Home
ಸುದ್ದಿಜಾಲ

ವಾಟ್ಸಾಪ್‌ನಲ್ಲಿ ಮೆಸೆಜ್‌ನೊಂದಿಗೆ ಪ್ರತ್ಯುತ್ತರ ಫೀಚರ್ಸ್‌: ಬಳಕೆದಾರರಿಗೆ ಅನುಕೂಲ ಏನು?

ವಾಟ್ಸಾಪ್‌ ಪ್ರಮುಖ ಮೆಸೆಜಿಂಗ್‌ ಪ್ಲಾಟ್‌ಫಾರ್ಮ್ ಆಗಿದ್ದು, ಇದರಲ್ಲಿ ಸಾಕಷ್ಟು ಬದಲಾವಣೆ ಸಂಭವಿಸಿವೆ. ಈ ನಡುವೆ ಹೊಸ ಹೊಸ ಫೀಚರ್ಸ್‌ಗಳ ಮೂಲಕ ಬಳಕೆದಾರರು ವಿವಿಧ ಸೌಲಭ್ಯ ಪಡೆದುಕೊಳ್ಳುತ್ತಿದ್ದು, ಇನ್ಮುಂದೆ ಮತ್ತೊಂದು ವಿಶೇಷ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ. ಈ ಮೂಲಕ ನಿಮ್ಮ ಆತ್ಮೀಯರೊಂದಿಗೆ ನಿರಂತರ ಸಂಪರ್ಕದಲ್ಲಿ ಇರಬಹುದು.

ಹೌದು, ವಾಟ್ಸಾಪ್‌ ನಲ್ಲಿ ಮೆಸೆಜ್‌ ಮಾತ್ರವಲ್ಲದೇ ಆಡಿಯೋ ಹಾಗೂ ವಿಡಿಯೋ ಕರೆ ಸಹ ಮಾಡಬಹುದಾಗಿದ್ದು, ಸಂವಹನಕ್ಕೆ ಅತ್ಯುತ್ತಮ ಮಾರ್ಗವಾಗಿ ಇದನ್ನು ಬಳಕೆ ಮಾಡಲಾಗುತ್ತಿದೆ. ಅದರಂತೆ ಮೆಸೆಜ್‌ನೊಂದಿಗೆ ಪ್ರತ್ಯುತ್ತರ ಎಂಬ ಫೀಚರ್ಸ್‌ (reply with message) ಅನ್ನು ವಾಟ್ಸಾಪ್‌ ಪರಿಚಯಿಸಲಿದೆ. ಈ ಮೂಲಕ ಒಳಬರುವ ಕರೆಗೆ ಸುಲಭ ಪ್ರತಿಕೆಯೆ ನೀಡಬಹುದಾಗಿದೆ. ಹಾಗಿದ್ರೆ ಇದು ಹೇಗೆ ಕೆಲಸ ಮಾಡುತ್ತದೆ?, ಇದನ್ನು ಬಳಕೆ ಮಾಡುವುದು ಹೇಗೆ ಎಂಬ ಮಾಹಿತಿಗಾಗಿ ಈ ಲೇಖನ ಓದಿರಿ.

ವಾಟ್ಸಾಪ್‌ನಲ್ಲಿ ಮೆಸೆಜ್‌ನೊಂದಿಗೆ ಪ್ರತ್ಯುತ್ತರ ಫೀಚರ್ಸ್‌: ಅನುಕೂಲ ಏನು?

