Home
ಸುದ್ದಿಜಾಲ

ವಾಟ್ಸಾಪ್‌ನ ಈ ಫೀಚರ್ಸ್‌ನಲ್ಲಿ ಹೊಸ ಅಪ್‌ಡೇಟ್‌: ಏನೆಂದು ತಿಳಿದ್ರೆ ವಾವ್‌ ಅಂತೀರಾ!?

ಪ್ರಮುಖ ಮೆಸೆಜಿಂಗ್‌ ಆಪ್‌ ಆಗಿರುವ ವಾಟ್ಸಾಪ್‌ನಲ್ಲಿ ಈಗಾಗಲೇ ಸಾಕಷ್ಟು ಹೊಸ ರೀತಿಯ ಫೀಚರ್ಸ್‌ಗಳು ಬಳಕೆದಾರರಿಗೆ ವಿವಿಧ ಸೇವೆ ನೀಡುತ್ತಿವೆ. ಈ ನಡುವೆ ವಾಟ್ಸಾಪ್‌ನ ಈ ಫೀಚರ್ಸ್‌ನಲ್ಲಿ ಹೊಸ ಮೂರು ನವೀಕರಣಗಳನ್ನು ಪರಿಚಯಿಸಲಾಗುತ್ತಿದೆ. ಅದರಲ್ಲೂ ಕರ್ನಾಟಕ ವಿಧಾನಸಭೆ ಚುನಾವಣೆ ಬೇರೆ ಇರುವುದರಿಂದ ಈ ಫೀಚರ್ಸ್ ಖಂಡಿತಾ ಹೆಚ್ಚಿನ ಜನಪ್ರಿಯತೆ ಪಡೆದುಕೊಳ್ಳಲಿದೆ

ಹೌದು, ಈಗಾಗಲೇ ವಾಟ್ಸಾಪ್‌ನಲ್ಲಿ ನೀಡಲಾಗಿರುವ ಪೋಲ್ಸ್‌ ಫೀಚರ್ಸ್‌ ಇನ್ನಷ್ಟು ಹೊಸ ಸೌಲಭ್ಯ ಪಡೆದುಕೊಂಡಿದೆ. ಜೊತೆಗೆ ಬಳಕೆದಾರರಿಗೆ ಫೋಟೋಗಳನ್ನು ಶೇರ್‌ ಮಾಡಿಕೊಳ್ಳುವ ಮೊದಲು ಶೀರ್ಷಿಕೆ ನೀಡಲು ಅನುವು ಮಾಡಿಕೊಡುತ್ತಿತ್ತು. ಈಗ ಇದು ಡಾಕ್ಯೂಮೆಂಟ್‌ಗಳನ್ನು ಶೇರ್ ಮಾಡುವಾಗಲೂ ಬಳಕೆ ಮಾಡಿಕೊಳ್ಳಬಹುದಾಗಿದೆ. ಹಾಗಿದ್ರೆ, ಏನಿದು ಹೊಸ ಸೌಲಭ್ಯ?, ಇದರಿಂದ ಬಳಕೆದಾರರಿಗೆ ಆಗುವ ಪ್ರಯೋಜನ ಏನು? ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ವಾಟ್ಸಾಪ್‌ನ ಈ ಫೀಚರ್ಸ್‌ನಲ್ಲಿ ಹೊಸ ಅಪ್‌ಡೇಟ್‌:ಏನೆಂದು ತಿಳಿದ್ರೆ ವಾವ್‌ ಅಂತೀರಾ!

