Home
ಸುದ್ದಿಜಾಲ

ಫೋನ್‌ಗಳ ಆಯಸ್ಸು ಎಷ್ಟು? ಯಾವಾಗ ಹೊಸ ಫೋನ್ ಖರೀದಿಸಬೇಕು?: ಇಲ್ಲಿದೆ ಇಂಟ್ರೆಸ್ಟಿಂಗ್‌ ವಿಚಾರ

ಸ್ಮಾರ್ಟ್‌ಫೋನ್‌ಗಳನ್ನು ಈಗಂತೂ ಎಲ್ಲರೂ ಬಳಕೆ ಮಾಡೇ ಇರುತ್ತಾರೆ. ಬಳಕೆ ಮಾಡುತ್ತಿಲ್ಲ ಎಂದಾದರೂ ಅದರ ಬಗ್ಗೆ ಅರಿವಾದರೂ ಇರುತ್ತದೆ. ಈ ನಡುವೆ ಪ್ರಮುಖ ತಯಾರಿಕಾ ಕಂಪೆನಿಗಳು ಸುಧಾರಿತ ಫೀಚರ್ಸ್‌ನೊಂದಿಗೆ ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿತ್ತಿದ್ದು, ಜನರು ತಮಗೆ ಅಗತ್ಯ ಎನಿಸುವ ಸ್ಮಾರ್ಟ್‌ಫೋನ್‌ಗಳನ್ನು ಖರೀದಿ ಮಾಡಲು ಹಲವಾರು ಆಯ್ಕೆ ನಿರ್ಮಾಣ ಆಗಿದೆ.

ಹೌದು, ಸ್ಮಾರ್ಟ್‌ಫೋನ್‌ಗಳು ಇಂದು ಬಳಕೆದಾರರಿಗೆ ಎಲ್ಲವನ್ನೂ ಸಾಧ್ಯವಾಗಿಸುತ್ತಿವೆ. ಹಾಗೆಯೇ ಖರೀದಿ ಸಮಯದಲ್ಲಿ ಫೋನ್‌ನ ಬ್ಯಾಟರಿ ಸಾಮರ್ಥ್ಯ, ಕ್ಯಾಮೆರಾ ಸೆನ್ಸರ್‌ಕಡೆ ನಾವೆಲ್ಲರೂ ಗಮನಹರಿಸುವುದು ಸರ್ವೇ ಸಾಮಾನ್ಯ. ಆದರೆ, ಈ ವೇಳೆ ಫೋನ್‌ನ ಆಯಸ್ಸು ಎಷ್ಟು?, ಎಲ್ಲಿಯವರೆಗೆ ಆ ಫೋನ್‌ ಬಳಕೆ ಮಾಡಬಹುದು ಎಂಬುದರ ಬಗ್ಗೆ ಒಮ್ಮೆಯಾದರೂ ಆಲೋಚನೆ ಮಾಡಿದ್ದೀರಾ?, ಈ ಬಗ್ಗೆ ಹಲವರಿಗೆ ಮಾಹಿತಿಯೇ ಗೊತ್ತಿಲ್ಲ, ಇದಕ್ಕಾಗಿಯೇ ನಾವಿಂದು ಫೋನ್‌ನ ಆಯಸ್ಸಿನ ವಿವರದ ಬಗ್ಗೆ ವಿವರಿಸಿದ್ದೇವೆ ಈ ಲೇಖನ ಓದಿರಿ.

ಫೋನ್‌ಗಳ ಆಯಸ್ಸು ಎಷ್ಟು? ಯಾವಾಗ ಹೊಸ ಫೋನ್ ಖರೀದಿಸಬೇಕು?...

