Home
ಸುದ್ದಿಜಾಲ

ಸದ್ಯದಲ್ಲೇ ಬರಲಿದೆ ವಾಟ್ಸಾಪ್‌ ಚಾನೆಲ್‌!..ಬಳಕೆದಾರರಿಗೆ ಭಾರೀ ಅನುಕೂಲ!

ಅತೀ ಹೆಚ್ಚಿನ ಸಕ್ರಿಯ ಬಳಕೆದಾರರನ್ನು ಒಳಗೊಂಡಿರುವ ಜನಪ್ರಿಯ ಇನ್‌ಸ್ಟಂಟ್‌ ಮೆಸೆಜ್‌ ಆಪ್‌ ವಾಟ್ಸಾಪ್‌ ಹಲವು ಆಯ್ಕೆಗಳ ಮೂಲಕ ಬಳಕೆದಾರರಿಗೆ ಆಪ್ತವಾಗಿದೆ. ಇದೀಗ ಸದ್ದಿಲ್ಲದೆ ವಾಟ್ಸಾಪ್‌ ನೂತನವಾಗಿ ಹೊಸದೊಂದು ಫೀಚರ್ಸ್‌ ಪರಿಚಯಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅದುವೇ ವಾಟ್ಸಾಪ್‌ 'ಚಾನೆಲ್‌ಗಳು' (Channels) ಆಗಿದೆ.

ಹೌದು, ಮೆಟಾ ಮಾಲೀಕತ್ವದ ವಾಟ್ಸಾಪ್‌ ಇದೀಗ ಹೊಸದಾಗಿ ಚಾನೆಲ್ಸ್‌ ಫೀಚರ್‌ನಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿಯಾಗಿದೆ. ಅದು ಬಳಕೆದಾರರಿಗೆ ಏಕಕಾಲದಲ್ಲಿ ಹಲವಾರು ಬಳಕೆದಾರರಿಗೆ ಮೆಸೆಜ್‌ಗಳನ್ನು ಪ್ರಸಾರ ಮಾಡಲು ಅನುಮತಿಸುತ್ತದೆ. WABetaInfo ವರದಿ ಪ್ರಕಾರ, ವಾಟ್ಸಾಪ್‌ ಇತ್ತೀಚಿನ ಐಓಎಸ್‌ ಬೀಟಾ ಬಿಲ್ಡ್‌ನಲ್ಲಿ ಈ ಫೀಚರ್‌ ಅನ್ನು ಗುರುತಿಸಲಾಗಿದೆ.

ಸದ್ಯದಲ್ಲೇ ಬರಲಿದೆ ವಾಟ್ಸಾಪ್‌ ಚಾನೆಲ್‌!..ಬಳಕೆದಾರರಿಗೆ ಭಾರೀ ಅನುಕೂಲ!

ಇನ್ನು ವಾಟ್ಸಾಪ್‌ನ ಈ ನೂತನ ಫೀಚರ್ ಈಗಾಗಲೇ ಇರುವ ಸ್ಟೇಟಸ್‌ ಆಯ್ಕೆಯ ವಿಭಾಗದಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ವಾಟ್ಸಾಪ್ ಸ್ಟೇಟಸ್ ಟ್ಯಾಬ್ ಅನ್ನು ಚಾನಲ್ಸ್‌ ಫೀಚರ್‌ಗಾಗಿ 'ಅಪ್‌ಡೇಟ್‌ಗಳು' ಎಂದು ಮರುಹೆಸರಿಸಲು ಯೋಜಿಸಿದೆ. ಅಂದಹಾಗೆ ಈ ಫೀಚರ್ ಮೊದಲು ಐಫೋನ್‌ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ.

ಸದ್ಯದಲ್ಲೇ ಬರಲಿದೆ ವಾಟ್ಸಾಪ್‌ ಚಾನೆಲ್‌!..ಬಳಕೆದಾರರಿಗೆ ಭಾರೀ ಅನುಕೂಲ!

