ಫೋನ್‌ಪೇನಲ್ಲಿ ಯಾರಿಗಾದರೂ ಹಣ ವರ್ಗಾವಣೆ ಮಾಡುವಾಗ ಈ ಅಂಶ ಗೊತ್ತಿರಲಿ!
ಭಾರತದಲ್ಲಿ ಪ್ರಸ್ತುತ ಡಿಜಿಟಲ್ ಪೇಮೆಂಟ್ ಹೆಚ್ಚು ಮುನ್ನಲೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಯುಪಿಐ (UPI) ಆಧಾರಿತ ವಿಧಾನ ಜನಪ್ರಿಯವಾಗಿದೆ. ಮುಖ್ಯವಾಗಿ ಗ್ರಾಹಕರು ಗೂಗಲ್‌ಪೇ, ಫೋನ್‌ಪೇ, ಪೇಟಿಎಮ್, ಅಮೆಜಾನ್ ಪೇ ಪ್ಲಾಟ್‌ಫಾರ್ಮ್ ಗಳು ಪ್ರಮುಖ ಯುಪಿಐ ಆಪ್‌ಗಳಾಗಿ ಕಾಣಿಸಿಕೊಂಡಿವೆ. ಇವುಗಳ ಪೈಕಿ ಫೋನ್‌ಪೇ (PhonePe) ಹೆಚ್ಚು ಬಳಕೆಯ ಯುಪಿಐ ಅಪ್ಲಿಕೇಶನ್ ಆಗಿ ಗುರುತಿಸಿಕೊಂಡಿದೆ.

ಫೋನ್‌ಪೇ (PhonePe) ಮೂಲಕ ಬಳಕೆದಾರರು ಹಣವನ್ನು ಕಳುಹಿಸಬಹುದು ಮತ್ತು ಸ್ವೀಕರಿಸಬಹುದು, ಮೊಬೈಲ್, ಡಿಟಿಎಚ್, ಇನ್ಶೂರೆನ್ಸ್ ಪಾವತಿ, ಡೇಟಾ ಕಾರ್ಡ್‌ಗಳನ್ನು ಸುಲಭವಾಗಿ ರೀಚಾರ್ಜ್ ಮಾಡಬಹುದು. ಇದರೊಂದಿಗೆ ಯುಟಿಲಿಟಿ ಪಾವತಿಗಳನ್ನು ಮಾಡಬಹುದು ಮತ್ತು ಚಿನ್ನವನ್ನು ಖರೀದಿಸಬಹುದು, ಮ್ಯೂಚುವಲ್ ಫಂಡ್ ನಂತಹ ಕೆಲವು ಇನ್ವೆಸ್ಟ್‌ಮೆಂಟ್ ಆಯ್ಕೆಗಳು ದೊರೆಯುತ್ತವೆ.

ಅದಾಗ್ಯೂ, ಕೆಲವು ಬಳಕೆದಾರರಿಗೆ ಫೋನ್‌ಪೇ (PhonePe) ನಲ್ಲಿ ದಿನಕ್ಕೆ ಗರಿಷ್ಠ ಹಣ ವರ್ಗಾವಣೆ ಅಥವಾ ವಹಿವಾಟಿನ ಮೊತ್ತದ ಮಿತಿ ಎಷ್ಟು ಎನ್ನುವ ಬಗ್ಗೆ ಗೊಂದಲ ಇರುತ್ತದೆ. ಹಾಗಾದರೇ ಫೋನ್‌ಪೇ ಆಪ್‌ನಲ್ಲಿ ಒಂದು ದಿನಕ್ಕೆ ಗರಿಷ್ಠ ಎಷ್ಟು ಮೊತ್ತ/ ಹಣ ವರ್ಗಾವಣೆ ಮಾಡಬಹುದು ಎನ್ನುವ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಫೋನ್‌ಪೇ ದೈನಂದಿನ ವಹಿವಾಟಿನ ಮಿತಿ ಬಗ್ಗೆ ಮಾಹಿತಿ:
* ಬಳಕೆದಾರರು ಬ್ಯಾಂಕ್ ಖಾತೆಗೆ ದಿನಕ್ಕೆ ಗರಿಷ್ಠ 1,00,000 ರೂ. ವರ್ಗಾಯಿಸಬಹುದು
* ಫೋನ್‌ಪೇ ಅಪ್ಲಿಕೇಶನ್‌ನಲ್ಲಿ UPI ವಹಿವಾಟುಗಳಿಗೆ 1,00,000ರೂ ದೈನಂದಿನ ಮಿತಿಯಾಗಿದೆ. ಒಮ್ಮೆ ಈ ಮಿತಿ ದಾಟಿದರೆ, UPI ವಹಿವಾಟುಗಳು ವಿಫಲಗೊಳ್ಳುತ್ತವೆ.
* ಖಾತೆಯನ್ನು ಅವಲಂಬಿಸಿ ದಿನಕ್ಕೆ ಗರಿಷ್ಠ 10 ಅಥವಾ 20 ವಹಿವಾಟುಗಳನ್ನು ಅನುಮತಿಸಲಾಗುತ್ತದೆ.

