ಕೊನೆಗೂ ವಾಟ್ಸಾಪ್ ಸೇರಿದ ಬಹುನಿರೀಕ್ಷಿತ ವಿಡಿಯೊ ಮ್ಯೂಟ್ ಫೀಚರ್!
ವಿಶ್ವದ ಜನಪ್ರಿಯ ಮೆಸೆಜಿಂಗ್ ಆಪ್ ವಾಟ್ಸಪ್ ಪ್ರಸ್ತುತ ಹಲವು ಏರಿಳಿತ ಕಂಡಿದ್ದರೂ ತನ್ನ ಜನಪ್ರಿಯತೆ ಉಳಿಸಿಕೊಂಡಿದೆ. ಈಗಾಗಲೇ ಸಂಸ್ಥೆಯು ಪರಿಚಯಿಸಿರುವ ಹಲವು ಫೀಚರ್ಸ್‌ಗಳು ಬಳಕೆದಾರರಿಗೆ ಉಪಯುಕ್ತವಾಗಿವೆ. ಇದೀಗ ವಾಟ್ಸಾಪ್ ಮತ್ತೆ ಹೊಸದೊಂದು ಫೀಚರ್ ಅನಾವರಣ ಮಾಡಿದೆ. ಅದುವೇ ಬಹುನಿರೀಕ್ಷಿತ ವಿಡಿಯೊ ಮ್ಯೂಟ್ ಮಾಡುವ ಆಯ್ಕೆ ಆಗಿದೆ.

ಹೌದು, ಫೇಸ್‌ಬುಕ್ ಮಾಲೀಕತ್ವದ ವಾಟ್ಸಪ್ ಅಪ್ಲಿಕೇಶನ್ ಈಗ 'ವಿಡಿಯೊ ಮ್ಯೂಟ್' ಹೆಸರಿನ ನೂತನ ಫೀಚರ್ ಅನ್ನು ಬಳಕೆದಾರರಿಗೆ ಪರಿಚಯಿಸಿದೆ. ಬಳಕೆದಾರರು ಇತರರಿಗೆ ವಿಡಿಯೊ ಕಳುಹಿಸುವಾಗ ಮ್ಯೂಟ್ ಮಾಡುವ ಆಯ್ಕೆ ಇದಾಗಿದೆ ಎನ್ನಲಾಗಿದೆ. ವಾಟ್ಸಾಪ್ 2.21.3.13 ಬೀಟಾ ಅಪ್‌ಡೇಟ್ ಆವೃತ್ತಿಯಲ್ಲಿ ಈ ನೂತನ ಫೀಚರ್ ಕಾಣಿಸಿಕೊಂಡಿದ್ದು, ಎಡಿಟ್ ಆಯ್ಕೆಯೊಂದಿಗೆ ವೀಡಿಯೊವನ್ನು ಮ್ಯೂಟ್ ಮಾಡುವ ಆಯ್ಕೆಯನ್ನು ಕಾಣಿಸಲಿದೆ ಎಂದು ಹೇಳಲಾಗಿದೆ.

ಈ ಫೀಚರ್‌ಗೆ ಸಂಬಂಧಿಸಿದಂತೆ 2020 ರ ನವೆಂಬರ್‌ನಲ್ಲಿ WABetainfo ತಾಣದಲ್ಲಿ ಲೀಕ್ ಆದ ಮಾಹಿತಿ ಪ್ರಕಾರ ಬಳಕೆದಾರರು zಐಕಾನ್ ಅನ್ನು ಎಡಭಾಗದ ಕಡೆಗೆ ನೀಡಲಾಗಿತ್ತು. ವೀಡಿಯೊಗಳ ಅವಧಿ ಮತ್ತು ಫೈಲ್ ಗಾತ್ರದ ವಿವರಗಳ ಬಳಿ ವೀಡಿಯೊವನ್ನು ಮ್ಯೂಟ್ ಮಾಡಲು, ಬಳಕೆದಾರರು ವೀಡಿಯೊವನ್ನು ಬೇರೆಯವರಿಗೆ ಹಂಚಿಕೊಳ್ಳುವ ಮೊದಲು ಸ್ಪೀಕರ್ ಐಕಾನ್ ಅನ್ನು ಟ್ಯಾಪ್ ಮಾಡಬೇಕಾಗುತ್ತದೆ ಎಂದು ತಿಳಿದುಬಂದಿತ್ತು.

