Home
ಸುದ್ದಿಜಾಲ

WhatsApp ಬಳಕೆದಾರರೇ... ನಿಮಗಾಗಿಯೇ ಈ ಬೊಂಬಾಟ್‌ ಫೀಚರ್ಸ್‌!, ಬಳಕೆ ಹೇಗೆ?

ವಾಟ್ಸಾಪ್‌ (Whatsapp) ನಲ್ಲಿ ಬಳಕೆದಾರರು ಈಗಾಗಲೇ ಭಿನ್ನ ಸೌಲಭ್ಯಗಳ ಮೂಲಕ ಉತ್ತಮ ಅನುಭವ ಪಡೆದುಕೊಳ್ಳುತ್ತಿದ್ದಾರೆ. ಅದರಲ್ಲೂ ಇತ್ತೀಚಿಗೆ ಘೋಷಣೆ ಮಾಡಲಾದ ಹಲವಾರು ಹೊಸ ಫೀಚರ್ಸ್‌ಗಳು ಇನ್ನಷ್ಟು ಹೊಸ ಬಳಕೆದಾರರನ್ನು ವಾಟ್ಸಾಪ್‌ ಕಡೆ ಮುಖ ಮಾಡುವಂತೆ ಮಾಡಿವೆ. ಈ ನಡುವೆ ಮತ್ತೆ ಬಳಕೆದಾರರಿಗೆ ವಾಟ್ಸಾಪ್‌ ಗುಡ್‌ ನ್ಯೂಸ್ ನೀಡಿದೆ.

ಹೌದು, ಪ್ರಮುಖ ಮೆಸೇಜಿಂಗ್‌ ಆಪ್‌ ಆಗಿರುವ ವಾಟ್ಸಾಪ್‌ ಕೇವಲ ಮೆಸೆಜ್‌ಗಳಿಗೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ ಈ ಪ್ಲಾಟ್‌ಫಾರ್ಮ್‌ನಲ್ಲಿ ಬ್ಯಾಂಕಿಂಗ್‌ ವ್ಯವಹಾರ ಮಾಡಬಹುದು, ವಿಡಿಯೋ ಕರೆ ಮಾಡಬಹುದು, ಎಲ್ಲಾ ರೀತಿಯ ದಾಖಲೆಗಳನ್ನು ಸೆಂಡ್‌ ಮಾಡಬಹುದು. ಅದರಂತೆ ಈಗ ಮೆಸೆಜ್‌ಗಳ ವಿಭಾಗದಲ್ಲಿ ಬಳಕೆದಾರರಿಗೆ ಮತ್ತಷ್ಟು ಸೌಕರ್ಯ ಕಲ್ಪಿಸಿಕೊಡಲಾಗಿದೆ. ಹಾಗಿದ್ರೆ, ಬನ್ನಿ ಅದರ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ.

WhatsApp ಬಳಕೆದಾರರೇ... ನಿಮಗಾಗಿಯೇ ಈ ಬೊಂಬಾಟ್‌ ಫೀಚರ್ಸ್‌!, ಬಳಕೆ ಹೇಗೆ?

60 ಸೆಕೆಂಡುಗಳವರೆಗೆ ವಿಡಿಯೋ ಮೆಸೆಜ್‌: ವಾಟ್ಸಾಪ್‌ ಇತ್ತೀಚಿಗೆ ಘೋಷಣೆ ಮಾಡಲಾದ ಹಲವಾರು ಫೀಚರ್ಸ್‌ಗಳಲ್ಲಿ ವಿಡಿಯೋ ಮೆಸೆಜ್ (Video message) ಸಹ ಪ್ರಮುಖವಾಗಿದೆ. ಅಂದರೆ ಬಳಕೆದಾರರಿಗೆ 60 ಸೆಕೆಂಡುಗಳವರೆಗೆ ವಿಡಿಯೋ ಮೆಸೆಜ್ ಅನ್ನು ರೆಕಾರ್ಡ್ ಮಾಡಲು ಅನುಕೂಲ ಮಾಡಿಕೊಡಲು ಮುಂದಾಗಿದೆ. ಅಂದರೆ ಚಾಟ್‌ನಲ್ಲಿ ನೇರವಾಗಿ 60 ಸೆಕೆಂಡುಗಳವರೆಗೆ ಸಣ್ಣ ವೈಯಕ್ತಿಕ ವಿಡಿಯೋಗಳನ್ನು ರೆಕಾರ್ಡ್ ಮಾಡಿ ಕಳುಹಿಸಬಹುದು.

