Home
ಸುದ್ದಿಜಾಲ

ವಾಟ್ಸಾಪ್‌ನಲ್ಲಿ ಭಾರೀ ಬದಲಾವಣೆ!..ಈ ಹೊಸ ಆಯ್ಕೆ ನಿಮಗೆ ಇಷ್ಟವಾಗುತ್ತಾ?

ಅತೀ ಹೆಚ್ಚು ಸಕ್ರಿಯ ಬಳಕೆದಾರರನ್ನು ಒಳಗೊಂಡಿರುವ ವಾಟ್ಸಾಪ್‌ ಸಂಸ್ಥೆಯು ( WhatsApp ) ತನ್ನ ಬಳಕೆದಾರರಿಗೆ ಒಂದಿಲ್ಲೊಂದು ಅನುಕೂಲಕರ ಫೀಚರ್ ನೀಡುತ್ತ ಸಾಗಿದೆ. ಈವರೆಗೂ ಸಂಸ್ಥೆಯು ಬಳಕೆದಾರರ ಪರಿಶೀಲಿಸಲು ಮತ್ತು ದೃಢೀಕರಿಸಲು ಮೊಬೈಲ್ ಫೋನ್ ಸಂಖ್ಯೆಗಳನ್ನು ಮಾತ್ರ ಅವಲಂಬಿಸಿದೆ. ಇದೀಗ ಹೊಸದೊಂದು ಬದಲಾವಣೆಯತ್ತ ಮುಖ ಮಾಡಿದೆ.

ಹೌದು, ಮೆಟಾ ಮಾಲೀಕತ್ವದ ವಾಟ್ಸಾಪ್‌ ಸಂಸ್ಥೆಯು ಬಳಕೆದಾರರ ಪರಿಶೀಲಿಸಲು ಮತ್ತು ದೃಢೀಕರಿಸಲು ಇನ್ಮುಂದೆ ಇ-ಮೇಲ್‌ (Email) ವಿಳಾಸಗಳನ್ನು ಸೇರಿಸಲು ಬಳಕೆದಾರರಿಗೆ ಅವಕಾಶ ನೀಡಲಿದ್ದು, ಇದು ಬೀಟಾ ಹಂತದಲ್ಲಿ ಇದೆ. ಮುಂದಿನ ಅಪ್‌ಡೇಟ್‌ಗಳಲ್ಲಿ ಅಧಿಕೃತವಾಗಿ ಸೇರ್ಪಡೆ ಆಗುವ ಸೂಚನೆಗಳು ಇವೆ.

ವಾಟ್ಸಾಪ್‌ನಲ್ಲಿ ಭಾರೀ ಬದಲಾವಣೆ!..ಈ ಹೊಸ ಆಯ್ಕೆ ನಿಮಗೆ ಇಷ್ಟವಾಗುತ್ತಾ?

ಹೊಸ ಇ-ಮೇಲ್ ವಿಳಾಸಗಳನ್ನು ಸೇರಿಸುವ ಆಯ್ಕೆಯು ಆಂಡ್ರಾಯ್ಡ್‌ ಹಾಗೂ ಐಓಎಸ್‌ ಬಳಕೆದಾರರಿಗೆ ಶೀಘ್ರದಲ್ಲೇ ಲಭ್ಯ ಆಗಲಿದೆ. ಅಂದಹಾಗೆ ಈ ಆಯ್ಕೆಯು ಐಚ್ಛಿಕ ಆಗಿರಲಿದ್ದು, ಇದನ್ನು ಸಕ್ರಿಯಗೊಳಿಸಬೇಕೆ ಅಥವಾ ನಿಷ್ಕ್ರಿಯಗೊಳಿಸಬೇಕೆ ಎಂಬುದು ಬಳಕೆದಾರರ ನಿರ್ಧಾರಕ್ಕೆ ಬಿಡಲಾಗುತ್ತದೆ.

