ಹೊಸ ಮೈಲಿಗಲ್ಲು ದಾಖಲಿಸಿದ 'ವಾಟ್ಸಪ್'!
ವಿಶ್ವದಲ್ಲಿಯೇ ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ ಇನ್‌ಸ್ಟಂಟ್ ಮೆಸೆಜಿಂಗ್ ಅಪ್ಲಿಕೇಶನ್ 'ವಾಟ್ಸಪ್' ಇದೀಗ ಮತ್ತೊಂದು ಮೈಲಿಗಲ್ಲು ಸೃಷ್ಠಿಸಿದೆ. ಫೇಸ್‌ಬುಕ್ ಒಡೆತನದಲ್ಲಿರುವ ಈ ಅಪ್ಲಿಕೇಶನ್ ಈಗಾಗಲೇ ತನ್ನ ಬಳಕೆದಾರರಿಗೆ ಹಲವು ಅತ್ಯುತ್ತಮ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಈ ನಿಟ್ಟಿನಲ್ಲಿ ವಾಟ್ಸಪ್ ಬಳಕೆದಾರರ ಸಂಖ್ಯೆ ಏರುಮುಖವಾಗಿಯೇ ಸಾಗಿದ್ದು, ಈಗ ಅದು 200 ಕೋಟಿಯ ಗಡಿ ದಾಟಿದೆ.

ಹೌದು, ಜನಪ್ರಿಯ ವಾಟ್ಸಪ್ ಸದ್ಯ ಮುಂಚೂಣಿಯಲ್ಲಿರುವ ಮೆಸೆಜಿಂಗ್ ಆಪ್ ಆಗಿದ್ದು, ಇದೀಗ ವಾಟ್ಸಪ್ ಬಳಕೆದಾರರ ಸಂಖ್ಯೆ 2 ಬಿಲಿಯನ್ (200 ಕೋಟಿ) ಗಡಿ ದಾಟಿದೆ. ಭಾರತದಲ್ಲಿಯೇ ಸುಮಾರು 400 ಮಿಲಿಯನ್ ಬಳಕೆದಾರರಿದಾದರೆ. ಇನ್ನು ಕಳೆದ ಎರಡು ವರ್ಷಗಳ ಹಿಂದೆ ವಾಟ್ಸಪ್ 1.5 ಬಿಲಿಯನ್ (150 ಕೋಟಿ) ಬಳಕೆದಾರರನ್ನು ಹೊಂದಿತ್ತು. ಆದ್ರೆ ಈಗ ಬಳಕೆದಾರರ ಸಂಖ್ಯೆ ಹೆಚ್ಚಾಗಿದ್ದು, ಹೊಸ ದಾಖಲೆ ಮಾಡಿದೆ.

ವಾಟ್ಸಪ್ ಬಳಕೆದಾರರ ಸಂಖ್ಯೆಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಶೇ.33% ಪರ್ಸೆಂಟ್ ಏರಿಕೆ ಆಗಿದೆ. ಈ ಮೂಲಕ ಫೇಸ್‌ಬುಕ್ ನಂತರ 2 ಬಿಲಿಯನ್ ಬಳಕೆದಾರರ ಗಡಿ ದಾಟಿದ ಅಪ್ಲಿಕೇಶನ್ ಆಗಿ ವಾಟ್ಸಪ್ ಗುರುತಿಸಿಕೊಂಡಿದೆ. ಪ್ರತಿದಿನ ಸುಮಾರು 2.26 ಬಿಲಿಯನ್ ಬಳಕೆದಾರರು ಫೇಸ್‌ಬುಕ್, ವಾಟ್ಸಪ್, ಇನ್‌ಸ್ಟಾಗ್ರಾಂ ಅಥವಾ ಮೆಸೆಂಜರ್ ಅಪ್ಲಿಕೇಶನ್‌ಗಳ ಬಳಕೆಯಲ್ಲಿ ತೊಡಗಿರುತ್ತಾರೆ ಎಂದು ಸಂಸ್ಥೆ ಹೇಳಿಕೊಂಡಿದೆ.

ಫೇಸ್‌ಬುಕ್ ಸಂಸ್ಥೆಯ ವಾಟ್ಸಪ್, ಇನ್‌ಸ್ಟಾಗ್ರಾಂ, ಮೆಸೆಜಂರ್ ಸೇರಿದಂತೆ ಇನ್ನಿತರೆ ಅಂಗ ಸಂಸ್ಥೆಗಳ ತಿಂಗಳ ಬಳಕೆದಾರ ಸಂಖ್ಯೆ 2.89 ಬಿಲಿಯನ್ ಆಗಿದೆ. ಇದು ಪ್ರತಿ ವರ್ಷದಿಂದ ವರ್ಷಕ್ಕೆ ಶೇ.9% ಏರಿಕೆ ಕಂಡಿದೆ. ವಾಟ್ಸಪ್ ಆಪ್‌ಗೆ ಭಾರತವೇ ದೊಡ್ಡ ಮಾರುಕಟ್ಟೆಯಾಗಿದ್ದು, ಪ್ರಸ್ತುತ 400 ಮಿಲಿಯನ್ ಬಳಕೆದಾರರನ್ನು ಹೊಂದಿದೆ. ಹಾಗೆಯೇ ಆಸ್ಟ್ರೇಲಿಯಾ ಮತ್ತು ಯುಎಸ್‌ಎ ರಾಷ್ಟ್ರಗಳಲ್ಲಿಯೂ ಬಳಕೆದಾರರ ಸಂಖ್ಯೆ ಏರುಗತಿಯಲ್ಲಿದೆ.

ವಾಟ್ಸಪ್ ಅಪ್ಲಿಕೇಶನ್‌ನ ಟೆಕ್ಸ್ಟ್, ಫೋಟೊ ಮತ್ತು ವಿಡಿಯೊ ಕಳುಹಿಸುವ ಮತ್ತು ಸ್ವೀಕರಿಸುವ ಸೌಲಭ್ಯಗಳನ್ನು ಒಳಗೊಂಡಿದೆ. ಹಾಗೆಯೇ ವಿಡಿಯೊ ಮತ್ತು ವಾಯಿಸ್ ಕರೆಗಳ ಆಯ್ಕೆಗಳನ್ನು ವಾಟ್ಸಪ್ ಅಳವಡಿಸಿದೆ. ಇನ್ನು ಬಳಕೆದಾರರ ಖಾಸಗಿ ಮಾಹಿತಿ ರಕ್ಷಣೆಗೆ, ಸುರಕ್ಷತೆಗೆ ಹಲವು ಆಯ್ಕೆಗಳನ್ನು ಅಳವಡಿಸಿದೆ. ಪ್ರೋಫೈಲ್ ಹೈಡ್, ಬ್ಲಾಕ್, ಗ್ರೂಪ್ ಸೇರುವುದನ್ನು ನಿಯಂತ್ರಿಸುವ ಆಯ್ಕೆ ಸೇರಿದಂತೆ ಕಳೆದ ವರ್ಷ ಫಿಂಗರ್‌ಪ್ರಿಂಟ್ ಲಾಕ್ ಸೌಲಭ್ಯವನ್ನು ಪರಿಚಯಿಸಿದೆ.


Click it and Unblock the Notifications








