ಇನ್ಮುಂದೆ ವಾಟ್ಸಾಪ್‌ನಲ್ಲಿ ಎಲ್ಲವೂ ತುಂಬಾ ಸುಲಭ; ಬೆರಳ ತುದಿಗೆ ಸೌಲಭ್ಯ!
ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಒಳಗೊಂಡಿರುವ ಇನ್‌ಸ್ಟಂಟ್ ಮೆಸೆಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಬಳಕೆದಾರರಿಗೆ ಉಪಯುಕ್ತ ಆಯ್ಕೆಗಳಿಂದ ಆಪ್ತವಾಗಿದೆ. ಒಂದಿಲ್ಲೊಂದು ಹೊಸ ಅನುಕೂಲಕರ ಫೀಚರ್ಸ್ ಪರಿಚಯಿಸುತ್ತ ಸಾಗಿರುವ ವಾಟ್ಸಾಪ್ ಈಗ ಮತ್ತೊಂದು ಅಚ್ಚರಿ ನೀಡಲು ಸಜ್ಜಾಗಿದೆ. ಬಳಕೆದಾರರ ಕುತೂಹಲವನ್ನು ಸಹ ಡಬಲ್ ಮಾಡಿದೆ.
ಹೌದು, ಮೆಟಾ ಮಾಲೀಕತ್ವದ ವಾಟ್ಸಾಪ್ ಆಪ್ ತನ್ನ ಮುಂಬರುವ ನೂತನ ಅಪ್‌ಡೇಟ್‌ನಲ್ಲಿ ಬಾಟಮ್ ನ್ಯಾವಿಗೇಶನ್ ಬಾರ್ (bottom navigation bar) ಆಯ್ಕೆ ನೀಡಲು ಸಜ್ಜಾಗಿದೆ. ವಾಟ್ಸಾಪ್‌ನ ಆವೃತ್ತಿ 2.23.8.4 ರ ಗೂಗಲ್ ಪ್ಲೇ ಬೀಟಾ ಪ್ರೋಗ್ರಾಂ ಮೂಲಕ ಈ ಆಯ್ಕೆ ಹೊರಹೊಮ್ಮುತ್ತಿದೆ. ಈ ಬಗ್ಗೆ WABetaInfo ಸ್ಕ್ರೀನ್‌ಶಾಟ್‌ಗಳನ್ನು ಹಂಚಿಕೊಂಡಿದ್ದು, ಬಳಕೆದಾರರಲ್ಲಿ ಅಚ್ಚರಿ ಮೂಡಿಸಿದೆ.

WABetaInfo ಈಗ ಆಂಡ್ರಾಯ್ಡ್ ಓಎಸ್‌ಗಾಗಿ ಇತ್ತೀಚಿನ ವಾಟ್ಸಾಪ್ ಬೀಟಾ ಆವೃತ್ತಿಯೊಂದಿಗೆ UI ಬದಲಾವಣೆಯನ್ನು ಬಹಿರಂಗಪಡಿಸಿದೆ. ವಾಟ್ಸಾಪ್ ಸೇರಲಿರುವ ನೂತನ ಬಾಟಮ್ ನ್ಯಾವಿಗೇಶನ್ ಬಾರ್ ಆಯ್ಕೆಯು ವಾಟ್ಸಾಪ್‌ನ ಕೆಳಭಾಗದಲ್ಲಿ ಕಾಣಿಸಿಕೊಳ್ಳಲಿದೆ. ಈ ನ್ಯಾವಿಗೇಶನ್ ಬಾರ್ ಚಾಟ್ಸ್, ಕಮ್ಯೂನಿಟಿ, ಸ್ಟೇಟಸ್ ಮತ್ತು ಕರೆ ಆಯ್ಕೆಗಳನ್ನು ಒಳಗೊಂಡಿರಲಿದೆ ಎಂದು ಸ್ಕ್ರೀನ್‌ಶಾಟ್‌ನಲ್ಲಿ ಕಾಣಿಸಿದೆ.

