ಅಂತೂ ಈ ನಿರೀಕ್ಷಿತ ಫೀಚರ್ಸ್‌ ವಾಟ್ಸಾಪ್‌ನಲ್ಲಿ ಸೇರ್ಪಡೆ!

|

ವಾಟ್ಸಾಪ್‌ ಜನಪ್ರಿಯ ಮೆಸೇಜಿಂಗ್‌ ಅಪ್ಲಿಕೇಶನ್‌ ಎನಿಸಿಕೊಂಡಿದೆ. ತನ್ನ ವಿಸೇಷ ಫೀಚರ್ಸ್‌ಗಳ ಕಾರಣದಿಂದಾಗಿ ಬಳಕೆದಾರರರು ಹೆಚ್ಚಿನ ಪ್ರಮಾಣದಲ್ಲಿ ವಾಟ್ಸಾಪ್‌ ಬಳಸುತ್ತಿದ್ದಾರೆ. ಇದೇ ಕಾರಣಕ್ಕೆ ವಾಟ್ಸಾಪ್‌ ಕೂಡ ಕಾಲ ಕಾಲಕ್ಕೆ ಅನುಗುಣವಾಗಿ ಹೊಸ ಮಾದರಿಯ ಫೀಚರ್ಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ವಾಟ್ಸಾಪ್‌ ತನ್ನ ವೆಬ್‌ ಆವೃತ್ತಿಗೆ ಮೂರು ಹೊಸ ಫೀಚರ್ಸ್‌ಗಳನ್ನು ಸೇರಿಸಿದೆ. ಈ ಮೂಲಕ ವೆಬ್‌ ಆವೃತ್ತಿ ಬಳಸುವ ಬಳಕೆದಾರರ ಬಹು ದಿನಗಳ ಆಸೆಯನ್ನು ಈಡೇರಿಸಿದೆ.

ವಾಟ್ಸಾಪ್‌

ಹೌದು, ವಾಟ್ಸಾಪ್‌ ತನ್ನ ವೆಬ್‌ ಆವೃತ್ತಿಯ ಬಳಕೆದಾರರಿಗೆ ಹೊಸದಾಗಿ ಮೂರು ಆಕರ್ಷಕ ಫೀಚರ್ಸ್‌ಗಳನ್ನು ಪರಿಚಯಿಸಿದೆ. ಇದರಿಂದ ವಾಟ್ಸಾಪ್‌ ವೆಬ್‌ ಬಳಕೆದಾರರು ಇನ್ಮುಂದೆ ಫೋಟೋಗಳನ್ನು ಎಡಿಟ್‌ ಮಾಡಬಹುದು ಮತ್ತು ಪ್ರಿವ್ಯೂ ಲಿಂಕ್ಸ್‌ ಫೀಚರ್ಸ್‌ಗಳನ್ನು ಸೇರಿಸಿರುವುದಾಗಿ ವಾಟ್ಸಾಪ್‌ ಘೊಷಣೆ ಮಾಡಿದೆ. ಇದಲ್ಲದೆ ಹೊಸ ಸ್ಟಿಕ್ಕರ್ ಸಜೇಷನ್‌ ನೀಡುವ ಫೀಚರ್ಸ್‌ ಅನ್ನು ಕೂಡ ಸೇರಿಸಿದೆ. ಹಾಗಾದ್ರೆ ವಾಟ್ಸಾಪ್‌ ವೆಬ್‌ ಸೇರಿರುವ ಹೊಸ ಫೀಚರ್ಸ್‌ಗಳ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ವಾಟ್ಸಾಪ್‌