ಫೋನ್‌ಪೇ ಅಪ್ಲಿಕೇಶನ್‌ನಲ್ಲಿ ಬ್ಯಾಂಕ್ ಖಾತೆ ಲಿಂಕ್ ಮಾಡಲು ಈ ಕ್ರಮ ಅನುಸರಿಸಿ:
ಹಂತ 1: ಗೂಗಲ್ ಸ್ಟೋರ್ ಗೆ ಹೋಗಿ ಮತ್ತು ಫೋನ್‌ಪೇ ಆಪ್ ಅನ್ನು ಡೌನ್‌ಲೋಡ್ ಮಾಡಿ
ಹಂತ 2: ಫೋನ್‌ಪೇ ಅಪ್ಲಿಕೇಶನ್ ಅಪ್‌ಡೇಟ್ ಆವೃತ್ತಿಯಾಗಿರಬೇಕು
ಹಂತ 3: ಇನ್‌ಸ್ಟಾಲ್ ಆದ ನಂತರ ಫೋನ್‌ಪೇ ಆಪ್ ತೆರೆಯಿರಿ
ಹಂತ 4: ಬಳಿಕ My Money Page ಹೋಗಿ

ಹಂತ 5: ಪಾವತಿ ವಿಧಾನಗಳ ಆಯ್ಕೆಯಡಿ ಬ್ಯಾಂಕ್ ಖಾತೆಗಳನ್ನು ಆಯ್ಕೆ ಮಾಡಿ
ಹಂತ 6: 'ಹೊಸ ಬ್ಯಾಂಕ್ ಖಾತೆಯನ್ನು ಸೇರಿಸಿ' ಬಟನ್ ಕ್ಲಿಕ್ ಮಾಡುವ ಮೂಲಕ ನಿಮ್ಮ ಬ್ಯಾಂಕ್ ಅನ್ನು ಆಯ್ಕೆ ಮಾಡಿ
ಹಂತ 7: ಅಪ್ಲಿಕೇಶನ್ ನಿಮ್ಮ ಖಾತೆಯ ವಿವರಗಳನ್ನು ತರುತ್ತದೆ
ಹಂತ 8: ಈಗ, 'ಸೆಟ್ UPI ಪಿನ್' ಬಟನ್ ಅನ್ನು ಕ್ಲಿಕ್ ಮಾಡುವ ಮೂಲಕ UPI ಪಿನ್ ಅನ್ನು ಹೊಂದಿಸಿ

ಹಂತ 9: ನಿಮ್ಮ ಡೆಬಿಟ್ ಅಥವಾ ATM ಕಾರ್ಡ್ ಸಂಖ್ಯೆ ಮತ್ತು ಮುಕ್ತಾಯ ದಿನಾಂಕದ ಕೊನೆಯ ಆರು ಅಂಕೆಗಳನ್ನು ನಮೂದಿಸಿ
ಹಂತ 10: ಈಗ ನಿಮ್ಮ UPI ಪಿನ್ ಹೊಂದಿಸಲು ಸ್ವೀಕರಿಸಿದ OTP ಬಳಸಿ
ಹಂತ 11: ನಿಮ್ಮ ಬ್ಯಾಂಕ್ ಖಾತೆಯನ್ನು ಯಶಸ್ವಿಯಾಗಿ ಲಿಂಕ್ ಮಾಡಲಾಗಿದೆ.

ಫೋನ್‌ಪೇ ಅಪ್ಲಿಕೇಶನ್‌ನಲ್ಲಿ ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ಚೆಕ್ ಮಾಡಲು ಹೀಗೆ ಮಾಡಿ:
ಹಂತ 1: ಫೋನ್‌ಪೇ ಅಪ್ಲಿಕೇಶನ್ ತೆರೆಯಿರಿ
ಹಂತ 2: ಹಣ ವರ್ಗಾವಣೆ ಆಯ್ಕೆಯ ಮೇಲೆ ಕ್ಲಿಕ್ ಮಾಡಿ
ಹಂತ 3: ಬ್ಯಾಂಕ್ ಆಯ್ಕೆ ಮಾಡಿ
ಹಂತ 4: UPI ಪಿನ್ ನಮೂದಿಸಿ
ಹಂತ 5: ನಂತರ ನಿಮ್ಮ ಬ್ಯಾಂಕ್ ಖಾತೆಯ ಬ್ಯಾಲೆನ್ಸ್ ಕಾಣಿಸುತ್ತದೆ.


Click it and Unblock the Notifications








