Home
ಸುದ್ದಿಜಾಲ

ನಾಳೆಯಿಂದ ಈ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಪ್ ಕೆಲಸ ಮಾಡಲ್ಲ!

ವಿಶ್ವದಲ್ಲಿಯೇ ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ಮೆಸೆಜ್‌ ಆಪ್‌ ವಾಟ್ಸಪ್ ಇದೀಗ ತನ್ನ ಬಳಕೆದಾರರಿಗೆ ಭಾರಿ ಶಾಕ್‌ ನೀಡಿದೆ. ವಾಟ್ಸಪ್‌ ಇತ್ತೀಚಿಗಷ್ಟೆ ಹಲವು ಹೊಸ ಅಪ್‌ಡೇಟ್ ಆವೃತ್ತಿಗಳನ್ನು ಕಂಡಿದ್ದು, ಹೊಸ ಹೊಸ ಫೀಚರ್ಸ್‌ಗಳನ್ನು ಅಳವಡಿಸಿಕೊಂಡಿದೆ. ಆದರೆ ಇದೇ ಜನವರಿ 1, 2020 ರಿಂದ ಕೆಲವು ಸ್ಮಾರ್ಟ್‌ಫೋನ್‌ಗಳಲ್ಲಿ ಈಗ ವಾಟ್ಸಪ್‌ ಆಪ್‌ ಸಪೋರ್ಟ್ ಇರುವುದಿಲ್ಲ ಎಂದು ಸಂಸ್ಥೆಯು ಹೇಳಿಕೊಂಡಿದೆ.

ಫೇಸ್‌ಬುಕ್

ಹೌದು, ಫೇಸ್‌ಬುಕ್ ಮಾಲೀಕತ್ವದ ವಾಟ್ಸಪ್ ಇದೇ ಜನವರಿ 2020ರಿಂದ ವಿಂಡೊಸ್‌ ಆಪರೇಟಿಂಗ್ ಸಿಸ್ಟಂನಲ್ಲಿ ಕಾರ್ಯನಿರ್ವಹಿಸುವ ಸ್ಮಾರ್ಟ್‌ಫೋನ್‌ಗಳಲ್ಲಿ ಕೆಲಸ ನಿಲ್ಲಿಸಲಿದೆ ಎಂದಿದೆ. ಹೀಗಾಗಿ ವಿಂಡೊಸ್ ಫೋನ್‌ಗಳಲ್ಲಿ ವಾಟ್ಸಪ್‌ ಆಪ್ ಬಳಸಲು ಇದೇ ಡಿಸೆಂಬರ್ 31 (ಇಂದು) ಕೊನೆಯ ದಿನವಾಗಲಿದೆ. ವಾಟ್ಸಪ್‌ ಇನ್ನು ಇತ್ತೀಚಿನ ಆಂಡ್ರಾಯ್ಡ್‌ ಆಪರೇಟಿಂಗ್ ಸಿಸ್ಟಂ ಹೊಂದಿರುವ ಫೋನ್‌ಗಳಲ್ಲಿ ಕಾರ್ಯನಿರ್ವಹಿಸಲಿದೆ.

ವಿಂಡೊಸ್‌

ವಾಟ್ಸಪ್ ಆಪ್ ವಿಂಡೊಸ್‌ ಫೋನ್ 8.1 ಆಪರೇಟಿಂಗ್ ಸಿಸ್ಟಂ ಮತ್ತು ಅದಕ್ಕಿಂತಲೂ ಮುಂದಿನ ಓಎಸ್‌ ಬೆಂಬಲಿತ ಫೋನ್‌ಗಳಲ್ಲಿ ವಾಟ್ಸಪ್ ಕಾರ್ಯನಿರ್ವಹಿಸುತ್ತಿತ್ತು. ಮೈಕ್ರೋಸಾಫ್ಟ್ ಸ್ಟೋರ್‌ನಿಂದ ವಾಟ್ಸಪ್‌ ಆಪ್‌ ಸಹ ತೆಗೆಯಬಹುದಾದ ಸಾಧ್ಯತೆಗಳು ಇವೆ. ಹೀಗಾಗಿ ನಾಳೆಯಿಂದ ಜನವರಿ 1, 2020 ರಿಂದ ವಿಂಡೊಸ್ ಓಎಸ್‌ ಬೆಂಬಲಿತ ಫೋನ್‌ಗಳಲ್ಲಿ ವಾಟ್ಸಪ್ ಯುಗಾಂತ್ಯವಾಗಲಿದೆ. ಎಂದು ವಾಟ್ಸಪ್ ಸಂಸ್ಥೆಯು ಹೇಳಿದೆ.

