ವಾಟ್ಸಾಪ್‌ನ ಹೆಚ್ಚು ಬಳಕೆಯಿಂದ ಅಪಾಯ ಕಟ್ಟಿಟ್ಟ ಬುತ್ತಿ

By Shwetha
|

ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ಆಗಿ ಜನಪ್ರಿಯತೆಯನ್ನು ಗಳಿಸುತ್ತಿರುವ ವಾಟ್ಸಾಪ್ ಯಾವುದೇ ಜಾಹೀರಾತು, ಗೇಮ್ಸ್, ಗಿಮಿಕ್ಸ್ ಇಲ್ಲದೆಯೇ ಬಳಕೆದಾರರಿಗೆ ಮೆಸೇಜ್ ಮಾಡುವ ಸಂಪೂರ್ಣ ಸ್ವಾತಂತ್ರ್ಯವನ್ನು ಒದಗಿಸುತ್ತದೆ. ಆದರೆ ಅಧಿಕವಾಗಿ ವಾಟ್ಸಾಪ್ ಅನ್ನು ಬಳಸುವುದೂ ಕೂಡ ನಿಮ್ಮಲ್ಲಿ ಕೆಲವೊಂದು ತೊಂದರೆಗಳನ್ನು ಉಂಟುಮಾಡಬಹುದು ಎಂಬುದು ನಿಮಗೆ ಗೊತ್ತೇ.

ಓದಿರಿ: ನಿಮ್ಮನ್ನೇ ಖೈದಿಯನ್ನಾಗಿಸುವ ವಿಚಿತ್ರ ವಾಟ್ಸಾಪ್ ತಂತ್ರ

ಇಂದಿನ ಲೇಖನದಲ್ಲಿ ವಾಟ್ಸಾಪ್ ನಿಮ್ಮ ದೈನಂದಿನ ಜೀವನದಲ್ಲಿ ಉಂಟುಮಾಡುವ ದುಷ್ಪರಿಣಾಮಗಳನ್ನು ಕುರಿತು ಅರಿತುಕೊಳ್ಳೋಣ.

ನಿಮ್ಮನ್ನು ಯಾವಾಗಲೂ ಬ್ಯುಸಿಯಾಗಿರಿಸುತ್ತದೆ

ನಿಮ್ಮನ್ನು ಯಾವಾಗಲೂ ಬ್ಯುಸಿಯಾಗಿರಿಸುತ್ತದೆ

ನಿಮ್ಮ ಸ್ನೇಹಿತರ ಪ್ರೊಫೈಲ್ ಚಿತ್ರ ಮತ್ತು ಸ್ಟೇಟಸ್ ನಿಮಗೆ ತುಂಬಾ ಇಷ್ಟವಾಗಬಹುದು. ಆದರೆ ಆಗಾಗ್ಗೆ ಇದನ್ನು ನೋಡುವ ನಿಮ್ಮ ಪರಿಪಾಠ ನಿಮ್ಮಲ್ಲಿ ಚಟವನ್ನುಂಟು ಮಾಡಬಹುದು. ಇದು ನಿಮ್ಮನ್ನು 24*7 ಕಾಲ ಬ್ಯುಸಿಯಾಗಿರಿಸುತ್ತದೆ.

 ನಿಮ್ಮನ್ನು ಕಾವಲು ನಾಯಿಯನ್ನಾಗಿಸುತ್ತದೆ

ನಿಮ್ಮನ್ನು ಕಾವಲು ನಾಯಿಯನ್ನಾಗಿಸುತ್ತದೆ

ನಿಮ್ಮ ಸ್ನೇಹಿತರ ಸಂದೇಶಗಳಿಗೆ ನೀವು ಕಾಯುವುದು ಮತ್ತು ಅದಕ್ಕೆ ಕೂಡಲೇ ಅವರ ಉತ್ತರ ಬರದಿರುವಂತಹದ್ದು ನಿಮ್ಮಲ್ಲಿ ಹತಾಶೆಯನ್ನುಂಟು ಮಾಡಬಹುದು. ತುಂಬಾ ಹೊತ್ತಿನವರೆಗೆ ಅವರಿಗಾಗಿ ಕಾಯುವುದು ನಿಮ್ಮಲ್ಲಿ ಕೋಪವನ್ನುಂಟು ಮಾಡಬಹುದು.

ಸಾಮಾಜಿಕ ನಿರ್ಲಿಪ್ತತೆ

ಸಾಮಾಜಿಕ ನಿರ್ಲಿಪ್ತತೆ

ವಾಟ್ಸಾಪ್‌ನ ಹೆಚ್ಚು ಬಳಕೆ ದೈಹಿಕವಾಗಿ ಮತ್ತು ಮಾನಸಿಕವಾಗಿ ನಿಮ್ಮನ್ನು ಪ್ರತ್ಯೇಕಿಸುತ್ತದೆ. ಇನ್ನು ಬಳಕೆದಾರರು ಸೆಲ್ಫಿ ಇಮೇಜ್‌ಗಳನ್ನು ಹಂಚಿಕೊಳ್ಳುವುದು, ಆಗಾಗ್ಗೆ ಮಾಡುವ ಈ ಚಟುವಟಿಕೆಗಳು ನಿಮ್ಮನ್ನು ಮಾನಸಿಕವಾಗಿ ಕುಗ್ಗಿಸಬಹುದು.

