Home
ಸುದ್ದಿಜಾಲ

ವಾಟ್ಸಾಪ್‌ಗೆ ಸೇರುತ್ತಿದೆ ಹೊಸ ಫೀಚರ್ಸ್‌, ಏನಿದು?, ಯಾರಿಗೆಲ್ಲಾ ಲಭ್ಯ?

ಪ್ರಮುಖ ಮೆಸೇಜಿಂಗ್‌ ಪ್ಲಾಟ್‌ಫಾರ್ಮ್ ಆಗಿರುವ ವಾಟ್ಸಾಪ್‌ನಲ್ಲಿ (Whatsapp) ಈಗಾಗಲೇ ಸಾಕಷ್ಟು ಫೀಚರ್ಸ್‌ಗಳು ಬಳಕೆದಾರರಿಗೆ ಲಭ್ಯ ಇವೆ. ಅದಾಗ್ಯೂ ಬಳಕೆದಾರರಿಗೆ ಹೊಸ ಅನುಭವ ನೀಡುವ ಹಿನ್ನೆಲೆ ಮೆಟಾ ಆಗಾಗ್ಗೆ ಹೊಸ ಹೊಸ ಸೌಲಭ್ಯಗಳನ್ನು ಕಲ್ಪಿಸಿಕೊಡುತ್ತಲೇ ಬರುತ್ತಿದ್ದು, ಅದರಂತೆ ಈಗ ವಾಟ್ಸಾಪ್‌ ಕರೆ ಸಂಬಂಧ ನೂತನ ಸೌಲಭ್ಯ ಘೋಷಣೆ ಮಾಡಿದೆ.

ಹೌದು, ವಾಟ್ಸಾಪ್‌ ಕೆಲವು ದಿನಗಳ ಹಿಂದಷ್ಟೇ ವಿಡಿಯೋ ಮೆಸೆಜ್‌(Video message) ಕಳುಹಿಸುವ ಸೌಲಭ್ಯವನ್ನು ಪರಿಚಯಿಸಿತ್ತು. ಈಗ ಮೆಟಾ-ಮಾಲೀಕತ್ವದ ಪ್ಲಾಟ್‌ಫಾರ್ಮ್ ಮತ್ತೊಂದು ಫೀಚರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದುಬಂದಿದ್ದು, ಅದು ಆಪ್‌ನ ಯುಐಗೆ ಬದಲಾವಣೆಯನ್ನು ನೀಡಲಿದೆ ಎನ್ನಲಾಗಿದೆ. ಅದೂ ಸಹ ಕರೆ ನೋಟಿಫಿಕೇಶನ್ ಸಂಬಂಧ. ಹಾಗಿದ್ರೆ, ಏನಿದು ಹೊಸ ಫೀಚರ್ಸ್‌, ಎಂದಿನಿಂದ ಲಭ್ಯ ಎಂಬ ಮಾಹಿತಿ ಇಲ್ಲಿದೆ ನೋಡಿ.

ವಾಟ್ಸಾಪ್‌ಗೆ ಸೇರುತ್ತಿದೆ ಹೊಸ ಫೀಚರ್ಸ್‌, ಏನಿದು?, ಯಾರಿಗೆಲ್ಲಾ ಲಭ್ಯ?

ಏನಿದು ಹೊಸ ಫೀಚರ್ಸ್‌?: ವಾಟ್ಸಾಪ್‌ನ ಆಗು ಹೋಗುಗಳನ್ನು ವರದಿ ಮಾಡುವ WABetaInfo ಪ್ರಕಾರ, ವಾಟ್ಸಾಪ್ ಆಂಡ್ರಾಯ್ಡ್‌ ಬೀಟಾ (Android Beta) ಪರೀಕ್ಷಕರಿಗೆ ಹೊಸ ಕರೆ ಅಧಿಸೂಚನೆಗಳ ಇಂಟರ್ಫೇಸ್ ಅನ್ನು ಪರಿಚಯಿಸಿದೆಯಂತೆ. ಇನ್ನು ಈ ಸೌಲಭ್ಯ ವಾಟ್ಸಾಪ್‌ ಬೀಟಾ ಅಪ್ಡೇಟ್ ಆವೃತ್ತಿ 2.23.16.14 ನೊಂದಿಗೆ, ಆಪ್‌ ಹೊಸ ಇಂಟರ್ಫೇಸ್‌ನೊಂದಿಗೆ ಪ್ರಯೋಗಿಸುತ್ತಿದೆ ಎಂದು ಉಲ್ಲೇಖಿಸಲಾಗಿದೆ.

