ಎರಡು ವಾಟ್ಸಾಪ್ ಖಾತೆ ಬಳಕೆ ಮಾಡೋರಿಗೆ ಶೀಘ್ರದಲ್ಲೇ ಗುಡ್‌ನ್ಯೂಸ್!
ಮೆಟಾ ಮಾಲೀಕತ್ವದ ವಾಟ್ಸಾಪ್ ಜನಪ್ರಿಯ ಚಾಟಿಂಗ್ ಆಪ್ ಆಗಿ ಗುರುತಿಸಿಕೊಂಡಿದೆ. ವಾಟ್ಸಾಪ್ ತನ್ನ ಬಳಕೆದಾರರಿಗೆ ಈಗಾಗಲೇ ಹಲವು ಅನುಕೂಲಕರ ಆಯ್ಕೆಗಳನ್ನು ಲಭ್ಯ ಮಾಡಿದೆ. ಇತ್ತೀಚಿಗೆ ಸಂಸ್ಥೆಯು ಆಂಡ್ರಾಯ್ಡ್ ಬಳಕೆದಾರರಿಗೆ ನೂತನ ಚಾಟ್ ಲಾಕ್ ಆಯ್ಕೆ ಹಾಗೂ ಸ್ಟೇಟಸ್ ಅಪ್‌ಡೇಟ್ ಪರಿಚಯಿಸಿದೆ. ಈಗ ಎರಡು ವಾಟ್ಸಾಪ್ ಖಾತೆ ಬಳಕೆ ಮಾಡೋರಿಗೆ ಗುಡ್‌ನ್ಯೂಸ್ ನೀಡಿದೆ.
ಹೌದು, ಹೆಚ್ಚು ಸಕ್ರಿಯ ಬಳಕೆದಾರರನ್ನು ಒಳಗೊಂಡಿರುವ ವಾಟ್ಸಾಪ್ ಆಪ್ ತನ್ನ ನೂತನ ಚಾಟ್ ಲಾಕ್ ಫೀಚರ್ ಅನ್ನು ಬಳಕೆದಾರರು ಲಿಂಕ್ ಮಾಡಲಾದ ಇತರೆ ಡಿವೈಸ್‌ಗಳಿಗೂ ವಿಸ್ತರಿಸಲಿದೆ. ಬಳಕೆದಾರರು ಎರಡು ಡಿವೈಸ್‌ಗಳಲ್ಲಿ ವಾಟ್ಸಾಪ್ ಬಳಕೆ ಮಾಡುತ್ತಿದ್ದರೆ, ಆ ಎರಡು ಡಿವೈಸ್‌ಗಳಲ್ಲಿಯೂ ಚಾಟ್ ಲಾಕ್ ಆಯ್ಕೆ ಕೆಲಸ ಮಾಡಲಿದೆ. ಈ ಮೊದಲ ಕೇವಲ ಒಂದು ಡಿವೈಸ್‌ನಲ್ಲಿ ಮಾತ್ರ ಚಾಟ್ ಲಾಕ್ ಕೆಲಸ ಮಾಡುತ್ತಿತ್ತು.

ಚಾಟ್ ಲಾಕ್ ಆಯ್ಕೆ ಬಳಕೆದಾರರಿಗೆ ಒಂದು ಡಿವೈಸ್‌ನಲ್ಲಿ ಮಾತ್ರ ಲಾಕ್ ಆಗಲಿದೆ. ಆದರೆ ಬಳಕೆದಾರರು ಲಿಂಕ್ ಮಾಡಿರುವ ಇನ್ನೊಂದು ಡಿವೈಸ್‌ನಲ್ಲಿ ಖಾಸಗಿ ಚಾಟ್ ನೋಡಬಹುದು. ಇದನ್ನು ಸರಿಪಡಿಸಲು ವಾಟ್ಸಾಪ್ ಕಾರ್ಯೋನ್ಮುಖ ಆಗಿದ್ದು, ಶೀಘ್ರದಲ್ಲೇ ಲಿಂಕ್ ಮಾಡಲಾದ ಎಲ್ಲ ಡಿವೈಸ್‌ಗಳಿಗೂ ಚಾಟ್ ಲಾಕ್ ಸೌಲಭ್ಯ ವಿಸ್ತರಿಸಲಿದೆ.
ಹೀಗಾಗಿ ಇನ್ನುಂದೆ ಒಂದು ಡಿವೈಸ್‌ನಲ್ಲಿ ಚಾಟ್ ಲಾಕ್ ಸಕ್ರಿಯ ಮಾಡಿದರೆ, ಲಿಂಕ್ ಆದ ಇತರೆ ಡಿವೈಸ್‌ಗಳಲ್ಲಿಯೂ ವಾಟ್ಸಾಪ್ ಚಾಟ್ ಲಾಕ್ ಕೆಲಸ ಮಾಡಲಿದೆ. ಈ ಸೌಲಭ್ಯವು ಬಳಕೆದಾರರಿಗೆ ಬಹು ಉಪಯುಕ್ತ ಎನಿಸಲಿದೆ.

ಲಿಂಕ್ ಮಾಡಿದ ಡಿವೈಸ್‌ಗಳಲ್ಲಿ ಚಾಟ್ ಲಾಕ್ ಸೆಟ್ ಮಾಡಲು ಹೀಗೆ ಮಾಡಿ
ಹಂತ 1 : ಮೊದಲಿಗೆ ನಿಮ್ಮ ಫೋನಿನಲ್ಲಿ ವಾಟ್ಸಾಪ್ ಖಾತೆಯನ್ನು ತೆರೆಯಿರಿ
ಹಂತ 2 : ಬಳಿಕ ಮೇಲ್ಭಾಗದಲ್ಲಿ ಕಾಣುವ ಲಾಕ್ಡ್ ಚಾಟ್ಸ್ ಆಯ್ಕೆ ಅನ್ನು ಸೆಲೆಕ್ಟ್ ಮಾಡಿರಿ.
ಹಂತ 3 : ಆ ನಂತರ ಸೆಟ್ಟಿಂಗ್ಸ್ ಆಯ್ಕೆ ಅನ್ನು ಕ್ಲಿಕ್ ಮಾಡಿ.
ಹಂತ 4 : ತದ ನಂತರ ಸೀಕ್ರೆಟ್ ಕೋಡ್ ಆಯ್ಕೆ ಮೇಲೆ ಕ್ಲಿಕ್ ಮಾಡಿ.
ಹಂತ 5 : ಆ ಬಳಿಕ ನೀವು ಬಯಸಿದ ಸೀಕ್ರೆಟ್ ಕೋಡ್ ಅನ್ನು ಎಂಟ್ರಿ ಮಾಡಿ ಮತ್ತು ಕೋಡ್ ಅನ್ನು ದೃಢೀಕರಿಸಿ.
ಹಂತ 6 : ಈಗ ಸೀಕ್ರೆಟ್ ಕೋಡ್ ಅನ್ನು ಸೆಟ್ ಮಾಡಲಾಗಿರುತ್ತದೆ. ಲಿಂಕ್ ಮಾಡಲಾದ ಡಿವೈಸ್‌ಗಳಲ್ಲಿ ಲಾಕ್ ಮಾಡಿದ ಚಾಟ್‌ಗಳಿಗೆ ಎಂಟ್ರಿ ಕೊಡಲು ಈ ಕೋಡ್ ಅನ್ನು ಬಳಕೆ ಮಾಡಬಹುದು.
ಇತ್ತೀಚಿನ ಕೆಲವು ತಿಂಗಳ ಹಿಂದೆ ವಾಟ್ಸಾಪ್‌ನಲ್ಲಿ ಕೆಲವು ಹೊಸ ಫೀಚರ್ಸ್‌ಗಳು ಸೇರಿದ್ದು, ಬಳಕೆದಾರರಿಗೆ ನೆರವಾಗಿವೆ. ಅವು ಗಳಲ್ಲಿ ಹೆಚ್‌ಡಿ ಫೋಟೋ ಕಳುಹಿಸುವ ಆಯ್ಕೆ ಸಹ ಉತ್ತಮ ಎನಿಸಿದೆ. ಈ ಆಯ್ಕೆ ಮೂಲಕ ಬಳಕೆದಾರರು ವಾಟ್ಸಾಪ್ ಆಪ್‌ನಲ್ಲಿ ಹೆಚ್‌ಡಿ ಗುಣಮಟ್ಟದಲ್ಲಿ ಫೋಟೋಗಳನ್ನು ಕಳುಹಿಸಲು ಅವಕಾಶ ದೊರೆತಿದೆ.
ಹಾಗೆಯೇ ಎಡಿಟ್ ಮೆಸೆಜ್ ಆಯ್ಕೆಯು ಗಮನ ಸೆಳೆದಿದ್ದು, ಇದು ಸಹ ಅನುಕೂಲಕರ ಆಯ್ಕೆ ಎನಿಸಿದೆ. ಒಂದು ವೇಳೆ ಬಳಕೆದಾರರು ತಪ್ಪಾಗಿ ಮೆಸೆಜ್ ಕಳುಹಿಸಿದ್ದರೆ, ಈ ಆಯ್ಕೆ ಮೂಲಕ ಅದನ್ನು ಎಡಿಟ್ ಮಾಡಿ ಸರಿಪಡಿಸಬಹುದಾಗಿದೆ. ಇನ್ನು ಮೆಸೆಜ್ ಕಳುಹಿಸಿದ ಮೊದಲ 15 ನಿಮಿಷದಲ್ಲಿ ಮಾತ್ರ ಮೆಸೆಜ್ ಎಡಿಟ್ ಮಾಡಲು ಸಾಧ್ಯ ಆಗುತ್ತದೆ. ಇನ್ನು ಎಡಿಟ್ ಮಾಡಿದ ಮೆಸೆಜ್ ಕೆಳಭಾಗದಲ್ಲಿ ಎಡಿಟ್ ಮಾಡಲಾಗಿದೆ ಎಂಬ ಟ್ಯಾಗ್ ಕಾಣಬಹುದು.


Click it and Unblock the Notifications