ಇದರಿಂದ ಹೊರಬರುವುದು ಹೇಗೆ

ಇದರಿಂದ ಹೊರಬರುವುದು ಹೇಗೆ

ಇನ್ನು ವಾಟ್ಸಾಪ್‌ನಲ್ಲಿ ನಿಮ್ಮ ಈ ಚಟುವಟಿಕೆಗಳಿಂದ ಹೊರಬರುವುದೂ ನಿಮ್ಮ ಕೈಯಿಂದಲೇ ಆಗುವ ಕೆಲಸವಾಗಿದೆ. ಫೋನ್‌ನಲ್ಲಿ ಹೆಚ್ಚು ಬ್ಯುಸಿಯಾಗಿರುವುದನ್ನು ಬಿಟ್ಟು ನಿಮ್ಮ ಅಭ್ಯಾಸಗಳನ್ನು ಬದಲಾಯಿಸಿಕೊಳ್ಳಿ. ಅಗತ್ಯವಿದ್ದಲ್ಲಿ ಮಾತ್ರ ವಾಟ್ಸಾಪ್ ಬಳಕೆ ಮಾಡಿ.

ಸಮಯ ನಿಗದಿಪಡಿಸಿ

ಸಮಯ ನಿಗದಿಪಡಿಸಿ

ಇನ್ನು ವಾಟ್ಸಾಪ್ ಬಳಕೆಗೆ ಸೂಕ್ತ ಸಮಯವನ್ನು ನಿಗದಿಪಡಿಸಿಕೊಳ್ಳಿ. ನೀವು ಕೆಲಸ ಮಾಡುತ್ತಿರುವಾಗ, ಓದುತ್ತಿರುವಾಗ, ಸ್ನೇಹಿತರೊಂದಿಗೆ ಇರುವಾಗ ಆದಷ್ಟು ವಾಟ್ಸಾಪ್ ಚಾಟ್ ಅನ್ನು ಕಡಿಮೆ ಮಾಡಿಕೊಳ್ಳಿ.

ಸ್ನೇಹಿತರೊಂದಿಗೆ ಮೋಜು ಅನುಭವಿಸಿ

ಸ್ನೇಹಿತರೊಂದಿಗೆ ಮೋಜು ಅನುಭವಿಸಿ

ಇನ್ನು ಸ್ಮಾರ್ಟ್‌ಫೋನ್‌ನಲ್ಲಿ ಹೆಚ್ಚು ಸಮಯವನ್ನು ವ್ಯರ್ಥಮಾಡುವುದಕ್ಕಿಂತ ಸ್ನೇಹಿತರೊಂದಿಗೆ ಸುತ್ತಾಡುವುದನ್ನು ಆರಂಭಿಸಿ. ಹವ್ಯಾಸಿ ಸ್ನೇಹಿತರೊಂದಿಗೆ ಬೆರೆಯುವುದು ನಿಮ್ಮನ್ನು ಮಾನಸಿಕವಾಗಿ ಅಂತೆಯೇ ದೈಹಿಕವಾಗಿ ಉಲ್ಲಸಿತರನ್ನಾಗಿಸುತ್ತದೆ.

ಅಪರಿಚಿತರೊಂದಿಗೆ ಸಂಭಾಷಣೆ ಬೇಡ

ಅಪರಿಚಿತರೊಂದಿಗೆ ಸಂಭಾಷಣೆ ಬೇಡ

ಇನ್ನು ವಾಟ್ಸಾಪ್ ಚಾಟ್‌ನಲ್ಲಿ ಅಪರಿಚಿತರೊಂದಿಗೆ ಹೆಚ್ಚು ಸಂಭಾಷಣೆಯನ್ನು ಮಾಡದಿರಿ. ಇದು ನಿಮ್ಮನ್ನು ಅಪಾಯಕ್ಕೆ ಈಡುಮಾಡಬಹುದು. ಸೀಮಿತವಾಗಿ ನಿಮ್ಮ ಗೆಳೆಯರೊಂದಿಗೆ ಸಂಭಾಷಣೆಯನ್ನು ಮಾಡಿ.

ಸ್ಪೈ ಸಾಫ್ಟ್‌ವೇರ್

ಸ್ಪೈ ಸಾಫ್ಟ್‌ವೇರ್

ನಿಮ್ಮ ಮಕ್ಕಳ ಮೇಲೆ ಗಮನ ಹರಿಸಲು ಅವರ ಸ್ಮಾರ್ಟ್‌ಫೋನ್ ಕಸಿಯುವುದು ಇಲ್ಲವೇ ಫೋನ್ ಅನ್ನು ಆಗಾಗ್ಗೆ ಪರಿಶೀಲಿಸುವುದು ಮೊದಲಾದ ಕೆಲಸಗಳನ್ನು ಮಾಡದಿರಿ. ಸ್ಪೈ ಸಾಫ್ಟ್‌ವೇರ್ ಬಳಸಿ ಅವರ ಚಟುವಟಿಕೆಯ ಮೇಲೆ ಗಮನ ಹರಿಸಿ.

Best Mobiles in India

English summary
It is good to keep in touch with your dear and loved ones but excess of everything is always bad. Hence when you are with your buddies or at workplace then make sure that chatting should not interrupt your attention and concentration over the work and friends.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X