ಇನ್ನು ಕೆಲವೇ ದಿನಗಳಲ್ಲಿ ವಾಟ್ಸಾಪ್ ಸೇರಲಿದೆ ಈ ಆಕರ್ಷಕ ಫೀಚರ್!
ಮೆಟಾ ಮಾಲೀಕತ್ವದ ಇನ್‌ಸ್ಟಂಟ್ ಮೆಸೆಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್ ಈಗಾಗಲೇ ಹಲವು ಅನುಕೂಲಕರ ಆಯ್ಕೆಗಳ ಮೂಲಕ ಬಳಕೆದಾರರಿಗೆ ಹತ್ತಿರವಾಗಿದೆ. ವಾಟ್ಸಾಪ್ ಸಂಸ್ಥೆಯು ತನ್ನ ಹೊಸ ಅಪ್‌ಡೇಟ್‌ಗಳಲ್ಲಿ ಫೀಚರ್ಸ್ ನೀಡುತ್ತಾ ಜನಪ್ರಿಯತೆ ಹೆಚ್ಚಿಸಿಕೊಳ್ಳತ್ತ ಮುನ್ನಡೆದಿದೆ. ಅದೇ ಹಾದಿಯಲ್ಲಿ ಸಾಗಿರುವ ವಾಟ್ಸಾಪ್ ಬಳಕೆದಾರರ ಕುತೂಹಲ ಹೆಚ್ಚಿಸುವಂತಹ ಮತ್ತೊಂದು ಹೊಸ ಫೀಚರ್ ಲಾಂಚ್‌ಗೆ ತಯಾರಿ ನಡೆಸಿದೆ.
ಹೌದು, ವಾಟ್ಸಾಪ್ (WhatsApp) ಸಂಸ್ಥೆಯು ಈಗ ಇತ್ತೀಚೆಗೆ ಆನ್‌ಲೈನ್ ಇದ್ದ ಕಾಟ್ಯಾಕ್ಟ್‌ಗಳನ್ನು ಲಿಸ್ಟ್ ರೂಪದಲ್ಲಿ ಕಾಣಿಸುವ ಹೊಸ ಫೀಚರ್ ಅಭಿವೃದ್ಧಿಪಡಿಸುತ್ತಿದೆ ಎಂದು WA Beta Info ವರದಿ ಮಾಡಿದೆ. ಈ ಬಗ್ಗೆ ಪೋರ್ಟಲ್ ಶೇರ್ ಮಾಡಿರುವ ಸ್ಕ್ರೀನ್‌ಶಾಟ್ ಇತ್ತೀಚೆಗೆ ವಾಟ್ಸಾಪ್ ಪ್ಲಾಟ್‌ಫಾರ್ಮ್ ನಲ್ಲಿ ಸಕ್ರಿಯವಾಗಿರುವ ಕಾಟ್ಯಾಕ್ಟ್‌ಗಳ ಲಿಸ್ಟ್ ತೋರಿಸುತ್ತದೆ.

ಜನಪ್ರಿಯ ಮೆಸೆಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಾಪ್‌ನಲ್ಲಿ ಬರಲಿರುವ ಈ ಫೀಚರ್ ಇತ್ತೀಚೆಗೆ ಯಾರು ಆಕ್ಟಿವ್ ಆಗಿ ಇದ್ದರು ಎಂದು ತಿಳಿಯಲು ನೆರವಾಗಲಿದೆ. ಅಲ್ಲದೇ ಬಳಕೆದಾರರ ಮೆಸೆಜ್‌ಗಳಿಗೆ ಉತ್ತರಿಸಲು ಅಥವಾ ವಾಯಿಸ್ ಅಥವಾ ವಿಡಿಯೋ ಕರೆಗಳನ್ನು ಸ್ವೀಕರಿಸುವ ಸಾಧ್ಯತೆಯನ್ನು ಚೆಕ್ ಮಾಡಲು ಬಯಸಿದರೆ ಈ ಫೀಚರ್ ಉಪಯುಕ್ತವಾಗಿದೆ ಎಂದು ಹೇಳಲಾಗುತ್ತಿದೆ.
ಈ ಫೀಚರ್ ಪ್ರತಿ ಕಾಟ್ಯಾಕ್ಟ್‌ನ ಚಟುವಟಿಕೆಯ ಸ್ಟೇಟಸ್ ಅನ್ನು ಪ್ರತ್ಯೇಕವಾಗಿ ಪರಿಶೀಲಿಸುವ ಅಗತ್ಯವನ್ನು ತೆಗೆದುಹಾಕುವ ಮೂಲಕ ಬಳಕೆದಾರರ ಮೆಸಜ್ ಅನುಭವವನ್ನು ಹೆಚ್ಚಿಸಲು ನೆರವಾಗಬಹುದು. ಸಬಳಕೆದಾರರ ಗೌಪ್ಯತೆಯನ್ನು ಗಮನದಲ್ಲಿಟ್ಟುಕೊಂಡು, WA ಬೀಟಾ ಮಾಹಿತಿ ವರದಿಯು ಫೀಚರ್ ಈ ಪಟ್ಟಿಗಳಲ್ಲಿ ಬಳಕೆದಾರರ ಲಾಸ್ಟ್ ಸೀನ್ (last seen) ಮತ್ತು ಆನ್‌ಲೈನ್ ಸ್ಟೇಟಸ್ (online status) ಅನ್ನು ತೋರಿಸುವುದಿಲ್ಲ ಎಂದು ವರದಿಯಾಗಿದೆ.