ಈ ಫೀಚರ್ಸ್‌ ಅನ್ನು ಮೊದಲೇ ತಿಳಿಸಿದಂತೆ ಆಂಡ್ರಾಯ್ಡ್ ಮತ್ತು ಐಫೋನ್ (Android and iPhone) ಬಳಕೆದಾರರಿಗಾಗಿ ಜೂನ್‌ನಲ್ಲಿ ಬೀಟಾದಲ್ಲಿ ಘೋಷಣೆ ಮಾಡಲಾಗಿತ್ತು. ಆದರೆ ಇನ್ನೇನು ಕೆಲವೇ ದಿನಗಳಲ್ಲಿ ಈ ಸೌಲಭ್ಯ ಎಲ್ಲಾ ಬಳಕೆದಾರರಿಗೂ ಲಭ್ಯ ಇರಲಿದೆ ಎಂದು ತಿಳಿದುಬಂದಿದೆ. ಈ ಮೂಲಕ ಬಳಕೆದಾರರು ಧ್ವನಿ ಟಿಪ್ಪಣಿಗಳಂತೆಯೇ ತ್ವರಿತ ವಿಡಿಯೋ ಮೆಸೆಜ್‌ಗಳನ್ನು ಕಳುಹಿಸಲು ಅವಕಾಶ ನೀಡುತ್ತದೆ.

ಈ ವಿಡಿಯೋ ಮೆಸೆಜ್‌ ಸಂವಹನ ಮೋಜಿನ ಮಾರ್ಗವಾಗಿದ್ದು, ಧ್ವನಿ ಟಿಪ್ಪಣಿಗಳಂತೆಯೇ ಜನರು ಉತ್ತಮವಾಗಿ ಸಂಪರ್ಕಿಸಲು ಸಹಾಯ ಮಾಡುತ್ತದೆ ಎಂದು ವಾಟ್ಸಾಪ್‌ ಮಾಹಿತಿ ನೀಡಿದೆ ವಿವರಿಸುತ್ತದೆ. ಈ ಫೀಚರ್ಸ್‌ ಸ್ನ್ಯಾಪ್‌ಚಾಟ್‌ನ (Snapchat) ತ್ವರಿತ ವಿಡಿಯೋ ಮೆಸೆಜ್‌ಗಳಿಗೆ ಹೋಲುತ್ತದೆ, ಆದರೂ ಅವುಗಳು ಅಲ್ಪಕಾಲಿಕ ಮೆಸೆಜ್‌ಗಳಾಗಿದ್ದು, ಒಮ್ಮೆ ಓಪನ್‌ ಮಾಡಿ ನೋಡಿದ ನಂತರ ಆಟೋಮ್ಯಾಟಿಕ್‌ ಆಗಿ ಅಳಿಸಲ್ಪಡುತ್ತವೆ.

ಈ ಸಂಬಂಧ ಮೆಟಾ ಬ್ಲಾಗ್ ಪೋಸ್ಟ್‌ನಲ್ಲಿ (Meta blog post) ಮಾಹಿತಿ ನೀಡಿದ್ದು, 'ಯಾರಿಗಾದರೂ ಜನ್ಮದಿನದ ಶುಭಾಶಯಗಳನ್ನು ಕೋರುವುದು, ತಮಾಷೆಗೆ ನಗುವುದು ಅಥವಾ ಒಳ್ಳೆಯ ಸುದ್ದಿಯನ್ನು ನೀಡುವುದು ಹಾಗೂ ಎಲ್ಲಾ ಭಾವನೆಗಳೊಂದಿಗೆ ಕ್ಷಣಗಳನ್ನು ಹಂಚಿಕೊಳ್ಳಲು ಇದು ಮೋಜಿನ ಮಾರ್ಗವಾಗಿದೆ ಎಂದು ನಾವು ಭಾವಿಸುತ್ತೇವೆ' ಎಂದು ಉಲ್ಲೇಖಿಸಿದೆ.

ಇದನ್ನು ಬಳಕೆ ಮಾಡುವುದು ಹೇಗೆ?: ಈ ಫೀಚರ್ಸ್‌ ಲಭ್ಯವಾದ ನಂತರ ಬಳಕೆ ತುಂಬಾ ಸರಳವಾಗಿರಲಿದೆ. ಇದು ಚಾಟ್ ಟ್ರೇನಲ್ಲಿ ವಾಯ್ಸ್‌ ನೋಟ್‌ ಬಟನ್‌ನೊಂದಿಗೆ ಕಾಣಿಸಿಕೊಳ್ಳುತ್ತದಂತೆ. ಅಂದರೆ ವಿಡಿಯೋ ಮೋಡ್‌ಗೆ ಬದಲಾಯಿಸಲು ರೆಕಾರ್ಡ್ ಬಟನ್(Record button) ಅನ್ನು ಹಿಡಿದಿಟ್ಟುಕೊಂಡರೆ ಸಾಕು. ಅದರಲ್ಲೂ ಹ್ಯಾಂಡ್ಸ್-ಫ್ರೀ ವಿಡಿಯೋವನ್ನು ಲಾಕ್ ಮಾಡಲು ಮತ್ತು ರೆಕಾರ್ಡ್ ಮಾಡಲು ಸ್ವೈಪ್ ಮಾಡಬಹುದು.

