Home
ಸುದ್ದಿಜಾಲ

ವಾಟ್ಸಪ್ ಸೇರಲಿವೆ 5 ಕುತೂಹಲಕಾರಿ ಫೀಚರ್ಸ್‌ಗಳು!

ಫೇಸ್‌ಬುಕ್ ಮಾಲೀಕತ್ವದ ಇನ್‌ಸ್ಟಂಟ್ ಮೆಸೆಜಿಂಗ್ ಆಪ್‌ ವಾಟ್ಸಾಪ್‌ ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಹೊಂದಿದೆ. ತನ್ನ ಬಳಕೆದಾರರ ಖಾಸಗಿತನದ ಸುರಕ್ಷತೆಗಾಗಿ ಸಂಸ್ಥೆಯು ಈಗಾಗಲೆ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದೆ. ಹೀಗೆ ಅನುಕೂಲಕರ ಫೀಚರ್‌ ಪರಿಚಯಿಸುತ್ತಲೆ ಸಾಗಿರುವ ವಾಟ್ಸಾಪ್‌ ಇದೀಗ ಮತ್ತಷ್ಟು ಕುತೂಹಲಕಾರಿ ಫೀಚರ್ಸ್‌ಗಳನ್ನು ಅಳವಡಿಸಲು ಸಜ್ಜಾಗಿದೆ.

ವಾಟ್ಸಾಪ್

ಹೌದು, ವಾಟ್ಸಾಪ್ ಸಂಸ್ಥೆಯು ಇತ್ತೀಚಿಗೆ ಹಲವು ಅತ್ಯುತ್ತಮ ಫೀಚರ್ಸ್‌ಗಳನ್ನು ಹೊಸದಾಗಿ ಸೇರಿಸಿ ಬಳಕೆದಾರರಿಗೆ ಹೆಚ್ಚು ಉಪಯುಕ್ತ ಅನಿಸಿವೆ. ಬೀಟಾ ಆವೃತ್ತಿಯಲ್ಲಿ ಅಡ್ವಾನ್ಸ್‌ ಸರ್ಚ್ ಮೋಡ್ ಫೀಚರ್ ಅನ್ನು ಅಳವಡಿಸಿದೆ ಹಾಗೂ ವಾಟ್ಸಾಪ್ ಗ್ರೂಪ್ ವಿಡಿಯೊ ಕರೆ ಮಿತಿಯಲ್ಲಿ ಸಹ ಬದಲಾವಣೆ ಮಾಡಿದೆ. ಇದೀಗ ಮತ್ತಷ್ಟು ಬಳಕೆದಾರ ಸ್ನೇಹಿ ಫೀಚರ್ಸ್‌ಗಳನ್ನು ಅಳವಡಿಸಲು ಸಂಸ್ಥೆಯು ತಯಾರಿ ನಡೆಸಿದೆ. ಹಾಗಾದರೆ ವಾಟ್ಸಾಪ್ ಸೇರಲಿರುವ ಆಕರ್ಷಕ ಫೀಚರ್ಸ್‌ ಯಾವುವು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಮಲ್ಟಿ-ಡಿವೈಸ್‌ ಸಪೋರ್ಟ್‌

ಮಲ್ಟಿ-ಡಿವೈಸ್‌ ಸಪೋರ್ಟ್‌

ಮಲ್ಟಿ-ಡಿವೈಸ್‌ ಸಪೋರ್ಟ್‌ ಫೀಚರ್ ಪರಿಚಯಿಸುವಲ್ಲಿ ವಾಟ್ಸಾಪ್ ಕಾರ್ಯನಿರ್ವಹಿಸುತ್ತಿದ್ದು, ಒಂದೇ ಸಮಯದಲ್ಲಿ ಇತರೆ ಡಿವೈಸ್‌ಗಳಲ್ಲಿ ಖಾತೆ ತೆರೆಯಬಹುದು ಎಂದು Wabetainfo ತಾಣವು ತಿಳಿಸಿದೆ. ಬಳಕೆದಾರರು ಬಹು ಖಾತೆಗಳನ್ನು ರಚಿಸದೆ ಬಳಕೆದಾರರು ಒಂದೇ ಸಮಯದಲ್ಲಿ ನಾಲ್ಕು ಸಾಧನಗಳಿಗೆ ಲಾಗ್ ಇನ್ ಮಾಡಲು ಈ ಫೀಚರ್ ಅನುಮತಿಸುತ್ತದೆ. ಇದರರ್ಥ ನೀವು ಬೇರೆ ಬೇರೆ ಖಾತೆಗಳನ್ನು ಮಾಡದೆ ಒಂದೇ ಸಮಯದಲ್ಲಿ ನಿಮ್ಮ ಐಫೋನ್ ಮತ್ತು ಐಪ್ಯಾಡ್‌ನಲ್ಲಿ ವಾಟ್ಸಾಪ್ ಅನ್ನು ಬಳಸಬಹುದು

ಆಟೋ-ಡೌನ್‌ಲೋಡ್‌ಗೆ ಹೊಸ ರೂಲ್ಸ್‌

ಆಟೋ-ಡೌನ್‌ಲೋಡ್‌ಗೆ ಹೊಸ ರೂಲ್ಸ್‌

ವಾಟ್ಸಪ್‌ ಮೀಡಿಯಾ ಫೈಲ್‌ಗಳ ಆಟೋ ಡೌನ್‌ಲೋಡ್ ಆಯ್ಕೆ ನಿಯಂತ್ರಿಸುವ ಸೌಲಭ್ಯ ಈಗಾಗಲೆ ವಾಟ್ಸಪ್‌ನಲ್ಲಿ ಇವೆ. ಆ ಆಯ್ಕೆಗಳಲ್ಲಿ ಈಗ ಮತ್ತಷ್ಟು ಹೊಸ ಫೀಚರ್ಸ್‌ ಸೇರಿಸುವ ಮುನ್ಸೂಚನೆ ನೀಡಿದೆ. ವಾಟ್ಸಪ್ ಮೀಡಿಯಾ ಫೈಲ್ ಆಟೋ ಡೌನ್‌ಲೋಡ್ ನಲ್ಲಿನ ಹೊಸ ಫೀಚರ್ಸ್‌ ಬಳಕೆದಾರರ ಸ್ಟೋರೇಜ್ ಉಳಿಕೆಗೆ ಸಹಾಯಕವಾಗಲಿದೆ ಎನ್ನಲಾಗಿದೆ.

