ಳಬಹುದಾಗಿದ್ದು, ಯೋಜನೆಯ ಮಾನ್ಯತೆಯ ಅವಧಿಯಲ್ಲಿ ಗ್ರಾಹಕರು ಹೆಚ್ಚಿನ ವೇಗದ ಇಂಟರ್ನೆಟ್ ಪ್ರವೇಶವನ್ನು ಸಹ ಆನಂದಿಸಬಹುದಾಗಿದೆ. ಇದರೊಂದಿಗೆ ಅನಿಯಮಿತ ವಾಯಿಸ್‌ ಕರೆ ಸೌಲಭ್ಯದೊಂದಿಗೆ ಭಾರತದೊಳಗೆ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಸ್ಥಳೀಯ ಮತ್ತು ಎಸ್‌ಟಿಡಿ ಕರೆಗಳನ್ನು ಮಾಡಲು ಅನುಮತಿಸುತ್ತದೆ.

ಇಷ್ಟು ಮಾತ್ರವಲ್ಲದೆ ಈ ಪ್ಲ್ಯಾನ್‌ನಲ್ಲಿ ಗ್ರಾಹಕರು ದಿನಕ್ಕೆ 100 ಎಸ್‌ಎಂಎಸ್‌ಗಳನ್ನು ಉಚಿತವಾಗಿ ಕಳುಹಿಸಬಹುದಾಗಿದ್ದು, ಇದರೊಂದಿಗೆ ಹೆಚ್ಚುವರಿ ಪ್ರಯೋಜನಗಳನ್ನೂ ಸಹ ನಿಡುತ್ತಿದೆ. ಅದರಲ್ಲಿ ಇವುಗಳಲ್ಲಿ ಉಚಿತ PRBT (ವೈಯಕ್ತೀಕರಿಸಿದ ರಿಂಗ್ ಬ್ಯಾಕ್ ಟೋನ್) 30 ದಿನಗಳವರೆಗೆ ಅನಿಯಮಿತ ಹಾಡುಗಳ ಬದಲಾವಣೆ ಆಯ್ಕೆ, 30 ದಿನಗಳವರೆಗೆ ಲೋಕಧುನ್ ಕಂಟೆಂಟ್‌ಗೆ ಪ್ರವೇಶ ಮತ್ತು 30 ದಿನಗಳವರೆಗೆ ಎರೋಸ್ ನೌ ಸೇವೆ ಪಡೆದುಕೊಳ್ಳಬಹುದು. ಈ ಪ್ಲ್ಯಾನ್‌ನ ಒಟ್ಟಾರೆ ಮಾನ್ಯತೆ 365 ದಿನಗಳು. ಅಂದರೆ ಒಂದು ವರ್ಷ.

BSNL ಹಾಗೂ Vi ನಿಂದ ಒಂದೇ ದರದ ಪ್ಲ್ಯಾನ್‌: ಯಾವುದು ಬೆಸ್ಟ್‌?

ವೊಡಾಫೋನ್ ಐಡಿಯಾದ 1,999ರೂ.ಗಳ ಪ್ಲ್ಯಾನ್‌: ಈ ಪ್ಲ್ಯಾನ್‌ನಲ್ಲಿ ಗ್ರಾಹಕರು ನಿತ್ಯವೂ 1.5GB ಡೇಟಾವನ್ನು ಪಡೆದುಕೊಳ್ಳಬಹುದಾಗಿದೆ. ಆದರೆ ದೈನಂದಿನ ಡೇಟಾ ಮಿತಿಯೊಂದಿಗೆ ಬಳಕೆದಾರರು ಹೆಚ್ಚಿನ ವೇಗದ ಇಂಟರ್ನೆಟ್ ಪ್ರವೇಶವನ್ನು ಆನಂದಿಸಬಹುದು ಎಂಬುದು ಪ್ರಮುಖ ವಿಷಯ. ಇದರೊಂದಿಗೆ ಭಾರತದೊಳಗೆ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಧ್ವನಿ ಕರೆಗಳನ್ನು ಮಾಡುವ ಮೂಲಕ ತಡೆರಹಿತ ಸಂಪರ್ಕವನ್ನು ಹೊಂದಬಹುದು. ಈ ಪ್ಲ್ಯಾನ್‌ನಲ್ಲಿ ಗ್ರಾಹಕರು ನಿತ್ಯವೂ 100 ಎಸ್‌ಎಂಎಸ್‌ ಕಳುಹಿಸಬಹುದಾಗಿದ್ದು, ಇದರ ಮಾನ್ಯತೆ 250 ದಿನಗಳು.

ಈ ಎರಡೂ ಪ್ಲ್ಯಾನ್‌ಗಳನ್ನು ಗಮನಿಸಿದರೆ ಈ ಬೆಲೆಗೆ ಬಿಎಸ್‌ಎನ್‌ಎಲ್‌ ಬೆಸ್ಟ್‌ ಎಂದು ಹೇಳಬಹುದು. ಈ ಮೂಲಕ ಈ ಪ್ಲ್ಯಾನ್‌ನಲ್ಲಿ ಗಮನಾರ್ಹ ವ್ಯತ್ಯಾಸ ಕಾಣಬಹುದು. ಬಿಎಸ್‌ಎನ್‌ಎಲ್‌ 600GB ಯ ದೊಡ್ಡ ಮೊತ್ತದ ಡೇಟಾ ಕೊಡುಗೆ ನೀಡಲಿದೆ. ಇದು ವಿ ಟೆಲಿಕಾಂ ಒದಗಿಸಿದ ದೈನಂದಿನ ಡೇಟಾ ಮಿತಿಗಿಂತ ಗಮನಾರ್ಹವಾಗಿ ಹೆಚ್ಚಾಗಿದ್ದು, ಸಾಕು ಎನ್ನುವಷ್ಟು ಡೇಟಾವನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ.

BSNL ಹಾಗೂ Vi ನಿಂದ ಒಂದೇ ದರದ ಪ್ಲ್ಯಾನ್‌: ಯಾವುದು ಬೆಸ್ಟ್‌?

ಹಾಗೆಯೇ ಬಿಎಸ್‌ಎನ್‌ಎಲ್‌ನ ಪ್ಲ್ಯಾನ್‌ನಲ್ಲಿ ಉಚಿತ PRBT, ಅನಿಯಮಿತ ಹಾಡು ಬದಲಾವಣೆಯ ಆಯ್ಕೆ ಮತ್ತು ಲೋಕಧುನ್ ಮತ್ತು ಎರೋಸ್ ನೌ ನಂತಹ ಜನಪ್ರಿಯ ಮನರಂಜನಾ ಸೇವೆಗಳಿಗೆ ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತದೆ. ಆದರೆ, ವಿ ಟೆಲಿಕಾಂನಲ್ಲಿ ಈ ರೀತಿಯ ಯಾವುದೇ ಹೆಚ್ಚುವರಿ ಸೌಲಭ್ಯಗಳು ಲಭ್ಯ ಇರುವುದಿಲ್ಲ. ಈ ಮೂಲಕ ಬಿಎಸ್‌ಎನ್‌ಎಲ್‌ನ ಪ್ಲ್ಯಾನ್‌ ಹಲವಾರು ಮಂದಿಗೆ ಉತ್ತಮ ಆಯ್ಕೆ ಆಗಿದೆ.

Best Mobiles in India

English summary
Bharat Sanchar Nigam Limited (BSNL) and Vodafone Idea (Vi) offer competitive options to customers looking for long-term prepaid plans. Both these telecoms have introduced a prepaid plan of Rs 1999.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+