ಆಂಡ್ರಾಯ್ಡ್‌

ಇನ್ನು ಇದೇ ಫೆಬ್ರುವರಿ 1, 2020 ರಿಂದ ಆಂಡ್ರಾಯ್ಡ್‌ 2.3.7 ಓಎಸ್‌ ವರ್ಷನ್‌ನಲ್ಲಿ ಮತ್ತು ಅದಕ್ಕಿಂತಲೂ ಹಿಂದಿನ ಓಎಸ್‌ ವರ್ಷನ್‌ ಆಂಡ್ರಾಯ್ಡ್ ಫೋನ್‌ಗಳಲ್ಲಿ ವಾಟ್ಸಪ್ ಕೈಬಿಡುವ ಸೂಚನೆ ನೀಡಿದೆ. ಇದರೊಂದಿಗೆ ಐಓಎಸ್‌ iOS 8 ಓಎಸ್‌ ನಲ್ಲಿ ಕಾರ್ಯನಿರ್ವಹಿಸುವ ಐಫೋನ್‌ಗಳಲ್ಲಿಯೂ ವಾಟ್ಸಪ್ ಸೇವೆ ಅಲಭ್ಯವಾಗಲಿದೆ ಎನ್ನುವ ಮುನ್ಸೂಚನೆಯನ್ನು ಸಂಸ್ಥೆಯು ಹೊರಹಾಕಿದೆ. ಕೈಯೋಸ್ 2.5.1+ ಓಎಸ್ ಹೊಂದಿರುವ ಜಿಯೋ ಫೋನ್ ಮತ್ತು ಜಿಯೋ ಫೋನ್ 2 ಫೋನ್‌ಗಳಲ್ಲಿ ವಾಟ್ಸಪ್ ಮುಂದುವರೆಯಲಿದೆ.

2019ರಲ್ಲಿ ವಾಟ್ಸಪ್‌ ಸೇರಿದ ಈ ವಿಶೇಷ ಫೀಚರ್ಸ್ ಬಗ್ಗೆ ನಿಮಗೆ ಗೊತ್ತಾ?

2019ರಲ್ಲಿ ವಾಟ್ಸಪ್‌ ಸೇರಿದ ಈ ವಿಶೇಷ ಫೀಚರ್ಸ್ ಬಗ್ಗೆ ನಿಮಗೆ ಗೊತ್ತಾ?

ವಿಶ್ವ ಮಟ್ಟದಲ್ಲಿ ಸ್ಮಾರ್ಟ್‌ಫೋನ್ ಬಳಕೆದಾರರ ಮನ ಗೆದ್ದಿರುವ ಅತೀ ಜನಪ್ರಿಯ ಆಪ್‌ ಅಂದ್ರೆ ಅದು ವಾಟ್ಸಪ್‌ ಎನ್ನಬಹುದು. ವಾಟ್ಸಪ್ ಇನ್‌ಸ್ಟಂಟ್ ಮೆಸೆಂಜರ್ ಆಪ್ ತನ್ನ ಬಳಕೆದಾರರಿಗಾಗಿ ಹಲವು ಅಗತ್ಯ ಫೀಚರ್ಸ್‌ಗಳನ್ನು ಅಳವಡಿಸಿಕೊಂಡಿದೆ. 2019ರಲ್ಲಿಯಂತೂ ವಾಟ್ಸಪ್ ಮತ್ತಷ್ಟು ಮಹತ್ತರ ಚಾಟ್ ಸುರಕ್ಷತಾ ಫೀಚರ್ಸ್‌ಗಳನ್ನು ತನ್ನ ಬಳಕೆದಾರರಿಗೆ ಪರಿಚಯಿಸಿ ಅಚ್ಚರಿ ತಂದಿದೆ.

