ವಾಟ್ಸಾಪ್‌ನಲ್ಲಿ ಇನ್ಮುಂದೆ ಚಾಟಿಂಗ್ ಜೊತೆಗೆ ಶಾಪಿಂಗ್ ಮಾಡಬಹುದು!

|

ಫೇಸ್‌ಬುಕ್ ಮಾಲೀಕತ್ವದ ವಾಟ್ಸಾಪ್‌ ಮೆಸೆಜಿಂಗ್ ಅಪ್ಲಿಕೇಶನ್ ಈಗಾಗಲೇ ಹತ್ತು ಹಲವು ನೂತನ ಫೀಚರ್ಸ್‌ಗಳನ್ನು ಪರಿಚಯಿಸಿ ತನ್ನ ಜನಪ್ರಿಯತೆ ಹೆಚ್ಚಿಸಿಕೊಂಡಿದೆ. ಅದರ ಬೆನ್ನಲ್ಲೇ ಬಹುನಿರೀಕ್ಷಿತ ವಾಟ್ಸಾಪ್ ಪೇ ಸೇವೆಯನ್ನು ಪ್ರಾರಂಭಿಸಿ ಬಳಕೆದಾರರಿಗೆ ಅಚ್ಚರಿ ತಂದಿದೆ. ಇದೀಗ ವಾಟ್ಸಾಪ್‌ ಮತ್ತೆ ನೂತನವಾಗಿ ಶಾಪಿಂಗ್ ಬಟನ್ ಆಯ್ಕೆಯನ್ನು ಅಳವಡಿಸಿಕೊಂಡಿದ್ದು, ಒಂದೇ ಸೂರಿನಡಿ ಹಲವು ಸೇವೆಗಳ ತಾಣವಾಗಿ ರೂಪಗೊಂಡಂತಾಗಿದೆ.

ವಾಟ್ಸಾಪ್

ಹೌದು, ಜನಪ್ರಿಯ ವಾಟ್ಸಾಪ್ ಮೆಸೆಜಿಂಗ್ ಆಪ್‌ ಈಗ ಹೊಸದಾಗಿ ಶಾಪಿಂಗ್ ಬಟನ್ ಆಯ್ಕೆಯನ್ನು ಸೇರಿಸಿದೆ. ಕಾಲ್ ಬಟನ್ ಪಕ್ಕದಲ್ಲಿಯೇ ಹೊಸದಾಗಿ ಶಾಪಿಂಗ್ ಬಟನ್‌ ಅನ್ನು ಸೇರಿಸಿದೆ. ಬಳಕೆದಾರರು ಶಾಪಿಂಗ್ ಬಟನ್ ಕ್ಲಿಕ್ ಮಾಡುವ ಮೂಲಕ ಕ್ಯಾಟಲಾಗ್ ವೀಕ್ಷಿಸಬಹುದು ಹಾಗೂ ಬ್ರೌಸ್‌ ಮಾಡಬಹುದು. ಹಾಗೆಯೇ ಉತ್ಪನ್ನಗಳ ಕುರಿತಾಗಿ ಚಾಟ್‌ ಮಾಡುವ ಅವಕಾಶವನ್ನು ನೀಡಿದೆ.

