WhatsApp: ವಾಟ್ಸಾಪ್‌ಗೆ ಬಂತು ಹೊಸ ಸೌಲಭ್ಯ: ನಿಮ್ಮ ಖಾಸಗಿ ಚಾಟ್‌ಗಳನ್ನು ಸರಳವಾಗಿ ಲಾಕ್ ಮಾಡಿ!
ವಾಟ್ಸಾಪ್‌ನಲ್ಲಿ (WhatsApp) ಆಗಾಗ್ಗೆ ಹೊಸ ಹೊಸ ಫೀಚರ್ಸ್ ಬಳಕೆದಾರರಿಗೆ ಭಿನ್ನ ಅನುಭವ ನೀಡುವ ಮೂಲಕ ಅವರಿಗೆ ಹಲವು ರೀತಿಯಲ್ಲಿ ಪ್ರಯೋಜನ ನೀಡುತ್ತಿದೆ. ಜೊತೆಗೆ ಈ ಆಪ್ ಬಳಕೆದಾರರ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಈ ಎಲ್ಲಾ ಬೆಳವಣಿಗೆ ನಡುವೆ ವಾಟ್ಸಾಪ್ ಸಾಕಷ್ಟು ಜನರಿಗೆ ಅನುಕೂಲ ಆಗುವ ಮತ್ತೊಂದು ಹೊಸ ಫೀಚರ್ಸ್ (Secret Code feature ) ಅನ್ನು ಲಾಂಚ್ ಮಾಡಿದೆ.
ಹೌದು, ಪ್ರಮುಖ ಮೆಸೆಜಿಂಗ್ ಪ್ಲಾಟ್‌ಫಾರ್ಮ್ ಆಗಿರುವ ವಾಟ್ಸಾಪ್ ಇದೀಗ ಬಳಕೆದಾರರಿಗೆ ಎಲ್ಲಾ ರೀತಿಯಲ್ಲೂ ಅನುಕೂಲಕರವಾದ ಆಪ್ ಆಗಿದೆ. ಈ ಮೊದಲು ಮೊಬೈಲ್ ಪಾಸ್ ವರ್ಡ್ ಬಳಕೆ ಮಾಡಿಕೊಂಡು ವಾಟ್ಸಾಪ್ ಅನ್ನು ಲಾಕ್ ಮಾಡಬಹುದಿತ್ತು. ಆದರೆ, ಈ ಪಾಸ್‌ವರ್ಡ್ ಸ್ನೇಹಿತರು ಮತ್ತು ಕುಟುಂಬದವರಿಗೆ ತಿಳಿದಿದ್ದರೆ ಅವರೂ ಸಹ ವಾಟ್ಸಾಪ್ ಅನ್ನು ನೋಡಬಹುದಿತ್ತು. ಆದರೆ, ಇನ್ಮುಂದೆ ಯಾವುದೇ ಕಾರಣಕ್ಕೂ ಬೇರೆಯವರು ನೀವು ನಿಮ್ಮ ಸಂಗಾತಿಯೊಂದಿಗೆ ಮಾಸಿದ ಚಾಟ್ ಅಥವಾ ಬ್ಯುಸಿನೆಸ್ ಸಂಬಂಧ ಮಾಡಿದ ಚಾಟ್ ಅನ್ನು ಯಾರೂ ಸಹ ನೋಡಲು ಸಾಧ್ಯವಿಲ್ಲ. ಹಾಗಿದ್ರೆ, ಏನಿದು ಹೊಸ ಫೀಚರ್ಸ್?, ಇದರ ಬಳಕೆ ಹೇಗೆ ಅನ್ನೋ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ವಾಟ್ಸಾಪ್ ಚಾಟ್ ಲಾಕ್: ವಾಟ್ಸಾಪ್ ಕೆಲವು ದಿನಗಳ ಹಿಂದೆ ವಾಟ್ಸಾಪ್ ಲಾಕ್ ಫೀಚರ್ಸ್ ಅನ್ನು ಭಾರತದಲ್ಲಿ ಪರಿಚಯಿಸಲಾಗಿತ್ತು. ಇದರ ಅಡಿಯಲ್ಲಿ ನಿಮ್ಮ ವೈಯಕ್ತಿಕ ಚಾಟ್‌ಗಳನ್ನು ಫೋಲ್ಡರ್‌ನಲ್ಲಿ ಲಾಕ್ ಮಾಡಬಹುದಾಗಿತ್ತು. ಲಾಕ್ ಮಾಡಿದ ನಂತರ ಅವುಗಳನ್ನು ಫಿಂಗರ್‌ಪ್ರಿಂಟ್ ಮೂಲಕ ಮಾತ್ರ ಮಾತ್ರ ತೆರೆಯಬಹುದಾಗಿತ್ತು. ಆದರೆ, ನಿಮ್ಮ ಮೊಬೈಲ್‌ಗೆ ಸ್ನೇಹಿತ ಅಥವಾ ಕುಟುಂಬದ ಸದಸ್ಯರ ಫಿಂಗರ್‌ಪ್ರಿಂಟ್ ಲಾಕ್ ಆಯ್ಕೆ ನೀಡಿದ್ದರೆ ಅವರು ಸಹ ನಿಮ್ಮ ವಾಟ್ಸಾಪ್ ರಹಸ್ಯ ಚಾಟ್‌ಗಳನ್ನು ಸಹ ನೋಡಬಹುದಿತ್ತು. ಈ ಸಮಸ್ಯೆಗೆ ಮುಕ್ತಿಯಾಡಲು ಹೊಸ ರಹಸ್ಯ ಕೋಡ್ ಫೀಚರ್ಸ್ (Secret Code Features) ಅನ್ನು ಪರಿಚಯಿಸಲಾಗಿದೆ.
ಸೀಕ್ರೇಟ್ ಕೋಡ್ ಫೀಚರ್ಸ್: ಈ ರಹಸ್ಯ ಕೋಡ್ ಫೀಚರ್ಸ್‌ನಿಂದಾಗಿ ಫಿಂಗರ್‌ಪ್ರಿಂಟ್ ಹೊರತುಪಡಿಸಿ ನಿಮ್ಮ ಲಾಕ್ ಮಾಡಿದ ಚಾಟ್‌ಗಳಿಗೆ ನೀವು ಇನ್ನೊಂದು ಟೆಕ್ಸ್ಟ್ ಪಾಸ್‌ವರ್ಡ್ (Text password) ಅನ್ನೂ ಸಹ ಸೇರಿಸಬಹುದಾಗಿದೆ. ಹಾಗೆಯೇ ಹೊಸ ಅಪ್‌ಡೇಟ್‌ನಲ್ಲಿ ಕಂಪನಿಯು ಬಳಕೆದಾರರಿಗೆ ವಾಟ್ಸಾಪ್‌ನ ಸರ್ಚ್ ಬಾರ್‌ನಲ್ಲಿ ಪಾಸ್‌ವರ್ಡ್ ನಮೂದಿಸುವ ಮೂಲಕ ಲಾಕ್ ಆಗಿರುವ ಫೋಲ್ಡರ್‌ಗಳನ್ನು ಪ್ರವೇಶಿಸುವ ಸೌಲಭ್ಯವನ್ನು ನೀಡಲಾಗಿದೆ.