ಅದೇ ರೀತಿ ವಾಟ್ಸಾಪ್ ತನ್ನ ಬಳಕೆದಾರರಿಗೆ ಗ್ರೂಪ್ ಚಾಟ್‌ಗಳಲ್ಲಿ Mention badge ಫೀಚರ್ಸ್ ಅನ್ನು ಪರಿಚಯಿಸಿದೆ. ಇದು ಆಂಡ್ರಾಯ್ಡ್ 2.21.3.13 ಬೀಟಾ ಅಪ್‌ಡೇಟ್‌ಗಾಗಿ ವಾಟ್ಸಾಪ್‌ನಲ್ಲಿ ಲಭ್ಯವಿದೆ. ಆದರೆ ಇದು ಇನ್ನೂ ಬಳಕೆದಾರರಿಗೆ ಗೋಚರಿಸುವುದಿಲ್ಲ ಎಂದು WABetaInfo ವರದಿ ಮಾಡಿದೆ. ವಾಟ್ಸಾಪ್‌ನ ಈ ಹೊಸ ಫೀಚರ್ಸ್ ವಾಟ್ಸಾಪ್ ಗ್ರೂಪ್ ಚಾಟ್‌ಗಳಿಗೆ ಬಹಳ ಉಪಯುಕ್ತವಾಗಿದೆ. ಇದು ನೀವು ಗುಂಪಿನಲ್ಲಿ ಪ್ರಸ್ತಾಪವನ್ನು ಸ್ವೀಕರಿಸಿದಾಗ, ಗ್ರೂಪ್ ಸೆಲ್‌ನಲ್ಲಿ ಹೊಸ ಬ್ಯಾಡ್ಜ್ ಅನ್ನು ಸೇರಿಸಲಾಗುತ್ತದೆ" ಎಂದು ವಿವರಿಸುತ್ತದೆ.

ಇನ್ನು ವಾಟ್ಸಾಪ್‌ನಲ್ಲಿ ಹೊಸ ಸ್ಟಿಕ್ಕರ್ ಪ್ಯಾಕ್‌ನ ರೋಲ್ ಔಟ್ ಬಗ್ಗೆ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದನ್ನು "ಟಟರ್ಸ್ ಎನ್ ಟಾಟ್ಸ್" ಎಂದು ಕರೆಯಲಾಗುತ್ತದೆ, ಮತ್ತು ಸ್ಟಿಕ್ಕರ್ ಪ್ಯಾಕ್ ಪ್ರಸ್ತುತ ಅಪ್ಲಿಕೇಶನ್‌ನಲ್ಲಿ ಲಭ್ಯವಿದೆ. ಆಸಕ್ತ ಬಳಕೆದಾರರು ಯಾವುದೇ ಚಾಟ್‌ನಲ್ಲಿ ಸ್ಟಿಕ್ಕರ್ ಐಕಾನ್ ಅನ್ನು ಟ್ಯಾಪ್ ಮಾಡಬಹುದು ಮತ್ತು ಹೊಸ ಸ್ಟಿಕ್ಕರ್ ಪ್ಯಾಕ್ ಡೌನ್‌ಲೋಡ್ ಮಾಡಲು ‘+' ಐಕಾನ್ ಆಯ್ಕೆಮಾಡಿ. ಇದು ಸ್ಟಿಕ್ಕರ್ ಪ್ಯಾಕ್‌ಗಳ ಪಟ್ಟಿಯಲ್ಲಿ ಮೊದಲು ಕಾಣಿಸುತ್ತದೆ.


Click it and Unblock the Notifications








