Home
ಸುದ್ದಿಜಾಲ

Whatsapp: 74 ಲಕ್ಷಕ್ಕೂ ಹೆಚ್ಚು ಭಾರತೀಯ ಅಕೌಂಟ್‌ ಬ್ಯಾನ್‌! ಕಾರಣ ಏನು?

ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ವಾಟ್ಸಾಪ್‌ (WhatsApp) ಮತ್ತೊಮ್ಮೆ ಭಾರತೀಯುರಿಗೆ ಬಿಗ್‌ ಶಾಕ್‌ ನೀಡಿದೆ. 2021ರ ಐಟಿ ನಿಯಮಗಳ ಅನ್ವಯ ಏಪ್ರಿಲ್‌ 2023ರ ಮಾಸಿಕ ವರದಿಯನ್ನು ಪ್ರಕಟಿಸಿದೆ. ಈ ವರದಿಯಲ್ಲಿ 74 ಲಕ್ಷಕ್ಕೂ ಹೆಚ್ಚು ಭಾರತೀಯ ವಾಟ್ಸಾಪ್‌ ಖಾತೆಗಳನ್ನು ಬ್ಯಾನ್‌ ಮಾಡಿರುವುದಾಗಿ ಹೇಳಿದೆ.

ಹೌದು, ವಾಟ್ಸಾಪ್‌ 2021 ರ ಹೊಸ ಐಟಿ ನಿಯಮಗಳ ಅನ್ವಯ ಮಾಸಿಕ ಅನುಸರಣಾ ವರದಿಯನ್ನು ಬಹಿರಂಗಪಡಿಸಿದೆ. ಏಪ್ರಿಲ್ 2023 ರ ಮಾಸಿಕ ಅನುಸರಣೆ ವರದಿಯಲ್ಲಿ ಸೇವಾ ನಿಯಮಗಳನ್ನು ಉಲ್ಲಂಘಿಸಿರುವ ಖಾತೆಗಳನ್ನು ಬ್ಯಾನ್‌ ಮಾಡಿರುವುದಾಗಿ ಹೇಳಿದೆ. ಹಾಗಾದ್ರೆ ಭಾರತದಲ್ಲಿ ಮೆಟಾ ಬ್ಯಾನ್‌ ಮಾಡಿರುವ ವಾಟ್ಸಾಪ್‌ ಖಾತೆಗಳ ಸಂಖ್ಯೆ ಹಾಗೂ ಕಾರಣಗಳ ಬಗ್ಗೆ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

Whatsapp: 74 ಲಕ್ಷಕ್ಕೂ ಹೆಚ್ಚು ಭಾರತೀಯ ಅಕೌಂಟ್‌ ಬ್ಯಾನ್‌! ಕಾರಣ ಏನು?

74 ಲಕ್ಷಕ್ಕೂ ಹೆಚ್ಚು ವಾಟ್ಸಾಪ್‌ ಅಕೌಂಟ್‌ ಬ್ಯಾನ್‌: ವಾಟ್ಸಾಪ್‌ ಏಪ್ರಿಲ್ 1 ಮತ್ತು ಏಪ್ರಿಲ್ 30 ರ ನಡುವೆ ಭಾರತದಲ್ಲಿ 7,452,500 ಅಕೌಂಟ್‌ಗಳನ್ನು ಬ್ಯಾನ್‌ ಮಾಡಿದೆ. ತನ್ನ ಪ್ಲಾಟ್‌ಫಾರ್ಮ್‌ನಲ್ಲಿರುವ ಕುಂದುಕೊರತೆ ಕಾರ್ಯವಿಧಾನಗಳ ಮೂಲಕ ಈ ಕ್ರಮವನ್ನು ತೆಗೆದುಕೊಂಡಿದೆ. ಭಾರತದ ಬಳಕೆದಾರರಿಂದ ಸ್ವೀಕರಿಸುವ ದೂರುಗಳ ಆಧಾರದ ಮೇಲೆ ಖಾತೆಗಳನ್ನು ನಿಷೇದಿಸಿರುವುದಾಗಿ ತನ್ನ ವರದಿಯಲ್ಲಿ ವಿವರಿಸಿದೆ.

