Home
ಸುದ್ದಿಜಾಲ

WhatsApp down: ಮೆಸೆಜ್‌ ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ!

ಮೆಟಾ ಒಡೆತನದ ಜನಪ್ರಿಯ ಇನ್‌ಸ್ಟಂಟ್ ಮೆಸೆಜ್‌ ಅಪ್ಲಿಕೇಶನ್ ವಾಟ್ಸಾಪ್‌ (WhatsApp) ನಲ್ಲಿ ಪ್ರಸ್ತುತ ಟೆಕ್ಸ್ಟ್‌ ಮೆಸೆಜ್‌ಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ ಎಂದು ವರದಿಯಾಗಿದೆ.

ಡೌನ್‌ಡೆಕ್ಟರ್

ಹೌದು, ವಾಟ್ಸಾಪ್‌ ನಲ್ಲಿ ಟೆಕ್ಸ್ಟ್‌ ಕಳುಹಿಸುವ ಮತ್ತು ಸ್ವೀಕರಿಸುವಲ್ಲಿ ಅನೇಕ ಬಳಕೆದಾರರು ಸಮಸ್ಯೆಗಳನ್ನು ವರದಿ ಮಾಡುತ್ತಿರುವುದರಿಂದ ವಾಟ್ಸಾಪ್‌ ಗ್ಲಿಚ್ ಅನ್ನು ಎದುರಿಸುತ್ತಿದೆ. ಜಗತ್ತಿನಾದ್ಯಂತ ಆನ್‌ಲೈನ್ ಸ್ಥಗಿತಗಳನ್ನು ಟ್ರ್ಯಾಕ್ ಮಾಡುವ ವೆಬ್‌ಸೈಟ್ ಡೌನ್‌ಡೆಕ್ಟರ್ (Downdetector), ವಾಟ್ಸಾಪ್‌ (WhatsApp) ನ ಸ್ಥಗಿತವನ್ನು ವರದಿ ಮಾಡುವ ಬಳಕೆದಾರರ ಸಂಖ್ಯೆಯಲ್ಲಿ ತೀವ್ರ ಏರಿಕೆಯನ್ನು ವರದಿ ಮಾಡಿದೆ.

ದೆಹಲಿ

ಡೌನ್‌ಡೆಕ್ಟರ್ ಆನ್‌ಲೈನ್‌ನಲ್ಲಿ ಸುಮಾರು 30,000 ವರದಿಗಳೊಂದಿಗೆ ಪ್ರಮುಖ ಸ್ಪೈಕ್ ಅನ್ನು ವರದಿ ಮಾಡುತ್ತಿದೆ. ಬಳಕೆದಾರರು ತಮ್ಮ ಮೆಸೆಜ್‌ಗಳನ್ನು ತಲುಪಿಸುತ್ತಿಲ್ಲ ಎಂದು ದೂರುತ್ತಿದ್ದಾರೆ. ಸಂದೇಶಗಳನ್ನು ತಲುಪಿಸಿದಾಗಲೂ, ಡೆಲಿವರಿ ಸ್ಟೇಟಸ್‌ನಲ್ಲಿ ಹೈಲೈಟ್ ಮಾಡಲು ಅಪ್ಲಿಕೇಶನ್ ವಿಫಲಗೊಳ್ಳುತ್ತದೆ. ಡೌನ್‌ಡೆಕ್ಟರ್ ಲೈವ್ ಔಟ್‌ಟೇಜ್ ಮ್ಯಾಪ್‌ನಲ್ಲಿ, ದೆಹಲಿ, ಮುಂಬೈ, ಕೋಲ್ಕತ್ತಾ, ಚೆನ್ನೈ, ಬೆಂಗಳೂರು ಮತ್ತು ಲಕ್ನೋ ಸೇರಿದಂತೆ ಹೆಚ್ಚಿನ ಮೆಟ್ರೋ ನಗರಗಳು ಹಾಟ್‌ಸ್ಪಾಟ್‌ಗಳಾಗಿವೆ.

ವಾಟ್ಸಾಪ್‌

ವಾಟ್ಸಾಪ್ ಸ್ಥಗಿತದ ಕುರಿತಾಗಿ ಮೆಟಾ ಕಂಪನಿಯ ವಕ್ತಾರರು, 'ಕೆಲವರು ಪ್ರಸ್ತುತ ಮೆಸೆಜ್‌ಗಳನ್ನು ಕಳುಹಿಸಲು ತೊಂದರೆ ಅನುಭವಿಸುತ್ತಿದ್ದಾರೆ ಎಂದು ನಮಗೆ ತಿಳಿದಿದೆ ಮತ್ತು ಸಾಧ್ಯವಾದಷ್ಟು ಬೇಗ ಎಲ್ಲರಿಗೂ ವಾಟ್ಸಾಪ್‌ ಅನ್ನು ಮತ್ತೆ ಸರಿಯಾಗಿ ಕಾರ್ಯನಿರ್ವಹಿಸುವಂತೆ ಮಾಡುತ್ತಿದ್ದೇವೆ. ಎಂದು ಹೇಳಿದ್ದಾರೆ.