ವಾಟ್ಸಾಪ್‌ನ ಅಧಿಕೃತ ಮಾಹಿತಿ ತಿಳಿಸುವ WABetaInfo ಪ್ರಕಾರ, ನೂತನವಾಗಿ ಸೇರ್ಪಡೆ ಮಾಡಲು ಸಿದ್ಧವಾಗಿರುವ ಬಾಟಮ್ ನ್ಯಾವಿಗೇಷನ್ ಬಾರ್ ವಾಟ್ಸಾಪ್ ನ iOS ಆವೃತ್ತಿಯಂತೆಯೇ ಕಾಣುತ್ತದೆ. ಇದು ಆಂಡ್ರಾಯ್ಡ್ ನಿಂದ ಐಓಎಸ್ ಗೆ ಬದಲಾಯಿಸುವವರಿಗೆ ಬಳಕೆಯ ಅನುಭವವನ್ನು ಒಂದೇ ತರಹನಾಗಿ ಉಳಿಸುತ್ತದೆ.
ಅಂದಹಾಗೆ ಈ ಹೊಸ ಬಾಟಮ್ ನ್ಯಾವಿಗೇಷನ್ ಬಾರ್ ವಾಟ್ಸಾಪ್ ಅಪ್ಲಿಕೇಶನ್‌ನ ಸಾಮಾನ್ಯ ಆವೃತ್ತಿಗೆ ಯಾವಾಗ ಕಾಣಿಸಿಕೊಳ್ಳಲಿದೆ ಎನ್ನುವ ಬಗ್ಗೆ ನಿಖರ ಮಾಹಿತಿ ತಿಳಿದುಬಂದಿಲ್ಲ. ಆದರೆ ಆಂಡ್ರಾಯ್ಡ್ ನ ಸ್ಥಿರ ಆವೃತ್ತಿಗಾಗಿ ವಾಟ್ಸಾಪ್ ನಲ್ಲಿ ಬಾಟಮ್ ನ್ಯಾವಿಗೇಷನ್ ಬಾರ್ ಆಗಮನಕ್ಕೆ ಯಾವುದೇ ನಿಗದಿತ ಟೈಮ್‌ಲೈನ್ ಇಲ್ಲ.

ಇತ್ತೀಚಿಗಷ್ಟೆ, ಮೆಟಾ ಮಾಲೀಕತ್ವದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಕೆಲವು ಹೊಸ ಫೀಚರ್ಸ್‌ಗಳ ಬಗ್ಗೆ ಸೂಚಿಸಿದೆ. ಇತ್ತೀಚಿನ ವಾಟ್ಸಾಪ್ ಬೀಟಾದಲ್ಲಿ ಇನ್‌ಸ್ಟಾಗ್ರಾಮ್-ಶೈಲಿಯ ಟೆಕ್ಸ್ಟ್ ಎಡಿಟಿಂಗ್ ಅನ್ನು ಬಹಿರಂಗಪಡಿಸಲಾಗಿದೆ. ಆದರೆ ಕಂಪನಿಯು ಚಾಟ್‌ಗಳಿಗಾಗಿ ಫಿಂಗರ್‌ಪ್ರಿಂಟ್ ದೃಢೀಕರಣವನ್ನು ಸಕ್ರಿಯಗೊಳಿಸುವ ಮಾರ್ಗವನ್ನು ರೂಪಿಸುತ್ತಿದ್ದು, ಇದು ಸೆಕ್ಯುರಿಟಿಗೆ ಹೆಚ್ಚಿನ ಬಲ ನೀಡಲಿದೆ.