ಏಕ-ಮತ ಪೋಲ್‌: ಬಳಕೆದಾರರು ಯಾವುದಾದರೂ ವಿಷಯಕ್ಕೆ ಸಂಬಂಧಿಸಿದಂತೆ ಸ್ಪಷ್ಟ ಮತ್ತು ಖಚಿತವಾದ ಉತ್ತರವನ್ನು ಪಡೆಯಲು ವಾಟ್ಸಾಪ್‌ ಹೊಸ ಆಯ್ಕೆಯನ್ನು ಸೇರಿಸಿದೆ. ಸಮೀಕ್ಷೆಯನ್ನು ರಚಿಸುವಾಗ ಬಹು ಉತ್ತರಗಳನ್ನು ಅನುಮತಿಸುವ ಆಯ್ಕೆಯನ್ನು ಆಫ್ ಮಾಡುವ ಮೂಲಕ, ಅವರು ಪ್ರತಿ ಮತದಾರರನ್ನು ಒಂದು ಮತಕ್ಕೆ ಮಾತ್ರ ಸೀಮಿತಗೊಳಿಸಲಾಗಿದೆ. ಇದರಿಂದ ಈ ಮೊದಲು ಆಗುತ್ತಿದ್ದ ಗೊಂದಲ ತಪ್ಪಿದಂತೆ ಆಗಿದೆ.

ನಿಮ್ಮ ಚಾಟ್‌ಗಳಲ್ಲಿ ಸಮೀಕ್ಷೆಗಾಗಿ ಹುಡುಕಿ: ಈ ಪೋಲ್ಸ್‌ ವಿಭಾಗದಲ್ಲಿ ಹೊಸ ಮತ್ತು ಹಳೆಯ ಸಮೀಕ್ಷೆಗಳನ್ನು ಹುಡುಕಲು ಬಳಕೆದಾರರಿಗೆ ಸಹಾಯ ಮಾಡುತ್ತದೆ. ಇದಕ್ಕಾಗಿ ವಾಟ್ಸಾಪ್‌ ಹೊಸ ಫಿಲ್ಟರ್ ಅನ್ನು ಸೇರಿಸಿದೆ. ಇದು ಫೋಟೋಗಳು ಮತ್ತು ವಿಡಿಯೋಗಳಂತೆ, ಫಿಲ್ಟರ್‌ಗಳನ್ನು ಅನ್ವಯಿಸುವ ಮೂಲಕ ನೀವು ಸಮೀಕ್ಷೆಗಳನ್ನು ಹುಡುಕಲು ಸಾಧ್ಯವಾಗುತ್ತದೆ. ಹೀಗಾಗಿ ಅತ್ಯಂತ ಸರಳ ಮಾರ್ಗದಲ್ಲಿ ಎಲ್ಲಾ ಮಾಹಿತಿ ಲಭ್ಯವಾಗುತ್ತವೆ.

ಪೋಲ್ ಫಲಿತಾಂಶಗಳಲ್ಲಿ ಯಾವಾಗಲೂ ಅಪ್‌ಡೇಟ್ ಆಗಿರಿ: ಈ ಅಪ್‌ಡೇಟ್‌ನಲ್ಲಿ ಮತ ಮಾಡುವವರಿಂದ ಬರುವ ಮತಗಳ ನೋಟಿಫಿಕೇಶನ್‌ ಅನ್ನು ಸ್ವೀಕರಿಸಬಹುದಾಗಿದೆ. ಈ ನೋಟಿಫಿಕೇಶನ್‌ ಮೂಲಕ, ಗುಂಪಿನಲ್ಲಿರುವ ಎಷ್ಟು ಜನರು ಮತದಾನದಲ್ಲಿ ಮತ ಚಲಾಯಿಸಿದ್ದಾರೆ ಎಂಬ ಮಾಹಿತಿಯನ್ನು ನೀವು ಸುಲಭವಾಗಿ ಪಡೆದುಕೊಳ್ಳಬಹುದು. ಇದರಿಂದ ಯಾರು ಯಾವುದಕ್ಕೆ ಹೆಚ್ಚು ಆಸಕ್ತಿ ಹೊಂದಿದ್ದಾರೆ ಎಂದು ಸರಳವಾಗಿ ತಿಳಿಯುತ್ತದೆ.