ಫೇಸ್‌ಬುಕ್

ಹೌದು, ಫೇಸ್‌ಬುಕ್ ಮಾಲೀಕತ್ವದ ವಾಟ್ಸಪ್‌ 2019ರಲ್ಲಿ ಹಲವು ಹೊಸ ಫೀಚರ್ಸ್‌ಗಳು ತನ್ನ ತೆಕ್ಕೆಗೆ ಸೇರಿಸಿಕೊಂಡಿದೆ. ವಾಟ್ಸಪ್ ಸೇರಿರುವ ಆ ಹೊಸ ಫೀಚರ್ಸ್‌ಗಳಲ್ಲಿ ಬಹುತೇಕ ಫೀಚರ್ಸ್‌ಗಳು ಬಳಕೆದಾರರ ಖಾಸಗಿತನಕ್ಕೆ ಸುರಕ್ಷತೆ ಒದಗಿಸುವಲ್ಲಿ ಸಹಕಾರಿಯಾಗಿವೆ. ಇನ್ನು ಕೆಲವು ಫೀಚರ್ಸ್‌ಗಳು ಬಳಕೆದಾರರಿಗೆ ಹೆಚ್ಚಿನ ಮಲ್ಟಿಮೀಡಿಯಾ ಸೌಲಭ್ಯಗಳನ್ನು ಒದಗಿಸಲಿವೆ. ಆದರೆ ಇನ್ನು ಅದೆಷ್ಟೋ ಬಳಕೆದಾರರಿಗೆ ಹೊಸ ಫೀಚರ್ಸ್‌ಗಳ ಬಗ್ಗೆ ಮಾಹಿತಿ ಇಲ್ಲ. ಹಾಗಾದರೇ 2019ರಲ್ಲಿ ವಾಟ್ಸಪ್ ಸೇರಿರುವ ಪ್ರಮುಖ ಫೀಚರ್ಸ್‌ಗಳ ಬಗ್ಗೆ ತಿಳಿಯಲು ಮುಂದೆ ಓದಿರಿ.

ಆಡಿಯೊ ಪಿಕ್ಕರ್

ಆಡಿಯೊ ಪಿಕ್ಕರ್

ವಾಟ್ಸಪ್‌ನಲ್ಲಿ ಸೇರಿದ ಹೊಸ ಫೀಚರ್ಸ್‌ಗಳಲ್ಲಿ ಆಡಿಯೊ ಪಿಕ್ಕರ್ ಸಹ ಒಂದು. ಈ ಫೀಚರ್‌ನಲ್ಲಿ ಬಳಕೆದಾರರು ಒಂದೇ ಬಾರಿಗೆ ಸುಮಾರು 30 ಆಡಿಯೊ ಫೈಲ್‌ಗಳನ್ನು ಸೆಂಡ್ ಮಾಡಬಹುದಾಗಿದೆ. ಹಾಗೆಯೇ ಆಡಿಯೊ ಮತ್ತು ಇಮೇಜ್ ಪ್ರೀವ್ಯೂವ್ ಅವಕಾಶವನ್ನು ಸಹ ಈ ಫೀಚರ್‌ ಪಡೆದಿದೆ. ಇನ್ನು ವಾಟ್ಸಪ್ ಈ ಫೀಚರ್ ಅನ್ನು ಹೊಸ UI ನಲ್ಲಿ ಪರಿಚಯಿಸಿದ್ದು, ಅಪ್‌ಡೇಟ್ ವರ್ಷನ್‌ನಲ್ಲಿ ಸಿಗಲಿದೆ.