ಸ್ಮಾರ್ಟ್‌ಫೋನ್‌ನ ಜೀವಿತಾವಧಿ ಎಷ್ಟು?: ಸಾಮಾನ್ಯವಾಗಿ ಬಹುಪಾಲು ಮಂದಿ ಒಮ್ಮೆ ಫೋನ್‌ ಖರೀದಿ ಮಾಡಿದರೆ ಅದನ್ನು ಕನಿಷ್ಠ ಅಂದರೂ ಎರಡು ವರ್ಷಗಳಾದರೂ ಬಳಕೆ ಮಾಡುತ್ತಾರೆ. ಆ ನಂತರ ಬೇರೆ ಫೋನ್‌ಗೆ ಅಪ್‌ಡೇಟ್ ಆಗುವುದು ಸರ್ವೇ ಸಾಮಾನ್ಯವಾದ ಸಂಗತಿಯಾಗಿದೆ. ಯಾಕೆಂದರೆ ಇಂದಿನ ಫೋನ್‌ಗಳಲ್ಲಿ ಇರುವ ಪ್ರಮುಖ ಫೀಚರ್ಸ್‌ ಮುಂದಿನ ದಿನಗಳಲ್ಲಿ ಬಳಕೆಗೆ ಬರುವುದಿಲ್ಲ. ಈ ಕಾರಣಕ್ಕೆ ಜನರು ಹೊಸ ಹೊಸ ಫೋನ್‌ಗಳ ಕಡೆ ಹೆಚ್ಚು ಗಮನಹರಿಸುತ್ತಾರೆ. ಅದಾಗ್ಯೂ ಒಂದು ಫೋನ್‌ ಅನ್ನು ಎಷ್ಟು ವರ್ಷಗಳ ವರೆಗೆ ಬಳಕೆ ಮಾಡುಬಹುದು ಗೊತ್ತಾ.?

ಸಾಮಾನ್ಯವಾಗಿ ಮಾರುಕಟ್ಟೆಯಿಂದ ನಾವು ಖರೀದಿ ಮಾಡಲಾಗುವ ಯಾವುದೇ ವಸ್ತುಗಳಿಗೆ ಮುಕ್ತಾಯ ದಿನಾಂಕವನ್ನು ಬರೆಯಲಾಗಿರುತ್ತದೆ. ಆ ಮುಕ್ತಾಯದ ದಿನಾಂಕ ತಲುಪಿದ ಬಳಿಕ ಅದನ್ನು ಬಳಕೆ ಮಾಡಲು ಸಾಧ್ಯವಿಲ್ಲ. ಆದರೆ, ಸ್ಮಾರ್ಟ್‌ಡಿವೈಸ್‌ಗಳ ವಿಷಯಕ್ಕೆ ಬಂದರೆ ಇದನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಬೇಕಿದೆ. ಯಾಕೆಂದರೆ ಫೋನ್‌ಗಳಿಗೆ ಯಾವುದೇ ನಿಗದಿತ ಮುಕ್ತಾಯದ ದಿನಾಂಕ ಇರುವುದಿಲ್ಲ.

ಅಂದರೆ ಸ್ಮಾರ್ಟ್‌ಫೋನ್‌ಗಳಲ್ಲಿ ಸ್ಪಷ್ಟವಾಗಿ ಎಲ್ಲೂ ಮುಕ್ತಾಯದ ದಿನಾಂಕವನ್ನು ನಮೂದು ಮಾಡುವುದಿಲ್ಲ. ಆದರೆ, ಯಾವುದೇ ಎಲೆಕ್ಟ್ರಾನಿಕ್ ಡಿವೈಸ್‌ಗಳಂತೆ ಬಳಕೆ ಅವುಗಳನ್ನು ಮಾಡಿದಷ್ಟು ಅವು ತಮ್ಮ ಆಯಸ್ಸನ್ನು ಕಳೆದುಕೊಳ್ಳುತ್ತಾ ಹೋಗುತ್ತವೆ.ಅಂದರೆ ಅವು ಹಳೆಯದಾಗಬಹುದು ಅಥವಾ ಕಾಲಾನಂತರದಲ್ಲಿ ಕಡಿಮೆ ಕಾರ್ಯಕ್ಷಮತೆ ಅನುಭವ ನೀಡುತ್ತವೆ. ಈ ಮೂಲಕ ನೀವು ನಿಮ್ಮ ಫೋನ್‌ನ ಆಯಸ್ಸನ್ನು ನಿಗದಿ ಮಾಡಬಹುದು.

