Home
ಸುದ್ದಿಜಾಲ

ಇನ್ಮುಂದೆ ವಾಟ್ಸಾಪ್‌ನಲ್ಲಿ OCR ಸೌಲಭ್ಯ:..ಏನಿದು ಫೀಚರ್‌?..ಯಾರಿಗೆ ಲಭ್ಯ!?

ವಾಟ್ಸಾಪ್‌ ತನ್ನ ಬಳಕೆದಾರರಿಗೆ ಅನುಕೂಲ ಆಗುವ ಅದೆಷ್ಟೋ ಫೀಚರ್ಸ್‌ಗಳನ್ನು ಈಗಾಗಲೇ ಪರಿಚಯಿಸಿದ್ದು ನಿನ್ನೆಯಷ್ಟೇ ಐಓಎಸ್‌ ಬಳಕೆದಾರರಿಗೆ ಸ್ಟೇಟಸ್‌ನಲ್ಲಿ ವಾಯ್ಸ್‌ ಮೆಸೆಜ್‌ ಫೀಚರ್ಸ್‌ ಅನ್ನು ಪರಿಚಯಿಸಿತ್ತು. ಇದರ ನಡುವೆ ಈಗ ಮತ್ತೊಂದು ಫೀಚರ್ಸ್‌ ಅನ್ನು ಘೋಷಣೆ ಮಾಡಿದೆ.

ಹೌದು, ಐಓಎಸ್‌ ಬಳಕೆದಾರರಿಗೆ ವಿಶೇಷ ಅನುಭವ ನೀಡುವ ಉದ್ದೇಶದಿಂದ ವಾಟ್ಸಾಪ್‌ ಇದೀಗ ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್ (OCR) ಎಂಬ ಹೊಸ ಫೀಚರ್ಸ್‌ ಅನ್ನು ಪರಿಚಯಿಸಿದ್ದು, ಈ ಹಿಂದೆ ಪರಿಚಯಿಸಲಾದ ಎಲ್ಲಾ ಫೀಚರ್ಸ್‌ಗಳಿಗೆ ಹೋಲಿಕೆ ಮಾಡಿದರೆ ಈ ಹೊಸ ಫೀಚರ್ಸ್‌ ಬಹಳ ವಿಭಿನ್ನವಾಗಿದೆ. ಹಾಗಿದ್ರೆ, ಇದು ಹೇಗೆ ಕೆಲಸ ಮಾಡಲಿದೆ. ಇದರಿಂದ ಪ್ರಯೋಜನ ಏನು ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಇನ್ಮುಂದೆ ವಾಟ್ಸಾಪ್‌ನಲ್ಲಿ OCR ಸೌಲಭ್ಯ:..ಏನಿದು ಫೀಚರ್‌?..ಯಾರಿಗೆ ಲಭ್ಯ!?

ಏನಿದು ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್ ಫೀಚರ್ಸ್‌?: ವಾಟ್ಸಾಪ್‌ ಇದೀಗ ಐಓಎಸ್ ಬಳಕೆದಾರರಿಗೆ ಹೊಸ ನವೀಕರಣ ಬಿಡುಗಡೆ ಮಾಡಿದ್ದು, ಈ ಮೂಲಕ ಐಫೋನ್‌ನಲ್ಲಿ ವಾಟ್ಸಾಪ್‌ ಬಳಕೆ ಮಾಡುವವರು ಚಿತ್ರಗಳಿಂದ ಪಠ್ಯವನ್ನು ನಕಲಿಸಲು ಸಾಧ್ಯವಾಗುತ್ತದೆ. ಅಂದರೆ, ಫೋಟೋದಲ್ಲಿ ಇರುವ ಯಾವುದೇ ಅಕ್ಷರಗಳನ್ನು ನಕಲು ಮಾಡಿಕೊಂಡು ಬೇರೆ ಕಡೆ ಪೇಸ್ಟ್‌ ಮಾಡಬಹುದಾಗಿದೆ.

