Just In
Don't Miss
- Automobiles
ಐಷಾರಾಮಿ ಪೋರ್ಷೆ ಎಲೆಕ್ಟ್ರಿಕ್ ಕಾರು ಟೆಸ್ಟ್ ಡ್ರೈವ್ ಮಾಡಿದ ಮೆಗಾಸ್ಟಾರ್ ಮಮ್ಮುಟ್ಟಿ
- Lifestyle
ಸಂಖ್ಯಾಶಾಸ್ತ್ರ: ಈ ಜನ್ಮ ಸಂಖ್ಯೆ ಹೊಂದಿರುವವರ ದಾಂಪಾತ್ಯದಲ್ಲಿ ಸಮಸ್ಯೆಗಳೇ ಹೆಚ್ಚು
- News
ಹೈಕಮಾಂಡ್ ಬುಲಾವ್, ಸಿಎಂ ದೆಹಲಿಗೆ ದೌಡು: ಈ 3 ಕಾರಣಕ್ಕೆ?
- Movies
ಡ್ರಾಮಾ ಜ್ಯೂನಿಯರ್ಸ್ ವೇದಿಕೆಯಲ್ಲಿ 'ಪದ್ಮಶ್ರೀ' ಜೋಗತಿ ಮಂಜಮ್ಮ, ಮಕ್ಕಳ ಅಭಿನಯಕ್ಕೆ ಫಿದಾ
- Education
IOCL Recruitment 2022 : 43 ವೈದ್ಯಕೀಯ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಎಸಿ ಬಳಸಿದರೂ ವಿದ್ಯುತ್ ಬಿಲ್ ಕಡಿತ ಮಾಡುವುದು ಹೇಗೆ?
- Sports
MI vs DC: ಆರ್ಸಿಬಿಯ ಭವಿಷ್ಯ ನಿರ್ಧರಿಸುವ ಪಂದ್ಯ: ಪ್ರಿವ್ಯೂ, ಪಿಚ್ ರಿಪೋರ್ಟ್, ಸಂಭಾವ್ಯ ಪ್ಲೇಯಿಂಗ್ XI
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ವಾಟ್ಸಾಪ್ ಹೋಲುವ ಈ ಆಪ್‌ಗಳನ್ನು ಡೌನ್‌ಲೋಡ್ ಮಾಡಲೇಬೇಡಿ!
ಮೆಟಾ ಒಡೆತನದ ಜನಪ್ರಿಯ ಇನ್‌ಸ್ಟಂಟ್ ಮೆಸೆಜಿಂಗ್ ಅಪ್ಲಿಕೇಶನ್ ವಾಟ್ಸಾಪ್, ಆಕರ್ಷಕ ಫೀಚರ್ಸ್ ಹೊಂದಿ ಬಳಕೆದಾರರಿಗೆ ಆಪ್ತ ಎನಿಸಿದೆ. ಆಪ್ ಸ್ಟೋರ್‌ಗಳಲ್ಲಿ ವಾಟ್ಸಾಪ್ ಡೌನ್‌ಲೋಡ್‌ಗೆ ಲಭ್ಯ ಇದೆ. ಹಾಗೆಯೇ ವಾಟ್ಸಾಪ್‌ನಂತೆ ಹೋಲುವ ಇತರೆ ಕೆಲವು ಥರ್ಡ್ ಪಾರ್ಟಿ ಅಪ್ಲಿಕೇಶನ್ ಗಳು ಸಹ ಇವೆ. ಆದರೆ ವಾಟ್ಸಾಪ್‌ನಂತೆ ಕಾಣುವ ಇತರೆ ಅಪ್ಲಿಕೇಶನ್ ಡೌನ್‌ಲೋಡ್ ಮಾಡುವ ಮುನ್ನ ಎಚ್ಚರ ವಹಿಸಿ.