ಫೋನ್‌ಗಳ ಆಯಸ್ಸು ಎಷ್ಟು? ಯಾವಾಗ ಹೊಸ ಫೋನ್ ಖರೀದಿಸಬೇಕು?...

ಅದಾಗ್ಯೂ ಅತ್ಯುತ್ತಮ ಬ್ರಾಂಡ್ ಕಂಪನಿಯ ಸ್ಮಾರ್ಟ್‌ಫೋನ್‌ ನಿಮ್ಮ ಬಳಿ ಇದ್ದರೆ ಅವುಗಳನ್ನು ನೀವು ಸುಲಭವಾಗಿ ದಶಕಗಳವರೆಗೆ ಯಾವುದೇ ತೊಂದರೆಗಳಿಲ್ಲದೆ ಬಳಕೆ ಮಾಡಬಹುದು. . ಯಾಕೆಂದರೆ ಆ ರೀತಿಯ ಫೋನ್‌ಗಳು ದುಬಾರಿ ಬೆಲೆ ಹೊಂದಿರುವುದರ ಜೊತೆಗೆ ಉತ್ತಮ ಪ್ರೊಸೆಸರ್ ಹಾಗೂ ಇತರೆ ವಿಭಾಗಗಳನ್ನು ಹೊಂದಿರುತ್ತವೆ. ಈ ಕಾರಣಕ್ಕೆ ಆಪಲ್‌, ಒನ್‌ಪ್ಲಸ್ ಸೇರಿದಂತೆ ಅನೇಕ ಅತ್ಯುತ್ತಮ ಕಂಪೆನಿಯ ಫೋನ್‌ಗಳಿಗೆ ಹೆಚ್ಚಿನ ಬೇಡಿಕೆ ಇರುವುದು.

ಆದರೆ ಸ್ಮಾರ್ಟ್‌ಫೋನ್‌ ತಯಾರಕರು ಯಾವಾಗಲೂ ಆದಾಯ ಗಳಿಸುವ ಮಾರ್ಗದಲ್ಲೇ ಇರುತ್ತಾರೆ. ಈ ಕಾರಣಕ್ಕಾಗಿಯೇ 2-3 ವರ್ಷಗಳ ನಂತರ ಸ್ಮಾರ್ಟ್‌ಫೋನ್‌ಗಳಿಗೆ ಸಾಫ್ಟ್‌ವೇರ್ ನವೀಕರಣಗಳನ್ನು ನೀಡುವುದನ್ನು ನಿಲ್ಲಿಸುತ್ತವೆ. ಇದರಿಂದಾಗಿ ಹಳೆಯ ಸ್ಮಾರ್ಟ್‌ಫೋನ್‌ಗಳು ಸರಿಯಾಗಿ ಕೆಲಸ ಮಾಡದಂತೆ ಮಾಡಿ ಹೊಸ ಸ್ಮಾರ್ಟ್‌ಫೋನ್‌ ಖರೀದಿ ಮಾಡಲು ಪರೋಕ್ಷವಾಗಿ ನಿಮ್ಮನ್ನು ಒತ್ತಾಯಿಸುತ್ತವೆ. ಅಷ್ಟು ಮಾತ್ರವಲ್ಲ ಕಂಪನಿಗಳು ಎರಡು-ಮೂರು ವರ್ಷಗಳ ನಂತರ ಒಂದು ಫೋನ್‌ನ ಬಿಡಿಭಾಗಗಳನ್ನು ತಯಾರಿಸುವುದನ್ನೇ ನಿಲ್ಲಿಸುತ್ತವೆ.