ಜನಪ್ರಿಯ ವಾಟ್ಸಾಪ್ ಸಂಸ್ಥೆಯು ಈ ಮೂಲಕ ಬಳಕೆದಾರರಿಗೆ ಮತ್ತಷ್ಟು ಹೆಚ್ಚುವರಿ ಭದ್ರತೆಯನ್ನು ಒದಗಿಸುವುದು ಉದ್ದೇಶ ಹೊಂದಿದೆ. ಒಂದು ವೇಳೆ ದೃಢೀಕರಣ ಉದ್ದೇಶಗಳಿಗಾಗಿ ಬಳಕೆದಾರರು ಎಸ್‌ಎಮ್‌ಎಸ್‌ ಮೂಲಕ ಓಟಿಪಿ ಸ್ವೀಕರಿಸಲು ಸಾಧ್ಯವಾಗದ ಸಂದರ್ಭಗಳಲ್ಲಿ ಈ ಆಯ್ಕೆಯು ಉಪಯುಕ್ತ ಎನಿಸಲಿದೆ.

ವಾಟ್ಸಾಪ್‌ನಲ್ಲಿ ಭಾರೀ ಬದಲಾವಣೆ!..ಈ ಹೊಸ ಆಯ್ಕೆ ನಿಮಗೆ ಇಷ್ಟವಾಗುತ್ತಾ?

ಬೀಟಾ ಬಳಕೆದಾರರು ವಾಟ್ಸಾಪ್‌ ಸೆಟ್ಟಿಂಗ್‌ಗಳು > ಖಾತೆ > ಇ-ಮೇಲ್ ವಿಳಾಸವನ್ನು ಭೇಟಿ ಮಾಡುವ ಮೂಲಕ ಹೊಸ ಇಮೇಲ್ ವಿಳಾಸ ಫೀಚರ್‌ ಅನ್ನು ಕಾಣಬಹುದಾಗಿದೆ. ಈ ಆಯ್ಕೆಯು ವಾಟ್ಸಾಪ್‌ ಖಾತೆಯನ್ನು ಆಕ್ಸಸ್‌ ಮಾಡಲು ಇ-ಮೇಲ್ ನೆರವು ಮಾಡುತ್ತದೆ. ಆದರೆ ಇದು ಇತರರಿಗೆ ಗೋಚರಿಸುವುದಿಲ್ಲ ಹಾಗೂ ಬಳಕೆದಾರರ ಇಮೇಲ್ ವಿಳಾಸವನ್ನು ವಾಟ್ಸಾಪ್‌ ಖಾಸಗಿಯಾಗಿರಿಸುತ್ತದೆ.

ವಾಟ್ಸಾಪ್‌ ಸೇರಿರುವ ಇತ್ತೀಚಿನ ಹೊಸ ಫೀಚರ್ಸ್‌ಗಳು

ಹೆಚ್‌ಡಿ ಫೋಟೋ ಶೇರಿಂಗ್ ಫೀಚರ್ - ಬಳಕೆದಾರರು ವಾಟ್ಸಾಪ್‌ ಆಪ್‌ನಲ್ಲಿ ಈಗ ಹೆಚ್‌ಡಿ ಗುಣಮಟ್ಟದಲ್ಲಿ ಫೋಟೋಗಳನ್ನು ಶೇರ್ ಮಾಡಬಹುದಾಗಿದೆ. ಈ ಅವಕಾಶ ಒದಗಿಸಿದ್ದು, ವಾಟ್ಸಾಪ್‌ನ ಇತ್ತೀಚಿನ ಹೆಚ್‌ಡಿ ಫೋಟೋ ಶೇರಿಂಗ್ ಆಯ್ಕೆ. ವಾಟ್ಸಾಪ್‌ ಆಪ್‌ನಲ್ಲಿ ಶೇರ್ ಮಾಡುವ ಫೋಟೋಗಳ ಗುಣಮಟ್ಟ ಸ್ವಲ್ಪ ಕಂಪ್ರೆಸ್ ಮಾಡುತ್ತದೆ. ಫೋಟೋ ಕಳುಹಿಸುವಾಗ ಹೆಚ್‌ಡಿ ಆಯ್ಕೆ ಕಾಣಿಸುತ್ತದೆ.