ವಾಟ್ಸಾಪ್‌ನಿಂದ​ 'ಚಾನೆಲ್' ಎಂಬ ಫೀಚರ್ ಬರಲಿದ್ದು, ಈ ಫೀಚರ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಳ್ಳುತ್ತಾ, ವಾಟ್ಸಾಪ್ ಸ್ಟೇಟಸ್ ಟ್ಯಾಬ್ ಅನ್ನು ಚಾನಲ್‌ಗಳಾಗಿ 'ಅಪ್‌ಡೇಟ್‌ಗಳು' ಎಂದು ಮರುಹೆಸರಿಸಲು ಯೋಜಿಸಿದೆ. ಇನ್ನು ವಾಟ್ಸಾಪ್‌ ಚಾನೆಲ್ ಒಂದು ಖಾಸಗಿ ಸಾಧನವಾಗಿದ್ದು ಚಾನಲ್‌ಗೆ ಸೇರುವ ಫೋನ್ ಸಂಖ್ಯೆಗಳು ಮತ್ತು ಬಳಕೆದಾರರ ಮಾಹಿತಿಯನ್ನು ಸುರಕ್ಷಿತವಾಗಿ ಇಡಲಿದೆ.

ಏನಿದು ವಾಟ್ಸಾಪ್‌ನ ಹೊಸ ಚಾನೆಲ್ಸ್‌ ಫೀಚರ್‌? : WaBetaInfo ವರದಿಯು ಬಳಕೆದಾರರು ಯಾವ ಚಾನಲ್‌ಗಳಿಗೆ ಚಂದಾದಾರರಾಗಲು ಬಯಸುತ್ತಾರೆ ಎಂಬುದರ ಮೇಲೆ ನಿಯಂತ್ರಣವನ್ನು ಹೊಂದಿರುತ್ತಾರೆ. ಅಲ್ಲದೇ ಅವರು ಯಾರನ್ನು ಅನುಸರಿಸುತ್ತಾರೆ ಎಂಬುದನ್ನು ಬೇರೆ ಯಾರೂ ನೋಡುವುದಿಲ್ಲ ಅವರು ಕಾಂಟ್ಯಾಕ್ಟ್‌ಗಳಿಗಾಗಿ ಸೇರಿಸಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಲೆಕ್ಕಿಸುವುದಿಲ್ಲ. ಒಂದು ರೀತಿ ಟೆಲಿಗ್ರಾಮ್‌ ಆಪ್‌ನ ಚಾನೆಲ್ಸ್‌ಗಳಂತೆ ಇದಾಗಿದೆ.

ಸದ್ಯದಲ್ಲೇ ಬರಲಿದೆ ವಾಟ್ಸಾಪ್‌ ಚಾನೆಲ್‌!..ಬಳಕೆದಾರರಿಗೆ ಭಾರೀ ಅನುಕೂಲ!

ಈ ಫೀಚರ್‌ ಚಾನಲ್‌ಗಳ ಪ್ರವೇಶವನ್ನು ಸುಧಾರಿಸಲು ವಿನ್ಯಾಸಗೊಳಿಸಲಾಗಿದೆ. ಏಕೆಂದರೆ ಹೆಚ್ಚುವರಿಯಾಗಿ ಜನರು ವೀಕ್ಷಿಸಲು ಆಯ್ಕೆ ಮಾಡದ ಬಳಕೆದಾರರಿಗೆ ವಿಷಯವನ್ನು ತಳ್ಳುವ ಯಾವುದೇ ಅಲ್ಗಾರಿದಮಿಕ್ ಶಿಫಾರಸುಗಳು ಅಥವಾ ಸಾಮಾಜಿಕ ಗ್ರಾಫ್‌ಗಳಿಲ್ಲದ ಕಾರಣ ಜನರು ಚಾನಲ್‌ಗಳಿಗೆ ಸ್ವಯಂ-ಚಂದಾದಾರರಾಗುವುದಿಲ್ಲ. ವಾಟ್ಸಾಪ್‌ ಚಾನೆಲ್‌ಗಳು ವಾಟ್ಸಾಪ್‌ನಲ್ಲಿ ಅದರ ಬಳಕೆದಾರ ಹೆಸರನ್ನು ನಮೂದಿಸುವ ಮೂಲಕ ನಿರ್ದಿಷ್ಟ ವಾಟ್ಸಾಪ್ ಚಾನಲ್ ಅನ್ನು ಸರ್ಚ್ ಮಾಡಲು ಬಳಕೆದಾರರಿಗೆ ಅನುಮತಿಗೂ ಸಹ ಬೆಂಬಲಿಸುತ್ತದೆ.

