ಬಳಕೆದಾರರಿಗೆ ಬಹು ಉಪಯುಕ್ತ ಫೀಚರ್ಸ್‌ ಪರಿಚಯಿಸಿದ ವಾಟ್ಸಾಪ್‌!

|

ಅತೀ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿರುವ ಇನ್‌ಸ್ಟಂಟ್‌ ಮೆಸೆಜಿಂಗ್ ಆಪ್‌ ವಾಟ್ಸಾಪ್‌ ಬಳಕೆದಾರರಿಗೆ ಹಲವು ಅಗತ್ಯ ಫೀಚರ್ಸ್‌ಗಳನ್ನು ಪರಿಚಿಯಿಸಿದೆ. ಅವುಗಳಲ್ಲಿ ಮ್ಯೂಟ್‌ ಆಯ್ಕೆ ಸಹ ಒಂದಾಗಿದೆ. ಆದ್ರೆ ವಾಟ್ಸಾಪ್ ಇದೀಗ ಮ್ಯೂಟ್ ಆಯ್ಕೆಯಲ್ಲಿ ಹೊಸತನ ಅಳವಡಿಸಿದ್ದು, ಬಳಕೆದಾರರು ತಮ್ಮ ವಾಟ್ಸಾಪ್‌ ಗ್ರೂಪ್‌ಗಳನ್ನು ಅಥವಾ ವೈಯಕ್ತಿಕ ಚಾಟ್ ಅನ್ನು ಶಾಶ್ವತವಾಗಿ ಮ್ಯೂಟ್ ಮಾಡಬಹುದು.

ಫೇಸ್‌ಬುಕ್‌

ಹೌದು, ಫೇಸ್‌ಬುಕ್‌ ಒಡೆತನದ ವಾಟ್ಸಾಪ್‌ ಈಗಾಗಲೇ ಮ್ಯೂಟ್‌ ಆಯ್ಕೆಯನ್ನು ಅಳವಡಿಸಿದೆ. 8 ಗಂಟೆ, ಒಂದು ದಿನ ಅಥವಾ ಒಂದು ವರ್ಷದವರೆಗೆ ಮ್ಯೂಟ್ ಮಾಡುವ ಆಯ್ಕೆ ನೀಡಿತ್ತು. ಆದರೆ ಪ್ಲಾಟ್‌ಫಾರ್ಮ್ ಈಗ ಮ್ಯೂಟ್ ಆಲ್ವೇಸ್ (ಶಾಶ್ವತವಾಗಿ ಮ್ಯೂಟ್) ಎಂಬ ಹೊಸ ಆಯ್ಕೆಯನ್ನು ಸೇರಿಸಿದೆ. ಮೆಸೇಜಿಂಗ್ ಅಪ್ಲಿಕೇಶನ್‌ನ ಬೀಟಾ ಬಳಕೆದಾರರಿಗೆ ಈ ವೈಶಿಷ್ಟ್ಯವು ಪ್ರಸ್ತುತ ಲಭ್ಯವಿದೆ. ಮ್ಯಟ್‌ ಆಲ್ವೇಸ್‌ ಫೀಚರ್‌ ಎಲ್ಲರಿಗೂ ಲಭ್ಯವಾಗಲಿದೆ.

ಗ್ರೂಪ್‌ ಮೆಸೆಜ್‌ ನೋಟಿಫಿಕೇಶನ್‌ ಮ್ಯೂಟ್ ಮಾಡಿ

ಗ್ರೂಪ್‌ ಮೆಸೆಜ್‌ ನೋಟಿಫಿಕೇಶನ್‌ ಮ್ಯೂಟ್ ಮಾಡಿ

ಸಾಮಾನ್ಯವಾಗಿ ಪ್ರತಿಯೊಬ್ಬರು ಕೆಲವು ವಾಟ್ಸಪ್‌ನ ಗ್ರೂಪ್‌ಗಳನ್ನು ಹೊಂದಿರುತ್ತಾರೆ. ಆ ಎಲ್ಲ ಗ್ರೂಪ್‌ಗಳಿಂದ ನಿರಂತರ ಮೆಸೆಜ್‌ಗಳು ಬರುತ್ತಲೆ ಇರುತ್ತವೆ. ಪ್ರತಿ ಬಾರಿ ಮೆಸೆಜ್ ಬಂದಾಗ ಸೌಂಡ್‌ ಆಗುತ್ತಲೆ ಇರುತ್ತದೆ. ಗ್ರೂಪ್‌ ಮೆಸೆಜ್ ಸೌಂಡ್‌ ಜೊತೆಗೆ ಸ್ನೇಹಿತರಿಂದ ನೇರವಾಗಿ ಬರುವ ಮೆಸೆಜ್‌ಗಳ ಸೌಂಡ್‌ ಸಹ ಸೇರಿರುತ್ತವೆ. ಮೆಸೆಜ್ ಬಂದಿರುವುದು ತಿಳಿಯಲು ಸೌಂಡ್ ಬೇಕು ಆದರೆ ಗ್ರೂಪ್ ಮೆಸೆಜ್‌ ಕಿರಿಕಿರಿ ಅನಿಸಿದ್ದರೇ ಗ್ರೂಪ್‌ ಮೆಸೆಜ್‌ಗಳ ನೋಟಿಫಿಕೇಶನ್‌ ಮ್ಯೂಟ್ ಮಾಡಬಹುದು.