ಹೌದು, ಜನಪ್ರಿಯ ವಾಟ್ಸಾಪ್ ಆಪ್ ಅನ್ನು ಹೋಲುವ Whatsapp Plus, GBWhatsApp, YoWhatsApp, FMWhatsApp, WhatsApp Prime ಮತ್ತು OGWhatsApp ಇಂತಹ ಹೆಸರಿನ ಥರ್ಡ್ ಪಾರ್ಟಿ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿಕೊಂಡಿದ್ದರೆ ಈ ಕೂಡಲೇ ಡಿಲೀಟ್ ಮಾಡಿಬಿಡಿ. ವಾಟ್ಸಾಪ್ ತನ್ನ ಆಪ್ ಮಾಡೆಡ್ ಮಾಡಲಾದ ಆವೃತ್ತಿಗಳನ್ನು ಅನುಮತಿಸುವುದಿಲ್ಲ ಮತ್ತು ಅಂತಹ ಆಪ್ ಹೊಂದಿರುವ ಸ್ಮಾರ್ಟ್‌ಫೋನ್ ಬಳಕೆದಾರರನ್ನು ನಿಷೇಧಿಸುವ ಸಾಧ್ಯತೆ ಇದೆ.

ಬಳಕೆದಾರರು ವಾಟ್ಸಾಪ್ ಹೋಲುವ ಥರ್ಡ್ ಪಾರ್ಟಿ ಆಪ್‌ಗಳನ್ನು ಬಳಕೆ ಮಾಡಿದರೇ ಮ್ತು ತಪ್ಪಿತಸ್ಥರೆಂದು ಕಂಡುಬಂದರೆ ಅಂತಹವರ ಖಾತೆಗಳನ್ನು ಖಾಯಂ ನಿಷೇಧಿಸಲಾಗುತ್ತದೆ ಎಂದು ತಿಳಿದುಬಂದಿದೆ. ಈ ನಿಟ್ಟಿನಲ್ಲಿ ಬಳಕೆಅದರರು ಅಧಿಕೃತ ವಾಟ್ಸಾಪ್ ಅಪ್ಲಿಕೇಶನ್ (WhatsApp) ಅನ್ನು ಮಾತ್ರ ಡೌನ್‌ಲೋಡ್ ಮಾಡಿಕೊಳ್ಳುವುದು ಸೂಕ್ತ ಮತ್ತು ಸುರಕ್ಷಿತ ಎಂದು ಹೇಳಲಾಗಿದೆ. ಏಕೆಂದರೇ ಥರ್ಟ್ ಪಾರ್ಟಿ ಆಪ್‌ಗಳ ಬಳಕೆ ಅಪಾಯಕಾರಿ ಆಗಿದೆ.
ಬಳಕೆದಾರರು ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್ ನಲ್ಲಿ WhatsApp Delta ಅಥವಾ GBWhatsApp ಅಪ್ಲಿಕೇಶನ್ಗಳು ಡೌನ್‌ಲೋಡ್ ಮಾಡಲು ಆಗುವುದಿಲ್ಲ. ಈ ಆಪ್‌ಗಳನ್ನು ಈಗಾಗಲೇ ಗೂಗಲ್ ಪ್ಲೇ ಸ್ಟೋರ್ನಲ್ಲಿ ಮತ್ತು ಆಪಲ್ ಆಪ್ ಸ್ಟೋರ್ನಲ್ಲಿ ಡೌನ್‌ಲೋಡ್ ಮಾಡುವುದನ್ನು ನಿಷೇಧಿಸಲಾಗಿದೆ.
ಅಧಿಕೃತ ಅಲ್ಲದ ವಾಟ್ಸಾಪ್ ಆಪ್‌ಗಳು ಸುರಕ್ಷಿತವಾಗಿಲ್ಲ. ಇಂತಹ ಆಪ್‌ಗಳಲ್ಲಿ ಮೆಸೆಜ್‌ಗಳನ್ನು ಮೂರನೇ ವ್ಯಕ್ತಿ ಓದುವ ಸಾಧ್ಯತೆಗಳು ಇರುತ್ತವೆ. ಅಲ್ಲದೇ ಈ ಇಂತಹ ಆಪ್‌ಗಳ ಮೂಲಕ ಬ್ಯಾಂಕಿಂಗ್ ಮಾಹಿತಿ, ಪಾಸ್‌ವರ್ಡ್‌ಗಳು ಅಥವಾ ಯಾವುದೇ ಇತರ ವೈಯಕ್ತಿಕ ಮಾಹಿತಿಯನ್ನು ಶೇರ್ ಮಾಡುವುದು ಅಪಾಯಕ್ಕೆ ಹಾದಿ ಮಾಡಿಕೊಡುವ ಸಾಧ್ಯತೆಗಳು ಇರುತ್ತವೆ. ಹೀಗಾಗಿ GBWhatsApp ಆಪ್ ಅಷ್ಟೇ ಅಲ್ಲದೇ, ಇತರೆ ವಾಟ್ಸಾಪ್ ಹೋಲುವ ಮೋಡ್ ಅನ್ನು ಬಳಸುವಾಗ ಎಚ್ಚರವಹಿಸಿ.