ದಶಲಕ್ಷಕ್ಕೂ

ಪ್ರತಿದಿನ 175 ದಶಲಕ್ಷಕ್ಕೂ ಹೆಚ್ಚು ಜನರು ವಾಟ್ಸಾಪ್ ಬಿಸಿನೆಸ್ ಖಾತೆಗೆ ಸಂದೇಶ ಕಳುಹಿಸುತ್ತಾರೆ. ಭಾರತದಲ್ಲಿ 3 ಮಿಲಿಯನ್‌ಗಿಂತಲೂ ಹೆಚ್ಚು ಜನರು ಸೇರಿದಂತೆ ಪ್ರತಿ ತಿಂಗಳು 40 ದಶಲಕ್ಷಕ್ಕೂ ಹೆಚ್ಚು ಜನರು ವ್ಯವಹಾರದ ಕ್ಯಾಟಲಾಗ್ ಅನ್ನು ವೀಕ್ಷಿಸುತ್ತಾರೆ ಎಂದು ಹೇಳಲಾಗಿದೆ. ವಾಟ್ಸಾಪ್‌ನ ಈ ನೂತನ ಆಯ್ಕೆಯು ಬ್ಯುಸಿನೆಸ್‌ ಖಾತೆ ಹೊಂದಿರುವ ಬಳಕೆದಾರರಿಗೆ ಹೆಚ್ಚು ನೆರವಾಗಲಿದೆ ಎನ್ನಲಾಗಿದೆ.

ಶಾಪಿಂಗ್

ಶಾಪಿಂಗ್ ಬಟನ್ ಹೇಗೆ ಕೆಲಸ ಮಾಡುತ್ತದೆ
ವಾಟ್ಸಾಪ್‌ನ ಹೊಸ ಶಾಪಿಂಗ್ ಬಟನ್ ಸ್ಟೋರ್‌ಫ್ರಂಟ್ (ಅಂಗಡಿ) ತರಹದ ಐಕಾನ್‌ನಂತೆ ಹೊಂದಿದ್ದು, ಚಾಟ್ ಮೇಲ್ಭಾಗದಲ್ಲಿ ಕರೆ ಬಟನ್ ಪಕ್ಕದಲ್ಲಿ ಕಾಣಿಸಿದೆ. ಬಳಕೆದಾರರು ಈ ಬಟನ್‌ ಅನ್ನು ವ್ಯವಹಾರಗಳ ಚಾಟ್ ಸ್ಕ್ರೀನ್‌ನಲ್ಲಿ ಮಾತ್ರ ನೋಡುತ್ತಾರೆ (ವಾಟ್ಸಾಪ್ ಬ್ಯುಸಿನೆಸ್‌ ಅಕೌಂಟ್‌) ಉಳಿದಂತೆ ಸ್ನೇಹಿತರು ಅಥವಾ ಕುಟುಂಬ ಸದಸ್ಯರ ಚಾಟ್ ಸ್ಕ್ರೀನ್‌ನಲ್ಲಿ ಈ ಬಟನ್ ಆಯ್ಕೆ ಕಾಣಿಸುವುದಿಲ್ಲ.

ಕ್ಯಾಟಲಾಗ್‌

ಬಳಕೆದಾರರು ವಾಟ್ಸಾಪ್ ಶಾಪಿಂಗ್ ಬಟನ್‌ ಅನ್ನು ಒಮ್ಮೆ ಟ್ಯಾಪ್ ಮಾಡಿದರೆ, ಬಳಕೆದಾರರಿಗೆ ವ್ಯವಹಾರದ ಕ್ಯಾಟಲಾಗ್‌ ಕಾಣಿಸಿಕೊಳ್ಳಲಿದೆ. ಇದು ಬಳಕೆದಾರರಿಗೆ ಕ್ಯಾಟಲಾಗ್‌ಗಳನ್ನು ಇನ್‌ಸ್ಟಂಟ್/ತಕ್ಷಣಕ್ಕೆ ನೋಡಲು ಮತ್ತು ಉತ್ಪನ್ನಗಳನ್ನು ಖರೀದಿಸಲು ಅವಕಾಶ ಮಾಡಿಕೊಡುತ್ತದೆ. ವಾಟ್ಸಾಪ್‌ನ ಈ ಹೊಸ ಬಟನ್ ಶಾಪಿಂಗ್ ಪ್ರಿಯರಿಗೆ ಹೆಚ್ಚು ಅಟ್ರ್ಯಾಕ್ಟ್ ಮಾಡಲಿದೆ.

Best Mobiles in India

English summary
WhatsApp Shopping button looks like a storefront-like icon, which sits next to the newly designed call button.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X