ಗ್ರೂಪ್‌ ಮೆಸೆಜ್‌ ನೋಟಿಫಿಕೇಶನ್‌ ಮ್ಯೂಟ್ ಮಾಡಲು ಹೀಗೆ ಮಾಡಿ

ಗ್ರೂಪ್‌ ಮೆಸೆಜ್‌ ನೋಟಿಫಿಕೇಶನ್‌ ಮ್ಯೂಟ್ ಮಾಡಲು ಹೀಗೆ ಮಾಡಿ

* ವಾಟ್ಸಪ್‌ ಖಾತೆ ತೆರೆಯಿರಿ.

* ಯಾವ ಗ್ರೂಪ್ ಮೆಸೆಜ್ ನೋಟಿಫಿಕೇಶನ್‌ ಮ್ಯೂಟ್ ಮಾಡಬೇಕು ಆ ಗ್ರೂಪ್ ಸೆಲೆಕ್ಟ್ ಮಾಡಿ.

* ಸೆಲೆಕ್ಟ್ ಮಾಡಿರುವ ಗ್ರೂಪ್ ಲಾಂಗ್ ಪ್ರೆಸ್‌ ಮಾಡಿ.

* ಆಗ ಮೇಲ್ಭಾಗದಲ್ಲಿ ಕಾಣಿಸುವ ಮ್ಯೂಟ್ ಐಕಾನ್‌ ಅನ್ನು ಒತ್ತಿರಿ.

ಹೀಗೂ ಗ್ರೂಪ್‌ ಮೆಸೆಜ್‌ ನೋಟಿಫಿಕೇಶನ್‌ ಮ್ಯೂಟ್ ಮಾಡಬಹುದು

ಹೀಗೂ ಗ್ರೂಪ್‌ ಮೆಸೆಜ್‌ ನೋಟಿಫಿಕೇಶನ್‌ ಮ್ಯೂಟ್ ಮಾಡಬಹುದು

* ವಾಟ್ಸಪ್ ಖಾತೆ ತೆರೆಯಿರಿ

* ಮ್ಯೂಟ್ ಮಾಡಬಯಸುವ ಗ್ರೂಪ್ ಸೆಲೆಕ್ಟ್ ಮಾಡಿ.

* ಗ್ರೂಪ್ ತೆರೆಯಿರಿ, ಹಾಗೂ ಕಾಣಿಸುವ ಮೂರು ಡಾಟ್ ಮೆನು ತೆರೆಯಿರಿ.

* ಅಲ್ಲಿ ಕಾಣಿಸುವ ಆಯ್ಕೆಗಳಲ್ಲಿ ಮ್ಯೂಟ್ ನೋಟಿಫಿಕೇಶನ್ ಆಯ್ಕೆ ಒತ್ತಿರಿ.

ಮೂರು ಆಯ್ಕೆಗಳು

ಮೂರು ಆಯ್ಕೆಗಳು

ವಾಟ್ಸಪ್‌ ಗ್ರೂಪ್‌ ಮೆಸೆಜ್ ನೋಟಿಫಿಕೇಶನ್ ಮ್ಯೂಟ್ ಆಯ್ಕೆ ಸೆಲೆಕ್ಟ್ ಮಾಡುವಾಗ ಮೂರು ಆಯ್ಕೆಗಳು ಕಾಣಿಸುತ್ತವೆ. ಅವುಗಳು ಕ್ರಮವಾಗಿ 8 ಗಂಟೆ, ಒಂದು ವಾರ ಮತ್ತು ಒಂದು ವರ್ಷ ಆಯ್ಕೆ ಹೊಂದಿವೆ. ಬಳಕೆದಾರರು ಯಾವ ಅವಧಿಗೆ ಮ್ಯೂಟ್ ಮಾಡಬೇಕೊ ಆ ಆಯ್ಕೆಯನ್ನು ಸೆಲೆಕ್ಟ್ ಮಾಡಿದರೇ ಆಯಿತು. ಸೆಲೆಕ್ಟ್ ಮಾಡಿರುವ ಅವಧಿಯವರೆಗೂ ಮೆಸೆಜ್‌ಗಳ ನೋಟಿಫಿಕೇಶನ್ ಕಿರಿಕಿರಿ ಇರದು.

ಅನ್‌ಮ್ಯೂಟ್ ಮಾಡುವ ಆಯ್ಕೆ

ಅನ್‌ಮ್ಯೂಟ್ ಮಾಡುವ ಆಯ್ಕೆ

ಬಳಕೆದಾರರು ಗ್ರೂಪ್‌ ಮೆಸೆಜ್‌ ನೋಟಿಫಿಕೇಶನ್ ಮ್ಯೂಟ್‌ ಮಾಡಿರುವುದನ್ನು ತಗೆಯಬಹುದು. ಅದಕ್ಕಾಗಿ ಮ್ಯೂಟ್ ಮಾಡಲು ಬಳಸಿದ ಹಂತಗಳನ್ನೇ ಅನುಸರಿಸಿ, ಅನ್‌ಮ್ಯೂಟ್ ನೋಟಿಫಿಕೇಶನ್ ಆಯ್ಕೆಯನ್ನು ಸೆಲೆಕ್ಟ್ ಮಾಡಿರಿ.

Most Read Articles
Best Mobiles in India

English summary
WhatsApp was working to let you mute contacts and group chats forever, and it looks like the feature is finally rolling out to beta users now.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X