ವಾಟ್ಸಾಪ್‌ ಹೊಸದಾಗಿ ತನ್ನ ವೆಬ್‌ ಆವೃತ್ತಿಯಲ್ಲಿ ಹೊಸದಾಗಿ ಸ್ಟಿಕರ್‌ ಸಜೇಷನ್‌ ಫೀಚರ್ಸ್ ಸೇರಿಸಿದೆ. ಇದು ಬಳಕೆದಾರರಿಗೆ ಸಂಭಾಷಣೆಗಳಿಗೆ ಸರಿಯಾದ ಸ್ಟಿಕ್ಕರ್ ಅನ್ನು ಸರ್ಚ್‌ ಮಾಡುವುದಕ್ಕೆ ಅನುಮತಿಸಲಿದೆ. ಸ್ನೇಹಿತರ ಜೊತೆ ಚಾಟ್‌ ಸಂಭಾಷಣೆ ನಡೆಸುವಾಗ ಸ್ಟಿಕ್ಕರ್ ಅನ್ನು ಬಳಸುವವರು ಸಾಮಾನ್ಯವಾಗಿ ಸರಿಯಾದ ಸ್ಟಿಕ್ಕರ್ ಅನ್ನು ಹುಡುಕಲು ಅನೇಕ ಟ್ಯಾಬ್‌ಗಳ ಮೂಲಕ ಸರ್ಚ್‌ ಮಾಡಬೇಕಾಗುತ್ತದೆ. ಆದರೆ ಈ ಹೊಸ ಫೀಚರ್ಸ್‌ ಅಗತ್ಯಕ್ಕೆ ಬೇಕಾದ ಸ್ಟಿಕ್ಕರ್ ಅನ್ನು ಕಳುಹಿಸುವುದಕ್ಕೆ ಇದು ಅವಕಾಶ ನೀಡಲಿದೆ. ಈ ಫೀಚರ್ಸ್‌ ಅನ್ನು ಗೌಪ್ಯತೆಯ ವಿಚಾರವನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ.

ವಾಟ್ಸಾಪ್‌

ಇದಲ್ಲದೆ ವಾಟ್ಸಾಪ್‌ ತನ್ನ ವೆಬ್ ಆವೃತ್ತಿಗೆ ಮೀಡಿಯಾ ಎಡಿಟರ್ ಫೀಚರ್ಸ್‌ ಅನ್ನು ಕೂಡ ಸೇರಿಸಿದೆ. ಇಲ್ಲಿಯವರೆಗೆ, ವಾಟ್ಸಾಪ್‌ನಲ್ಲಿ ಇಮೇಜ್‌ ಅನ್ನು ಎಡಿಟ್‌ ಮಾಡಬೇಕಾದರೆ ಮೊಬೈಲ್ ಆವೃತ್ತಿಯಲ್ಲಿ ಮಾತ್ರ ಲಭ್ಯವಿತ್ತು. ಸದ್ಯ ಇದೀಗ ವಾಟ್ಸಾಪ್‌ ತನ್ನ ವೆಬ್‌ ಆವೃತ್ತಿಯಲ್ಲಿಯೂ ಸಹ ಇಮೇಜ್‌ ಎಡಿಟ್‌ ಮಾಡುವುದಕ್ಕೆ ಅವಕಾಶ ನೀಡಿದೆ. ಇದಕ್ಕಾಗಿಯೇ ಮೀಡಿಯಾ ಎಡಿಟರ್ ಆಯ್ಕೆಯನ್ನು ನೀಡಿದೆ. ಇದರಿಂದ ಬಳಕೆದಾರರು ತಮ್ಮ ಕಂಪ್ಯೂಟರ್‌ನಲ್ಲಿ ಇಮೇಜ್‌ಗಳನ್ನು ಎಡಿಟ್‌ ಮಾಡಲು ಸಾಧ್ಯವಾಗಲಿದೆ.

