Home
ಸುದ್ದಿಜಾಲ

ನಿಮ್ಮ ಸ್ಮಾರ್ಟ್‌ಫೋನ್‌ಗೆ ಸರಿಯಾದ ಬ್ರೈಟ್‌ನೆಸ್‌ ಎಷ್ಟಿರಬೇಕು? ಇಲ್ಲಿದೆ ಇಂಟ್ರೆಸ್ಟಿಂಗ್‌ ಮಾಹಿತಿ!

ಸ್ಮಾರ್ಟ್‌ಫೋನ್‌ ತಯಾರಿಕಾ ಕಂಪೆನಿಗಳು ಇತ್ತೀಚೆಗೆ ಕೆಲವು ಪ್ರಮುಖ ಫೀಚರ್ಸ್‌ಗಳಿಗೆ ಹೆಚ್ಚಿನ ಮಹತ್ವ ನೀಡುತ್ತವೆ. ಅದರಲ್ಲಿ ರಿಫ್ರೆಶ್‌ ರೇಟ್‌, ಡಿಸ್‌ಪ್ಲೇ ಹಾಗೂ ಬ್ರೈಟ್‌ನೆಸ್‌(brightness) ಆಯ್ಕೆ. ಈ ಮೂಲಕ ಸ್ಮಾರ್ಟ್‌ಫೋನ್‌ ಖರೀದಿ ಮಾಡುವ ಯಾರೇ ಆದರೂ ಫಿದಾ ಆಗುತ್ತಾರೆ. ಈ ನಡುವೆ ನೀವು ಬ್ರೈಟ್‌ನೆಸ್‌ ವಿಚಾರದಲ್ಲಿ ತಿಳಿದುಕೊಳ್ಳಲೇಬೇಕಾದ ಮಾಹಿತಿ ಇಲ್ಲಿದೆ.

ಹೌದು, ಸ್ಮಾರ್ಟ್‌ಫೋನ್‌ಗಳಲ್ಲಿ ಹಿಂದೆಂದಿಗಿಂತಲೂ ಈಗ ಬಳಕೆದಾರರ ಆರೋಗ್ಯಕ್ಕೆ ಯಾವುದೇ ಸಮಸ್ಯೆ ಆಗಬಾರದು ಎಂದು ಸುಧಾರಿತ ಫೀಚರ್ಸ್‌ಗಳನ್ನು ನೀಡಲಾಗುತ್ತಿದೆ. ಅದಾಗ್ಯೂ ಸ್ಮಾರ್ಟ್‌ಫೋನ್‌ ಅನ್ನು ಎಷ್ಟು ಮಿತವಾಗಿ ಬಳಕೆ ಮಾಡುತ್ತೇವೆಯೋ ಅಷ್ಟೇ ಆರೋಗ್ಯ ಚೆನ್ನಾಗಿರಿಸಿಕೊಳ್ಳಲು ಸಾಧ್ಯ. ಈ ನಡುವೆ ಫೋನ್‌ನ ಸರಿಯಾದ ಬ್ರೈಟ್‌ನೆಸ್‌ ಎಷ್ಟು? ಕಣ್ಣಿನ ರಕ್ಷಣೆಗಾಗಿ ಬ್ರೈಟ್‌ನೆಸ್‌ ಅನ್ನು ಹೇಗೆ ಹೊಂದಿಸಬೇಕು ಎಂಬ ಇಂಟ್ರೆಸ್ಟಿಂಗ್‌ ಮಾಹಿತಿ ಇಲ್ಲಿದೆ ಓದಿರಿ.

ನಿಮ್ಮ ಸ್ಮಾರ್ಟ್‌ಫೋನ್‌ಗೆ ಸರಿಯಾದ ಬ್ರೈಟ್‌ನೆಸ್‌ ಎಷ್ಟಿರಬೇಕು?...

ಕಣ್ಣಿಗೆ ಹೆಚ್ಚಿನ ಒತ್ತಡ: ಇತ್ತೀಚಿನ ದಿನಗಳಲ್ಲಿ ಜನರು ಮೊದಲು ಕಣ್ಣಿನ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಅಷ್ಟೇ ಯಾಕೆ ಚಿಕ್ಕ ಚಿಕ್ಕ ಮಕ್ಕಳಿಗೆ ಸರಿಯಾಗಿ ಕಣ್ಣು ಕಾಣದಂತೆ ಆಗುತ್ತಿದೆ. ಇದಕ್ಕೆಲ್ಲಾ ಪ್ರಮುಖ ಕಾರಣ ಸ್ಮಾರ್ಟ್‌ ಡಿವೈಸ್‌ಗಳು. ಅಂದರೆ ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌ ಸೇರಿದಂತೆ ಡಿಸ್ಪ್ಲೇ ಹೊಂದಿರುವ ಡಿವೈಸ್‌ಗಳು. ಆದರೂ ಈ ವಿಷಯದಲ್ಲಿ ಸ್ಮಾರ್ಟ್‌ಫೋನ್‌ ಅನ್ನು ಮೊದಲ ಆರೋಪಿ ಸ್ಥಾನದಲ್ಲಿ ನಿಲ್ಲಿಸಬಹುದು.