ವಾಟ್ಸಾಪ್‌ನ ಈ ಫೀಚರ್ಸ್‌ನಲ್ಲಿ ಹೊಸ ಅಪ್‌ಡೇಟ್‌:ಏನೆಂದು ತಿಳಿದ್ರೆ ವಾವ್‌ ಅಂತೀರಾ!

ಇನ್ನು ಈ ಪೋಲ್ಸ್‌ ಫೀಚರ್ಸ್ ಅನ್ನು ವಾಟ್ಸಾಪ್‌ ಬಳಕೆದಾರರಿಗೆ ನವೆಂಬರ್ 2022 ರಲ್ಲಿ ಪರಿಚಯಿಸಲಾಗಿತ್ತು. ಇದನ್ನು ವಾಟ್ಸಾಪ್‌ ಗ್ರೂಪ್‌ ಮಾಹಿತಿಯನ್ನು ಸಂಗ್ರಹಿಸಲು ಮತ್ತು ಸಾಮೂಹಿಕ ನಿರ್ಧಾರಗಳನ್ನು ತೆಗೆದುಕೊಳ್ಳಲು ಹಾಗೂ ಇನ್ನಿತರೆ ಅಗತ್ಯ ಜನಾಭಿಪ್ರಾಯ ಪಡೆದುಕೊಳ್ಳಲು ಇದು ಸಹಾಯಕವಾಗಲಿದೆ. ಆದರೆ ಈಗ ನೀಡಲಾಗಿರುವ ಈ ಮೂರು ನವೀಕರಣಗಳು ಪೋಲ್ಸ್‌ ವಿಭಾಗದಲ್ಲಿ ಇನ್ನಷ್ಟು ಸೌಕರ್ಯ ಕಲ್ಪಿಸಿದ್ದು, ಬಳಕೆದಾರರಿಗೆ ಹಲವು ರೀತಿಯಲ್ಲಿ ಉಪಯೋಗ ಆಗಲಿದೆ.

ಶೀರ್ಷಿಕೆಗಳೊಂದಿಗೆ ಫಾರ್ವರ್ಡ್ ಮಾಡುವುದು: ಈ ಮೇಲೆ ತಿಳಿಸಿದ ಮೂರು ಪ್ರಮುಖ ನವೀಕರಣದೊಂದಿಗೆ ವಾಟ್ಸಾಪ್‌ನಲ್ಲಿ ಶೀರ್ಷಿಕೆಗಳೊಂದಿಗೆ ಫಾರ್ವರ್ಡ್ ಮಾಡುವ ಫೀಚರ್ಸ್‌ ಅನ್ನು ನೀಡಲಾಗಿದೆ. ಈ ಮೊದಲು ಫೋಟೋಗಳು ಮತ್ತು ವಿಡಿಯೋಗಳನ್ನು ಫಾರ್ವರ್ಡ್ ಮಾಡುವಾಗ ಶೀರ್ಷಿಕೆಗಳನ್ನು ಬರೆಯುವ ಸೌಲಭ್ಯ ಲಭ್ಯವಿರಲಿಲ್ಲ. ಆದಾಗ್ಯೂ, ಈಗ ಹೊಸ ನವೀಕರಣದ ನಂತರ ಯಾವುದೇ ಫೋಟೋ ಅಥವಾ ವಿಡಿಯೋಗಳನ್ನು ಫಾರ್ವರ್ಡ್ ಮಾಡುವಾಗ ನೀವು ಶೀರ್ಷಿಕೆಗಳನ್ನು ಬರೆಯಬಹುದು.

