ವಾಟ್ಸಪ್‌ನ ಈ ಹೊಸ ಫೀಚರ್ ಐಫೋನ್ ಬಳಕೆದಾರರಿಗೆ ಮಾತ್ರ!
ಫೇಸ್‌ಬುಕ್ ತೆಕ್ಕೆಯಲ್ಲಿರುವ ವಿಶ್ವದ ಜನಪ್ರಿಯ ಮೆಸ್ಸೆಜಿಂಗ್ ಅಪ್ಲಿಕೇಶನ್ 'ವಾಟ್ಸಪ್' ಬಳಕೆದಾರರ ಅನುಕೂಲಕ್ಕಾಗಿ ಸಾಕಷ್ಟು ನೂತನ ಫೀಚರ್ಸ್‌ಗಳನ್ನು ಪರಿಚಯಿಸುತ್ತಲೇ ಸಾಗಿದೆ. ಈ ದಿಸೆಯಲ್ಲಿ ನಿರಂತರ ಕಾರ್ಯಪ್ರವೃತ್ತವಾಗಿರುವ ಸಂಸ್ಥೆಯು ಈಗ ಮತ್ತೆ ಹೊಸದಾದ ಫೀಚರ್ ಅಳವಡಿಕೆಗೆ ಸಕಲ ತಯಾರಿ ನಡೆಸುತ್ತಿದೆ. ಆದ್ರೆ ಬರಲಿರುವ ಹೊಸ ಫೀಚರ್ ಕೇವಲ ಐಫೋನ್ ಬಳಕೆದಾರರಿಗೆ ಮಾತ್ರ.

ಹೌದು, ವಾಟ್ಸಪ್ ಸಂಸ್ಥೆಯು ಇದೀಗ ವಾಯಿಸ್ ಮೆಸ್ಸೆಜ್‌ನಲ್ಲಿ ಪ್ರಿವ್ಯೂವ್ ಆಯ್ಕೆಯನ್ನು ಸೇರಿಸಲಿದೆ. ಹೀಗಾಗಿ ಬಳಕೆದಾರರು ಇನ್ಮುಂದೆ ವಾಟ್ಸಪ್‌ಗೆ ಬರುವ ವಾಯಿಸ್ ಮೆಸ್ಸೆಜ್‌ಗಳನ್ನು ಪ್ರಿವ್ಯೂವ್‌ವಾಗಿ ಕೇಳುವ ಅವಕಾಶ ದೊರೆಯಲಿದೆ. ಈ ಕುರಿತು WABetaInfo ತಾಣದಲ್ಲಿ ಮಾಹಿತಿ ಲೀಕ್ ಆಗಿದ್ದು, ಹೊಸ ವಾಟ್ಸಪ್ ಫೀಚರ್‌ನ ಕೇಲವು ಸ್ಕ್ರೀನ್‌ಶಾಟ್‌ಗಳು ಸಹ ಈ ತಾಣದಲ್ಲಿ ಕಾಣಿಸಿಕೊಂಡಿವೆ.

ವಾಟ್ಸಪ್‌ಗೆ ಬರುವ ವಾಯಿಸ್ ಮೆಸ್ಸೆಜ್‌ಗಳನ್ನು ನೋಟಿಫಿಕೇಶನ್‌ನಲ್ಲಿಯೇ ಪ್ರಿವ್ಯೂವ್ ಆಗಿ ಕೇಳುವ ಸೌಲಭ್ಯದ ಫೀಚರ್ ಅನ್ನು ಸೇರಿಸಲು ಕಂಪನಿಯು ಈಗಾಗಲೇ ಐಫೋನ್ ಓಎಸ್‌ನಲ್ಲಿ ಪ್ರಾಯೋಗಿಕ ಪರೀಕ್ಷೆಗಳನ್ನು ನಡೆಸುತ್ತಿದೆ. ಅದಕ್ಕಾಗಿ 'ಪ್ಲೇ' ಬಟನ್ ಆಯ್ಕೆಯನ್ನು ಹೊಸದಾಗಿ ಸೇರಿಸಲಿದೆ. ಆರಂಭದಲ್ಲಿ ಈ ಸೌಲಭ್ಯವು ಐಫೋನ್ ಬಳಕೆದಾರರಿಗೆ ಮಾತ್ರ ಲಭ್ಯವಾಗಲಿದೆ ಎನ್ನಲಾಗಿದೆ.

ಇತ್ತೀಚಿಗೆ ಐಫೋನ್‌ನಲ್ಲಿ ಪೋಟೊ, ವಿಡಿಯೊ ಮತ್ತು ಸ್ಟಿಕ್ಕರ್‌ಗಳ ಪ್ರಿವ್ಯೂವ್ ವೀಕ್ಷಿಸುವ ಫೀಚರ್‌ಗಳನ್ನು ಕಂಪನಿಯು ಪರಿಚಯಿಸಿದ್ದು, ಅದರ ಮುಂದಿನ ಭಾಗವಾಗಿ ವಾಯಿಸ್ ಮೆಸ್ಸೆಜ್‌ಗೂ ಪ್ರಿವ್ಯೂವ್ ಆಯ್ಕೆ ಸೇರಿಸಿದೆ. ಹಾಗೆಯೇ ಕಂಪನಿಯ ಬಹುನಿರೀಕ್ಷಿತ ಡಾರ್ಕ್‌ಮೋಡ್ ಫೀಚರ್ ಸಹ ಮೊದಲು ಐಫೋನ್ ಬಳಕೆದಾರರಿಗೆ ದೊರೆಯಲಿದ್ದು, ಆನಂತರ ಆಂಡ್ರಾಯ್ಡ್‌ನಲ್ಲಿ ಕಾಣಿಸಿಕೊಳ್ಳಲಿದೆ.
ವಾಟ್ಸಪ್‌ಗೆ ಇತ್ತೀಚಿಗೆ ಪ್ರೈವೆಸಿಗೆ ಸಂಬಂಧಿಸಿದ ಹಲವು ಉಪಯುಕ್ತ ಫೀಚರ್‌ಗಳನ್ನು ಐಫೋನ್ ಮತ್ತು ಆಂಡ್ರಾಯ್ಡ್ ಓಎಸ್ ಮಾದರಿಗಳಲ್ಲಿ ಸೇರಿಸಿದ್ದು, ಅವುಗಳಲ್ಲಿ ಗ್ರೂಪ್ ಸೇರಿದಂತೆ ತಡೆಯುವ, ಸ್ಕ್ರೀನ್‌ಶಾಟ್ ತಗೆಯದ, ಮತ್ತು ಫಾರ್ವಡ್ ಮೆಸ್ಸೆಜ್ ಬಗ್ಗೆ ಮಾಹಿತಿಯ ಫೀಚರ್ಸ್‌ಗಳು ಬಳಕೆದಾರರ ಪ್ರೈವೆಸಿಗೆ ಹೆಚ್ಚು ಒತ್ತು ನೀಡಿವೆ. ಹಾಗೆಯೇ ಡಾರ್ಕ್‌ಮೋಡ್ ಮತ್ತು ವಾಯಿಸ್ ಮೆಸ್ಸೆಜ್ ಪ್ರಿವ್ಯೂವ್ ಫೀಚರ್ ಮೊದಲು ಐಫೋನ್ ಬಳಕೆದಾರರಿಗೆ ಲಭ್ಯವಾಗಲಿವೆ.


Click it and Unblock the Notifications