ಇಂದು ಲ್ಯಾಪ್‌ಟಾಪ್‌ ಹಾಗೂ ಸ್ಮಾರ್ಟ್‌ಫೋನ್‌ ಮೂಲಕವೇ ಕೆಲಸ ಮಾಡುವ ಅದೆಷ್ಟೋ ಮಂದಿ ಇದ್ದಾರೆ. ಆದರೆ ಕೆಲವರಿಗೆ ಕಣ್ಣಿಗೆ ಎಷ್ಟು ಬ್ರೈಟ್‌ನೆಸ್‌ ಇದ್ದರೆ ಒಳ್ಳೆಯದು ಎಂಬುದೇ ಗೊತ್ತಿರುವುದಿಲ್ಲ. ಜೊತೆಗೆ ಕಣ್ಣುಗಳ ಮೇಲೆ ಒತ್ತಡ ಬೀಳದಂತೆ ಫೋನ್‌ ಅನ್ನು ಹೇಗೆ ಬಳಕೆ ಮಾಡಬೇಕು ಎಂದೂ ಸಹ ಅರಿವಿಲ್ಲ. ಅದಾಗ್ಯೂ ಕೆಲವರು ಅತಿ ಕಡಿಮೆ ಬ್ರೈಟ್‌ನೆಸ್‌ನಲ್ಲಿ ಹಾಗೂ ಇನ್ನೂ ಕೆಲವರು ಅತೀ ಹೆಚ್ಚಿನ ಬ್ರೈಟ್‌ನೆಸ್‌ ನಲ್ಲಿ ಬಳಕೆ ಮಾಡುವುದು ಸಾಮಾನ್ಯ ಸಂಗತಿ.

ಆದರೆ ನೇತ್ರಶಾಸ್ತ್ರಜ್ಞರು ಈ ವಿಷಯಗಳನ್ನು ಎಂದಿಗೂ ಒಪ್ಪುವುದಿಲ್ಲ. ಅವರ ಪ್ರಕಾರ, ಇದಕ್ಕೆ ಯಾವುದೇ ಸ್ಥಿರ ಮಾದರಿಗಳಿಲ್ಲ. ತುಂಬಾ ಕಡಿಮೆ ಬ್ರೈಟ್‌ನೆಸ್‌ ಇಟ್ಟರೆ ಫೋನ್ ಅನ್ನು ಹತ್ತಿರದಿಂದ ನೋಡಬೇಕಾಗುತ್ತದೆ. ಆಗ ಕಣ್ಣುಗಳು ಆಯಾಸಗೊಳ್ಳುತ್ತವೆ ಎಂಬುದು ನೇತ್ರಶಾಸ್ತ್ರಜ್ಞರ ಅಭಿಪ್ರಾಯ ಜೊತೆಗೆ ರಾತ್ರಿಯಲ್ಲಿ 50 ಪ್ರತಿಶತಕ್ಕಿಂತ ಹೆಚ್ಚು ಹೊಳಪು ಕಣ್ಣಿನ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ಎಚ್ಚರಿಸಿದ್ದಾರೆ.

ಆದರೂ ಸಹ ಒಂದು ಸಣ್ಣ ವಿಷಯದ ಬಗ್ಗೆ ಕಾಳಜಿ ವಹಿಸುವ ಮೂಲಕ ಫೋನ್‌ನ ಬ್ರೈಟ್‌ನೆಸ್ ಕಣ್ಣುಗಳ ಮೇಲೆ ನೀಡುವ ಒತ್ತಡವನ್ನು ತಪ್ಪಿಸಬಹುದು. ಅದೇನೆಂದರೆ ಫೋನ್‌ನ ಹೊಳಪು ಯಾವಾಗಲೂ ನಿಮ್ಮ ವಾತಾವರಣಕ್ಕೆ ಅನುಗುಣವಾಗಿರಬೇಕು ಉದಾಹರಣೆಗೆ, ನೀವು ಹೊರಗೆ ಹೋಗುತ್ತಿದ್ದರೆ, ಫೋನ್‌ನ ಹೊಳಪನ್ನು ಹೆಚ್ಚಿಸಿ. ರಾತ್ರಿಯನ್ನು ಕಡಿಮೆ ಮಾಡಿ. ಈ ರೀತಿ ಮಾಡಲು ಸಾಧ್ಯ ಇಲ್ಲ ಎಂದಾದರೆ ಫೋನ್‌ನಲ್ಲಿಯೇ ಸ್ವಯಂಚಾಲಿತ ಆಯ್ಕೆ ಇರುತ್ತದೆ, ಅದನ್ನು ಆನ್‌ ಮಾಡಿ.