ಶೀರ್ಷಿಕೆಗಳೊಂದಿಗೆ ಡಾಕ್ಯುಮೆಂಟ್‌ಗಳನ್ನು ಹಂಚಿಕೊಳ್ಳುವುದು: ಇದರೊಂದಿಗೆ ನೀವು ಈ ಮೊದಲು ಫೋಟೋಗಳು ಮತ್ತು ವಿಡಿಯೋಗಳಿಗೆ ಮಾತ್ರ ಶೀರ್ಷಿಕೆ ನೀಡಿ ಅವುಗಳನ್ನು ಶೇರ್‌ ಮಾಡುತ್ತಿದ್ದೀರಿ. ಆದರೆ ಇನ್ಮುಂದೆ ನೀವು ಶೇರ್‌ ಮಾಡುವ ಡಾಕ್ಯುಮೆಂಟ್‌ಗಳಿಗೂ ಸಹ ಶೀರ್ಷಿಕೆಗಳನ್ನು ಬರೆಯಲು ಸಾಧ್ಯವಾಗುತ್ತದೆ. ಇದರಿಂದಾಗಿ ಯಾವ ಡಾಕ್ಯುಮೆಂಟ್‌ ಎಂದು ಅದನ್ನು ತೆರೆಯದೇ ಸ್ವೀಕರಿಸುವವರು ತಿಳಿದುಕೊಳ್ಳಬಹುದಾಗಿದೆ.

ವಾಟ್ಸಾಪ್‌ನ ಈ ಫೀಚರ್ಸ್‌ನಲ್ಲಿ ಹೊಸ ಅಪ್‌ಡೇಟ್‌:ಏನೆಂದು ತಿಳಿದ್ರೆ ವಾವ್‌ ಅಂತೀರಾ!

ನಾವು ಅಪ್ಲಿಕೇಶನ್ ಅನ್ನು ಆವಿಷ್ಕರಿಸುವುದನ್ನು ಮುಂದುವರಿಸುತ್ತಿದ್ದಂತೆ, ಇಂದು ವಾಟ್ಸಾಪ್‌ಗೆ ಬರುವ ಹಲವಾರು ಹೊಸ ಫೀಚರ್ಸ್‌ಗಳನ್ನು ನೀಡುತ್ತಿದ್ದೇವೆ. ಈ ಮೂಲಕ ಚಾಟ್‌ಗಳನ್ನು ಸ್ವಲ್ಪ ಹೆಚ್ಚು ಉತ್ಪಾದಕ ಮತ್ತು ವಿನೋದಮಯವಾಗಿಸುತ್ತದೆ ಎಂದು ನಾವು ಭಾವಿಸುತ್ತೇವೆ ಎಂದು ಮೆಟಾ ಅಧಿಕೃತ ಬಿಡುಗಡೆಯಲ್ಲಿ ಈ ಮಾಹಿತಿ ಉಲ್ಲೇಖಿಸಿದೆ. ಈ ಮೂಲಕ ಒಟ್ಟಾರೆ ಮೂರು ಹೊಸ ನವೀಕರಣಗಳನ್ನು ಪರಿಚಯಿಸಲಾಗಿದೆ.

ಕರ್ನಾಟಕ ವಿಧಾನಸಭೆ ಚುನಾವಣೆ: ಈ ತಿಂಗಳು ಕರ್ನಾಟದಲ್ಲಿ ವಿಧಾನಸಭೆ ಚುನಾವಣೆ ಜರುಗುತ್ತಿದ್ದು, ಈ ಮೂಲಕ ಹಲವಾರು ವಾಟ್ಸಾಪ್ ಬಳಕದಾರರು ಯಾವ ಪಕ್ಷಗಳು ಅಧಿಕಾರಕ್ಕೆ ಬರುತ್ತವೆ, ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಎಂಬ ಮಾಹಿತಿಯನ್ನು ಪಡೆದುಕೊಳ್ಳಲು ಸಾಕಷ್ಟು ಅನುಕೂಲ ಆಗಿದೆ. ಆದರೆ, ಚುನಾವಣಾ ನೀತಿ ಸಂಹಿತೆಯ ಆಧಾರದಲ್ಲಿ ಇದನ್ನು ಬಳಕೆ ಮಾಡಿದರೆ ಒಳಿತು.

Best Mobiles in India

English summary
WhatsApp Poll feature have got more new update. and whatsapp will also allow users to caption photos before sharing forward message.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+