ವಾಟ್ಸಾಪ್‌ ಡೌನ್ #whatsappdown

ಇನ್ನು ಟ್ವಿಟರ್‌ ತಾಣದಲ್ಲಿ ವಾಟ್ಸಾಪ್‌ ಡೌನ್ #whatsappdown ಸುದ್ದಿ ಮುನ್ನಲೆಯಲ್ಲಿ ಕಾಣಿಸಿಕೊಂಡಿದ್ದು, ಕಾಮಿಡಿ ಮಿಮ್ಸ್‌ಗಳು ಹರಿದಾಡುತ್ತಿವೆ. ವಾಟ್ಸಾಪ್‌ ಡೌನ್‌ ಆಗಿರುವುದರಿಂದ ಹೆಚ್ಚಿನ ಬಳಕೆದಾರರು ಟ್ವಿಟರ್‌ ಬಳಕೆಯತ್ತ ಹೆಚ್ಚು ಒಲವು ತೋರುತ್ತಿರುವ ಮಿಮ್ಸ್‌ಗಳು ಗಮನ ಸೆಳೆಯುವಂತಿವೆ.

ವಾಟ್ಸಾಪ್‌ ಅಪ್‌ನಲ್ಲಿ ಈ ಫೀಚರ್ಸ್‌ಗಳು ಸೇರ್ಪಡೆ ಆಗಲಿವೆ:

ವಾಟ್ಸಾಪ್‌ ಅಪ್‌ನಲ್ಲಿ ಈ ಫೀಚರ್ಸ್‌ಗಳು ಸೇರ್ಪಡೆ ಆಗಲಿವೆ:

ವಾಟ್ಸಾಪ್‌ ಡೆಸ್ಕ್‌ಟಾಪ್‌ನಲ್ಲಿ ಸ್ಟೇಟಸ್‌ಗೆ ರಿಪ್ಲೇ ಮಾಡುವ ಆಯ್ಕೆ
ವಾಟ್ಸಾಪ್‌ ಡೆಸ್ಕ್‌ಟಾಪ್ ಬಳಕೆದಾರರಿಗೆ ಹೊಸ ಸೈಡ್‌ಬಾರ್ ಮತ್ತು ಡೆಸ್ಕ್‌ಟಾಪ್‌ ನಲ್ಲಿಯೇ ಸ್ಟೇಟಸ್‌ಗೆ ರಿಪ್ಲೇ ಶೀಘ್ರದಲ್ಲೇ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಾಗಲಿದೆ. ಸ್ಟೇಟಸ್ ರಿಪ್ಲೇ ಡೆಸ್ಕ್‌ಟಾಪ್ ಬಳಕೆದಾರರಿಗೆ ವಾಟ್ಸಾಪ್‌ ಅನ್ನು ಅವರ ಕಾಂಟ್ಯಾಕ್ಟ್‌ಗಳ ಮೂಲಕ ಸ್ಟೋರಿಗಳನ್ನು ಪರಿಶೀಲಿಸಲು ಅನುಮತಿಸುತ್ತದೆ. ಜೊತೆಗೆ ಫೋನ್‌ನಲ್ಲಿ ವಾಟ್ಸಾಪ್‌ ಸ್ಟೇಟಸ್‌ ಗೆ ರಿಪ್ಲೇ ಮಾಡುವ ಹಾಗೆಯೇ ಅವರಿಗೆ ರಿಪ್ಲೇ ಮಾಡಲು ಅವಕಾಶ ನೀಡುತ್ತವೆ. ಸೈಡ್‌ಬಾರ್ ಸ್ಟೇಟಸ್‌ ಅಪ್‌ಡೇಟ್‌ ಟ್ಯಾಬ್, ಸೆಟ್ಟಿಂಗ್‌ಗಳು ಮತ್ತು ಪ್ರೊಫೈಲ್‌ಗೆ ಆಕ್ಸಸ್‌ ಮಾಡಲು ಅನುಮತಿಸುತ್ತದೆ.