ವಾಟ್ಸಾಪ್‌

ಇನ್ನು ವಾಟ್ಸಾಪ್‌ ಪ್ರಿವ್ಯೂ ಲಿಂಕ್ಸ್‌ ಫೀಚರ್ಸ್‌ ಅನ್ನು ಕೂಡ ವೆಬ್‌ ಆವೃತ್ತಿಯಲ್ಲಿ ಪರಿಚಯಿಸಿದೆ. ಇದರಿಂದಾಗಿ ವೆಬ್‌ ಆವೃತ್ತಿ ಬಳಸುವ ಬಳಕೆದಾರರು ಯಾವುದೇ ಲಿಂಕ್‌ಗಳು ಬಂದರೂ ಅವುಗಳ ಫುಲ್‌ ಪ್ರಿವ್ಯೂ ನೋಡುವುದಕ್ಕೆ ಅವಕಾಶ ಸಿಗಲಿದೆ. ಲಿಂಕ್ ಅನ್ನು ಸ್ವೀಕರಿಸುವ ಜನರು ಸಂದೇಶ ಕಳುಹಿಸುವ ಅಪ್ಲಿಕೇಶನ್‌ನ ವೆಬ್ ಆವೃತ್ತಿಯಲ್ಲಿ ಏನು ಕಳುಹಿಸಿದ್ದಾರೆ ಎಂದು ತಿಳಿಯುವುದಕ್ಕೆ ಇದು ಅನುಮತಿ ನೀಡಲಿದೆ.

ವಾಟ್ಸಾಪ್‌

ಇದಲ್ಲದೆ ಶೀಘ್ರದಲ್ಲೇ ವಾಟ್ಸಾಪ್‌ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಅಂಡೂ ರೀಡೂ ಬಟನ್‌ ಪರಿಚಯಿಸುವುದಕ್ಕೆ ಮುಂದಾಗಿದೆ. ಜೊತೆಗೆ ವಾಟ್ಸಾಪ್‌ ಸ್ಟೇಟಸ್‌ ಅಪ್ಡೇಟ್‌ ಮಾಡುವಾಗ ಇಮೇಜ್‌ ರದ್ದುಗೊಳಿಸುವ ಬಟನ್‌ ಪರಿಚಯಿಸುವುದಕ್ಕೆ ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ. ಇದಲ್ಲದೆ ವಾಟ್ಸಸಾಪ್‌ನಲ್ಲಿ ನೀವು ಹಂಚಿಕೊಂಡ ಸ್ಟೇಟಸ್‌ ಅನ್ನು ಮತ್ತೆ ಪಡೆಯುವುದಕ್ಕೆ ಅವಕಾಶ ನೀಡಲಿದೆ. ಜೊತೆಗೆ ಆಕಸ್ಮಿಕವಾಗಿ ಪೋಸ್ಟ್ ಮಾಡಿರುವ ಸ್ಟೇಟಸ್ ಅಪ್‌ಡೇಟ್ ಅನ್ನು ತ್ವರಿತವಾಗಿ ಡಿಲೀಟ್ ಮಾಡಲು ಸಹಾಯ ಮಾಡುವ ಫೀಚರ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ.