ವಾಟ್ಸಾಪ್‌ನಲ್ಲಿ ಭಾರೀ ಬದಲಾವಣೆ!..ಈ ಹೊಸ ಆಯ್ಕೆ ನಿಮಗೆ ಇಷ್ಟವಾಗುತ್ತಾ?

ಚಾಟ್ ಲಾಕ್ ಆಯ್ಕೆ - ವಾಟ್ಸಾಪ್‌ ಇತ್ತೀಚಿನ ಆಯ್ಕೆಗಳಲ್ಲಿ ಚಾಟ್ ಲಾಕ್ ಆಯ್ಕೆ ಗಮನ ಸೆಳೆದಿದೆ. ಈ ಆಯ್ಕೆಯು ಬಳಕೆದಾರರಿಗೆ ಅವರ ಪರ್ಸನಲ್ ಚಾಟ್‌ಗಳನ್ನು ಲಾಕ್ ಮಾಡುವ ಅವಕಾಶ ನೀಡುತ್ತದೆ. ಈ ಆಯ್ಕೆ ಸಕ್ರಿಯಗೊಳಿಸಲು ಬಳಕೆದಾರರು ಚಾಟ್‌ನ ಪ್ರೊಫೈಲ್ ಆಯ್ಕೆ ತೆರೆದು, ನಂತರ ಚಾಟ್ ಲಾಕ್ ಫೀಚರ್ಸ್‌ ಅನ್ನು ಟ್ಯಾಪ್ ಮಾಡಬೇಕಿರುತ್ತದೆ..

ಎಡಿಟ್‌ ಮೆಸೆಜ್‌ ಆಯ್ಕೆ - ವಾಟ್ಸಾಪ್‌ನಲ್ಲಿ ಒಂದು ವೇಳೆ ತಪ್ಪಾಗಿ ಮೆಸೆಜ್‌ ಕಳುಹಿಸಿದ್ದರೆ, ಎಡಿಟ್‌ ಆಯ್ಕೆ ಮೂಲಕ ಅದನ್ನು ಸರಿ ಮಾಡಲು ಅವಕಾಶ ಇರುತ್ತದೆ. ಈ ಆಯ್ಕೆ ಬಳಕೆ ಮಾಡಲು ಬಳಕೆದಾರರು ಮೊದಲು ಎಡಿಟ್ ಮಾಡಲು ಬಯಸುವ ಮೆಸೆಜ್‌ ಅನ್ನು ಟ್ಯಾಪ್‌ ಮಾಡುವುದು ಹಾಗೂ ಅದನ್ನು ದೀರ್ಘವಾಗಿ ಹಿಡಿದುಕೊಳ್ಳಬೇಕು. ನಂತರ ಬಲ ಭಾಗದಲ್ಲಿ ಮೂರು ಡಾಟ ಮೆನುವಿನಿಂದ ಎಡಿಟ್‌ ಆಯ್ಕೆ ಕ್ಲಿಕ್ ಮಾಡುವುದು.

ಸ್ಕ್ರೀನ್ ಶೇರಿಂಗ್ ಫೀಚರ್ - ವಾಟ್ಸಾಪ್‌ನಲ್ಲಿ ವೀಡಿಯೊ ಕರೆ ಮಾಡಿದ ವೇಳೆ ಬಳಕೆದಾರರು ತಮ್ಮ ಫೋನ್‌ನ ಸ್ಕ್ರೀನ್‌ ಅನ್ನು ಶೇರ್‌ ಮಾಡಿಕೊಳ್ಳಲು ಇದು ಅನುಕೂಲ ಎನಿಸುತ್ತದೆ. ಈ ಆಯ್ಕೆ ಮೂಲಕ ಬಳಕೆದಾರರಿಗೆ ಡಾಕ್ಯುಮೆಂಟ್‌ಗಳು, ಶೋಕೇಸ್ ಪ್ರೆಸೆಂಟೇಶನ್‌ಗಳು ಮತ್ತು ಇತರೆ ಅಗತ್ಯ ವೇಳೆ ಬಳಕೆ ಮಾಡಿಕೊಳ್ಳಬಹುದಾಗಿದೆ.

Best Mobiles in India

English summary
WhatsApp email verification feature is currently available in beta versions for Android and iOS. all details here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+