Home
ಸುದ್ದಿಜಾಲ

ವಾಟ್ಸಾಪ್‌ನ ಈ ಫೀಚರ್ಸ್‌ನಲ್ಲಿ ಮತ್ತಷ್ಟು ಸೌಲಭ್ಯ! ಶೀಘ್ರದಲ್ಲೇ ಬಳಕೆಗೆ

ವಾಟ್ಸಾಪ್‌ ನಿರಂತರವಾಗಿ ತನ್ನ ಬಳಕೆದಾರರಿಗೆ ವಿವಿಧ ರೀತಿಯ ಫೀಚರ್ಸ್‌ಗಳನ್ನು ಪರಿಚಯಿಸಿಕೊಂಡು ಬರುತ್ತಿದ್ದು, ಅದರಂತೆ ಕೆಲವು ದಿನಗಳ ಹಿಂದೆ ಸ್ಟೇಟಸ್‌ನಲ್ಲಿ ವಾಯ್ಸ್‌ನೋಟ್‌, ಕಳುಹಿಸಿದ ಮೆಸೆಜ್‌ಗಳನ್ನು ಮರು ಸಂಪಾದಿಸುವ ಆಯ್ಕೆ ಸೇರಿದಂತೆ ಹಲವು ಫೀಚರ್ಸ್‌ಗಳ ಬಗ್ಗೆ ಘೋಷಣೆ ಮಾಡಿದೆ. ಹಾಗೆಯೇ ಈಗ ಮತ್ತೊಂದು ಸೌಲಭ್ಯವನ್ನು ಕಲ್ಪಿಸಿಕೊಡಲು ಮುಂದಾಗಿದ್ದು, ಇದರಿಂದ ಬಳಕೆದಾರರಿಗೆ ಸಾಕಷ್ಟು ಅನುಕೂಲ ಆಗಲಿದೆ.

ಹೌದು, ಪ್ರಮುಖ ಮೆಸೆಜಿಂಗ್‌ ಪ್ಲಾಟ್‌ಫಾರ್ಮ್‌ ಆಗಿರುವ ವಾಟ್ಸಾಪ್‌ ಅನ್ನು ಬಹುಪಾಲು ಮಂದಿ ಬಳಕೆ ಮಾಡುತ್ತಿದ್ದು, ಹಲವಾರು ಭದ್ರತಾ ಫೀಚರ್ಸ್‌ಗಳ ಜೊತೆಗೆ ಇತರೆ ಫೀಚರ್ಸ್‌ಗಳನ್ನು ಸಹ ಪರಿಚಯಿಸಲಾಗುತ್ತಿದೆ. ಅಂತೆಯೇ ಈ ಹಿಂದೆ ಇದ್ದ ಫೀಚರ್ಸ್‌ವೊಂದರಲ್ಲೇ ಮತ್ತಷ್ಟು ಸೌಲಭ್ಯ ಕಲ್ಪಿಸಿಕೊಡಲು ವಾಟ್ಸಾಪ್‌ ಮುಂದಾಗಿದ್ದು, ಇದರಿಂದ ಬಳಕೆದಾರರು ಹಲವು ಪ್ರಯೋಜನ ಪಡೆಯಬಹುದು. ಹಾಗಿದ್ರೆ, ಏನಿದು ಹೊಸ ಸೌಲಭ್ಯ ನೋಡೋಣ ಬನ್ನಿ.

ವಾಟ್ಸಾಪ್‌ನ ಈ ಫೀಚರ್ಸ್‌ನಲ್ಲಿ ಮತ್ತಷ್ಟು ಸೌಲಭ್ಯ! ಶೀಘ್ರದಲ್ಲೇ ಬಳಕೆಗೆ

ಅದೃಶ್ಯವಾಗುವ ಫೀಚರ್ಸ್‌ನಲ್ಲಿ ಮತ್ತಷ್ಟು ಅನುಕೂಲ: ವಾಟ್ಸಾಪ್‌ನಲ್ಲಿ ಕೆಲವು ಭದ್ರತಾ ವಿಚಾರಕ್ಕೆ ಸಂಬಂಧಿಸಿದಂತೆ ಹಾಗೂ ಫೋನ್‌ ಸ್ಟೋರೇಜ್‌ ಸಮರ್ಥವಾಗಿ ಕೆಲಸ ಮಾಡುವ ಉದ್ದೇಶಕ್ಕೆ 2020 ರಲ್ಲಿ ಅದೃಶ್ಯವಾಗುವ ಮೆಸೆಜ್‌ ಫೀಚರ್ಸ್‌ ಅನ್ನು ಪರಿಚಯಿಸಿತ್ತು. ಇದು ಯಾವುದೇ ಮೆಸೆಜ್‌ಗಳು ಶಾಶ್ವತವಾಗಿ ಚಾಟ್‌ಬಾಕ್ಸ್‌ ಹಾಗೂ ನಿಮ್ಮ ಮೊಬೈಲ್‌ನಲ್ಲಿ ಇಲ್ಲದಂತೆ ಮಾಡುತ್ತದೆ.

