Home
ಸುದ್ದಿಜಾಲ

WhatsApp ನಲ್ಲಿ ಇತರೆ ಆಪ್‌ಗಳಿಗೂ ಮೆಸೆಜ್‌ ಕಳುಹಿಸಬಹುದು! ಹೊಸ ಕ್ರಾಂತಿ ಆರಂಭ?

ವಾಟ್ಸಾಪ್‌ (WhatsApp ) ನಲ್ಲಿ ನೀವು ಈಗಾಗಲೇ ಸಾಕು ಎನಿಸುವಷ್ಟು ಸೌಲಭ್ಯಗಳನ್ನು ಪಡೆಯುತ್ತಿರಬಹುದು. ಆದರೆ, ಈಗ ಹೊಸದಾಗಿ ಮಾಡಲಾದ ಘೋ‍ಷಣೆ ಮಾತ್ರ ಮೆಸೆಜಿಂಗ್‌ ಆಪ್‌ಗಳಲ್ಲಿ ಹೊಸ ಕ್ರಾಂತಿಯನ್ನೇ ಸೃಷ್ಟಿ ಮಾಡಲಿದೆ. ಅಂದರೆ ವಾಟ್ಸಾಪ್‌ ಬಳಕೆದಾರರು ಮತ್ತೋರ್ವ ವಾಟ್ಸಾಪ್‌ ಬಳಕೆದಾರರಿಗೆ ಮಾತ್ರ ಮೆಸೆಜ್‌ ಮಾಡಬಹುದಿತ್ತು, ಆದರೆ, ಇನ್ಮುಂದೆ ಇತರೆ ಆಪ್‌ಗಳಿಗೂ ಸಹ ಮೆಸೆಜ್‌ ಮಾಡಬಹುದಾಗಿದೆ.

ಹೌದು, ವಾಟ್ಸಾಪ್ ನಲ್ಲಿ ಈ ವಿಶೇಷ ಸೌಲಭ್ಯ ಇನ್ನೇನು ಶೀಘ್ರದಲ್ಲೇ ಬರಲಿದೆ. ಅಂದರೆ ಶೀಘ್ರದಲ್ಲೇ ವಾಟ್ಸಾಪ್ ಬಳಕೆದಾರರು ಇತರ ಅಪ್ಲಿಕೇಶನ್‌ಗಳ ಬಳಕೆದಾರರಿಗೆ ಮೆಸೆಜ್‌ಗಳನ್ನು ಕಳುಹಿಸಲು ಸಾಧ್ಯವಾಗುತ್ತದೆ ಎಂದು WABetaInfo ವರದಿ ಮಾಡಿದೆ. ಹಾಗಿದ್ರೆ, ಏನಿದು ವಾಟ್ಸಾಪ್‌ನ ಹೊಸ ಸೌಲಭ್ಯ, ಇದು ಹೇಗೆ ಕೆಲಸ ಮಾಡಲಿದೆ?, ಇದನ್ನು ಯಾಕೆ ಜಾರಿಗೆ ತರಲಾಗುತ್ತಿದೆ ಎಂಬ ಮಾಹಿತಿ ಇಲ್ಲಿದೆ ನೋಡಿ.

WhatsApp ನಲ್ಲಿ ಇತರೆ ಆಪ್‌ಗಳಿಗೂ ಮೆಸೆಜ್‌ ಕಳುಹಿಸಬಹುದು! ಹೊಸ ಕ್ರಾಂತಿ ಆರಂಭ?

ಇತರೆ ಆಪ್‌ ಬಳಕೆದಾರರಿಗೂ ಮೆಸೆಜ್‌ ಮಾಡಬಹುದು: ವಾಟ್ಸಾಪ್ ಇದೀಗ ಹೊಸ ಫೀಚರ್ಸ್‌ನ ಬೀಟಾ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಇದು ವಾಟ್ಸಾಪ್ ಬಳಕೆದಾರರನ್ನು ಮೂರನೇ ವ್ಯಕ್ತಿಯ ಆಪ್‌ಗಳನ್ನು ಬಳಕೆ ಮಾಡಿಕೊಂಡು ಬಳಕೆದಾರರನ್ನು ಸಂಪರ್ಕಿಸಲು ಮತ್ತು ಮೆಸೆಜ್‌ ಕಳುಹಿಸಲು ಅನುವು ಮಾಡಿಕೊಡುತ್ತದೆ ಎಂದು WaBetaInfo ಮಾಹಿತಿ ನೀಡಿದೆ.