ಪೂರ್ವಭಾವಿಯಾಗಿ 25 ಲಕ್ಷ ಖಾತೆಗಳು ಬ್ಯಾನ್‌: ಬಳಕೆದಾರರ ದೂರುಗಳ ಆಧಾರದ ಮೇಲೆ ಮಾತ್ರವಲ್ಲ, ಬಳಕೆದಾರರಿಂದ ಯಾವುದೇ ವರದಿಗಳು ಬರುವ ಮೊದಲು ವಾಟ್ಸಾಪ್‌ ಸುಮಾರು 25 ಲಕ್ಷ (2,469,700) ಖಾತೆಗಳನ್ನು ಬ್ಯಾನ್‌ ಮಾಡಿದೆ. ವಾಟ್ಸಾಪ್‌ನಲ್ಲಿ ಬಳಕೆದಾರರು ನಕಲಿ ಕರೆಗಳ ಆಧಾರದ ಮೇಲೆ ಇವುಗಳನ್ನು ಬ್ಯಾನ್‌ ಮಾಡಲಾಗಿದೆ. ಅಲ್ಲದೆ ಐಟಿ ಸಚಿವಾಲಯವೂ ಕೂಡ ಇಂತಹ ಖಾತೆಗಳ ಬಗ್ಗೆ ವಾಟ್ಸಾಪ್‌ಗೆ ನೋಟಿಸ್ ಕಳುಹಿಸುವುದಾಗಿ ಹೇಳಿದೆ.

Whatsapp: 74 ಲಕ್ಷಕ್ಕೂ ಹೆಚ್ಚು ಭಾರತೀಯ ಅಕೌಂಟ್‌ ಬ್ಯಾನ್‌! ಕಾರಣ ಏನು?

ವಾಟ್ಸಾಪ್‌ ಅಕೌಂಟ್‌ಗಳನ್ನು ಬ್ಯಾನ್‌ ಮಾಡಲು ಕಾರಣಗಳೇನು? 2021ರ ಹೊಸ ಐಟಿ ನಿಯಮಗಳ ಅನ್ವಯ ಈ ಖಾತೆಗಳನ್ನು ನಿಷೇದಿಸಲಾಗಿದೆ. ವಾಟ್ಸಾಪ್‌ ಬಳಕೆದಾರರ ಕುಂದುಕೊರತೆಗಳ ದೂರುಗಳ ಆಧಾರದಲ್ಲಿ ವಾಟ್ಸಾಪ್‌ ಈ ಕ್ರಮಗಳನ್ನು ತೆಗೆದುಕೊಳ್ಳುವುದು ಕಡ್ಡಾಯವಾಗಿದೆ. ಅದರಂತೆ ಭಾರತದ ದುರುದ್ದೇಶಪೂರಿತ ಅಕೌಂಟ್‌ಗಳನ್ನು ಪ್ರತಿ ತಿಂಗಳು ಬ್ಯಾನ್‌ ಮಾಡುತ್ತಾ ಬಂದಿದೆ.