ಇದೇ ಫೀಚರ್ಸ್‌ನಲ್ಲಿ ಈಗ ವಾಟ್ಸಾಪ್ ಹೊಸ ಅವಧಿಯ ಆಯ್ಕೆಗಳೊಂದಿಗೆ ನವೀಕರಿಸಲು ಯೋಜಿಸುತ್ತಿದೆ ಎಂದು ತಿಳಿದುಬಂದಿದೆ. ಈ ಮೂಲಕ ಬಳಕೆದಾರರು ತಮ್ಮ ಮೆಸೆಜ್‌ಗಳ ಮೇಲೆ ಈಗಿರುವುದಕ್ಕಿಂತ ಇನ್ನೂ ಹೆಚ್ಚಿನ ಕಂಟ್ರೋಲ್‌ ಮತ್ತು ನಮ್ಯತೆಯನ್ನು ಹೊಂದಲು ಸಹಾಯ ಇದು ಸಹಾಯ ಮಾಡಲಿದೆ ಎಂದು ತಿಳಿದುಬಂದಿದೆ.

ಇನ್ನು ವಾಟ್ಸಾಪ್‌ನ ಆಗುಹೋಗುಗಳ ಮೇಲೆ ನಿರಂತರವಾಗಿ ಕಣ್ಣಿಟ್ಟಿರುವ WABetaInfo ವಾಟ್ಸಾಪ್‌ ಡೆಸ್ಕ್‌ಟಾಪ್‌ಗಾಗಿ ಇತ್ತೀಚಿನ ಬೀಟಾ ಅಪ್‌ಡೇಟ್‌ನಲ್ಲಿ ಈ ಹೊಸ ಫೀಚರ್ಸ್‌ ಪರಿಚಯಿಸುತ್ತಿದೆ. ಇದು ಅಭಿವೃದ್ಧಿ ಹಂತದಲ್ಲಿಲ್ಲಿದ್ದು, ಮುಂಬರುವ ನವೀಕರಣದೊಂದಿಗೆ ಈ ಫೀಚರ್ಸ್‌ ಬರುವ ನಿರೀಕ್ಷೆಯಿದೆ ಎಂದು ಉಲ್ಲೇಖಿಸಿದೆ. ಹಾಗಿದ್ರೆ ಈ ಅದೃಶ್ಯವಾಗುವ ಫೀಚರ್ಸ್‌ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಗಮನಿಸೋಣ.

ವಾಟ್ಸಾಪ್‌ನ ಅದೃಶ್ಯವಾಗುವ ಮೆಸೆಜ್‌ಗಳ ಫೀಚರ್ಸ್‌ನಲ್ಲಿ ನಿರ್ದಿಷ್ಟ ಅವಧಿಯ ನೀವು ನಂತರ ಗುರುತು ಮಾಡಿದ ಮೆಸೆಜ್‌ಗಳು ಆಟೋಮ್ಯಾಟಿಲ್‌ ಆಗಿ ಡಿಲೀಟ್ ಆಗುತ್ತವೆ. ಹಾಗೆಯೇ ಯಾವುದೇ ಮೆಸೆಜ್‌ಗಳು ಸಹ ಸರ್ವರ್ ಅಥವಾ ಸ್ವೀಕರಿಸುವವರ ಡಿವೈಸ್‌ನಲ್ಲಿಯೂ ಇರುವುದಿಲ್ಲ. ಈ ಮೂಲಕ ಹೆಚ್ಚಿನ ಗೌಪ್ಯತೆಯನ್ನು ಕಾಪಾಡಿಕೊಳ್ಳುವಲ್ಲಿ ಈ ಫೀಚರ್ಸ್‌ ಅನುವು ಮಾಡಿಕೊಡುತ್ತದೆ.