ವಿಪರೀತ ಪ್ರಖರತೆಯನ್ನು ತಪ್ಪಿಸಿ: ಅತ್ಯಂತ ಹೆಚ್ಚಿನ ಬ್ರೈಟ್‌ನೆಸ್‌ ಬಳಸುವುದು ಅನಗತ್ಯ ಬ್ಯಾಟರಿ ಡ್ರೈನ್‌ಗೆ ಕಾರಣವಾಗಬಹುದು ಮತ್ತು ವಿಶೇಷವಾಗಿ ಕಡಿಮೆ-ಬೆಳಕಿನ ಪರಿಸ್ಥಿತಿಗಳಲ್ಲಿ ನಿಮ್ಮ ಕಣ್ಣುಗಳಿಗೆ ಅನಾನುಕೂಲವಾಗಬಹುದು. ಇದರೊಂದಿಗೆ ಫೋನ್‌ನಲ್ಲಿ ಏನನ್ನು ವೀಕ್ಷಣೆ ಮಾಡುತ್ತಿದ್ದೀರಿ ಎಂಬುದರ ಆಧಾರದ ಮೇಲೆ ಬ್ರೈಟ್‌ನೆಸ್‌ ಅನ್ನು ಸೆಟ್‌ ಮಾಡಿಕೊಳ್ಳಿ. ಅಂದರೆ ಓದುವಾಗ, ವಿಡಿಯೋ ನೋಡುವಾಗ, ಚಾಟಿಂಗ್‌ ಮಾಡುವಾಗ ಅದಕ್ಕೆ ತಕ್ಕ ಬ್ರೈಟ್‌ನೆಸ್‌ ಸೆಟ್‌ ಮಾಡಿ.

ನಿಮ್ಮ ಸ್ಮಾರ್ಟ್‌ಫೋನ್‌ಗೆ ಸರಿಯಾದ ಬ್ರೈಟ್‌ನೆಸ್‌ ಎಷ್ಟಿರಬೇಕು?...

ಬ್ಯಾಟರಿಯನ್ನೂ ಪರಿಗಣಿಸಿ: ಇನ್ನು ನಿಮ್ಮ ಫೋನ್‌ನಲ್ಲಿ ಬ್ರೈಟ್‌ನೆಸ್‌ ಕಡಿಮೆ ಮಾಡಿ ಬಳಕೆ ಮಾಡುವುದರಿಂದ ನಿಮ್ಮ ಕಣ್ಣು ಮಾತ್ರವಲ್ಲದೆ ಬ್ಯಾಟರಿಗೂ ಸಹ ಉತ್ತಮ ಆರೋಗ್ಯ ನೀಡುತ್ತದೆ.
ಇದರಿಂದಾಗಿ ಫೋನ್‌ನ ಬ್ಯಾಟರಿ ಅವಧಿಯನ್ನು ಗಮನಾರ್ಹವಾಗಿ ವಿಸ್ತರಣೆ ಮಾಡಬಹುದು. ಅದರಲ್ಲೂ OLED ಮತ್ತು ಅಮೋಲೆಡ್‌ ಡಿಸ್‌ಪ್ಲೇಗಳಲ್ಲಿ ಡಾರ್ಕ್ ಪಿಕ್ಸೆಲ್‌ಗಳು ಕಡಿಮೆ ಶಕ್ತಿಯನ್ನು ಬಳಕೆ ಮಾಡುತ್ತವೆ.

ನೈಟ್ ಮೋಡ್ ಬಳಕೆ ಇನ್ನೂ ಉತ್ತಮ: ಕೆಲವು ಫೋನ್‌ಗಳು ನೈಟ್ ಮೋಡ್ ಅಥವಾ ಬ್ಲೂ ಲೈಟ್ ಫಿಲ್ಟರ್ ಫೀಚರ್ಸ್‌ ಹೊಂದಿರುತ್ತವೆ. ಇದರಿಂದಾಗಿ ನೀಲಿ ಬೆಳಕಿನ ಹೊರಸೂಸುವಿಕೆ ಕಡಿಮೆ ಆಗಲಿದ್ದು, ವಿಶೇಷವಾಗಿ ರಾತ್ರಿಯ ಬಳಕೆಯ ಸಮಯದಲ್ಲಿ ಕಣ್ಣುಗಳ ಆಯಾಸವನ್ನು ಕಡಿಮೆ ಮಾಡಲಿದೆ. ಈ ಮೂಲಕ ಉತ್ತಮ ಸ್ಮಾರ್ಟ್‌ಫೋನ್‌ ಅನುಭವನ್ನು ಪಡೆದುಕೊಳ್ಳಬಹುದು.

Best Mobiles in India

English summary
What is the correct brightness for the phone? Here is an interesting information on how to adjust the brightness for eye protection.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+