ಐಓಎಸ್‌ನ ಫೋಟೋಸ್‌ ಆಪ್‌ನಲ್ಲಿ ಬಳಕೆದಾರರಿಗೆ ಈ ಫೀಚರ್ಸ್ ಹಿಂದಿನಿಂದಲೂ ಲಭ್ಯವಿದ್ದರೂ ವಾಟ್ಸಾಪ್‌ನಲ್ಲಿ ಇದನ್ನು ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಯಾಕೆಂದರೆ ಆಪ್‌ ಈ ಫೀಚರ್ಸ್‌ಗೆ ಬೆಂಬಲ ನೀಡಿರಲಿಲ್ಲ. ಆದರೆ, ಇನ್ಮುಂದೆ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದ್ದು, ಇದಕ್ಕಾಗಿ ಬಳಕೆದಾರರು ತಮ್ಮ ವಾಟ್ಸಾಪ್‌ ಅನ್ನು ನವೀಕರಣ ಮಾಡಬೇಕಿದೆ.

ಇನ್ಮುಂದೆ ವಾಟ್ಸಾಪ್‌ನಲ್ಲಿ OCR ಸೌಲಭ್ಯ:..ಏನಿದು ಫೀಚರ್‌?..ಯಾರಿಗೆ ಲಭ್ಯ!?

23.1.0.73 ಅಪ್‌ಡೇಟ್‌ನಲ್ಲಿ ಆಯ್ದ ಐಓಎಸ್‌ ಬೀಟಾ ಬಳಕೆದಾರರಿಗೆ ಈ ಫೀಚರ್ಸ್ ಅನ್ನು ಪರೀಕ್ಷಿಸಲಾಗಿದ್ದು, 23.5.77 ಆವೃತ್ತಿಯೊಂದಿಗೆ ಈಗ ಎಲ್ಲಾ ಐಓಎಸ್‌ ಬಳಕೆದಾರರು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದು ಎಂದು ವಾಟ್ಸಾಪ್‌ ಮಾಹಿತಿಯನ್ನು ಟ್ರ್ಯಾಕ್‌ ಮಾಡುವ WABetaInfo ಮಾಹಿತಿ ನೀಡಿದೆ. ಜೊತೆಗೆ ಈ ಅಪ್‌ಡೇಟ್‌ನೊಂದಿಗೆ ಸ್ಟೇಟಸ್‌ನಲ್ಲಿ ವಾಯ್ಸ್‌ ಮೆಸೆಜ್‌ ಸೌಲಭ್ಯವನ್ನೂ ಸಹ ಪಡೆದುಕೊಳ್ಳಬಹುದಾಗಿದೆ.

ಇನ್ನುಳಿದಂತೆ ಒನ್ UI 5.0 ಚಾಲನೆಯಲ್ಲಿರುವ ಇತ್ತೀಚಿನ ಸ್ಯಾಮ್‌ಸಂಗ್‌ ಡಿವೈಸ್‌ ಹಾಗೂ ಆಯ್ದ ಆಂಡ್ರಾಯ್ಡ್‌ ಫೋನ್‌ಗಳಲ್ಲಿ ಈ ಫೀಚರ್ಸ್‌ ಲಭ್ಯವಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಎಲ್ಲಾ ಆಂಡ್ರಾಯ್ಡ್ ಡಿವೈಸ್‌ನಲ್ಲೂ ಈ ಇದನ್ನು ಪರಿಚಯಿಸಲು ವಾಟ್ಸಾಪ್‌ ಎಲ್ಲಾ ರೀತಿಯ ತಯಾರಿ ನಡೆಸುತ್ತಿದೆ ಎನ್ನಲಾಗಿದೆ. ಈ ಮೂಲಕ ಬಹಳಷ್ಟು ವಾಟ್ಸಾಪ್‌ ಬಳಕೆದಾರರಿಗೆ ಅನುಕೂಲ ಮಾಡಿಕೊಡಲಿದೆ.

