WhatsApp ಬಳಕೆದಾರರಿಗೆ ಸಿಹಿಸುದ್ದಿ.. ಸದ್ಯದಲ್ಲೇ ಬಹುನಿರೀಕ್ಷಿತ ಈ ಫೀಚರ್ ಸೇರ್ಪಡೆ!
ಮೆಟಾ ಮಾಲೀಕತ್ವದ ಇನ್‌ಸ್ಟಂಟ್ ಮೆಸೆಜಿಂಗ್ ಅಪ್ಲಿಕೇಶನ್ ವಾಟ್ಸಾಪ್ (WhatsApp) ಈಗಾಗಲೇ ಹಲವು ಉಪಯುಕ್ತ ಫೀಚರ್‌ಗಳ ಮೂಲಕ ಬಳಕೆದಾರರಿಗೆ ಆಪ್ತವಾಗಿದೆ. ವಾಟ್ಸಾಪ್ ಸಂಸ್ಥೆಯು ತನ್ನ ಹೊಸ ಅಪ್‌ಡೇಟ್‌ಗಳಲ್ಲಿ ಆಕರ್ಷಕ ಫೀಚರ್ಸ್ ನೀಡುತ್ತಾ ಮುಂದೆ ಸಾಗಿದೆ. ಅದೇ ಹಾದಿಯಲ್ಲಿ ಮುನ್ನಡೆದಿರುವ ವಾಟ್ಸಾಪ್, ಇದೀಗ ಬಳಕೆದಾರರು ಹುಬ್ಬೇರಿಸುವಂತಹ ಮತ್ತೊಂದು ಹೊಸ ಆಯ್ಕೆಗಳನ್ನು ಪರಿಚಯಿಸಲು ಸಕಲ ತಯಾರಿ ನಡೆಸಿದೆ.
ಹೌದು, ವಾಟ್ಸಾಪ್ (WhatsApp) ಪ್ಲಾಟ್‌ಫಾರ್ಮ್ ಈಗ ಐಓಎಸ್ (iOS) ಆವೃತ್ತಿಯಲ್ಲಿ ಚಾಟ್ ಥೀಮ್ ಫೀಚರ್ ಅನ್ನು (chat theme feature) ಪರಿಚಯಿಸಲು ಕೆಲಸ ಮಾಡುತ್ತಿದೆ. ಈ ಆಯ್ಕೆಯು ಬಳಕೆದಾರರ ಮೆಸಜ್ ಕಳುಹಿಸುವಿಕೆಯ ಅನುಭವಕ್ಕೆ ಕೆಲವು ವೈವಿಧ್ಯತೆಯನ್ನು ಸೇರಿಸಲು ಚಾಟ್ ಕಲರ್ ಮತ್ತು ವಾಲ್‌ಪೇಪರ್‌ಗಳ ಬಹು ಆಯ್ಕೆಗಳಿಂದ ಆಯ್ಕೆ ಮಾಡಲು ಅವಕಾಶ ನೀಡುತ್ತದೆ ಎಂದು ವರದಿಯಾಗಿದೆ.

ವಾಟ್ಸಾಪ್ (WhatsApp) ಫೀಚರ್ ಟ್ರ್ಯಾಕರ್ WABetaInfo ಮಾಹಿತಿಯ ಪ್ರಕಾರ, ವಾಟ್ಸಾಪ್ ಸಂಸ್ಥೆಯು ಆಪಲ್ ಆಪ್ ಸ್ಟೋರ್‌ನಲ್ಲಿ iOS 24.20.71 ನವೀಕರಣಕ್ಕಾಗಿ ವಾಟ್ಸಾಪ್ ನಲ್ಲಿ ಚಾಟ್ ಥೀಮ್ ಅನ್ನು ನೋಡಲಾಗಿದೆ. ಹೆಚ್ಚಿನ ಬಳಕೆದಾರರಿಗೆ, ಈ ಫೀಚರ್ ಸೇರಿಸದಿದ್ದರೂ, ಕೆಲವು ಬಳಕೆದಾರರು ಆಪ್‌ನಲ್ಲಿ ಹೊಸ ಚಾಟ್ ಥೀಮ್ ಫೀಚರ್ ಅನ್ನು ಗುರುತಿಸಿದ್ದಾರೆ ಎಂದು ಫೀಚರ್‌ಟ್ರ್ಯಾಕರ್ ಹೇಳುತ್ತದೆ. ಈ ಕುರಿತಂತೆ ಇಂಟರ್‌ಫೇಸ್‌ನ ಸ್ಕ್ರೀನ್‌ಶಾಟ್ ಅನ್ನು ಸಹ ಶೇರ್ ಮಾಡಲಾಗಿದೆ.
ಇನ್ನು ಶೇರ್ ಮಾಡಲಾಗದ ಸ್ಕ್ರೀನ್‌ಶಾಟ್ ಮಾಹಿತಿಯಂತೆ, ಹೊಸ ಚಾಟ್ ಥೀಮ್ ಕಸ್ಟಮೈಸೇಶನ್ ಆಯ್ಕೆಯು ಬಳಕೆದಾರರಿಗೆ ಎರಡು ಅಂಶಗಳನ್ನು ಅನುಮತಿಸುತ್ತದೆ ಎನ್ನಲಾಗಿದೆ. ಆ ಪೈಕಿ ಮೊದಲನೇಯದಾಗಿ ಚಾಟ್ ಕಲರ್, ಇದು ಬಬಲ್ ಬಣ್ಣಗಳನ್ನು ಪಡೆದಿರಲಿದೆ. ಟೆಕ್ಸ್ಟ್ ಸ್ಥಳದ ಕೆಳಗಿರುವ ಭಾಗ ಮತ್ತು ಹೆಡರ್ ಸ್ಪೇಸ್ ಅನ್ನು ಹೊಂದಿರುತ್ತದೆ. ಇನ್ನು ಚಾಟ್ ವಾಲ್‌ಪೇಪರ್ ಎರಡನೇಯ ಆಯ್ಕೆ ಆಗಿದ್ದು, ಇದರಲ್ಲಿ ಟೆಕ್ಸ್ಟ್ ಮೆಸೆಜ್ ಕಾಣಿಸುವ ಸ್ಥಳವಾಗಿದೆ.