ಇನ್ನು ಒಳಬರುವ ಕರೆಯನ್ನು ಸ್ವೀಕರಿಸಲು ಅಥವಾ ನಿರಾಕರಿಸಲು ಅನುಮತಿಸುವ ಬಟನ್‌ಗಳು ಐಕಾನ್‌ಗಳನ್ನು ಒಳಗೊಂಡಿರುವುದರಿಂದ ಬದಲಾವಣೆಗಳು ಸ್ಪಷ್ಟವಾಗಿ ಗೋಚರಿಸುತ್ತವೆ. ಇದು ಪ್ರತಿ ಬಟನ್‌ನಿಂದ ನಿರ್ವಹಿಸಲಾದ ಕ್ರಿಯೆಯನ್ನು ಬಳಕೆದಾರರಿಗೆ ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ WABetaInfo ತನ್ನ ವರದಿಯಲ್ಲಿ ತಿಳಿಸಿದೆ. ಇನ್ನು ಈ ಕರೆ ಅಧಿಸೂಚನೆಗಳಿಗಾಗಿ ಹೊಸ ಇಂಟರ್ಫೇಸ್ ಕೆಲವು ಬೀಟಾ ಪರೀಕ್ಷಕರಿಗೆ ಮಾತ್ರ ಲಭ್ಯವಿದ್ದು, ಶೀಘ್ರದಲ್ಲೇ ಎಲ್ಲಾ ಬಳಕೆದಾರರಿಗೆ ಲಭ್ಯ ಆಗಲಿದೆ ಎನ್ನಲಾಗಿದೆ.

ಆಂಡ್ರಾಯ್ಡ್ ಸ್ಮಾರ್ಟ್ ವಾಚ್‌ಗಳಿಗಾಗಿ ಹೊಸ ಆಪ್‌: ಈ ನಡುವೆ ವಾಟ್ಸಾಪ್‌ ಕೆಲವು ದಿನಗಳ ಹಿಂದೆ ಆಂಡ್ರಾಯ್ಡ್‌ ಓಎಸ್‌ನಲ್ಲಿ (Android wearOS) ಚಾಲನೆಯಲ್ಲಿರುವ ಸ್ಮಾರ್ಟ್ ವಾಚ್‌ಗಳಿಗಾಗಿ ಮೀಸಲಾದ ವಾಟ್ದಾಪ್‌ ಆಪ್‌ ಅನ್ನು ಪರಿಚಯಿಸಿದೆ. ಈ ಆಪ್‌ ಮೂಲಕ ಬಳಕೆದಾರರು ತಮ್ಮ ಸ್ಮಾರ್ಟ್ ವಾಚ್‌ಗಳಿಂದ ನೇರವಾಗಿ ಮೆಸೆಜ್‌ಗಳಿಗೆ ಅನುಕೂಲಕರವಾಗಿ ಪ್ರತಿಕ್ರಿಯಿಸುವ ಸಾಮರ್ಥ್ಯ ಪಡೆಯಲಿದ್ದಾರೆ. ಜೊತೆಗೆ VoIP ಕರೆಗಳಲ್ಲಿ ತೊಡಗಿಸಿಕೊಳ್ಳುವ ಸಾಮರ್ಥ್ಯ ಸಹ ಲಭ್ಯ ಇರಲಿದೆ.

ಇಷ್ಟು ಮಾತ್ರವಲ್ಲದೆ ಬಳಕೆದಾರರು ತಮ್ಮ ಫೋನ್ ಮತ್ತು ವಾಚ್ ನಡುವೆ ನಿರಂತರ ಸಂಪರ್ಕವನ್ನು ಇರಿಸಿಕೊಳ್ಳಲು ಇದು ಸಹಾಯಕವಾಗಿದೆ. ಪಠ್ಯ ಮತ್ತು ಎಮೋಜಿ ವಿನಿಮಯವನ್ನು ಸುಗಮಗೊಳಿಸುವುದರ ಜೊತೆಗೆ, ಪೂರ್ವನಿರ್ಧರಿತ ಪ್ರತಿಕ್ರಿಯೆಗಳನ್ನು ತ್ವರಿತವಾಗಿ ಕಳುಹಿಸಲು ಮತ್ತು ಸ್ಮಾರ್ಟ್‌ವಾಚ್‌ ಬಳಸಿಕೊಂಡು ವಾಯ್ಸ್‌ ಮೆಸೆಜ್‌ಗಳನ್ನು ರಚಿಸಲು ಆಪ್‌ ಬಳಕೆದಾರರಿಗೆ ಅನುಕೂಲ ಮಾಡಿಕೊಡುತ್ತದೆ.

