Subscribe to Gizbot

ನೀವು ಅರಿಯದ ವಾಟ್ಸಾಪ್‌ನ ಹತ್ತು ಮುಖಗಳು

Written By:

ವಾಟ್ಸಪ್‌ನಲ್ಲಿ ಸಂಪರ್ಕಗಳನ್ನು ನಿರ್ಬಂಧಿಸುವುದು ಹೇಗೆ ಎಂಬುದನ್ನು ಇಂದಿನ ಲೇಖನದಲ್ಲಿ ನಾವು ನಿಮಗೆ ತಿಳಿಸುತ್ತಿದ್ದು ನಿಮಗೆ ಬೇಡದೇ ಇರುವ ಸಂಪರ್ಕಗಳನ್ನು ನಿರ್ಬಂಧಿಸುವ ಮೂಲಕ ಇನ್ನಷ್ಟು ಆನಂದಮಯವಾಗಿ ವಾಟ್ಸಾಪ್ ಅನ್ನು ನಿಮಗೆ ಬಳಸಬಹುದಾಗಿದೆ. [ಬಹು ಸಂದೇಶಗಳನ್ನು ವಾಟ್ಸಾಪ್‌ನಲ್ಲಿ ಕಳುಹಿಸುವುದು ಹೇಗೆ ಗೊತ್ತೇ?]

ಹಾಗಿದ್ದರೆ ಇಂದಿನ ಲೇಖನಲ್ಲಿ ವಾಟ್ಸಾಪ್‌ನಲ್ಲಿರುವ ಸಂಪರ್ಕಗಳನ್ನು ನಿರ್ಬಂಧಿಸುವುದು ಹೇಗೆ ಎಂಬುದನ್ನು ಅರಿತುಕೊಳ್ಳೋಣ. ಅತಿ ಸರಳವಾಗಿರುವ ಈ 10 ವಿಧಾನಗಳು ನಿಮಗೆ ತುಂಬಾ ಸಹಕಾರಿ ಎಂದೆನಿಸಲಿದೆ. [ವಾಟ್ಸಾಪ್ ಲಾಸ್ಟ್ ಸೀನ್ ಫೀಚರ್ ಮರೆಮಾಡುವುದು ಹೇಗೆ?]

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಾಟ್ಸಾಪ್ ಲಾಂಚ್
  

ಮೊದಲಿಗೆ ವಾಟ್ಸಾಪ್ ಲಾಂಚ್ ಮಾಡಿಕೊಳ್ಳಿ ನಂತರ ಅದರಲ್ಲಿರುವ ಮೆನು ಕ್ಲಿಕ್ ಮಾಡಿ. ಸಾಮಾನ್ಯವಾಗಿ ಇದು 3 ಡಾಟ್ ಸಿಂಬಲ್‌ಗಳನ್ನು ಬಲ ಮೇಲ್ಭಾಗದಲ್ಲಿ ಹೊಂದಿರುತ್ತದೆ ಮತ್ತು ಕೆಳಭಾಗದಲ್ಲಿ ಮೂರು ಬಟನ್‌ಗಳ ಮೆನು ಬಟನ್ ಹೊಂದಿರುವವರಿಗೆ ಅಲ್ಲಿಂದ ಇದನ್ನು ಪ್ರವೇಶಿಸಬಹುದಾಗಿದೆ.

ಬಳಕೆದಾರ ಸೆಟ್ಟಿಂಗ್‌
  

ಮೆನು ಅಡಿಯಲ್ಲಿ ಬಳಕೆದಾರ ಸೆಟ್ಟಿಂಗ್‌ಗಳನ್ನು ಕಾಣಬಹುದಾಗಿದೆ.