ಟೆಕ್ಸ್ಟ್‌ ಫಾರ್ಮ್ಯಾಟಿಂಗ್

ಟೆಕ್ಸ್ಟ್‌ ಫಾರ್ಮ್ಯಾಟಿಂಗ್

ವಾಟ್ಸ್‌ಆಪ್ ಟೆಕ್ಸ್ಟ್‌ ಫಾರ್ಮ್ಯಾಟಿಂಗ್‌ನ್ನು ಬಹಿರಂಗವಾಗಿ ಅನುಮತಿಸುವುದಿಲ್ಲ. ಆದಾಗ್ಯೂ, ಬೋಲ್ಡ್‌ ಟೆಕ್ಸ್ಟ್‌, ಇಟಾಲಿಕ್ ಮತ್ತು ಸ್ಟ್ರೈಕ್‌ಥ್ರೂ ತರ ವಿಶೇಷ ಅಕ್ಷರಗಳನ್ನು ಬಳಸಲು ಇದು ಅನುಮತಿಸುತ್ತದೆ. ಈ ಫಾರ್ಮ್ಯಾಟಿಂಗ್ ಆಯ್ಕೆಗಳನ್ನು ಬಳಸಲು, ನೀವು ಪಠ್ಯವನ್ನು ಈ ರೀತಿಯಲ್ಲಿ ಟೈಪ್ ಮಾಡಬೇಕಾಗುತ್ತದೆ: * ಬೋಲ್ಡ್‌ * , _ಇಟಾಲಿಕ್ಸ್_ , ~ ಸ್ಟ್ರೈಕ್‌ಥ್ರೂ ~. ನೀವು ಫಾರ್ಮ್ಯಾಟ್ ಮಾಡಲು ಬಯಸುವ ಪಠ್ಯದ ಪ್ರಾರಂಭ ಮತ್ತು ಅಂತ್ಯದಲ್ಲಿ ವಿಶೇಷ ಅಕ್ಷರಗಳನ್ನು ಟೈಪ್‌ ಮಾಡಬೇಕು.

ಡೇಟಾ ಮತ್ತು ಸಂಗ್ರಹಣೆ ಬಳಕೆ

ಡೇಟಾ ಮತ್ತು ಸಂಗ್ರಹಣೆ ಬಳಕೆ

ನಿಮ್ಮ ಡೇಟಾ ಬಳಕೆಯ ಬಗ್ಗೆ ನಿಗಾ ಇಡಲು ವಾಟ್ಸ್‌ಆಪ್ ನಿಮಗೆ ಅವಕಾಶ ನೀಡುತ್ತದೆ. ಈ ಬಳಕೆಯು ನೆಟ್‌ವರ್ಕ್ ಬಳಕೆ ಮಾತ್ರವಲ್ಲದೆ ಸ್ಮಾರ್ಟ್‌ಫೋನ್‌ನ ಶೇಖರಣಾ ಬಳಕೆಯನ್ನೂ ಒಳಗೊಂಡಿದೆ. ನೀವು ಯಾವ ವ್ಯಕ್ತಿಯೊಂದಿಗೆ ಹೆಚ್ಚು ಚಾಟ್ ಮಾಡುತ್ತಿದ್ದೀರಿ ಅಥವಾ ಯಾರೊಂದಿಗೆ ನೀವು ಹೆಚ್ಚಿನ ಮೀಡಿಯಾ ಹಂಚಿಕೊಳ್ಳುತ್ತೀರಿ ಎಂಬುದನ್ನು ಪತ್ತೆಹಚ್ಚಲು ಇದನ್ನು ಬಳಸಬಹುದು. ನಿಮ್ಮ ಸ್ಮಾರ್ಟ್‌ಫೋನ್‌ನ ಸಂಗ್ರಹ ಸ್ಥಳವನ್ನು ನಿರ್ವಹಿಸಲು ಸಹ ಇದು ಸಹಾಯ ಮಾಡುತ್ತದೆ.

