ಅಯ್ಯೋ..! ಹೆಚ್ಚಿನ ಭಾರತೀಯರು ಬಳಸೋದೆ ಈ ವಿದೇಶಿ ಪ್ರಾಡಕ್ಟ್‌ಗಳನ್ನ..!

ಹೆಚ್ಚಿನ ಭಾರತೀಯರು ಇತರೆ ದೇಶಗಳು ಅಭಿವೃದ್ದಿಪಡಿಸಿದ ಸೇವೆಗಳನ್ನು ಬಳಸುತ್ತಿದ್ದಾರೆ.

By Suneel
|

ಭಾರತ, ಚೀನಾ'ದೊಂದಿಗೆ ಯಾವಾಗಲು ಉತ್ತಮ ಬಾಂಧವ್ಯ ಹೊಂದಿದೆ. ಅದೇ ರೀತಿಯಲ್ಲಿ ಟೆಕ್ನಾಲಜಿ ಕ್ಷೇತ್ರದಲ್ಲೂ ಉತ್ತಮ ಬಾಂಧವ್ಯ ಮುಂದುವರೆಸಿವೆ. ಸಾಕ್ಷಿಯಾಗಿ ಭಾರತದಲ್ಲಿ ಹೆಚ್ಚಿನ ಚೀನಾ ಪ್ರಾಡಕ್ಟ್‌ಗಳು ಇವೆ. ಆದರೆ ಭಾರತದ ಪ್ರಾಡಕ್ಟ್‌ಗಳು ಚೀನಾದಲ್ಲಿ ಸ್ವಲ್ಪ ಕಡಿಮೆ ಇರಬಹುದು.

ಬೆಂಗಳೂರಿನ 'ಗ್ಲೋಬಲ್ ಮೊಬೈಲ್ ಇಂಟರ್ನೆಟ್ ಕಾನ್ಫರೆನ್ಸ್'ನಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ, ಛೀಥಾ ಮೊಬೈಲ್‌ ಕಾರ್ಯನಿರ್ವಾಹಕಿ 'ಡೀನ್ ಜೆನ್ನಿ ಕ್ವಾನ್' ಭಾರತ ಮತ್ತು ಚೀನಾ ಪರಸ್ಪರ ಹೇಗೆ ಸ್ಪರ್ಧೆಯಲ್ಲಿವೆ ಎಂಬುದಕ್ಕೆ ಅಂತದೃಷ್ಟಿ ಸೂಕ್ಷ್ಮ ಮಾಹಿತಿಯೊಂದನ್ನು ಹೇಳಿದರು. ಹಾಗೆ ಚೀನಾ ಮತ್ತು ಭಾರತ ಮುಂದೊಂದು ದಿನ ಒಟ್ಟಿಗೆ ಹೇಗೆ ಸೇರಲಿವೆ ಎಂದು ಹೇಳಿದರು.

ಆನ್‌ಲೈನ್‌ ಪೇ ಮಾಡಿ 2000 ರೂ ನೋಟು ಪಡೆಯಿರಿ: 786 ಸೀರಿಯಲ್ ನೋಟಿಗೆ 1.51 ಲಕ್ಷ!!

ಅಂದಹಾಗೆ GMIC ಕಾರ್ಯಕ್ರಮದಲ್ಲಿ 'ಡೀನ್ ಜೆನ್ನಿ ಕ್ವಾನ್', ಭಾರತ ಮತ್ತು ಚೀನಾ ಹೆಚ್ಚು ಬಳಸುತ್ತಿರುವ ಸೇವೆಗಳ ಪ್ರದರ್ಶನ ಮಾಡಿದರು. ಅವರು ನೀಡಿದ ವರದಿಯಲ್ಲಿ ಹೆಚ್ಚಿನ ಭಾರತೀಯರು ಇತರೆ ದೇಶಗಳು ಅಭಿವೃದ್ದಿಪಡಿಸಿದ ಸೇವೆಗಳನ್ನು ಬಳಸುತ್ತಿದ್ದಾರೆ ಎಂಬುದನ್ನು ಬಹಿರಂಗಪಡಿಸಲಾಯಿತು. ಹಾಗಾದ್ರೆ ಆ ವರದಿಯಲ್ಲಿ ಏನಿತ್ತು ಎಂಬುದನ್ನು ಇಂದಿನ ಲೇಖನದಲ್ಲಿ ಓದಿರಿ.