*ಹಾಗಿದ್ರೆ ಯಾವಾಗ ಸ್ಮಾರ್ಟ್ಫೋನ್ ಬದಲಾಯಿಸಬೇಕು?: ಸಾಮಾನ್ಯವಾಗಿ ಹೊಸ ಹೊಸ ಫೀಚರ್ಸ್‌ಗೆ ಮಾರುಹೋಗುವ ಜನರು ಕಡಿಮೆ ದಿನಗಳ ಅಂತರದಲ್ಲಿಯೇ ಬದಲಾಯಿಸುತ್ತಾರೆ. ಆದರೆ, ಇದರಲ್ಲಿ ಯಾವುದೇ ಅರ್ಥವಿಲ್ಲ. ಈ ರೀತಿ ಮಾಡಿದರೆ ನಿಮ್ಮ ಬಜೆಟ್ ಕೂಡ ಹದಗೆಡುತ್ತದೆ. ತಜ್ಞರ ಪ್ರಕಾರ ಸ್ಮಾರ್ಟ್‌ಫೋನ್ ಎಲ್ಲಿಯವರೆಗೆ ಬಳಸಬಹುದೋ ಅಲ್ಲಿಯವರೆಗೆ ಅದನ್ನು ಬಳಸಬೇಕು. ಅಗತ್ಯವಿದ್ದರೆ, ಫೋನ್‌ನ ಬ್ಯಾಟರಿ ಮತ್ತು ಡಿಸ್‌ಪ್ಲೇಯನ್ನು ಬದಲಾಯಿಸಬಹುದು.

*ಅದಾಗ್ಯೂ ನಿಮ್ಮ ಫೋನ್‌ ಅನ್ನು ಬದಲಾಯಿಸಲೇಬೇಕು ಎಂದುಕೊಂಡಿದ್ದರೆ ನೀವು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಈ ಕೆಳಗಿನ ಬದಲಾವಣೆಗಳನ್ನು ಗಮನಿಸಿ. ಆನಂತರ ನಿಮಗೆ ಅಗತ್ಯ ಎನಿಸಿದರೆ ಮಾತ್ರ ಹೊಸ ಫೋನ್‌ ಅನ್ನು ಖರೀದಿ ಮಾಡಿ. ಅಂದರೆ ಸ್ಮಾರ್ಟ್‌ಫೋನ್‌ಗಳಿಗೆ ವಯಸ್ಸಾದಂತೆ ಅವುಗಳು ಯಾವುದೇ ಆಪ್‌ಗಳಿಗೆ ಸರಿಯಾಗಿ ಬೆಂಬಲ ನೀಡುವುದಿಲ್ಲ ಹಾಗೂ ಫೋನ್‌ ಸಾಫ್ಟ್‌ವೇರ್ ಆಪ್‌ಡೇಟ್‌ ಅನ್ನು ಕೇಳುವುದಿಲ್ಲ.

*ಮೂರರಿಂದ ನಾಲ್ಕು ವರ್ಷಗಳಿಗಿಂತ ಹಳೆಯದಾದ ಸ್ಮಾರ್ಟ್‌ಫೋನ್‌ಗಳು ನಿಧಾನವಾಗಿ ಕೆಲಸ ಮಾಡುತ್ತವೆ. ಈ ಮೂಲಕ ನೀವು ನಿಮ್ಮ ಫೋನ್‌ನ ಕಾರ್ಯಕ್ಷಮತೆ ಹಾಳಾಗಿದೆ ಎಂದು ತಿಳಿದುಕೊಳ್ಳಬಹುದು. ಕಂಪೆನಿಯಿಂದ ನಿಯಮಿತ ಸಾಫ್ಟ್‌ವೇರ್ ಅಪ್‌ಡೇಟ್‌ಗಳನ್ನು ಸ್ವೀಕರಿಸದಿದ್ದರೆ, ಆ ಫೋನ್‌ ತನ್ನ ಜೀವಿತಾವಧಿಯ ಕೊನೆ ಕ್ಷಣದಲ್ಲಿ ಇದೆ ಎಂದು ಪರಿಗಣಿಸಬಹುದು. ಈ ಮೂಲಕ ಅಗತ್ಯ ಎನಿಸಿದರೆ ಹೊಸ ಫೋನ್‌ ಖರೀದಿ ಮಾಡಬಹುದು.

