Home
ಸುದ್ದಿಜಾಲ

ವಾಟ್ಸಾಪ್‌ನಿಂದ ಮತ್ತೆ ಹೊಸ ಫೀಚರ್; ಪೇಮೆಂಟ್‌ ಮಾಡುವುದು ಈಗ ಸುಲಭ!

ಜನಪ್ರಿಯ ಇನ್‌ಸ್ಟಂಟ್ ಮೆಸೆಜ್‌ ಆಪ್ ವಾಟ್ಸಾಪ್‌ ಇತ್ತೀಚಿಗೆ ವಾಟ್ಸಾಪ್‌ ಪೇಮೆಂಟ್‌ ಫೀಚರ್ ಪರಿಚಯಿಸಿದೆ. ಇತ್ತೀಚಿಗಷ್ಟೆ ಪೇಮೆಂಟ್‌ ಬ್ಯಾಕ್‌ಗ್ರೌಂಡ್‌ ಆಯ್ಕೆಯನ್ನು ಬಳಕೆದಾರರಿಗೆ ಲಭ್ಯ ಮಾಡಿದೆ. ಅದರ ಬೆನ್ನಲ್ಲೇ ಇದೀಗ ತನ್ನ ಪೇಮೆಂಟ್‌ ವೈಶಿಷ್ಟ್ಯಕ್ಕೆ ಹೊಸ ಅಪ್‌ಡೇಟ್‌ ಒಂದನ್ನು ಸೇರ್ಪಡೆ ಮಾಡಿದೆ. ಈ ಹೊಸ ಫೀಚರ್‌ನಲ್ಲಿ ವಾಟ್ಸಾಪ್ ಬಳಕೆದಾರರು ಪೇಮೆಂಟ್‌ ಮಾಡಲು ಇನ್ನಷ್ಟು ಸುಲಭ ಮಾರ್ಗವನ್ನು ನೀಡಲಿದೆ.

ಪೇಮೆಂಟ್‌

ಹೌದು, ಫೇಸ್‌ಬುಕ್ ಒಡೆತನದ ಮೆಸೇಜಿಂಗ್ ಆಪ್ ವಾಟ್ಸಾಪ್‌ ಈಗ ಹೊಸದಾಗಿ 'ಪಾವತಿ ಶಾರ್ಟ್‌ಕಟ್' Payments Shortcut ಆಯ್ಕೆಯನ್ನು ಬಳಕೆದಾರರಿಗೆ ಪರಿಚಯಿಸಿದ್ದು, ವಾಟ್ಸಾಪ್‌ ಪೇಮೆಂಟ್‌ ಅನ್ನು ಇನ್ನಷ್ಟು ತಡೆರಹಿತ ಪ್ರಕ್ರಿಯೆಯನ್ನಾಗಿಸುವ ಗುರಿಯನ್ನು ಹೊಂದಿದೆ. ಇನ್ನು ಇದು ವಾಟ್ಸಾಪ್‌ ಚಾಟ್ ವಿಂಡೋದಲ್ಲಿ ಕ್ಯಾಮೆರಾ ಮತ್ತು ಅಟ್ಯಾಚ್‌ ಐಕಾನ್‌ಗಳ ನಡುವೆ ಹೊಸ 'ಪೇಮೆಂಟ್ಸ್‌' ಐಕಾನ್ ಅನ್ನು ತೋರಿಸುತ್ತದೆ. ಬಳಕೆದಾರರು ಕೇವಲ ಪೇಮೆಂಟ್‌ ಶಾರ್ಟ್‌ಕಟ್ ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ನೇರ ಪಾವತಿ ಮಾಡಲು ಸಾಧ್ಯವಾಗುತ್ತದೆ.

ಐಕಾನ್‌ಗಳ

WABetaInfo ವರದಿಯ ಪ್ರಕಾರ, ವಾಟ್ಸಾಪ್‌ ಈಗ ಚಾಟ್ ವಿಂಡೋದಲ್ಲಿ ಕ್ಯಾಮೆರಾ ಮತ್ತು ಲಗತ್ತುಗಳ ಐಕಾನ್‌ಗಳ ನಡುವೆ ಹೊಸ 'ಪಾವತಿಗಳು' ಐಕಾನ್ ಅನ್ನು ತೋರಿಸುತ್ತದೆ. ಬಳಕೆದಾರರು ಕೇವಲ ಪಾವತಿ ಶಾರ್ಟ್ಕಟ್ ಬಟನ್ ಮೇಲೆ ಕ್ಲಿಕ್ ಮಾಡಿ ಮತ್ತು ನೇರ ಪಾವತಿ ಮಾಡಲು ಸಾಧ್ಯವಾಗುತ್ತದೆ. ವಾಟ್ಸಾಪ್ ಬೀಟಾ ಆಂಡ್ರಾಯ್ಡ್ ಆವೃತ್ತಿ 2.21.17 ಅನ್ನು ಇನ್‌ಸ್ಟಾಲ್ ಮಾಡಿದ ಎಲ್ಲಾ ಭಾರತೀಯ ಆಂಡ್ರಾಯ್ಡ್ ಬಳಕೆದಾರರಿಗೆ ಬಟನ್ ಲಭ್ಯವಿದೆ.