ವಾಟ್ಸಾಪ್ ಹೆಚ್ಚು ಬಳಸುತ್ತಿರುವ ಟಾಪ್‌ ಮೋಸ್ಟ್ ಸಾಮಾಜಿಕ ತಾಣ ಅಪ್ಲಿಕೇಶನ್

ವಾಟ್ಸಾಪ್ ಹೆಚ್ಚು ಬಳಸುತ್ತಿರುವ ಟಾಪ್‌ ಮೋಸ್ಟ್ ಸಾಮಾಜಿಕ ತಾಣ ಅಪ್ಲಿಕೇಶನ್

ಲಿಬ್ರಾ ನೀಡಿದ ಡಾಟಾ ಪ್ರಕಾರ, ಭಾರತ ವಾಟ್ಸಾಪ್ ಕಂಪನಿ ಅನ್ನು ಹೆಚ್ಚು ಬಳಸುತ್ತಿದೆ. ಅಲ್ಲದೇ ಮೊಬೈಲ್‌ ಡಾಟಾವನ್ನು ಹೆಚ್ಚು ಬಳಸುತ್ತಿದೆ. ಅಲ್ಲದೇ ಫೇಸ್‌ಬುಕ್, ಜಿಮೇಲ್‌, ಮೆಸೇಂಜರ್ ಇತರೆ. ಆದರೆ ಮೇಲಿನ ಇಮೇಜ್‌ ನೋಡಿದರೆ ಚೀನಾ ಮಾತ್ರ ತನ್ನ ಸ್ವಂತ ದೇಶದ ವೀಚಾಟ್‌ ಅನ್ನು ಬಳಸುತ್ತಿದೆ.

 ಫೋಟೋಗ್ರಫಿ ಆಪ್‌

ಫೋಟೋಗ್ರಫಿ ಆಪ್‌

ಫೋಟೋಗ್ರಫಿ ವಿಭಾಗದಲ್ಲಿ, ಗೂಗಲ್ ಫೋಟೋಸ್ ಹೆಚ್ಚು ಬಳಸಿದ ಫೋಟೋ ಎಡಿಟಿಂಗ್ ಆಪ್‌ ಆಗಿದೆ. ಅಲ್ಲದೇ ಈ ವಿಭಾಗದಲ್ಲಿ ಒಂದೇ ಒಂದು ಭಾರತದ ಅಭಿವೃದ್ದಿಪಡಿಸಿದ ಆಪ್‌ ಇಲ್ಲ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮ್ಯೂಸಿಕ್ ಮತ್ತು ವೀಡಿಯೊ ಆಪ್‌ಗಳು

ಮ್ಯೂಸಿಕ್ ಮತ್ತು ವೀಡಿಯೊ ಆಪ್‌ಗಳು

ಹೆಚ್ಚು ಕುತೂಹಲಕಾರಿ ವಿಷಯವೆಂದರೆ, ಭಾರತದಲ್ಲಿ ಹೆಚ್ಚಿನ ಜನರು ಗೂಗಲ್ ಪ್ಲೇ ಮ್ಯೂಸಿಕ್ ಅನ್ನೇ ಡಿಫಾಲ್ಟ್ ಮ್ಯೂಸಿಕ್ ಪ್ಲೇಯರ್‌ ಆಗಿ ಬಳಸುತ್ತಾರೆ. ಇದು ಬಿಡಿ ನಿರೀಕ್ಷಿಸಿದ ವಿಷಯ. ಗೂಗಲ್ ಇತ್ತೀಚೆಗೆ ತಾನೆ ಗೂಗಲ್ ಪ್ಲೇ ಮ್ಯೂಸಿಕ್ ಸ್ಟೊರ್ ಅನ್ನು ಸಹ ಪರಿಚಯಿಸಿದೆ. ಇದೀಗ ಜಿಯೋ ಮ್ಯೂಸಿಕ್ ಲೀಸ್ಟ್‌ನಲ್ಲಿ ಇದೆ.

ಗೇಮ್ಸ್‌ ವರ್ಗದಲ್ಲಿ ಕ್ಯಾಂಡಿ ಕ್ರಶ್ ಸಾಗಾ

ಗೇಮ್ಸ್‌ ವರ್ಗದಲ್ಲಿ ಕ್ಯಾಂಡಿ ಕ್ರಶ್ ಸಾಗಾ

ಭಾರತದಲ್ಲಿ ಈಗಲೂ ಸಹ ಬಹುಸಂಖ್ಯಾತರು ಅಡಿಕ್ಟ್ ಆಗಿರುವುದು ಕ್ಯಾಂಡಿ ಕ್ರಶ್‌ ಸಾಗಾ ಗೇಮ್‌'ಗೆ. ಅಲ್ಲದೇ ಚಾರ್ಟ್‌ನಲ್ಲೂ ಸಹ ಕ್ಯಾಂಡಿ ಕ್ರಶ್ ಸಾಗಾ ಇದೆ.

 ನ್ಯೂಸ್‌ ಆಪ್‌ಗಳು

ನ್ಯೂಸ್‌ ಆಪ್‌ಗಳು

ದೊರೆತಿರುವ ಡಾಟಾ ಪ್ರಕಾರ ಭಾರತದ ನ್ಯೂಸ್ ಆಪ್‌ಗಳು, ಚೀನಾ ನ್ಯೂಸ್‌ ಆಪ್‌ಗಳಿಗಿಂತ ಆಕ್ಟಿವ್ ಮತ್ತು ಓಪನ್‌ನಿಂಗ್‌ನಲ್ಲಿ ಹಿಂದುಳಿದಿವೆ. ಆದರೆ ಈ ವಿಭಾಗದಲ್ಲಿ 'ಡೈಲಿ ಹಂಟ್ ' ನ್ಯೂಸ್ ಆಪ್ ದೀರ್ಘ ಕಾಲ ರನ್‌ ಆಗುತ್ತಿರುವ ಲೀಡಿಂಗ್ ಆಪ್ ಆಗಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
WhatsApp is the Most Used Messaging Platform in India, Says Dean of Cheetah Mobile Lab. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X