ವಾಟ್ಸಾಪ್ ವಾಯ್ಸ್ ಕಾಲಿಂಗ್ ಎಲ್ಲಾ ಬಳಕೆದಾರರಿಗೂ ಲಭ್ಯ
ಫೇಸ್‌ಬುಕ್ ಮಾಲೀಕತ್ವದಲ್ಲಿರುವ ತ್ವರಿತ ಸಂದೇಶ ಪ್ಲಾಟ್‌ಫಾರ್ಮ್ ವಾಟ್ಸಾಪ್ ತನ್ನ ವಾಯ್ಸ್ ಕಾಲಿಂಗ್ ಫೀಚರ್ ಅನ್ನು ಎಲ್ಲಾ ಬಳಕೆದಾರರಿಗಾಗಿ ತೆರೆದಿದ್ದು ಒಂದು ವರ್ಷದ ಬೀಟಾ ಟೆಸ್ಟಿಂಗ್ ಅನ್ನು ಇದು ನಡೆಸಿದೆ ಎನ್ನಲಾಗಿದೆ. [ನೀವು ಅರಿಯದ ವಾಟ್ಸಾಪ್‌ನ ಹತ್ತು ಮುಖಗಳು]

ವಾಟ್ಸಾಪ್ ಬಳಕೆದಾರರು ಮೊದಲಿಗೆ ಇದರ ನವೀಕೃತ ಆವೃತ್ತಿಯನ್ನು ಗೂಗಲ್ ಪ್ಲೇನಿಂದ ಅಥವಾ ವಾಟ್ಸಾಪ್ ಅಧಿಕೃತ ವೆಬ್‌ಸೈಟ್‌ನಿಂದ 2.12.5 ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ. ಪ್ಲೇ ಸ್ಟೋರ್ 2.11.528 ಅನ್ನು ಕ್ಲಿಕ್ ಮಾಡಿ ಅಥವಾ 2.11.531 ಆವೃತ್ತಿಯನ್ನು ಅಧಿಕೃತ ವಾಟ್ಸಾಪ್ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿ.

ವಾಟ್ಸಾಪ್ ವಾಯ್ಸ್ ಕಾಲಿಂಗ್ ಫೀಚರ್ ಆಂಡ್ರಾಯ್ಡ್‌ಗೆ ಮಾತ್ರ ಲಭ್ಯವಿದ್ದು, ಇದನ್ನು ಶೀಘ್ರದಲ್ಲಿಯೇ ಐಓಎಸ್ ಬಳಕೆದಾರರಿಗೂ ಸಕ್ರಿಯಗೊಳಿಸಲಿದೆ. ಮುಂಬರು ದಿನಗಳಲ್ಲಿ ವಾಟ್ಸಾಪ್ ವಾಯ್ಸ್ ಕಾಲಿಂಗ್ ಫೀಚರ್ ಅನ್ನು ಐಓಎಸ್ ಬಳಕೆದಾರರಿಗೂ ಒದಗಿಸಲಿದ್ದೇವೆ ಎಂದು ಫೇಸ್‌ಬುಕ್ ಎಫ್8 ಕಾನ್ಫರೆನ್ಸ್‌ನಲ್ಲಿ ವಾಟ್ಸಾಪ್ ಸಹಸ್ಥಾಪಕ ಬ್ರೈನ್ ಆಕ್ಟನ್ ತಿಳಿಸಿದ್ದಾರೆ.


Click it and Unblock the Notifications