ನೆರವಾಗಲಿದೆ

ವಾಟ್ಸಾಪ್ ಐಒಎಸ್ ಬಳಕೆದಾರರಿಗಾಗಿ ಪೇಮೆಂಟ್‌ ಶಾರ್ಟ್‌ಕಟ್ ಬಟನ್ ಅನ್ನು ಅಭಿವೃದ್ಧಿಪಡಿಸಲು ಕೆಲಸ ಮಾಡುತ್ತಿದೆ. ಈ ಹೊಸ ಪೇಮೆಂಟ್‌ ಶಾರ್ಟ್‌ಕಟ್ ಆಯ್ಕೆಯು ಬಳಕೆದಾರರಿಗೆ ತ್ವರಿತವಾಗಿ ಪೇಮೆಂಟ್ ಮಾಡಲು ನೆರವಾಗಲಿದೆ. ಹಾಗೂ ಹಲವು ಬಟನ್‌ಗಳನ್ನು ಒತ್ತುವಿದನ್ನು ತಪ್ಪಿಸಲಿದೆ.

ಕಂಪನಿಯು

ವಾಟ್ಸಾಪ್‌ನ ಪೇಮೆಂಟ್‌ ಆಯ್ಕೆಯಲ್ಲಿ ಹೊಸದಾಗಿ ಪೇಮೆಂಟ್‌ ಬ್ಯಾಕ್‌ಗ್ರೌಂಡ್‌ ವೈಶಿಷ್ಟ್ಯವು ಗೂಗಲ್‌ ಪೇ ಆಪ್‌ನ ಪೇಮೆಂಟ್‌ ಬ್ಯಾಕ್‌ಗ್ರೌಂಡ್‌/ಹಿನ್ನೆಲೆ ಪರಿಚಯಿಸಿದೆ. ಇದು ಗೂಗಲ್‌ ಪೇ ನಲ್ಲಿ, ಹಣವನ್ನು ಕಳುಹಿಸುವಾಗ ಕಂಪನಿಯು ಒದಗಿಸಿದ ಆಯ್ಕೆಯಿಂದ ನೀವು ವಿವಿಧ ಹಿನ್ನೆಲೆಗಳನ್ನು ಸೇರಿಸಬಹುದು. ಬಳಕೆದಾರರು ಈಗ ವಾಟ್ಸಾಪ್‌ನಲ್ಲಿ ಇದೇ ರೀತಿಯ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆ.

ವಾಟ್ಸಾಪ್‌ನಲ್ಲಿ

ಮೆಸೇಜಿಂಗ್ ಆಪ್ ಮೊದಲು ಭಾರತೀಯ ಪಾವತಿಗಳ ಕಾರ್ಪೊರೇಶನ್ ಆಫ್ ಇಂಡಿಯಾ (NPCI) ಸಹಭಾಗಿತ್ವದಲ್ಲಿ ಭಾರತದಲ್ಲಿ ಪಾವತಿ ವೈಶಿಷ್ಟ್ಯವನ್ನು ಹೊರತಂದಿದೆ. ರಿಯಲ್-ಟೈಮ್ ಪಾವತಿ ವ್ಯವಸ್ಥೆಯು 227 ಬ್ಯಾಂಕುಗಳೊಂದಿಗೆ ವಹಿವಾಟುಗಳನ್ನು ಸಕ್ರಿಯಗೊಳಿಸುತ್ತದೆ. ವಾಟ್ಸಾಪ್‌ನಲ್ಲಿ ನೀವು ಪೇಮೆಂಟ್‌ ಬ್ಯಾಕ್‌ಗ್ರೌಂಡ್‌ ಸೇರಿಸಲು ಈ ಮುಂದಿನ ಕ್ರಮ ಫಾಲೋ ಮಾಡಿರಿ.

ವಾಟ್ಸಾಪ್‌ನಲ್ಲಿ ನೀವು ಪೇಮೆಂಟ್‌ ಬ್ಯಾಕ್‌ಗ್ರೌಂಡ್‌ ಸೇರಿಸಲು ಹೀಗೆ ಮಾಡಿ:

ವಾಟ್ಸಾಪ್‌ನಲ್ಲಿ ನೀವು ಪೇಮೆಂಟ್‌ ಬ್ಯಾಕ್‌ಗ್ರೌಂಡ್‌ ಸೇರಿಸಲು ಹೀಗೆ ಮಾಡಿ:

* ನೀವು ಹಣವನ್ನು ಕಳುಹಿಸಲು ಬಯಸುವ ಚಾಟ್ ಅನ್ನು ಟ್ಯಾಪ್ ಮಾಡಿ.
* ನೀವು ಸಂಪರ್ಕಕ್ಕೆ ಕಳುಹಿಸಲು ಬಯಸುವ ಮೊತ್ತವನ್ನು ನಮೂದಿಸಿ
* ಹಿನ್ನೆಲೆ (background icon) ಐಕಾನ್ ಮೇಲೆ ಟ್ಯಾಪ್ ಮಾಡಿ
* ಲಭ್ಯವಿರುವ ಆಯ್ಕೆಗಳ ಮೂಲಕ ಸ್ಕ್ರಾಲ್ ಮಾಡಿ ಮತ್ತು ನೀವು ಬಳಸಲು ಬಯಸುವ ಹಿನ್ನೆಲೆಯನ್ನು ಟ್ಯಾಪ್ ಮಾಡಿ.
* ನಿಮ್ಮ ಪಾವತಿ ಸಂದೇಶಕ್ಕೆ ಹಿಂತಿರುಗಲು, ಪಾವತಿ ಮೊತ್ತವನ್ನು ಟ್ಯಾಪ್ ಮಾಡಿ ಅಥವಾ ಹಿನ್ನೆಲೆ ಆಯ್ಕೆಗಳನ್ನು ವಜಾಗೊಳಿಸಲು X ಅನ್ನು ಟ್ಯಾಪ್ ಮಾಡಿ.

Best Mobiles in India

English summary
WhatsApp Adds New Payments Shortcut Feature For Users.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+