ವಾಟ್ಸಾಪ್‌ನ ಈ ಫೀಚರ್ಸ್‌ನಲ್ಲಿ ಮತ್ತಷ್ಟು ಸೌಲಭ್ಯ! ಶೀಘ್ರದಲ್ಲೇ ಬಳಕೆಗೆ

ಇನ್ನು ಸದ್ಯಕ್ಕೆ ಈ ಅದೃಶ್ಯವಾಗುವ ಫೀಚರ್ಸ್‌ ನಲ್ಲಿ ನೀವು 24 ಗಂಟೆಗಳು, 7 ದಿನಗಳು ಮತ್ತು 90 ದಿನಗಳು ಎಂಬ ಮೂರು ಆಯ್ಕೆಗಳನ್ನು ಕಾಣಬಹುದಾಗಿದ್ದು, ಬಳಕೆದಾರರು ಯಾವ ಸಮಯವನ್ನು ಸೆಲೆಕ್ಟ್ ಮಾಡುತ್ತಾರೋ ಆ ಸಮಯದ ನಂತರ ಮೆಸೆಜ್‌ ಅದೃಶ್ಯವಾಗುತ್ತವೆ. ಆದರೆ ಈ ಮೂರು ಆಯ್ಕೆಗಳೊಂದಿಗೆ ಮುಂದಿನ ದಿನಗಳಲ್ಲಿ ಈ 15 ವಿಭಿನ್ನ ಆಯ್ಕೆಗಳನ್ನು ನೀವು ಕಾಣಬಹುದಾಗಿದೆ.

ಅದರಂತೆ ಮುಂದಿನ ನವೀಕರಣದಲ್ಲಿ ನೀವು 15 ವಿಭಿನ್ನ ಅವಧಿಗಳನ್ನು ಹೊಂದಿಸಲು ಅನುವು ಕೊಡಲಿದ್ದು, ಇದರಲ್ಲಿ 1 ವರ್ಷ, 180 ದಿನಗಳು, 60 ದಿನಗಳು, 30 ದಿನಗಳು, 21 ದಿನಗಳು, 14 ದಿನಗಳು, 6 ದಿನಗಳು, 5 ದಿನಗಳು, 4 ದಿನಗಳು, 3 ದಿನಗಳು, 2 ದಿನಗಳು, 12 ಗಂಟೆಗಳು, 6 ಗಂಟೆಗಳು, 3 ಗಂಟೆಗಳು ಮತ್ತು 1 ಗಂಟೆಯ ಅವಧಿಯನ್ನು ನೀಡಲಾಗುತ್ತದೆ. ಇದರಿಂದ ಬಳಕೆದಾರರ ಅಗತ್ಯತೆಯನ್ನು ಪೂರೈಸುತ್ತಿದೆ ವಾಟ್ಸಾಪ್‌.

ವಾಟ್ಸಾಪ್‌ನ ಈ ಫೀಚರ್ಸ್‌ನಲ್ಲಿ ಮತ್ತಷ್ಟು ಸೌಲಭ್ಯ! ಶೀಘ್ರದಲ್ಲೇ ಬಳಕೆಗೆ

ಸದ್ಯಕ್ಕೆ ವಿಂಡೋಸ್ ಡೆಸ್ಕ್‌ಟಾಪ್ ಬೀಟಾ ಕ್ಲೈಂಟ್‌ನಲ್ಲಿ ಈ ಸೌಲಭ್ಯವನ್ನು ಗುರುತಿಸಲಾಗಿದ್ದು, ಐಓಎಸ್‌ ಹಾಗೂ ಆಂಡ್ರಾಯ್ಡ್‌ ಬೀಟಾ ಆವೃತ್ತಿಗಳಿಗೆ ಕೆಲವೇ ದಿನಗಳಲ್ಲಿ ಲಭ್ಯವಾಗಲಿದೆ. ಇದರಿಂದ ನೀವು ಮೆಸೆಜ್‌ಗಳ ಮೇಲೆ ಹೆಚ್ಚಿನ ಕಂಟ್ರೋಲ್‌ ಹೊಂದಲು ಸಹಾಯ ಆಗಲಿದೆ. ಅದರಲ್ಲೂ ಇನ್ಮುಂದೆ ವಿಶೇಷವಾಗಿ 1 ಗಂಟೆಯ ಅವಧಿ ಸಹ ಇರಲಿದ್ದು, ಇದರಿಂದ ಬಹಳಷ್ಟು ಜನರಿಗೆ ಸಹಕಾರಿಯಾಗಲಿದೆ.

Best Mobiles in India

English summary
WhatsApp is working on a feature for disappearing messages, through which users can get 15 additional options. This facility is currently under development.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+