ಮೆಸೆಜ್‌ನೊಂದಿಗೆ ಪ್ರತ್ಯುತ್ತರ: ವಾಟ್ಸಾಪ್‌ ಬೀಟಾ ಪರೀಕ್ಷಕರಿಗೆ ಬಿಡುಗಡೆ ಮಾಡಲು ಹೊಸ ಫೀಚರ್ಸ್‌ ಮೇಲೆ ಕೆಲಸ ಮಾಡುತ್ತಿದೆ. ಅದರಲ್ಲೂ ಆಂಡ್ರಾಯ್ಡ್‌ 2.23.9.16 ಅಪ್‌ಡೇಟ್‌ಗಾಗಿ ಇತ್ತೀಚಿನ ವಾಟ್ಸಾಪ್ ಬೀಟಾವನ್ನು ಇನ್‌ಸ್ಟಾಲ್‌ ಮಾಡಿದ ನಂತರ ಬಳಕೆದಾರರು ಕರೆ ನೋಟಿಫಿಕೇಶನ್‌ನಲ್ಲಿ ಹೊಸ ಪ್ರತ್ಯುತ್ತರ ಬಟನ್ ಆಯ್ಕೆ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಹೇಗೆ ಸಾಮಾನ್ಯ ಕರೆ ಬಂದರೆ ಫೋನ್‌ನಲ್ಲಿ ನಂತರ ಕರೆ ಮಾಡುತ್ತೇವೆ, ಈ ವೇಳೆಯಲ್ಲಿ ಕರೆ ಸ್ವೀಕಾರ ಮಾಡಲು ಆಗುವುದಿಲ್ಲ ಎಂಬಿತ್ಯಾದಿ ಮೆಸೆಜ್‌ಗಳನ್ನು ಕರೆ ಮಾಡಿದವರಿಗೆ ಕಳುಹಿಸುತ್ತೇವೋ ಅದೇ ರೀತಿ ಈ ವಿಶೇಷ ಫೀಚರ್ಸ್‌ ಬಳಕೆದಾರರಿಗೆ ಒಳಬರುವ ಕರೆಯನ್ನು ನಿರಾಕರಿಸಲು ಮತ್ತು ಅದೇ ಸಮಯದಲ್ಲಿ ಕರೆ ಮಾಡಿದವರಿಗೆ ಕಾರಣ ತಿಳಿಸುವ ಸಂದೇಶವನ್ನು ಕಳುಹಿಸಲು ಅನುವು ಮಾಡಿಕೊಡುತ್ತಿದೆ. ಈ ಬಗ್ಗೆ ವಾಟ್ಸಾಪ್‌ ಅನ್ನು ಟ್ರ್ಯಾಕ್ ಮಾಡುವ WABetaInfo ವರದಿ ಮಾಡಿದೆ.

ಈ ಫೀಚರ್ಸ್‌ ಹೇಗೆ ಕೆಲಸ ಮಾಡಲಿದೆ?: ವರದಿಯ ಪ್ರಕಾರ ನೀವು ವಾಟ್ಸಾಪ್‌ ಕರೆ ಸ್ವೀಕರಿಸಿದಾಗ ಅದರಲ್ಲಿ ಕರೆ ಪ್ರತ್ಯುತ್ತರ ಬಟನ್ ಕಾಣಿಸಿಕೊಳ್ಳಲಿದೆ. ಅಂದರೆ ಅದರಲ್ಲಿ ಮೂರು ಆಯ್ಕೆಗಳಿದ್ದು, ಬಳಕೆದಾರರು ತಮ್ಮ ಇಚ್ಚೆಗೆ ಅನುಗುಣವಾಗಿ ನಿರಾಕರಣೆ, ಮತ್ತು ಉತ್ತರ ಪ್ರತ್ಯುತ್ತರ ಬಟನ್ ಅನ್ನು ಆಯ್ಕೆ ಮಾಡಬಹುದು. ಈ ಮೂಲಕ ಕರೆ ಮಾಡಿದವರಿಗೆ ನಿಖರ ಮಾಹಿತಿ ದೊರೆಯುತ್ತದೆ.

ವಾಟ್ಸಾಪ್‌ನಲ್ಲಿ ಮೆಸೆಜ್‌ನೊಂದಿಗೆ ಪ್ರತ್ಯುತ್ತರ ಫೀಚರ್ಸ್‌: ಅನುಕೂಲ ಏನು?

ಇನ್ನು ಪ್ರತ್ಯುತ್ತರ ಬಟನ್ ಅನ್ನು ಟ್ಯಾಪ್ ಮಾಡಿದಾಗ ಒಳಬರುವ ಕರೆ ಕಡಿತವಾಗಲಿದ್ದು, ಸಂದೇಶ ಬಾಕ್ಸ್ ಆಟೋಮ್ಯಾಟಿಕ್‌ ಆಗಿ ತೆರೆದುಕೊಳ್ಳಲಿದೆಯಂತೆ. ಇದರಲ್ಲಿ ಬಳಕೆದಾರರಿಗೆ ಕರೆ ಮಾಡಿದವರಿಗೆ ತ್ವರಿತ ಮೆಸೆಜ್‌ ಅನ್ನು ಕಳುಹಿಸಲು ಅನುವು ಮಾಡಿಕೊಡುತ್ತದೆ ಎಂದು ತಿಳಿಸಲಾಗಿದೆ. ಅಂದರೆ ಇದರಲ್ಲಿ ತಾವು ಯಾಕೆ ಕರೆಗೆ ಉತ್ತರಿಸಲು ಸಾಧ್ಯವಾಗಲಿಲ್ಲ ಎನ್ನುವ ಕಾರಣವನ್ನು ಈ ಮೂಲಕ ಕಳುಹಿಸಬಹುದಾಗಿದೆ.