ಅಷ್ಟು ಮಾತ್ರವಲ್ಲದೆ ಚಾಟ್‌ನಲ್ಲಿ ಈ ವಿಡಿಯೋಗಳನ್ನು ಓಪನ್‌ ಮಾಡಿದಾಗ ಮ್ಯೂಟ್‌ನಲ್ಲಿ ಆಟೋಮ್ಯಾಟಿಕ್‌ ಆಗಿ ಪ್ಲೇ ಆಗುತ್ತವೆ ಮತ್ತು ವಿಡಿಯೋವನ್ನು ಟ್ಯಾಪ್ ಮಾಡುವ ಮೂಲಕ ಸೌಂಡ್‌ ಸಕ್ರಿಯ ಆಗುವಂತೆ ಮಾಡಬಹುದು. ಈ ಸೌಲಭ್ಯದಲ್ಲೂ ಸಹ ಭದ್ರತೆಗೆ ಹೆಚ್ಚಿನ ಮಹತ್ವ ನೀಡಲಾಗಿದ್ದು, ವಿಡಿಯೋ ಮೆಸೆಜ್‌ಗಳನ್ನು ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್‌ನೊಂದಿಗೆ ರಕ್ಷಿಸಲಾಗಿದೆ ಎಂದು ತಿಳಿಸಿದೆ.

ವಾಟ್ಸಾಪ್‌ನಲ್ಲಿ ಹೆಚ್ಚುತ್ತಿದೆ ಹಗರಣ: ವಾಟ್ಸಾಪ್‌ ಬಳಕೆ ಹೆಚ್ಚಾದರಂತೆ ಈ ಪ್ಲಾಟ್‌ಫಾರ್ಮ್‌ ಬಳಕೆ ಮಾಡಿಕೊಂಡು ಸ್ಕ್ಯಾಮರ್‌ಗಳು(Scammers) ಮೋಸ ಮಾಡಲು ಮುಂದಾಗಿದ್ದಾರೆ. ಅಂದರೆ ನಕಲಿ ಲಿಂಕ್‌ಗಳನ್ನು ನೀಡುವ ಮೂಲಕ ಬಳಕೆದಾರರ ಮೊಬೈಲ್‌ಗಳನ್ನು ವಶಕ್ಕೆ ಪಡೆಯುವ ಅಥವಾ ಮಾಲ್‌ವೇರ್‌ ಮೂಲಕ ಮೊಬೈಲ್‌ ಅನ್ನು ಕಂಟ್ರೋಲ್‌ಗೆ ಪಡೆಯುವ ಮೂಲಕ ಸಾಕಷ್ಟು ಹಿಂಸೆ ನೀಡಿರುವ ಘಟನೆಗಳು ಅಲ್ಲಲ್ಲಿ ವರದಿಯಾಗಿವೆ.

WhatsApp ಬಳಕೆದಾರರೇ... ನಿಮಗಾಗಿಯೇ ಈ ಬೊಂಬಾಟ್‌ ಫೀಚರ್ಸ್‌!, ಬಳಕೆ ಹೇಗೆ?

ಅದರಂತೆ ಈಗ ಸ್ಕ್ಯಾಮರ್‌ಗಳು ವಿಶ್ವ ಯೋಗ ದಿನಾಚರಣೆಯನ್ನೇ ದುರುಪಯೋಗಪಡಿಸಿಕೊಂಡು ಆನ್‌ಲೈನ್ ಯೋಗ ಸೆಷನ್‌ಗೆ (Online Yoga Session) ಸೇರಲು ಉಚಿತ ಲಿಂಕ್ ಇದು ಎಂದು ಎಲ್ಲಾ ಕಡೆ ಶೇರ್‌ ಮಾಡಿದ್ದಾರೆ. ಈ ಲಿಂಕ್ ಅನ್ನು ಕ್ಲಿಕ್ ಮಾಡಿದಾಗ ಆರು-ಅಂಕಿಯ OTP ಅನ್ನು ಹಂಚಿಕೊಳ್ಳಲು ಕೇಳಲಾಗುತ್ತದೆ. ಇದು ಸ್ಕ್ಯಾಮರ್‌ಗಳಿಗೆ ಬಳಕೆದಾರರ ವಾಟ್ಸಾಪ್‌ ಖಾತೆಗೆ ರಿಮೋಟ್ ಎಂಟ್ರಿ ನೀಡಲು ಅನುಕೂಲ ಮಾಡಿಕೊಟ್ಟಿದೆಯಂತೆ. ಇದಲ್ಲದೆ ಸಂತ್ರಸ್ತರನ್ನು ಬೋನಸ್ ಕ್ರಿಪ್ಟೋಕರೆನ್ಸಿಯಲ್ಲಿ ಹೂಡಿಕೆ ಮಾಡಲು ವಾಟ್ಸಾಪ್ ಮೂಲಕ ಒತ್ತಾಯಿಸುತ್ತಿದ್ದಾರೆ.

Best Mobiles in India

English summary
Video message is one of the many features recently announced by WhatsApp. That means users can record a video message up to 60 seconds.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+