ಇದರೊಂದಿಗೆ ನೀವು ಚಾಟ್ ಅನ್ನು ಲಾಕ್ ಮಾಡಲು ಪ್ರತಿ ಬಾರಿ ಪ್ರೊಫೈಲ್‌ಗೆ ಹೋಗುವ ಅಗತ್ಯವಿಲ್ಲ. ಈಗ ನೀವು ಹೊರಗಿನಿಂದ ಚಾಟ್ ಅನ್ನು ದೀರ್ಘವಾಗಿ ಹೊತ್ತಿ ಹಿಡಿಯುವ ಮೂಲಕ ಇದನ್ನು ಮಾಡಬಹುದಾಗಿದೆ. ಅದಾಗ್ಯೂ ನಿಮಗೆ ಈ ಕೆಲಸ ಮಾಡಲು ಸರಿಯಾಗಿ ತಿಳಿಯುತ್ತಿಲ್ಲ ಎಂದರೆ ಚಿಂತೆ ಬೇಡ ಈ ಕೆಳಗೆ ನೀಡಲಾದ ಮಾಹಿತಿಯನ್ನು ಸರಿಯಾಗಿ ಗಮನಿಸಿ ನಿಮ್ಮ ಖಾಸಗಿ ಸಂಭಾಷಣೆಯನ್ನು ಲಾಕ್ ಮಾಡಿ.
ಹಂತ 1: ನಿಮ್ಮ ರಹಸ್ಯ ಚಾಟ್‌ಗಳನ್ನು ಮರೆಮಾಡಲು ನೀವು ಲಾಕ್ ಮಾಡಿದ ಫೋಲ್ಡರ್‌ಗೆ ಹೋಗಬೇಕಾಗುತ್ತದೆ. ಇಲ್ಲಿ ನೀವು ಬಲಭಾಗದಲ್ಲಿ ಮೂರು ಚುಕ್ಕೆಗಳನ್ನು ಗಮನಿಸಿ, ಅವುಗಳಲ್ಲಿ ಒಂದು 'ಹೈಡ್ ಚಾಟ್ ಲಾಕ್ ಫೋಲ್ಡರ್' (Hide chat lock folder) ಆಯ್ಕೆಯಾಗಿದೆ. ಅದನ್ನು ಆನ್ ಮಾಡಿ.

ಹಂತ 2: ಇದಾದ ನಂತರದಲ್ಲಿ ಲಾಕ್ ಆಗಿರುವ ಚಾಟ್‌ಗಳು ವಾಟ್ಸಾಪ್ ನಿಂದ ಕಣ್ಮರೆಯಾಗುತ್ತವೆ. ಇವುಗಳನ್ನು ಪ್ರವೇಶಿಸಲು ನೀವು ಸರ್ಚ್ ಲಿಸ್ಟ್‌ನಲ್ಲಿ ನಿಮ್ಮ ಪಾಸ್‌ವರ್ಡ್ ಅನ್ನು ನಮೂದಿಸಬೇಕಾಗುತ್ತದೆ. ಗಮನಿಸಬೇಕಾದ ವಿಷಯ ಏನೆಂದರೆ ನವೀಕರಣವನ್ನು ಹಂತಹಂತವಾಗಿ ಬಿಡುಗಡೆ ಮಾಡುತ್ತಿದೆ. ನೀವು ಇನ್ನೂ ಈ ನವೀಕರಣವನ್ನು ಸ್ವೀಕರಿಸದೇ ಇದ್ದರೆ ಚಿಂತೆ ಬೇಡ ಸ್ವಲ್ಪ ದಿನ ಕಾಯಿರಿ.


Click it and Unblock the Notifications