ಈ ನೂತನ ಅಪ್‌ಡೇಟ್‌ನಲ್ಲಿ ಬಳಕೆದಾರರಿಗೆ ಸುಮಾರು 22 ವಾಲ್‌ಪೇಪರ್‌ಗಳು ಲಭ್ಯ ಆಗಲಿವೆ ಎನ್ನಲಾಗಿದೆ. ಹಾಗೆಯೇ iOS ನಲ್ಲಿ ವಾಟ್ಸಾಪ್ ಬಳಕೆದಾರರು ಎಲ್ಲಾ ಚಾಟ್‌ಗಳಿಗೂ ಒಂದೇ ಚಾಟ್ ಥೀಮ್ ಅನ್ನು ಸೆಟ್ ಮಾಡಬಹುದು. ಇಲ್ಲವೇ ನಿರ್ದಿಷ್ಟ್ ಕಾಂಟ್ಯಾಕ್ಟ್‌ಗೆ ನಿರ್ದಿಷ್ಟ ಥೀಮ್‌ಗಳನ್ನು ಆಯ್ಕೆ ಮಾಡಬಹುದು ಎನ್ನಲಾಗಿದೆ. ಇದಾಗ್ಯೂ, ಬಳಕೆದಾರರು ಇತರೆ ಯಾವುದೇ ಥರ್ಡ್‌ಪಾರ್ಟಿ ವಾಲ್‌ಪೇಪರ್‌ಗಳನ್ನು ಸೇರಿಸಬಹುದೇ ಅಥವಾ ಇಲ್ಲವೇ ಎಂಬುದು ಇನ್ನೂ ಅಸ್ಪಷ್ಟ ಇದೆ.
ಇನ್ನು ವಾಟ್ಸಾಪ್‌ನಲ್ಲಿ ಈ ನೂತನ ಫೀಚರ್ ಲಭ್ಯವಾಗುವುದರ ಬಗ್ಗೆ ನಿಖರವಾದ ಡೇಟ್ ಮಾಹಿತಿ ಬಹಿರಂಗ ಮಾಡಿಲ್ಲ. ಆದರೆ ಮುಂಬರುವ ವಾರಗಳಲ್ಲಿ ಈ ಫೀಚರ್ ಎಲ್ಲಾ ಬಳಕೆದಾರರಿಗೆ ಹೊರತರುವ ಸಾಧ್ಯತೆಗಳು ಇವೆ. ಇನ್ನೂ ಎಲ್ಲಡೇ ಈ ಫೀಚರ್ ಲಭ್ಯವಾದ ಮೇಲೆ ಇದನ್ನು ಬಳಕೆ ಮಾಡಲು ಬಳಕೆದಾರರು ವಾಟ್ಸಾಪ್ ಅಪ್ಲಿಕೇಶನ್ ಅನ್ನು ಆಪ್ ಸ್ಟೋರ್‌ನಿಂದ ಇತ್ತೀಚಿನ ಆವೃತ್ತಿಗೆ ಅಪ್‌ಡೇಟ್ ಮಾಡಬೇಕು.
ವಾಟ್ಸಾಪ್ ಟ್ಯಾಗಿಂಗ್ ಫೀಚರ್
ಹಾಗೆಯೇ ವಾಟ್ಸಾಪ್ ಇತ್ತೀಚಿಗೆ ಹೊಸದಾಗಿ 'ಟ್ಯಾಗಿಂಗ್' (Tagging) ಫೀಚರ್ ಅನ್ನು ಪರಿಚಯಿಸಿದೆ. ಈ ಫೀಚರ್ ಬಳಕೆದಾರರಿಗೆ ವಾಟ್ಸಾಪ್ ಸ್ಟೇಟಸ್ ಅಪ್‌ಡೇಟ್ ಲೈಕ್/ ಇಷ್ಟಪಡಲು, ಖಾಸಗಿ ಉಲ್ಲೇಖಗಳನ್ನು ಮಾಡಲು ಮತ್ತು ಸ್ಟೇಟಸ್ ಅನ್ನು ರೀ ಶೇರ್ ಮಾಡಲು ಅನುಮತಿಸುತ್ತದೆ. ಈ ಹೊಸ ಫೀಚರ್‌ನಲ್ಲಿ, ಬಳಕೆದಾರರು ಪ್ರತಿ ಸ್ಟೇಟಸ್‌ನಲ್ಲಿ ಐದು ವ್ಯಕ್ತಿಗಳನ್ನು ನಮೂದಿಸಬಹುದು. ಅಲ್ಲದೇ ಅವರ ಹೆಸರನ್ನು ಕಾಣಿಸದೇ ಯಾರನ್ನಾದರೂ ಖಾಸಗಿಯಾಗಿ ಟ್ಯಾಗ್ ಮಾಡಬಹುದು. ಅಂದಹಾಗೆ ನಮೂದಿಸಿದವರು ನೋಟಿಫಿಕೇಶನ್ ಅನ್ನು ಪಡೆಯುತ್ತಾರೆ.


Click it and Unblock the Notifications