ವಾಟ್ಸಾಪ್

ವಾಟ್ಸಾಪ್ ಈಗಾಗಲೇ ತಮ್ಮ ಸ್ಟೇಟಸ್ ಅಪ್‌ಡೇಟ್‌ಗಳನ್ನು ಅಳಿಸುವ ಆಯ್ಕೆಯನ್ನು ಬಳಕೆದಾರರಿಗೆ ನೀಡಿದೆ. ಆದಾಗ್ಯೂ, ಹೊಸ Undo ಬಟನ್ ಬಳಕೆದಾರರಿಗೆ ಇನ್ನು ವೇಗವಾಗಿ ಕಾರ್ಯನಿರ್ವಹಿಸುವುದಕ್ಕೆ ಸಹಕಾರಿಯಾಗಲಿದೆ. ನೀವು ಸ್ಟೇಟಸ್‌ ಅನ್ನು ಡಿಲೀಟ್‌ ಮಾಡಿದಾಗ ಸ್ಟೇಟಸ್‌ ಅಪ್ಡೇಟ್‌ ಡಿಲೀಟ್‌ ಮಾಡಿದ್ದೀರಿ ಎಂಬುದನ್ನು ವಾಟ್ಸಾಪ್‌ ತಿಳಿಸಿಕೊಡಲಿದೆ ಎಂದು ವಾಟ್ಸಾಪ್‌ ಬ್ಲಾಗ್ ಸೈಟ್ ಹೇಳುತ್ತದೆ. ಸದ್ಯ ಆಂಡ್ರಾಯ್ಡ್ ಆವೃತ್ತಿ 2.21.22.6 ಗಾಗಿ ವಾಟ್ಸಾಪ್ ಬೀಟಾದ ಭಾಗವಾಗಿ ಸ್ಟೇಟಸ್ ಅಪ್‌ಡೇಟ್‌ಗಳಿಗಾಗಿ ವಾಟ್ಸಾಪ್‌ನ ಅಂಡೂ ಬಟನ್ ಲಭ್ಯವಿದೆ. ನಿರ್ದಿಷ್ಟ ಬೀಟಾ ಪರೀಕ್ಷಕರು ಮಾತ್ರ ಈ ಫೀಚರ್ಸ್‌ ಬಳಸಬಹುದಾಗಿದೆ. ಇದು ಮುಂದಿನ ದಿನಗಳಲ್ಲಿ ಎಲ್ಲರಿಗೂ ಲಬ್ಯವಾಗಲಿದೆಯಾ ಅನ್ನೊದು ಇನ್ನು ಬಹಿರಂಗವಾಗಿಲ್ಲ. ಸದ್ಯ ಪರೀಕ್ಷಾ ಹಂತದಲ್ಲಿರುವುದರಿಂದ ಕಾದು ನೋಡಬೇಕಿದೆ.

ವಾಟ್ಸಾಪ್‌ನಲ್ಲಿ ಬ್ಲೂ ಟಿಕ್ ಕಾಣಿಸದಂತೆ ಸೆಟ್ ಮಾಡಲು ಹೀಗೆ ಮಾಡಿ:

ವಾಟ್ಸಾಪ್‌ನಲ್ಲಿ ಬ್ಲೂ ಟಿಕ್ ಕಾಣಿಸದಂತೆ ಸೆಟ್ ಮಾಡಲು ಹೀಗೆ ಮಾಡಿ:

ಬ್ಲೂ ಟಿಕ್ ಕಾಣಿಸದಂತೆ ಸೆಟ್ ಮಾಡಲು ಸೆಟ್ಟಿಂಗ್‌ ವಿಭಾಗದಲ್ಲಿ ಅವಕಾಶ ಇದೆ. ಆದರೆ ಅದೇ ಹೆಸರಿನಿಂದ ಆಯ್ಕೆ ಒದಗಿಸಿಲ್ಲ. ಬದಲಾಗಿ Read Receipts option ಆಯ್ಕೆ ಇದೆ. ಈ ಆಯ್ಕೆ ಆಫ್ ಮಾಡುವ ಮೂಲಕ ವಾಟ್ಸಾಪ್‌ನಲ್ಲಿ ಬ್ಲೂ ಟಿಕ್ ಕಾಣಿಸದಂತೆ ಸೆಟ್ ಮಾಡಬಹುದಾಗಿದೆ. ಮುಂದಿನ ಕ್ರಮಗಳನ್ನು ಫಾಲೋ ಮಾಡಿರಿ.

ಮಾಡಿ

ಹಂತ 1: ಮೊದಲು ವಾಟ್ಸಾಪ್ ಅಪ್ಲಿಕೇಶನ್ ಗೆ ಭೇಟಿ ನೀಡಿ ಮತ್ತು ನಂತರ ಸೆಟ್ಟಿಂಗ್ಸ್ ವಿಭಾಗವನ್ನು ತೆರೆಯಿರಿ.
ಹಂತ 2: ನಂತರ, Account/ಖಾತೆ ಗೆ ಹೋಗಿ ಮತ್ತು Privacy/ಗೌಪ್ಯತೆ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
ಹಂತ 3: ತದ ನಂತರ Read Receipts ಆಯ್ಕೆಗೆ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಚಾಟ್‌ಗಳಲ್ಲಿ ಬ್ಲೂ ಟಿಕ್ ಕಾಣಿಸದಂತೆ ಸೆಟ್ ಮಾಡಲು ಅದನ್ನು ನಿಷ್ಕ್ರಿಯಗೊಳಿಸಿ.