ಕಸ್ಟಮ್ ನೊಟಿಫಿಕೇಷನ್‌

ಕಸ್ಟಮ್ ನೊಟಿಫಿಕೇಷನ್‌

ಅಪ್ಲಿಕೇಶನ್‌ನ ಸೆಟ್ಟಿಂಗ್ಸ್‌ ಪುಟದಿಂದ ವಾಟ್ಸ್‌ಆಪ್ ಅಧಿಸೂಚನೆಗಳನ್ನು ನಿರ್ವಹಿಸುವುದು ಸುಲಭ. ಗುಂಪು ಮತ್ತು ವೈಯಕ್ತಿಕ ಅಧಿಸೂಚನೆಗಳಿಗಾಗಿ ವಿಭಿನ್ನ ಅಧಿಸೂಚನೆ ಟೋನ್‌ಗಳನ್ನು ಹೊಂದಿಸಲು ಇದು ನಿಮ್ಮನ್ನು ಅನುಮತಿಸುತ್ತದೆ. ಆದಾಗ್ಯೂ, ನೀವು ಪ್ರತಿ ಚಾಟ್‌ಗೆ ಕಸ್ಟಮ್ ಟೋನ್‌ಗಳನ್ನು ಸಹ ಹೊಂದಿಸಬಹುದು.

ಪಿನ್ ಚಾಟ್‌ಗಳು

ಪಿನ್ ಚಾಟ್‌ಗಳು

ವಾಟ್ಸ್‌ಆಪ್ ಟೆಕ್ಸ್ಟಿಂಗ್ ಜಗತ್ತಿನಲ್ಲಿ ನಮ್ಮ ಕಾಂಟ್ಯಾಕ್ಟ್ ಲಿಸ್ಟ್‌ಗಳಿಂದ ಮತ್ತು ಇತರೆ ಹೊಸಬರಿಂದ ಅನೇಕ ಸಂದೇಶಗಳನ್ನು ಪಡೆಯುತ್ತೇವೆ. ಆದ್ರೆ ಅವುಗಳಲ್ಲಿ ನಾವು ವಾಟ್ ಮಾಡುವ ಲಿಸ್ಟ್‌ಲಿನಲ್ಲಿ ಕೆಲವರಿಗೆ ಮಾತ್ರ ಅಗ್ರಸ್ಥಾನ ನೀಡಿಲು ಬಯಸುತ್ತೆವೆ. ಅಂತಹವರ ಚಾಟ್‌ ಅನ್ನು ಪಿನ್ ಮಾಡುವ ಅವಕಾಶ ಸಹ ವಾಟ್ಸಪ್‌ನಲ್ಲಿ ಲಭ್ಯ ಇದೆ. ಪಿನ್ ಮಾಡುವುದರಿಂದ ನೇರವಾಗಿ ಅವರೊಂದಿಗೆ ಚಾಟ್ ಮಾಡಬಹುದಾಗಿದೆ.

ಫಿಂಗರ್‌ಪ್ರಿಂಟ್ ಲಾಕ್‌

ಫಿಂಗರ್‌ಪ್ರಿಂಟ್ ಲಾಕ್‌

ಸ್ಕ್ರೀನ್‌ಲಾಕ್‌ ಫೀಚರ್‌ ಬಳಕೆದಾರರ ಖಾತೆಗೆ ಪ್ರೈವೆಸಿ ಒದಗಿಸಲಿದ್ದು, ಬಳಕೆದಾರರು ಸ್ಕ್ರೀನ್‌ಲಾಕ್‌ ಫೀಚರ್‌ ಅನ್ನು ಸಕ್ರಿಯ ಮಾಡಿಕೊಳ್ಳಬೇಕು. ಅದಕ್ಕಾಗಿ ಬಳಕೆದಾರರು ಈ ಕ್ರಮಗಳನ್ನು ಅನುಸರಿಸಿ. ವಾಟ್ಸಪ್‌ > ಸೆಟ್ಟಿಂಗ್ > ಅಕೌಂಟ್‌ > ಪ್ರೈವೆಸಿ > ಸ್ಕ್ರಾಲ್‌ ಡೌನ್‌ ಮಾಡಿ > ಫಿಂಗರ್‌ಪ್ರಿಂಟ್ ಲಾಕ್‌ ಆಯ್ಕೆ ಕಾಣಿಸುತ್ತದೆ. ಈ ಆಯ್ಕೆಯನ್ನು ಸಕ್ರಿಯ ಮಾಡಿಕೊಳ್ಳಬಹುದು. ಇದರಲ್ಲಿ ಸ್ಕ್ರೀನ್‌ಲಾಕ್ ಆಗಲು ಮೂರು ಆಯ್ಕೆಗಳು ಕಾಣಿಸುತ್ತವೆ.(ತಕ್ಷಣ, ಒಂದು ನಿಮಿಷ, ನಿಮಿಷ).