ಈ Wear ಓಎಸ್‌ಗೆ ಅನುಗುಣವಾಗಿ ಸ್ಟ್ಯಾಂಡ್-ಅಲೋನ್ ವಾಟ್ಸಾಪ್‌ ಆಪ್‌ ಅನ್ನು ಔಪಚಾರಿಕವಾಗಿ ಗೂಗಲ್‌ ತನ್ನ ವಾರ್ಷಿಕ ಡೆವಲಪರ್ ಕಾನ್ಫರೆನ್ಸ್, I/O 2023 ರ ಮೇ ತಿಂಗಳಲ್ಲಿಯೇ ಪರಿಚಯಿಸಿತ್ತು. ಆದರೆ ಈಗ ಬಳಕೆದಾರರಿಗೆ ಲಭ್ಯ ಇದ್ದು, ಇನ್ಮುಂದೆ ಸ್ಮಾರ್ಟ್‌ವಾಚ್‌ (Smart watch) ಬಳಕೆದಾರರು ವಾಟ್ಸಾಪ್‌ನಲ್ಲಿ ವಿಶೇಷ ಅನುಭವ ಪಡೆದುಕೊಳ್ಳಬಹುದಾಗಿದೆ.

ಈ ನಡುವೆ ವಾಟ್ಸಾಪ್‌ ಬಳಕೆ ಮಾಡಿಕೊಂಡು ಮೋಸ ಮಾಡುವವರ ಸಂಖ್ಯೆ ಸಹ ಹೆಚ್ಚಾಗುತ್ತಿದ್ದು, ಈ ಸಂಬಂಧ ವಾಟ್ಸಾಪ್‌ ಎಚ್ಚರಿಕೆ ನೀಡಿದೆ. ಅಂದರೆ ವಾಟ್ಸಾಪ್‌ ಮೂಲಕ ಮೆಸೆಜ್‌ ಮಾಡುವ ಸ್ಕ್ಯಾಮರ್‌ಗಳು ಅಲ್ಲಿ ಒಂದು ಮಾಲ್‌ವೇರ್‌ ಇರುವ ಲಿಂಕ್‌ ಅನ್ನು ನೀಡಿರುತ್ತಾರೆ. ಬಳಕೆದಾರರು ಆ ಲಿಂಕ್‌ ಅನ್ನು ಕ್ಲಿಕ್‌ ಮಾಡಿದಾಗ ಮಾಲ್‌ವೇರ್‌ ಸ್ಕ್ಯಾಮರ್‌ಗಳಿಗೆ ಕರೆ, ಕಾಂಟ್ಯಾಕ್ಟ್‌ ಹಾಗೂ ಸ್ಥಳದ ಮಾಹಿತಿಯನ್ನು ನೀಡುತ್ತದೆ.

ವಾಟ್ಸಾಪ್‌ಗೆ ಸೇರುತ್ತಿದೆ ಹೊಸ ಫೀಚರ್ಸ್‌, ಏನಿದು?, ಯಾರಿಗೆಲ್ಲಾ ಲಭ್ಯ?

ಇನ್ನು ಈ ಮಾಲ್‌ವೇರ್ APT ಬಹಮುಟ್‌ಗೆ ಸೇರಿದೆ ಎಂದು ತಿಳಿದುಬಂದಿದ್ದು, ಈ ಹಿಂದೆ DoNot APT ಬಳಕೆ ಮಾಡುವ ತಂತ್ರಗಳನ್ನೇ ಇದು ಬಳಕೆ ಮಾಡುತ್ತಿದೆ ಎಂದು ಕಂಡುಕೊಳ್ಳಲಾಗಿದೆ. ಅಷ್ಟು ಮಾತ್ರವಲ್ಲದೆ ಈ ಮಾಲ್‌ವೇರ್‌ ಸೇಫ್‌ಚಾಟ್‌ (SafeChat) ಎಂಬ ಹೆಸರಿನ ಆಪ್‌ ಮೂಲಕ ಬಳಕೆದಾರರಿಗೆ ಫೋನ್‌ಗೆ ಎಂಟ್ರಿ ಕೊಡುತ್ತಿದೆ. ಪರಿಣಾಮ ನಿಮ್ಮ ಫೋನ್‌ನಲ್ಲಿ ಈ ಆಪ್‌ ಕಾಣಿಸಿಕೊಂಡರೆ ತಕ್ಷಣವೇ ಡಿಲೀಟ್‌ ಮಾಡಿ.

Best Mobiles in India

English summary
WhatsApp had introduced the facility of sending video messages a few days ago. Now the Meta-owned platform has introduced a new call notifications interface on WhatsApp.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+