ಯಾವೆಲ್ಲಾ ಸಂದರ್ಭದಲ್ಲಿ ಅನುಕೂಲ: ಈ ವಿಶೇಷ ಫೀಚರ್ಸ್‌ ಮೀಟಿಂಗ್‌ನಲ್ಲಿರುವಾಗ, ಪ್ರಯಾಣ ಮಾಡುವಾಗ, ಇಂಟರ್ನೆಟ್ ಸಮಸ್ಯೆ ಇರುವಾಗ, ಗಭೀರ ಕೆಲಸದಲ್ಲಿ ತಲ್ಲೀನವಾಗಿದ್ದಾಗ, ಇಂಟ್ರೆಸ್ಟಿಂಗ್ ವಿಡಿಯೋ ನೋಡುವಾಗ ಅಥವಾ ಆಡಿಯೋ ಆಲಿಸುವಾಗ ಸೇರಿದಂತೆ ಅಗತ್ಯ ಸಮಯದಲ್ಲಿ ಇದು ಬಳಕೆಗೆ ಬರಲಿದ್ದು, ಆ ಕ್ಷಣದಲ್ಲಿ ಆಗುವ ಅನಾನುಕೂಲದಿಂದ ಪಾರಾಗಬಹುದಾಗಿದೆ. ಇದಿಷ್ಟು ಮಾತ್ರವಲ್ಲದೆ ಎಂದಿನಂತೆ ಮೆಸೆಜ್‌ ಮೂಲಕ ಅವರೊಂದಿಗೆ ಸಂಪರ್ಕ ಸಾಧಿಸಬಹುದಾಗಿದೆ.

ಎಂದಿನಿಂದ ಹಾಗೂ ಯಾರಿಗೆಲ್ಲಾ ಈ ಫೀಚರ್ಸ್‌ ಲಭ್ಯ: ಪ್ಲೇ ಸ್ಟೋರ್‌ನಿಂದ ಆಂಡ್ರಾಯ್ಡ್‌ ಬಳಕೆದಾರರು ವಾಟ್ಸಾಪ್‌ ಬೀಟಾದ ಇತ್ತೀಚಿನ ಅಪ್‌ಡೇಟ್ ಅನ್ನು ಇನ್‌ಸ್ಟಾಲ್‌ಮಾಡಿಕೊಳ್ಳುವ ಮೂಲಕ ಈ ಫೀಚರ್ಸ್‌ ಅನ್ನು ಪಡೆದುಕೊಳ್ಳಬಹುದಾಗಿದೆ. ಅದರಂತೆ ಮುಂಬರುವ ದಿನಗಳಲ್ಲಿ ಇದು ಇನ್ನಷ್ಟು ವಾಟ್ಸಾಪ್‌ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ತಿಳಿದುಬಂದಿದೆ.

ವಾಟ್ಸಾಪ್‌ನಲ್ಲಿ ಮೆಸೆಜ್‌ನೊಂದಿಗೆ ಪ್ರತ್ಯುತ್ತರ ಫೀಚರ್ಸ್‌: ಅನುಕೂಲ ಏನು?

ಹಲವು ಡಿವೈಸ್‌ಗಳಲ್ಲಿ ಒಂದೇ ಅಕೌಂಟ್‌: ಈ ನಡುವೆ ವಾಟ್ಸಾಪ್‌ನಲ್ಲಿ ಮತ್ತೊಂದು ಫೀಚರ್ಸ್‌ ಭಾರೀ ಸುದ್ದಿಯಲ್ಲಿದೆ. ಅದುವೇ ಹಲವು ಡಿವೈಸ್‌ಗಳಲ್ಲಿ ಒಂದೇ ಅಕೌಂಟ್ ಅನ್ನು ಬಳಕೆ ಮಾಡಿವ ಆಯ್ಕೆ. ಈ ಮೂಲಕ ಬಳಕೆದಾರರು ತಮ್ಮ ವಾಟ್ಸಾಪ್‌ ಖಾತೆಯನ್ನು ನಾಲ್ಕು ಸ್ಮಾರ್ಟ್‌ಫೋನ್‌ಗಳಿಗೆ ಲಿಂಕ್‌ ಮಾಡಬಹುದಾಗಿದೆ. ಈ ಫಿಚರ್ಸ್‌ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಚರ್ಚಿತ ವಿಷಯವಾಗಿ ಕಾಣಿಸಿಕೊಂಡಿದೆ.

Best Mobiles in India

English summary
WhatsApp is used not only for messaging but also for audio and video calling, making it the best way to communicate. Meanwhile, a feature called reply with message has been announced.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+