ಸ್ಟೇಟಸ್‌ ಶೇರ್

ಸ್ಟೇಟಸ್‌ ಶೇರ್

ವಾಟ್ಸಪ್‌ ಪರಿಚಯಿಸಿದ್ದ 24 ಗಂಟೆಯ ಅವಧಿಯ ಸ್ಟೇಟಸ್‌ ಇಡುವ ಆಯ್ಕೆಯು ಸಖತ ಜನಪ್ರಿಯವಾಗಿದ್ದು, ಹಾಗೆಯೇ ಸ್ಟೇಟಸ್‌ ಅನ್ನು ಶೇರ್‌ ಮಾಡುವ ಹೊಸ ಆಯ್ಕೆಯನ್ನು ಸೇರಿಕೊಂಡಿದೆ. ಹೀಗಾಗಿ ಈಗ ಬಳಕೆದಾರರು ವಾಟ್ಸಪ್‌ಗೆ ಇಡುವ ಸ್ಟೇಟಸ್‌ ಅನ್ನು ಫೇಸ್‌ಬುಕ್‌ ಮತ್ತು ಇನ್‌ಸ್ಟಾಗ್ರಾಂ ಸೇರಿದಂತೆ ಇತರೆ ಫೇಸ್‌ಬುಕ್‌ ಸಂಸ್ಥೆಯ ಇತರೆ ಯಾವುದೇ ಆಪ್ಸ್‌ಗಳಿಗೆ ನೇರವಾಗಿ ಶೇರ್‌ ಮಾಡುವ ಅವಕಾಶವನ್ನು ಈ ಫೀಚರ್‌ ಮಾಡಿಕೊಡಲಿದೆ.

ಗ್ರೂಪ್‌ ಸೇರುವಿಕೆ ಕಂಟ್ರೋಲ್‌

ಗ್ರೂಪ್‌ ಸೇರುವಿಕೆ ಕಂಟ್ರೋಲ್‌

ಬಳಕೆದಾರರು ವಾಟ್ಸಪ್‌ ಗ್ರೂಪ್‌ ಸೇರುವಿಕೆ ನಿಯಂತ್ರಿಸಬಹುದಾದ ಆಯ್ಕೆಗಳಿವೆ. ಈ ಫೀಚರ್‌ನಲ್ಲಿ Everyone, My Contacts, My Contacts Except..ಮತ್ತು Nobody ಆಯ್ಕೆಗಳಿದ್ದು, ಬಳಕೆದಾರರು ಅಗತ್ಯ ಎನಿಸುವುದನ್ನು ಸೆಟ್‌ ಮಾಡಬಹುದಾಗಿದೆ. ಅದಕ್ಕಾಗಿ ಈ ಹಂತಗಳನ್ನು ಅನುಸರಿಸಿರಿ. ವಾಟ್ಸಪ್‌ > ಸೆಟ್ಟಿಂಗ್ > ಅಕೌಂಟ್‌ > ಪ್ರೈವೆಸಿ > ಗ್ರೂಪ್ಸ್‌.

Best Mobiles in India

English summary
WhatsApp is one of the most popular app worldwide and has more than 400 million users in India. to know more visit to kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+