ಸೆಲ್ಫ್ ಡಿಲೀಟ್ ಮೆಸೆಜ್ಸ

ಸೆಲ್ಫ್ ಡಿಲೀಟ್ ಮೆಸೆಜ್ಸ

ವಾಟ್ಸಪ್‌ನಲ್ಲಿ ಸೆಲ್ಫ್ ಡಿಲೀಟ್ ಮೆಸೆಜ್- (self-destructing messages) ವಿಶೇಷ ಸೇರಲಿದೆ. ಈ ಆಯ್ಕೆಯು ಬಳಕೆದಾರರು ಕಳುಹಿಸಿದ ಮೆಸೆಜ್ ನಿರ್ದಿಷ್ಟ ಸಮಯದ ನಂತರ ಮೆಸೆಜ್ ಸ್ವೀಕರಿಸಿದ ಚಾಟ್‌ನಿಂದ ಸ್ವಯಂ ಪ್ರೇರಿತವಾಗಿ ಡಿಲೀಟ್ ಆಗುವ ವ್ಯವಸ್ಥೆಯನ್ನು ಹೊಂದಿರಲಿದೆ. ಇನ್ನು ಮೆಸೆಜ್ ಆಟೋಮ್ಯಾಟಿಕ್ ಆಗಿ ಡಿಲೀಟ್ ಆಗಲು ಸಮಯದ ಆಯ್ಕೆಗಳನ್ನು ಈ ಫೀಚರ್ ಒಳಗೊಂಡಿರಲಿದೆ. ಅವುಗಳು ಕ್ರಮವಾಗಿ ಒಂದು ಗಂಟೆ, ಒಂದು ವಾರ, ಒಂದು ತಿಂಗಳು ಮತ್ತು ಒಂದು ವರ್ಷ ಹೀಗೆ ಇರಲಿವೆ ಎಂದು ಹೇಳಲಾಗಿದೆ.

ಪಾಸ್‌ವರ್ಡ್‌ ಪ್ರೊಟೆಕ್ಷನ್

ಪಾಸ್‌ವರ್ಡ್‌ ಪ್ರೊಟೆಕ್ಷನ್

ವಾಟ್ಸಪ್‌ ಚಾಟ್ ಬ್ಯಾಕ್‌ಅಪ್ ಆಯ್ಕೆಯ ಮೂಲಕ ಗೂಗಲ್ ಡ್ರೈವ್‌ಗೆ ಬ್ಯಾಕ್‌ಅಪ್ ಮಾಡುವ ಆಯ್ಕೆ ಸದ್ಯ ವಾಟ್ಸಪ್‌ನಲ್ಲಿ ಇದೆ. ಆದರೆ ಯಾವುದೇ ಸುರಕ್ಷತಾ ಕ್ರಮಗಳು ಇದರಲ್ಲಿಲ್ಲ. ಸದ್ಯದಲ್ಲಿಯೆ ವಾಟ್ಸಪ್‌ನ ನೂತನ ಅಪ್‌ಡೇಟ್‌ನಲ್ಲಿ ಪಾಸ್‌ವರ್ಡ್‌ ಪ್ರೊಟೆಕ್ಷನ್ ಆಯ್ಕೆ ಲಭ್ಯವಾಗಲಿದೆ. ಬ್ಯಾಕ್‌ಅಪ್‌ ಗೌಪ್ಯತೆಗಾಗಿ ಪಾಸ್‌ವರ್ಡ್‌ ಇಡುವ ಅವಕಾಶ ಸಿಗಲಿದೆ. ಹಾಗೂ ಬ್ಯಾಕ್‌ಅಪ್‌ ಚಾಟ್‌ ಎನ್‌ಕ್ರಿಪ್ಟ್ ಸುರಕ್ಷಿತ ಆಗಿರಲಿವೆ.

ಅಡ್ವಾನ್ಸ್‌ ಸರ್ಚ್ ಮೋಡ್

ಅಡ್ವಾನ್ಸ್‌ ಸರ್ಚ್ ಮೋಡ್

ವಾಟ್ಸಾಪ್ ಶೀಘ್ರದಲ್ಲೇ ಪಡೆಯಬಹುದಾದ ಮತ್ತೊಂದು ಫೀಚರ್‌ ಎಂದರೇ ಅಡ್ವಾನ್ಸ್‌ ಸರ್ಚ್ ಮೋಡ್. ಈ ಫೀಚರ್‌ ಬಿಡುಗಡೆ ಆದ ನಂತರ ಈ ಆಯ್ಕೆ ಮೂಲಕ ಬಳಕೆದಾರರು ತಮ್ಮ ಫೈಲ್‌ಗಳು, ಚಿತ್ರಗಳು, ವೀಡಿಯೊಗಳು ಮತ್ತು ಹೆಚ್ಚಿನದನ್ನು ಹುಡುಕಲು ವೈಶಿಷ್ಟ್ಯವು ಅನುಮತಿಸುತ್ತದೆ.

Best Mobiles in India

English summary
Here are some of the features that could come to WhatsApp sooner than expected.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+