ಇನ್ನು ವಾಟ್ಸಾಪ್‌ನ ಈ ಹೊಸ ಫೀಚರ್ ಗೂಗಲ್ ಪ್ಲೇ ಸ್ಟೋರ್ ಮೂಲಕ ಆಂಡ್ರಾಯ್ಡ್ ಆವೃತ್ತಿಗಾಗಿ ವಾಟ್ಸಾಪ್ ಬೀಟಾದ ಇತ್ತೀಚಿನ ಆವೃತ್ತಿಗೆ ನವೀಕರಿಸಿದ ಬೀಟಾ ಆವೃತ್ತಿಯ ಆಯ್ದ ಗುಂಪಿಗೆ ಹೊಸ ಫೀಚರ್ ಅನ್ನು ಪ್ರವೇಶಿಸಬಹುದಾಗಿದೆ. ಅಂದಹಾಗೆ ಇನ್ನು ಮುಂಬರುವ ವಾರಗಳಲ್ಲಿ ಇದು ಮತ್ತಷ್ಟು ಬಳಕೆದಾರರಿಗೆ ಲಭ್ಯವಾಗುವ ಸಾಧ್ಯತೆಗಳು ಇವೆ.
ಹಾಗೆಯೇ ವಾಟ್ಸಾಪ್ ಹಲವು ಜನಪ್ರಿಯ ಫೀಚರ್ಸ್‌ಗಳನ್ನು ಒಳಗೊಂಡಿದ್ದು, ಅವುಗಳ ಪೈಕಿ ಎಡಿಟ್ ಮೆಸೆಜ್ ಫೀಚರ್ ಬಳಕೆದಾರರ ಗಮನ ಸೆಳದಿದೆ. ಇದು ಕಳುಹಿಸಿದ ಮೆಸೆಜ್ ಅನ್ನು ಎಡಿಟ್ ಮಾಡಲು ಅನುಕೂಲ ಮಾಡಿಕೊಡುತ್ತದೆ. ಒಂದು ವೇಳೆ ಬಳಕೆದಾರರು ತಪ್ಪಾಗಿ ಮೆಸೆಜ್ ಕಳುಹಿಸಿದ್ದರೆ, ಎಡಿಟ್ ಆಯ್ಕೆ ಮೂಲಕ ಅದನ್ನು ಸರಿಪಡಿಸಬಹುದಾಗಿದೆ.
ಹಾಗೆಯೇ ವಾಟ್ಸಾಪ್‌ನ ಇತ್ತೀಚಿಗಿನ ಚಾಟ್ ಲಾಕ್ ಫೀಚರ್ ಸಹ ಜನಪ್ರಿಯತೆ ಪಡೆದಿದ್ದು, ಇದು ಬಳಕೆದಾರರು ಪರ್ಸನಲ್ ಚಾಟ್‌ಗಳನ್ನು ಲಾಕ್ ಮಾಡುವ ಅವಕಾಶ ಪಡೆದಿದೆ. ಈ ಆಯ್ಕೆ ಆಕ್ಟಿವ್ ಮಾಡಲು ಬಳಕೆದಾರರು ಚಾಟ್‌ನ ಪ್ರೊಫೈಲ್ ಆಯ್ಕೆಯಲ್ಲಿ ಭೇಟಿ ಬೇಕು, ನಂತರ ಚಾಟ್ ಲಾಕ್ ಫೀಚರ್ಸ್ ಅನ್ನು ಟ್ಯಾಪ್ ಮಾಡಬೇಕಾಗುತ್ತದೆ. ಪ್ರತಿ ಚಾಟ್‌ಗೆ ಇದೇ ಹಂತವನ್ನು ಅನುಸರಿಸಬೇಕು. ಇನ್ನು ಲಾಕ್ ಮಾಡಿದ ಚಾಟ್‌ಗಳನ್ನು ಫೋಲ್ಡರ್‌ಗೆ ಸೇರಿಸಲಾಗುತ್ತದೆ ಹಾಗೂ ಅದು ಸ್ಕ್ರೀನ್ ಮೇಲ್ಭಾಗದಲ್ಲಿ ತೋರಿಸುತ್ತದೆ.
ಇನ್ನು ಸಂಸ್ಥೆಯ ಅಪರಿಚಿತ ನಂಬರ್ ಕರೆ ಮ್ಯೂಟ್ ಮಾಡುವ ಆಯ್ಕೆ ಸಹ ಆಕರ್ಷಕ ಎನಿಸಿದೆ. ಮೊಬೈಲ್‌ಗೆ ಅಪರಿಚಿತ ನಂಬರ್‌ನಿಂದ ಕರೆ ಬಂದರೆ ಬೇಗನೆ ಕರೆ ಸ್ವೀಕಾರ ಮಾಡುವುದು ವಿರಳ. ಅಲ್ಲದೇ ಅನೇಕರು ಅಪರಿಚಿತ ಕರೆಗಳನ್ನು ರೀಸಿವ್ ಮಾಡುವುದು ಕಡಿಮೆ. ಆದರೆ ಗೌಪ್ಯತೆ ಸೆಟ್ಟಿಂಗ್‌ಗಳನ್ನು ಬದಲಾಯಿಸುವ ಮೂಲಕ ಅಪರಿಚಿತ ಕರೆ ಮಾಡುವವರ ಕರೆಗಳನ್ನು ಸೈಲೆಂಟ್/ ಮ್ಯೂಟ್ ಮಾಡಬಹುದಾಗಿದೆ. ಈ ಆಯ್ಕೆ ಮೂಲಕ ಬಳಕೆದಾರರು ಗೌಪ್ಯತೆಯನ್ನು ಕಾಪಾಡುವ ಮತ್ತು ಅನಗತ್ಯ ಕಾಂಟ್ಯಾಕ್ಟ್ ತಡೆಯುವ ಸಂದರ್ಭದಲ್ಲಿ ಉಪಯುಕ್ತ.


Click it and Unblock the Notifications