ವಾಟ್ಸಾಪ್‌ ಸ್ಟೇಟಸ್‌ನಲ್ಲಿ ಕ್ಲಿಕ್ ಮಾಡಬಹುದಾದ ಲಿಂಕ್‌ಗಳು

ವಾಟ್ಸಾಪ್‌ ಸ್ಟೇಟಸ್‌ನಲ್ಲಿ ಕ್ಲಿಕ್ ಮಾಡಬಹುದಾದ ಲಿಂಕ್‌ಗಳು

ಇತ್ತೀಚಿನ ದಿನಗಳಲ್ಲಿ ಹಲವು ಸೋಶಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ಗಳಲ್ಲಿ ಸ್ಟೋರಿಸ್‌ ಆಯ್ಕೆ ಹೆಚ್ಚು ಜನಪ್ರಿಯವಾಗಿರುವುದನ್ನು ಕಾಣಬಹುದಾಗಿದೆ. ಈ ಸ್ಟೇಟಸ್‌ ಆಯ್ಕೆಯಲ್ಲಿ ಬದಲಾವಣೆ ತರಲಿದ್ದು, ಶೀರ್ಷಿಕೆಯಲ್ಲಿ ಹೈಪರ್‌ಲಿಂಕ್ ಮಾಡುವ URL ಗಳನ್ನು ಸಕ್ರಿಯಗೊಳಿಸುತ್ತದೆ. ಈ ಮೂಲಕ ವಾಟ್ಸಾಪ್‌ ಬಳಕೆದಾರರು ತಮ್ಮ ವೆಬ್‌ಸೈಟ್‌ಗಳು ಮತ್ತು ಪೇಜ್‌ಗಳಿಗೆ URL ಗಳನ್ನು ಶೇರ್ ಮಾಡಲು ಸಾಧ್ಯವಾಗುತ್ತದೆ. ಸ್ಟೇಟಸ್‌ ನೋಡುವವರು ಲಿಂಕ್‌ಗಳ ಮೇಲೆ ಸರಳವಾಗಿ ಕ್ಲಿಕ್ ಮಾಡಿದಾಗ ಪೇಜ್‌ ತೆರೆಯಲಿದೆ.

ವಾಟ್ಸಾಪ್‌ ಸೇರಲಿದೆ ಹೊಸ ಬಿಸಿನೆಸ್ ಟೂಲ್ ಟ್ಯಾಬ್

ವಾಟ್ಸಾಪ್‌ ಸೇರಲಿದೆ ಹೊಸ ಬಿಸಿನೆಸ್ ಟೂಲ್ ಟ್ಯಾಬ್

ಸದ್ಯದಲ್ಲೇ ವಾಟ್ಸಾಪ್‌ ಬಿಸಿನೆಸ್ ಅಪ್ಲಿಕೇಶನ್‌ನ ಮುಖ್ಯ ಪುಟದಲ್ಲಿ ಹೊಸ ಟ್ಯಾಬ್ ಲಭ್ಯವಾಗಲಿದೆ. ಎಡಭಾಗದಲ್ಲಿರುವ ಕ್ಯಾಮರಾ ಟ್ಯಾಬ್ ಅನ್ನು ಬದಲಿಸಿದರೆ, ಬಿಸಿನೆಸ್ ಖಾತೆಯ ಬಳಕೆದಾರರಿಗೆ ಬಿಸಿನೆಸ್ ಟೂಲ್ ಟ್ಯಾಬ್ (Business Tool Tab) ಪ್ರಮುಖ ಕೇಂದ್ರವಾಗಲಿದೆ. ಅಲ್ಲಿ ಅವರು ಅಪ್ಲಿಕೇಶನ್‌ನಲ್ಲಿನ ಸೆಟ್ಟಿಂಗ್‌ಗಳ ಮೂಲಕ ಹೋಗದೆ ಬಿಸಿನೆಸ್ ಬಳಕೆದಾರರು ಪರಿಕರಗಳನ್ನು ಸುಲಭವಾಗಿ ಆಕ್ಸಸ್ ಮಾಡಬಹುದಾಗಲಿದೆ. ಈ ಪರಿಕರಗಳು ವ್ಯಾಪಾರ ಪ್ರೊಫೈಲ್ ನಿರ್ವಹಣೆ, ಕ್ಯಾಟಲಾಗ್ ಸೆಟ್ಟಿಂಗ್‌ಗಳು ಮತ್ತು ಜಾಹೀರಾತುಗಳ ಮೂಲಕ ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಮ್‌ ನೊಂದಿಗೆ ಲಿಂಕ್ ಆಗಿರಲಿದೆ.

Best Mobiles in India

English summary
WhatsApp down: Users facing problems in sending, receiving messages.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+