ವಾಟ್ಸಾಪ್‌ನಲ್ಲಿ ಮೆಸೆಜ್ ನೋಡಿದಾಗ ಬ್ಲೂ ಟಿಕ್ ಕಾಣಿಸದಂತೆ ಮಾಡಲು ಹೀಗೆ ಮಾಡಿ:
ಬ್ಲೂ ಟಿಕ್ ಕಾಣಿಸದಂತೆ ಸೆಟ್ ಮಾಡಲು ಸೆಟ್ಟಿಂಗ್ ವಿಭಾಗದಲ್ಲಿ ಅವಕಾಶ ಇದೆ. ಆದರೆ ಅದೇ ಹೆಸರಿನಿಂದ ಆಯ್ಕೆ ಒದಗಿಸಿಲ್ಲ. ಬದಲಾಗಿ Read Receipts option ಆಯ್ಕೆ ಇದೆ. ಈ ಆಯ್ಕೆ ಆಫ್ ಮಾಡುವ ಮೂಲಕ ವಾಟ್ಸಾಪ್‌ನಲ್ಲಿ ಬ್ಲೂ ಟಿಕ್ ಕಾಣಿಸದಂತೆ ಸೆಟ್ ಮಾಡಬಹುದಾಗಿದೆ. ಮುಂದಿನ ಕ್ರಮಗಳನ್ನು ಫಾಲೋ ಮಾಡಿರಿ.
ಹಂತ 1: ಮೊದಲು ವಾಟ್ಸಾಪ್ ಅಪ್ಲಿಕೇಶನ್ ಗೆ ಭೇಟಿ ನೀಡಿ ಮತ್ತು ನಂತರ ಸೆಟ್ಟಿಂಗ್ಸ್ ವಿಭಾಗವನ್ನು ತೆರೆಯಿರಿ.
ಹಂತ 2: ನಂತರ, Account/ಖಾತೆ ಗೆ ಹೋಗಿ ಮತ್ತು Privacy/ಗೌಪ್ಯತೆ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
ಹಂತ 3: ತದ ನಂತರ Read Receipts ಆಯ್ಕೆಗೆ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಚಾಟ್‌ಗಳಲ್ಲಿ ಬ್ಲೂ ಟಿಕ್ ಕಾಣಿಸದಂತೆ ಸೆಟ್ ಮಾಡಲು ಅದನ್ನು ನಿಷ್ಕ್ರಿಯಗೊಳಿಸಿ.
ಈ ಹಂತಗಳನ್ನು ಅನುಸರಿಸುವ ಮೂಲಕ ಬಳಕೆದಾರರು ತಮಗೆ ಯಾವಾಗ ಬೇಕಾದರೂ ಈ ಆಯ್ಕೆಯನ್ನು ಮತ್ತೆ ಸಕ್ರಿಯಗೊಳಿಸಲು ಅವಕಾಶ ಇದೆ. ಈ ಆಯ್ಕೆಯನ್ನು ಸಕ್ರಿಯ ಮಾಡಿದರೇ ನೀವು ಕಳುಹಿಸಿದ ಮೆಸೆಜ್‌ಗಳು ಇತರರು ಓದಿದಾಗ ಬ್ಲೂ ಟಿಕ್ ನೋಡಲು ನಿಮಗೆ ಸಾಧ್ಯವಾಗುವುದಿಲ್ಲ.
-
54,535
-
1,19,900
-
54,999
-
86,999
-
49,975
-
49,990
-
20,999
-
1,04,999
-
44,999
-
64,999
-
20,699
-
49,999
-
11,499
-
54,999
-
7,999
-
8,980
-
17,091
-
10,999
-
34,999
-
39,600
-
25,750
-
33,590
-
27,760
-
44,425
-
13,780
-
1,25,000
-
45,990
-
1,35,000
-
82,999
-
17,999