ವಾಟ್ಸಪ್ ಆಂಡ್ರಾಯ್ಡ್ ಬೀಟಾ ಆಪ್ ಸೇರಿದ 'ಡಾರ್ಕ್ ಥೀಮ್' ಫೀಚರ್!
ವಿಶ್ವದಲ್ಲಿಯೇ ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿರುವ ವಾಟ್ಸಪ್ ಅಪ್ಲಿಕೇಶನ್ ನಿನ್ನೆ(ನವಂಬರ್ 1) ಆಂಡ್ರಾಯ್ಡ್ ಓಎಸ್ ಬಳಕೆದಾರರಿಗೆ 'ಫಿಂಗರ್‌ಪ್ರಿಂಟ್ ಲಾಕ್' ಫೀಚರ್ ಅನ್ನು ಅಧಿಕೃತವಾಗಿ ಪರಿಚಯಿಸಿದೆ. ಅದರ ಬೆನ್ನಲೇ ಸಂಸ್ಥೆಯು ಬಹುನಿರೀಕ್ಷತ 'ಡಾರ್ಕ್ ಥೀಮ್' ಫೀಚರ್ ಅನ್ನು ಇದೀಗ ಬಿಡುಗಡೆ ಮಾಡಿದ್ದು, ಆಂಡ್ರಾಯ್ಡ್ ಬೀಟಾ ಓಎಸ್ ಬಳಕೆದಾರರಿಗೆ ಖುಷಿ ಎನಿಸಿದೆ.

ಹೌದು, ಫೇಸ್‌ಬುಕ್ ಮಾಲೀಕತ್ವದ ವಾಟ್ಸಪ್ ಅಪ್ಲಿಕೇಶನ್ ಇದೀಗ 'ಡಾರ್ಕ್ ಥೀಮ್' ಫೀಚರ್ ಅನ್ನು ಆಂಡ್ರಾಯ್ಡ್ ಬೀಟಾ (Android beta-2.19.311) ವರ್ಷನನಲ್ಲಿ ಪರಿಚಯಿಸಿದೆ. ವಾಟ್ಸಪ್ ಆಂಡ್ರಾಯ್ಡ್ ಬೀಟಾ ವರ್ಷನ್‌ನಲ್ಲಿ ಹೊಸ ಡಾರ್ಕ್ ಥೀಮ್ ಫೀಚರ್ ಪ್ರಾಯೋಗಿಕ ಬಳಕೆಯ ನಂತರ, ಸಂಸ್ಥೆಯು ಅಧಿಕೃತವಾಗಿ ಆಂಡ್ರಾಯ್ಡ್ ಆಧಾರಿತ ವಾಟ್ಸಪ್ ಬೀಟಾ ಆಪ್ ಬಳಕೆದಾರರಿಗೆ ಡಾರ್ಕ್ ಮೋಡ್ ಫೀಚರ್ ಮುಕ್ತಗೊಳಿಸಲಿದೆ.

ಡಾರ್ಕ್ ಥೀಮ್ ಫೀಚರ್ ಪರಿಚಯಿಸುವುದರ ಬಗ್ಗೆ ಈ ಹಿಂದೆಯು ವಾಟ್ಸಪ್ ಸೂಚನೆ ನೀಡಿತ್ತು. ಈಗ ಪ್ರಾಯೋಗಿಕವಾಗಿ 'ಡಾರ್ಕ್ ಥೀಮ್' ಫೀಚರ್ ಬಿಡುಗಡೆ ಮಾಡಿದೆ. ಈಗಾಗಲೇ ಫೇಸ್‌ಬುಕ್ ತನ್ನ 'ಮೆಸೆಂಜರ್' ಆಪ್‌ನಲ್ಲಿ ಡಾರ್ಕ್ ಮೋಡ್ ಫೀಚರ್ಸ್ ಅನ್ನು ಪರಿಚಯಿಸಿದ್ದು, ಅದೇ ರೀತಿ ವಾಟ್ಸಪ್‌ನಲ್ಲಿಯೂ 'ಡಾರ್ಕ್ ಥೀಮ್' ಫೀಚರ್ಅಧಿಕೃತವಾಗಿ ಸೇರಿಸಲಿದೆ. ಈ ಫೀಚರ್ ರಾತ್ರಿ ವೇಳೆ ಬೆಳಕಿನ ಪ್ರಖರತೆ ತಗ್ಗಿಸಲಿದೆ.

ಆಂಡ್ರಾಯ್ಡ್ ಮಾದರಿಯ ವಾಟ್ಸಪ್‌ನಲ್ಲಿ ಹೊಸದಾಗಿ 'ಡಾರ್ಕ್ ಥೀಮ್' ಆಯ್ಕೆ ಸೇರಿಕೊಳ್ಳಲಿದ್ದು, ವಾಟ್ಸಪ್ ಬ್ಯಾಕ್‌ಗ್ರೌಂಡ್ ಕಪ್ಪು ಬಣ್ಣದಲ್ಲಿ ಕಾಣಿಸಿಕೊಳ್ಳಲಿದೆ. ಈ ಸೌಲಭ್ಯವು ರಾತ್ರಿ ವೇಳೆಯಲ್ಲಿ ವಾಟ್ಸಪ್ ಬಳಕೆ ಮಾಡುವಾಗ ಸ್ಮಾರ್ಟ್‌ಫೋನ್ ಡಿಸ್‌ಪ್ಲೇಯ ಪ್ರಖರತೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ಬಳಕೆದಾರರ ಕಣ್ಣಿಗೆ ಹೆಚ್ಚಿನ ಬೆಳಕು ಬೀಳುವುದಿಲ್ಲ. ಬಳಕೆದಾರರಿಗೆ ಹಿತಕರ ಅನುಭವ ನೀಡಲಿದೆ.

ಡಾರ್ಕ್ ಥೀಮ್ ಫೀಚರ್ ಬಳಕೆದಾರರ ಕಣ್ಣಿಗೆ ಹಿತಕರ ಎನಿಸುವುದರ ಜೊತೆಗೆ ಸ್ಮಾರ್ಟ್‌ಫೋನ್ ಬ್ಯಾಟರಿ ಉಳಿಕೆಗೂ ಉಪಯುಕ್ತ ಆಗಲಿದೆ. ಡಾರ್ಕ್ ಥೀಮ್ ಮೋಡ್‌ನಲ್ಲಿ ಸ್ಮಾರ್ಟ್‌ಫೋನ್ ಬ್ರೈಟ್‌ನೆಸ್ ಕಡಿಮೆ ಆಗುವುದರಿಂದ ಬ್ಯಾಟರಿ ಉಳಿಕೆಗೆ ನೆರವಾಗಲಿದೆ ಎನ್ನಬಹುದು. ಈಗಾಗಲೇ ಫೇಸ್‌ಬುಕ್, ಫೇಸ್‌ಬುಕ್ ಮೆಸೆಂಜರ್, ಯೂಟ್ಯೂಬ್ ಮತ್ತು ಟ್ವಿಟ್ಟರ್ ತಾಣಗಳು ಡಾರ್ಕ್‌ಮೋಡ್ ಆಯ್ಕೆಯನ್ನು ಅಳವಡಿಸಿಕೊಂಡಿದೆ. ಹಾಗೆಯೇ ಸದ್ಯದಲ್ಲಿಯೇ ಡಾರ್ಕ್ ಥೀಮ್ ಫೀಚರ್ ವಾಟ್ಸಪ್ ಸೇರಿಕೊಳ್ಳಲಿದೆ.


Click it and Unblock the Notifications