ಈ ಹೊಸ ಫೀಚರ್ಸ್‌ನೊಂದಿಗೆ ವಾಟ್ಸಾಪ್‌ ಬಳಕೆದಾರರು ಮೆಸೆಂಜರ್‌ನಂತಹ ಇತರ ಆಪ್‌ಗಳಿಗೆ ಮೆಸೆಜ್‌ ಕಳುಹಿಸಲು ಸಾಧ್ಯವಾಗುತ್ತದೆ. ಆ ಮೆಸೆಂಜರ್ ಬಳಕೆದಾರರು ವಾಟ್ಸಾಪ್‌ ಅನ್ನು ಡೌನ್‌ಲೋಡ್ ಮಾಡದೆಯೇ ಇತರ ವಾಟ್ಸಾಪ್‌ ಬಳಕೆದಾರರೊಂದಿಗೆ ಸಂವಹನ ನಡೆಸಬಹುದು ಎಂದು ವರದಿಯಿಂದ ತಿಳಿದುಬಂದಿದೆ. ಈ ಫೀಚರ್ ಎಲ್ಲರಿಗೂ ಲಭ್ಯವಾದರೆ ವಾಟ್ಸಾಪ್‌ನಲ್ಲಿ ಇದುವರೆಗೆ ಆದ ಅತಿದೊಡ್ಡ ಬದಲಾವಣೆಯಲ್ಲಿ ಪ್ರಮುಖ ಎನಿಸಲಿದೆ.

WaBetaInfo ಈ ಸಂಬಂಧ ವರದಿ ಮಾಡಿದ್ದು, ಅದರಂತೆ ಇತ್ತೀಚೆಗೆ ಬಿಡುಗಡೆಯಾದ ಆಂಡ್ರಾಯ್ಡ್‌ ಬೀಟಾ ಅಪ್‌ಡೇಟ್ (ಆವೃತ್ತಿ 2.23.19.8) ಥರ್ಡ್-ಪಾರ್ಟಿ ಚಾಟ್‌ಗಳು ಎಂಬ ಹೊಸ ಡಿಸ್‌ಪ್ಲೇ ಆಯ್ಕೆ ನೀಡುತ್ತದೆ. ಈ ಹೊಸ ಫೀಚರ್ಸ್‌ ಅನ್ನು ಎಲ್ಲಾ ವಾಟ್ಸಾಪ್‌ ಬಳಕೆದಾರರಿಗೆ ಬಿಡುಗಡೆ ಮಾಡಲಾಗಿಲ್ಲ. ಪ್ರಸ್ತುತ ಈ ಚಾಟ್ ಫೀಚರ್ಸ್‌ ಅನ್ನು ಬೀಟಾ ಬಳಕೆದಾರರಲ್ಲಿ ಪರೀಕ್ಷಿಸಲಾಗುತ್ತಿದೆ ಎಂದು ಉಲ್ಲೇಖಿಸಿದೆ.

ಎನ್‌ಕ್ರಿಪ್ಟ್ ಮಾಡಲಾದ ಮೆಸೇಜಿಂಗ್ ಆಪ್‌ ಅನ್ನು ವಿವಿಧ ಪ್ಲಾಟ್‌ಫಾರ್ಮ್‌ಗಳಲ್ಲಿ ಮನಬಂದಂತೆ ಕೆಲಸ ಮಾಡುವಂತೆ ಮಾಡಲು ಸಕ್ರಿಯಗೊಳಿಸುವ ನಿಟ್ಟಿನಲ್ಲಿ ಇದು ಮೆಟಾದ ಮೊದಲ ಹೆಜ್ಜೆಯಾಗಿದೆ. ಆದರೆ, ಮೆಟಾ ಇದೀಗ ತನ್ನ ಸ್ವಂತ ಆಸಕ್ತಿಗೆ ಅನುಗುಣವಾಗಿ ವಾಟ್ಸಾಪ್‌ನಲ್ಲಿ ಅಂತಹ ಸೌಲಭ್ಯವನ್ನು ಪರಿಚಯಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ. ಅಷ್ಟಕ್ಕೂ ಈ ಸೌಲಭ್ಯ ನೀಡಲು ಪ್ರಮುಖ ಕಾರಣ ಏನೆಂದರೆ ಯುರೋಪಿಯನ್ ಒಕ್ಕೂಟದ ಡಿಜಿಟಲ್ ಮಾರುಕಟ್ಟೆ ಕಾಯಿದೆ (DMA).