ಐಒಎಸ್ ಬಳಕೆದಾರರಿಗಾಗಿ ವಾಟ್ಸಾಪ್ 'ಚಾನೆಲ್' ಫೀಚರ್‌ ಕಾರ್ಯನಿರ್ವಹಿಸುತ್ತಿದೆ
ಆಂಡ್ರಾಯ್ಡ್‌ ಆಪ್‌ನಲ್ಲಿ ಈ ಫೀಚರ್‌ ಇನ್ನೂ ಅಭಿವೃದ್ಧಿ ಹಂತದಲ್ಲಿ ಇದೆ. ಆದರೆ, ಇತ್ತೀಚಿನ ವಾಟ್ಸಾಪ್‌ ಬೀಟಾ iOS 23.8.0.75 ಅಪ್‌ಡೇಟ್‌ಗೆನಲ್ಲಿ, ಇದು ಇದೀಗ TestFlight ಆಪ್‌ನಲ್ಲಿ ಲಭ್ಯವಿದೆ. ಶೀಘ್ರದಲ್ಲೇ ಈ ಫೀಚರ್ಗ್ iOS ಬಳಕೆದಾರರಿಗೆ ಮುಕ್ತವಾಗಲಿದೆ ಎನ್ನಲಾಗಿದೆ.

ವಾಟ್ಸಾಪ್‌ ಚಾನಲ್ಸ್‌ ಆಯ್ಕೆಯಲ್ಲಿ ಫೋನ್ ಸಂಖ್ಯೆ ಮತ್ತು ಬಳಕೆದಾರರ ವಿವರಗಳು ಸುರಕ್ಷಿತ. ಇದ್ರಲ್ಲಿ ಮೆಸೆಜ್‌ಗಳು ಎಂಡ್-ಟು-ಎನ್‌ಕ್ರಿಪ್ಟ್ ಆಗಿಲ್ಲ. ಇದು ಇತರ ಖಾಸಗಿ ಮೆಸೆಜ್‌ಗಳ ಮೇಲೆ ಪರಿಣಾಮ ಬೀರುವುದಿಲ್ಲ ಏಕೆಂದರೆ ಅವುಗಳು ಎನ್‌ಕ್ರಿಪ್ಟ್ ಆಗಿರುತ್ತವೆ. ಇದಲ್ಲದೆ, ಬಳಕೆದಾರರು ಯಾವ ಚಾನಲ್‌ಗಳನ್ನು ಅನುಸರಿಸಲು ಬಯಸುತ್ತಾರೆ ಎಂಬುದರ ಮೇಲೆ ನಿಯಂತ್ರಣವನ್ನು ಹೊಂದಿರುತ್ತಾರೆ.

ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್ ಇತ್ತೀಚೆಗೆ ವಾಟ್ಸಾಪ್‌ಗಾಗಿ 'ಕೀಪ್ ಇನ್ ಚಾಟ್' ಎಂಬ ಹೊಸ ಫೀಚರ್‌ ಘೋಷಿಸಿದರು. ಕಣ್ಮರೆಯಾಗುವ ಮೆಸೆಜ್‌ಗಳ ಫೀಚರ್‌ ಅನ್ನು ಆನ್ ಮಾಡಿದಾಗ ಬಳಕೆದಾರರು ಪ್ರಮುಖ ಮೆಸೆಜ್‌ಗಳನ್ನು ಕಣ್ಮರೆಯಾಗದಂತೆ ಇರಿಸಿಕೊಳ್ಳಲು ಇದು ನೆರವಾಗುತ್ತದೆ. ಕಂಪನಿಯ ಪ್ರಕಾರ, ಬಳಕೆದಾರರು ಮೆಸೆಜ್‌ಗಳನ್ನು ಕಳುಹಿಸಿದ್ದರೆ, ಅವರು ಬಯಸಿದಲ್ಲಿ ಅದನ್ನು ಚಾಟ್‌ನಲ್ಲಿ ಇರಿಸಿಕೊಳ್ಳಲು ಸಾಧ್ಯವಾಗುತ್ತದೆ. ಕಣ್ಮರೆಯಾಗುವ ಮೆಸೆಜ್‌ಗಳನ್ನು ನಿರ್ದಿಷ್ಟ ಸಮಯದ ನಂತರ ಕೆಲವು ಮೆಸೆಜ್‌ಗಳನ್ನು ತೆಗೆದುಹಾಕುತ್ತದೆ.

Best Mobiles in India

English summary
WhatsApp is working on a new feature called ‘Channels’ that will allow users for broadcasting messages to several users simultaneously.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+