ಹಾಗೆಯೇ ಐಓಎಸ್‌ ಬಳಕೆದಾರರಿಗೆ ವಾಯ್ಸ್‌ ನೋಟ್‌ ಫೀಚರ್ಸ್‌ ಅನ್ನು ಪರಿಚಯಿಸಲಾಗಿದ್ದು, ಈ ಫೀಚರ್ಸ್‌ ಮೂಲಕ ವಾಟ್ಸಾಪ್‌ನ ಸ್ಟೇಟಸ್‌ ವಿಭಾಗದಲ್ಲಿ ಬಳಕೆದಾರರು ಮೂವತ್ತು ಸೆಕೆಂಡ್‌ಗಳ ವರೆಗೆ ವಾಯ್ಸ್‌ ಅನ್ನು ರೆಕಾರ್ಡ್‌ ಮಾಡಿ ಶೇರ್‌ ಮಾಡಿಕೊಳ್ಳಬಹುದಾಗಿದೆ. ವಾಯ್ಸ್‌ ರೆಕಾರ್ಡಿಂಗ್ ವೇಳೆ ಏನಾದರೂ ತಪ್ಪು ಸಂಭವಿಸಿದರೆ ಮತ್ತೆ ಅದನ್ನು ರೆಕಾರ್ಡ್‌ ಮಾಡಲು ಅನುಮತಿಸಲಾಗುತ್ತದೆ.

ಇನ್ಮುಂದೆ ವಾಟ್ಸಾಪ್‌ನಲ್ಲಿ OCR ಸೌಲಭ್ಯ:..ಏನಿದು ಫೀಚರ್‌?..ಯಾರಿಗೆ ಲಭ್ಯ!?

ಇದಕ್ಕಾಗಿ ಐಓಎಸ್ ಬಳಕೆದಾರರು 23.5.77 ಆವೃತ್ತಿಗೆ ನವೀಕರಣ ಮಾಡಿಕೊಳ್ಳಬೇಕಿದೆ. ಇದರಿಂದ ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್ ಫೀಚರ್ಸ್‌ ಹಾಗೂ ವಾಯ್ಸ್‌ ನೋಟ್‌ ಫೀಚರ್ಸ್‌ ಅನ್ನು ಒಟ್ಟಿಗೆ ಪಡೆದುಕೊಳ್ಳಬಹುದಾಗಿದೆ. ಈ ಹಿಂದೆ ಆಂಡ್ರಾಯ್ಡ್‌ ಬಳಕೆದಾರರಿಗೆ ಈ ಫೀಚರ್ಸ್‌ ಅನ್ನು ಪರಿಚಯಿಸಲಾಗಿದ್ದು, ಬಳಕೆದಾರರು ಈ ಮೂಲಕ ವಿಶೇಷ ಅನುಭವ ಪಡೆದುಕೊಳ್ಳುತ್ತಿದ್ದಾರೆ .

ವಾಯ್ಸ್‌ ನೋಟ್‌ ಅನ್ನು ಬಳಕೆ ಮಾಡಲು ಮೊದಲು ನಿಮ್ಮ ಐಫೋನ್‌ನಲ್ಲಿ ವಾಟ್ಸಾಪ್‌ ಆಪ್‌ ಓಪನ್‌ ಮಾಡಿ. ನಂತರ ಡಿಸ್‌ಪ್ಲೇ ಕೆಳ ಭಾಗದಲ್ಲಿರುವ ಸ್ಟೇಟಸ್‌ ಟ್ಯಾಬ್‌ಗೆ ಹೋಗಿ. ಅಲ್ಲಿ ಕೆಳಗಿನ ಬಲ ಮೂಲೆಯಲ್ಲಿರುವ ಪೆನ್ಸಿಲ್ ಐಕಾನ್‌ನೊಂದಿಗೆ ಕಾಣಿಸಿಕೊಳ್ಳುವ ಬಟನ್ ಮೇಲೆ ಟ್ಯಾಪ್ ಮಾಡಿ. ಇದಾದ ನಂತರ ಏನನ್ನು ಶೇರ್‌ ಮಾಡಬೇಕು ಎಂದುಕೊಂಡಿದ್ದೀರೋ ಅದನ್ನು ಬಟನ್‌ ಅನ್ನು ದೀರ್ಘವಾಗಿ ಮೂವತ್ತು ಸೆಕೆಂಡ್‌ಗಳ ಕಾಲ ಹಿಡಿದುಕೊಂಡು ರೆಕಾರ್ಡ್‌ ಮಾಡಿ.

Best Mobiles in India

English summary
WhatsApp has now introduced a new feature called Optical Character Recognition (OCR), which is only available for iOS users.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+