ಇನ್ನು ಇತ್ತೀಚಿಗೆ ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಸ್ಕ್ರೀನ್‌ ಶೇರಿಂಗ್‌ ಆಯ್ಕೆಯನ್ನು ಪರಿಚಯಿಸಲು ಮುಂದಾಗಿದೆ. ವಾಟ್ಸಾಪ್‌ನ ಅಪ್‌ಡೇಟ್‌ಗಳನ್ನು ಟ್ರ್ಯಾಕ್ ಮಾಡುವ WABetaInfo ವೆಬ್‌ಸೈಟ್ ಈ ವಿಚಾರವನ್ನು ಬಹಿರಂಗಪಡಿಸಿದೆ. ಅದರಂತೆ ಈ ಆಯ್ಕೆಯು ಆಂಡ್ರಾಯ್ಡ್‌ ಆವೃತ್ತಿ ಸಂಖ್ಯೆ 2.23.11.19 ಗಾಗಿ ವಾಟ್ಸಾಪ್‌ ಬೀಟಾದೊಂದಿಗೆ ಬರುತ್ತದೆ. ಹೀಗಾಗಿ ಪ್ರಸ್ತುತ ಆಂಡ್ರಾಯ್ಡ್‌ ಬೀಟಾ ಪರೀಕ್ಷಕರಿಗೆ ಲಭ್ಯವಿದೆ. ವಿಡಿಯೋ ಕರೆ ಮಾಡಿದಾಗ ಬಳಕೆದಾರರು ವಾಟ್ಸಾಪ್‌ ಸ್ಕ್ರೀನ್‌ ಅನ್ನು ಶೇರ್ ಮಾಡಬಹುದಾದ ಆಯ್ಕೆ ಕಾಣಿಸಿಕೊಳ್ಳಲಿದೆ.

ಈ ವೆಬ್‌ಸೈಟ್‌ ಪ್ರಕಾರ, ಬಳಕೆದಾರರು ಕರೆ ನಿಯಂತ್ರಣ ವೀಕ್ಷಣೆಯಲ್ಲಿ ಹೊಸ ಐಕಾನ್ ಅನ್ನು ಕಾಣುತ್ತಾರೆ. ಅದನ್ನು ಬಳಸಿಕೊಂಡು ಅವರ ಸ್ಕ್ರೀನ್‌ ಅನ್ನು ಶೇರ್‌ ಮಾಡಲು ಅವರನ್ನು ಪ್ರೇರೇಪಿಸಲಾಗುತ್ತದೆ. ಬಳಕೆದಾರರು ತಮ್ಮ ಸ್ಕ್ರೀನ್‌ ಅನ್ನು ಶೇರ್ ಮಾಡಲು ನಿರ್ಧರಿಸಿದಾಗ, ನಂತರ ಅವರ ಸ್ಕ್ರೀನ್‌ ಮೇಲೆ ಪ್ರದರ್ಶಿಸಲಾಗುತ್ತದೆ ರೆಕಾರ್ಡ್ ಮಾಡಲಾಗುತ್ತದೆ ಮತ್ತು ಸ್ವೀಕರಿಸುವವರೊಂದಿಗೆ ಹಂಚಿಕೊಳ್ಳಲಾಗುತ್ತದೆ.

ಈ ಆಯ್ಕೆಯ ಮೇಲೆ ಬಳಕೆದಾರರು ಸಂಪೂರ್ಣ ನಿಯಂತ್ರಣವನ್ನು ಹೊಂದಿರುತ್ತಾರೆ ಎಂದು ವರದಿಯು ಸೇರಿಸುತ್ತದೆ. ವೀಡಿಯೊ ಕರೆ ಸಮಯದಲ್ಲಿ ಅವರ ಸ್ಕ್ರೀನ್‌ ಕಂಟೆಂಟ್‌ನ ನಿರಂತರ ಪ್ರಸಾರದ ಹೊರತಾಗಿಯೂ, ಅವರು ಯಾವುದೇ ಸಮಯದಲ್ಲಿ ಪ್ರಕ್ರಿಯೆಯನ್ನು ನಿಲ್ಲಿಸಬಹುದು. ಹೆಚ್ಚುವರಿಯಾಗಿ, ನಿಮ್ಮ ಸ್ಕ್ರೀನ್‌ ಕಂಟೆಂಟ್‌ ಅನ್ನು ಹಂಚಿಕೊಳ್ಳಲು ನಿಮ್ಮ ಸಮ್ಮತಿಯನ್ನು ನೀಡಿದರೆ ಮಾತ್ರ ಈ ಆಯ್ಕೆಯನ್ನು ಸಕ್ರಿಯಗೊಳಿಸಲಾಗುತ್ತದೆ.

Best Mobiles in India

English summary
WhatsApp banned more than 70 lakh accounts in India: Details here
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+