ಮೂಲಕ

ಈ ಹಂತಗಳನ್ನು ಅನುಸರಿಸುವ ಮೂಲಕ ಬಳಕೆದಾರರು ತಮಗೆ ಯಾವಾಗ ಬೇಕಾದರೂ ಈ ಆಯ್ಕೆಯನ್ನು ಮತ್ತೆ ಸಕ್ರಿಯಗೊಳಿಸಲು ಅವಕಾಶ ಇದೆ. ಈ ಆಯ್ಕೆಯನ್ನು ಸಕ್ರಿಯ ಮಾಡಿದರೇ ನೀವು ಕಳುಹಿಸಿದ ಮೆಸೆಜ್‌ಗಳು ಇತರರು ಓದಿದಾಗ ಬ್ಲೂ ಟಿಕ್ ನೋಡಲು ನಿಮಗೆ ಸಾಧ್ಯವಾಗುವುದಿಲ್ಲ.

ವಾಟ್ಸಾಪ್‌ನಲ್ಲಿ ನಿಮ್ಮ ಲಾಸ್ಟ್‌ ಸೀನ್ ಕಾಣಿಸದಂತೆ ಸೆಟ್ ಮಾಡಲು ಈ ಕ್ರಮ ಅನುಸರಿಸಿ:

ವಾಟ್ಸಾಪ್‌ನಲ್ಲಿ ನಿಮ್ಮ ಲಾಸ್ಟ್‌ ಸೀನ್ ಕಾಣಿಸದಂತೆ ಸೆಟ್ ಮಾಡಲು ಈ ಕ್ರಮ ಅನುಸರಿಸಿ:

ಹಂತ 1: ನಿಮ್ಮ ಲಾಸ್ಟ್‌ ಸೀನ್ ಅನ್ನು ಕಾಣಿಸದಂತೆ ಸೆಟ್ ಮಾಡಲು ನೀವು ಬಯಸಿದರೆ, ವಾಟ್ಸಾಪ್ ಆಪ್ ಅನ್ನು ತೆರೆಯಿರಿ ಮತ್ತು ಸೆಟ್ಟಿಂಗ್‌ಗಳ ವಿಭಾಗಕ್ಕೆ ಹೋಗಿ.
ಹಂತ 2: ನಂತರ ಖಾತೆ/Account ಸೆಕ್ಷೆನ್‌ಗೆ ಹೋಗಿ ಮತ್ತು Privacy/ಗೌಪ್ಯತೆಯನ್ನು ಟ್ಯಾಪ್ ಮಾಡಿ. (ನೀವು ಸೇವ್ ಮಾಡುವ ಯಾವುದೇ ಸೆಟ್ಟಿಂಗ್‌ಗಳು ಮೆಸೇಜಿಂಗ್ ಆಪ್‌ನ ಮೊಬೈಲ್ ಮತ್ತು ವೆಬ್ ಆವೃತ್ತಿ ಎರಡಕ್ಕೂ ಅನ್ವಯಿಸುತ್ತದೆ ಎಂಬುದನ್ನು ಗಮನಿಸಬೇಕು.) ಹಂತ 3: ತದ ನಂತರ, ಲಾಸ್ಟ್‌ ಸೀನ್ ಆಯ್ಕೆಯನ್ನು ಸೆಲೆಕ್ಟ್‌ ಮಾಡಿ ಮತ್ತು ಸೆಟ್ಟಿಂಗ್ ಅನ್ನು Nobody ಆಯ್ಕೆಗೆ ಬದಲಿಸಿರಿ.

Best Mobiles in India

English summary
WhatsApp has added three new features to the web version.to know more visit to kannada.gizbot.com.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X