*ಅದರಲ್ಲೂ ಪ್ರಮುಖವಾಗಿ ಗಮನಿಸಬೇಕಾದ ವಿಷಯ ಏನೆಂದರೆ ನಿಮ್ಮ ಫೋನ್ ಆಗಾಗ್ಗೆ ಫ್ರೀಜ್ ಆಗುತ್ತಿದ್ದರೆ, ಲ್ಯಾಗ್ ಆಗುತ್ತಿದ್ದರೆ ಅಥವಾ ಕ್ರ್ಯಾಶ್ ಆಗುತ್ತಿದ್ದರೆ, ಅದರ ಹಾರ್ಡ್‌ವೇರ್ ಅಥವಾ ಸಾಫ್ಟ್‌ವೇರ್ ನಿಮ್ಮ ಬಳಕೆಯ ಅವಶ್ಯಕತೆಗಳನ್ನು ಮುಂದುವರಿಸಲು ಹೆಣಗಾಡುತ್ತಿದೆ ನಿಮ್ಮ ಫೋನ್‌ನ ಜೀವಿತಾವಧಿ ಕೊನೆಯಾಗುತ್ತಿದೆ ಎಂದರ್ಥ. ಹಾಗೆಯೇ ಬ್ಯಾಟರಿ ಸಾಮರ್ಥ್ಯ ಬೇಗಬೇಗನೇ ಕಡಿಮೆ ಆಗುತ್ತಿದ್ದರೂ ಸಹ ನಿಮ್ಮ ಫೋನ್‌ ಅವಧಿ ಮುಗಿದಿದೆ ಎಂದು ಅರಿತುಕೊಳ್ಳಿ.

ಫೋನ್‌ಗಳ ಆಯಸ್ಸು ಎಷ್ಟು? ಯಾವಾಗ ಹೊಸ ಫೋನ್ ಖರೀದಿಸಬೇಕು?...

ಅಂತಿಮವಾಗಿ ನಾವು ಹೇಳುವುದು ಏನೆಂದರೆ ನಿಮ್ಮ ಫೋನ್ ಅನ್ನು ಬದಲಾಯಿಸುವ ನಿರ್ಧಾರ ನಿಮ್ಮ ವೈಯಕ್ತಿಕ ವಿಷಯ. ಅದರಲ್ಲೂ ನೀವು ನಿಮ್ಮ ಬಜೆಟ್ ಅನ್ನು ಪರಿಗಣಿಸಬೇಕಾಗುತ್ತದೆ. ಜೊತೆಗೆ ಪ್ರಸ್ತುತ ಡಿವೈಸ್ ಅಗತ್ಯ ವಾದ ಅವಶ್ಯಕತೆಗಳಿಗೆ ಸ್ಪಂಧಿಸುತ್ತಿದೆ ಎಂದರೆ ಹೊಸ ಫೋನ್‌ ಅವಶ್ಯಕತೆ ಇರುವುದಿಲ್ಲ. ಅದಾಗ್ಯೂ ಹೊಸ ಸ್ಮಾರ್ಟ್‌ಫೋನ್ ಖರೀದಿ ಮಾಡುವ ಮೊದಲು ಇತ್ತೀಚಿನ ತಂತ್ರಜ್ಞಾನ, ಫೀಚರ್ಸ್‌ ಮತ್ತು ಬಳಕೆದಾರರ ವಿಮರ್ಶೆಗಳನ್ನು ಗಣನೆಗೆ ತೆಗೆದುಕೊಳ್ಳಿ.

Best Mobiles in India

English summary
smartphone have a lifespan?, when to replace old phone, what to look for when buying a new phone. know complete details in kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+