ಸೆಟ್ಟಿಂಗ್ಸ್ ತಟ್ಟಿರಿ
  

ಸೆಟ್ಟಿಂಗ್ಸ್ ತಟ್ಟಿರಿ ಮತ್ತು ಪ್ರೈವಸಿ ಆಯ್ಕೆ ಕಂಡುಕೊಳ್ಳಿ ಹಾಗೂ ಆಯ್ಕೆಮಾಡಿ.

ಪ್ರೈವಸಿ
  

ಪ್ರೈವಸಿ ಅಡಿಯಲ್ಲಿ ಒಮ್ಮೆ ಬಳಕೆದಾರ ಬಂದ ನಂತರ, ಈಗಾಗಲೇ ಬ್ಲಾಕ್ ಮಾಡಿರುವ ಸಂಪರ್ಕಗಳ ಎಣಿಕೆಯೊಂದಿಗೆ ಕೊನೆಯ ಆಯ್ಕೆ ಬ್ಲಾಕ್ ಮಾಡಿದ ಸಂಪರ್ಕಗಳಾಗಿರುತ್ತವೆ.

ಬ್ಲಾಕ್‌ಡ್ ಕಾಂಟ್ಯಾಕ್ಟ್
  

ಬ್ಲಾಕ್‌ಡ್ ಕಾಂಟ್ಯಾಕ್ಟ್ ಮೇಲೆ ಸ್ಪರ್ಶಿಸಿ.

ಸಂಪರ್ಕ
  

ನೀವು ಬ್ಲಾಕ್ ಮಾಡಲು ಬಯಸಿರುವ ಸಂಪರ್ಕಗಳನ್ನು ಇಲ್ಲಿ ಸೇರಿಸಿ.

ಲಾಸ್ಟ್ ಸೀನ್
  

ನೀವು ಬ್ಲಾಕ್‌ ಮಾಡಿದ ಬಳಕೆದಾರರು ನಂತರ ಸಂದೇಶ ಅಥವಾ ಪ್ರೊಫೈಲ್ ಫೋಟೋ ಇಲ್ಲವೇ ಲಾಸ್ಟ್ ಸೀನ್ ಅನ್ನು ನೋಡಲು ಸಾಧ್ಯವಿಲ್ಲ.

ಬ್ಲಾಕ್
  

ಬಳಕೆದಾರರು, ನಿರ್ದಿಷ್ಟ ಸಂಪರ್ಕವನ್ನು ಆ ಸಂಪರ್ಕವನ್ನು ಸ್ಪರ್ಶಿಸುವ ಮೂಲಕ ಮತ್ತು ಮೆನುವನ್ನು ಕ್ಲಿಕ್ ಮಾಡುವ ಮೂಲಕ, ಮೋರ್ ಎಂದು ಹೇಳುವ ಕಡೆಯ ಆಯ್ಕೆಯನ್ನು ಆರಿಸುವ ಮೂಲಕ ತದನಂತರ ಪ್ರಥಮ ಆಯ್ಕೆ ಬ್ಲಾಕ್ ಎಂದಾಗಿರುತ್ತದೆ.

ಅನ್‌ಬ್ಲಾಕ್
  

ಇನ್ನು ಅನ್‌ಬ್ಲಾಕ್ ಮಾಡಲು ಸಂಪರ್ಕವನ್ನು ತಟ್ಟಿರಿ, ಮೆನು ಕ್ಲಿಕ್ ಮಾಡಿ ಮತ್ತು ಅನ್‌ಬ್ಲಾಕಿಂಗ್ ಆರಿಸಿ.

ಸಂಪರ್ಕ ಬ್ಲಾಕ್
  

ಈ ಸರಳ ವಿಧಾನಗಳ ಮೂಲಕ ವಾಟ್ಸಾಪ್‌ನಲ್ಲಿ ಸಂಪರ್ಕಗಳನ್ನು ನಿಮಗೆ ಬ್ಲಾಕ್ ಮಾಡಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
In this article we can see the top 10 tips for whatsapp better usage. These tips are considered as one of the easy and simplest way to use your whatsapp.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot