ಕೊನೆಗೂ ವಾಟ್ಸಪ್‌ನಲ್ಲಿ ಡಾರ್ಕ್‌ ಮೋಡ್ ಫೀಚರ್ ಬಂತು!

|

ವಾಟ್ಸಪ್ ಬಳಕೆದಾರರು ಬಹುನಿರೀಕ್ಷೆಯಿಂದ ಕಾಯುತ್ತಿದ್ದ 'ಡಾರ್ಕ್‌ಮೋಡ್' ಫೀಚರ್ಸ್‌ ಇದೀಗ ವಾಟ್ಸಪ್ ಬೀಟಾ ಆವೃತ್ತಿ ಸೇರಿಕೊಂಡಿದೆ. ಹಲವು ತಿಂಗಳಿಂದ ಡಾರ್ಕ್ ಮೋಡ್ ಫೀಚರ್ಸ್‌ ಅಳವಡಿಸುವ ಮಾತುಗಳನ್ನು ಹೇಳುತ್ತಾ ಬಂದಿದ್ದ ವಾಟ್ಸಪ್ ಕೊನೆಗೂ ಡಾರ್ಕ್‌ಮೋಡ್ ಫೀಚರ್ಸ್ ಅಪ್‌ಡೇಟ್ ವರ್ಷನ್‌ನಲ್ಲಿ ಸೇರಿಸಿ ಆಂಡ್ರಾಯ್ಡ್ ಬಳಕೆದಾರರಿಗೆ ಖುಷಿ ತಂದಿದೆ . ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಈ ಫೀಚರ್ಸ್‌ ಇನ್ನು ಲಭ್ಯ.

ಹೌದು, ಫೇಸ್‌ಬುಕ್ ಮಾಲೀಕತ್ವದ ವಾಟ್ಸಪ್ ಡಾರ್ಕ್‌ಮೋಡ್ ಫೀಚರ್ಸ್‌ ಅನ್ನು ಹೊಸ 2.20.13 ಅಪ್‌ಡೇಟ್ ಆವೃತ್ತಿಯಲ್ಲಿ ಸೇರ್ಪಡೆ ಮಾಡಿದೆ. ಸದ್ಯ ಈ ಫೀಚರ್ಸ್‌ ಆಂಡ್ರಾಯ್ಡ್ ಬೀಟಾ ವರ್ಷನ್ ಬಳಕೆದಾರರಿಗೆ ಲಭ್ಯವಿದೆ. ಪ್ರಸ್ತುತ ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಮೆಸೆಂಜರ್ ಸೇರಿದಂತೆ ಹಲವು ಆಪ್‌ಗಳು ಡಾರ್ಕ್‌ಮೋಡ್ ಫೀಚರ್ಸ್‌ ಅನ್ನು ಹೊಂದಿವೆ. ಆ ಲಿಸ್ಟಿಗೆ ಈಗ ವಾಟ್ಸಪ್ ಸಹ ಸೇರಿಕೊಂಡಿದೆ. ಹಾಗಾದರೆ ವಾಟ್ಸಪ್‌ನಲ್ಲಿ ಡಾರ್ಕ್‌ಮೋಡ್ ಫೀಚರ್ಸ್ ಬಳಕೆ ಹೇಗೆ ಮತ್ತು ಡಾರ್ಕ್‌ಮೋಡ್ ಅಗತ್ಯವೆನು ಎನ್ನುವ ಬಗ್ಗೆ ಮುಂದೆ ತಿಳಿಯೋಣ.

ಆಂಡ್ರಾಯ್ಡ್‌ ಬೀಟಾ ಆವೃತ್ತಿ

ಆಂಡ್ರಾಯ್ಡ್‌ ಬೀಟಾ ಆವೃತ್ತಿ

ಆಂಡ್ರಾಯ್ಡ್ ಬೀಟಾ ಆವೃತ್ತಿ ಹೊಂದಿಲ್ಲದ ಬಳಕೆದಾರರು, ಗೂಗಲ್ ಪ್ಲೇ ಸ್ಟೋರ್‌ನಲ್ಲಿ ವಾಟ್ಸಪ್ ಬೀಟಾ ಆವೃತ್ತಿಗೆ ಅಪ್‌ಡೇಟ್(enroll) ಮಾಡಿಕೊಳ್ಳುವುದು. ಹಾಗೆಯೇ ವಾಟ್ಸಪ್‌ ಅನ್ನು ಅಪ್‌ಡೇಟ್ ಮಾಡಿಕೊಳ್ಳಿ. ಬೀಟಾ ಆವೃತ್ತಿಗೆ ಅಪ್‌ಡೇಟ್ ಆದ ಬಳಿಕ ವಾಟ್ಸಪ್‌ ಸೆಟ್ಟಿಂಗ್‌ನಲ್ಲಿ ಸುಲಭವಾಗಿ ಡಾರ್ಕ್‌ಮೋಡ್ ಫೀಚರ್ಸ್‌ ಸಕ್ರಿಯ ಮಾಡಿಕೊಳ್ಳಬಹುದು.

ಡಾರ್ಕ್‌ಮೋಡ್ ಆನ್ ಮಾಡುವುದು ಹೇಗೆ

ಡಾರ್ಕ್‌ಮೋಡ್ ಆನ್ ಮಾಡುವುದು ಹೇಗೆ

* ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ವಾಟ್ಸಪ್ ಆಪ್ ತೆರೆಯಿರಿ.
* ಮೆನು(ಮೂರು ಡಾಟ್) ಸೆಟ್ಟಿಂಗ್ ಕ್ಲಿಕ್ ಮಾಡಿರಿ.
* ನಂತರ ಚಾಟ್ಸ್‌(chats) ಆಯ್ಕೆ ಸೆಲೆಕ್ಟ್ ಮಾಡಿರಿ.
* ಚಾಟ್ಸ್ ಆಯ್ಕೆ ತೆರೆದಾಗ (Theme) 'ಥೀಮ್' ಆಯ್ಕೆ ಕಾಣಿಸುತ್ತದೆ.
* ಥೀಮ್ ಆಯ್ಕೆಯಲ್ಲಿ- ಸೆಟ್‌ ಬೈ ಬ್ಯಾಟರಿ ಸೇವರ್,, ಲೈಟ್ ಮತ್ತು ಡಾರ್ಕ್ ಆಯ್ಕೆಗಳು ಕಾಣಿಸುತ್ತವೆ.
* ಅವುಗಳಲ್ಲಿ ಡಾರ್ಕ್ ಆಯ್ಕೆ ಸೆಲೆಕ್ಟ್ ಮಾಡಿರಿ.

ಡಾರ್ಕ್‌ಮೋಡ್ ಪ್ರಯೋಜನ

ಡಾರ್ಕ್‌ಮೋಡ್ ಪ್ರಯೋಜನ

ವಾಟ್ಸಪ್ ಬಳಕೆದಾರರು ಡಾರ್ಕ್‌ಮೋಡ್ ಆಯ್ಕೆ ಆನ್ ಮಾಡಿದಾಗ ಕಪ್ಪು ಬಣ್ಣಕ್ಕೆ ತಿರುಗುತ್ತದೆ. ವಾಟ್ಸಪ್‌ ಚಾಟ್, ಸ್ಟೇಟಸ್‌, ಫೀಡ್ ಮತ್ತು ಸೆಟ್ಟಿಂಗ್ ಆಯ್ಕೆಗಳು ಸಹ ಕಪ್ಪು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತವೆ. ಡಾರ್ಕ್‌ಮೋಡ್‌ ಆಯ್ಕೆ ಸಕ್ರಿಯದಿಂದ ಫೋನಿನ ಡಿಸ್‌ಪ್ಲೇಯ ಪ್ರಖರತೆ ಕಡಿಮೆ ಆಗುತ್ತದೆ ಇದರಿಂದ ಕಣ್ಣಿಗೂ ಉತ್ತಮ ಹಾಗೂ ಬ್ಯಾಟರಿ ಉಳಿಕೆಗೂ ನೆರವಾಗಲಿದೆ.

Best Mobiles in India

English summary
WhatsApp Dark Mode: WhatsApp Dark Mode is finally here. Here’s how Android users can start using the new theme right away.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X