ಹಾಗೆಯೇ ವಾಟ್ಸಾಪ್ ಆಂಡ್ರಾಯ್ಡ್ ಬೀಟಾದಲ್ಲಿ ಹೊಸ ಲಾಕ್ ಚಾಟ್ ಫೀಚರ್ಸ್ ಪರಿಚಯಿಸಲು ಸಜ್ಜಾಗಿದೆ. ಇದು ಹೆಸರೇ ಸೂಚಿಸುವಂತೆ ಬಳಕೆದಾರರಿಗೆ ತಮ್ಮ ಚಾಟ್‌ಗಳನ್ನು ಲಾಕ್ ಮಾಡಲು ಅವಕಾಶ ನೀಡಲಿದೆ. ಇದರಿಂದ ನಿಮ್ಮ ಚಾಟ್‌ಗಳನ್ನು ಯಾರಿಗೂ ಕಾಣದಂತೆ ಹೈಡ್ ಮಾಡಲು ಅನುಮತಿಸಲಿದೆ. ಇದರಿಂದ ಬಳಕೆದಾರರಿಗೆ ಇನ್ನಷ್ಟು ಪ್ರೈವೆಸಿ ಕಾಪಾಡಲು ಸಾಧ್ಯವಾಗಲಿದೆ ಎಂದು ವಾಬೇಟಾ ಇನ್ಫೋ ವರದಿ ಮಾಡಿದೆ.
ಹಾಗೆಯೇ ಈ ಆಯ್ಕೆಯಲ್ಲಿ ವಾಟ್ಸಾಪ್ ಲಾಕ್‌ಚಾಟ್ ಫೀಚರ್ಸ್ ಬಳಕೆದಾರರಿಗೆ ತಮ್ಮ ಖಾಸಗಿ ಚಾಟ್‌ಗಳನ್ನು ಹೈಡ್ ಮಾಡಲು ಅವಕಾಶ ದೊರೆಯಲಿದೆ. ಅಲ್ಲದೆ ಖಾಸಗಿ ಚಾಟ್ ಕಂಟ್ಯಾಕ್ಟ್ ಅಥವಾ ಗ್ರೂಪ್‌ನ ಮಾಹಿತಿ ಯನ್ನು ಯಾರಿಗೂ ಕಾಣದಂತೆ ಲಾಕ್ ಮಾಡಲು ಸಹಾಯ ಮಾಡಲಿದೆ.
ಬಳಕೆದಾರರು ಒಂದು ಬಾರಿ ಚಾಟ್ ಅನ್ನು ಲಾಕ್ ಮಾಡಿದಾಗ, ಮತ್ತೆ ಚಾಟ್ ಪ್ರವೇಶಿಸಲು ಬಳಕೆದಾರರು ತಮ್ಮ ಫಿಂಗರ್‌ಪ್ರಿಂಟ್ ಅಥವಾ ಪಾಸ್‌ಕೋಡ್ ಬಳಸಿ ಪ್ರವೇಶಿಸಬಹುದಾಗಿದೆ. ಇದರಿಂದ ಬೇರೆಯವರು ನಿಮ್ಮ ಚಾಟ್‌ಗಳನ್ನು ತೆರೆಯಲು ಸಾಧ್ಯವಾಗುವುದಿಲ್ಲ. ಒಂದು ವೇಳೆ ಲಾಕ್ ಮಾಡಿರುವ ಚಾಟ್ ಅನ್ನು ಬೇರೆಯವರು ತೆರೆಯಲು ಪ್ರಯತ್ನಿಸಿದರೆ ಫಿಂಗರ್ ಪ್ರಿಂಟ್ ಅನ್ನು ಕೇಳಲಿದೆ. ಒಂದು ವೇಳೆ ವಾಟ್ಸಾಪ್ ಕೇಳುವ ಅಗತ್ಯ ದೃಢೀಕರಣವನ್ನು ಒದಗಿಸಲು ವಿಫಲವಾದರೆ ಚಾಟ್ ಅನ್ನು ರಿಮೂವ್ ಮಾಡುವಂತೆ ಕೇಳಲಿದೆ.


Click it and Unblock the Notifications