ವಾಟ್ಸಾಪ್‌ನ ಮೂಲ ಕಂಪನಿ ಮೆಟಾವನ್ನು ಯುರೋಪಿಯನ್ ಕಮಿಷನ್ ಡಿಜಿಟಲ್ ಮಾರ್ಕೆಟ್ಸ್ ಆಕ್ಟ್ (DMA) ಅಡಿಯಲ್ಲಿ ಗೇಟ್ ಕೀಪರ್ ಎಂದು ವರ್ಗೀಕರಿಸಿದೆ. ಇದರ ನಂತರ, ವಾಟ್ಸಾಪ್‌ ಕ್ರಾಸ್-ಪ್ಲಾಟ್‌ಫಾರ್ಮ್ ಮೆಸೇಜಿಂಗ್ ಫೀಚರ್ಸ್‌ನ ಬೀಟಾ ಆವೃತ್ತಿಯನ್ನು ಪರಿಚಯಿಸಿದೆ. ಅಂದರೆ ಮಾರ್ಚ್ 2024 ರಿಂದ ಪ್ರಾರಂಭವಾಗುವ ಸಿಗ್ನಲ್ ಮತ್ತು ಟೆಲಿಗ್ರಾಮ್‌ನಂತಹ ಇತರ ಥರ್ಡ್-ಪಾರ್ಟಿ ಮೆಸೇಜಿಂಗ್ ಆಪ್‌ಗಳೊಂದಿಗೆ ವಾಟ್ಸಾಪ್‌ ಕಾರ್ಯನಿರ್ವಹಿಸುವಂತೆ ಮಾಡಬೇಕು.

ಅಂದರೆ ಆ ಆಪ್‌ಗಳ ಬಳಕೆದಾರರು ವಾಟ್ಸಾಪ್‌ ಖಾತೆಯನ್ನು ಹೊಂದಿಲ್ಲದಿದ್ದರೂ ಸಹ ವಾಟ್ಸಾಪ್‌ ನಲ್ಲಿ ಜನರನ್ನು ಸಂಪರ್ಕಿಸಲು ಅನುಮತಿಸುತ್ತದೆ. ಅದರಲ್ಲೂ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಅನ್ನು ಸಂರಕ್ಷಿಸಲಾಗಿದ್ದರೂ, ಕ್ರಾಸ್-ಮೆಸೇಜಿಂಗ್‌ನೊಂದಿಗೆ ಯಾವ ರೀತಿಯ ಫೀಚರ್ಸ್‌ ಲಭ್ಯವಿರುತ್ತವೆ ಎಂಬುದರ ಕುರಿತು ಇನ್ನೂ ಯಾವುದೇ ಮಾಹಿತಿ ತಿಳಿದು ಬಂದಿಲ್ಲ. ಡಿಜಿಟಲ್ ಮಾರ್ಕೆಟ್ಸ್ ಆಕ್ಟ್ (DMA) ಟೆಕ್ ಕಂಪನಿಗಳನ್ನು ನಿಯಂತ್ರಿಸುವ ಗುರಿಯನ್ನು ಹೊಂದಿರುವ ಯುರೋಪಿಯನ್ ಒಕ್ಕೂಟದ ಇತ್ತೀಚಿನ ಕ್ರಮಗಳ ಫಲಿತಾಂಶ ಇದಾಗಿದೆ.

DMA ಕಾಯಿದೆಗೆ ಗೇಟ್‌ಕೀಪರ್‌ಗಳು ಹಲವಾರು ಮಾನದಂಡಗಳನ್ನು ಪೂರೈಸುವ ಅಗತ್ಯವಿದೆ. ಮೊದಲೇ ಇನ್‌ಸ್ಟಾಲ್‌ ಮಾಡಲಾದ ಆಪ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡಲು ಬಳಕೆದಾರರಿಗೆ ಅನುಮತಿ ನೀಡಬೇಕು. ಮೂರನೇ ವ್ಯಕ್ತಿಯ ಡೆವಲಪರ್‌ಗಳಿಗೆ ಅವರ ಡೇಟಾಗೆ ಪ್ರವೇಶವನ್ನು ಅನುಮತಿಸಿ ಮತ್ತು ವಿವಿಧ ಮೆಸೆಜ್‌ ಕಳುಹಿಸುವ ಆಪ್‌ಗಳನ್ನು ಬಳಸುವ ಪ್ರಕ್ರಿಯೆಯನ್ನು ಸರಳಗೊಳಿಸಬೇಕಿದೆ.

WhatsApp ನಲ್ಲಿ ಇತರೆ ಆಪ್‌ಗಳಿಗೂ ಮೆಸೆಜ್‌ ಕಳುಹಿಸಬಹುದು! ಹೊಸ ಕ್ರಾಂತಿ ಆರಂಭ?

ಈ ಮಾನದಂಡಗಳ ಭಾಗವಾಗಿ ಹೊಸ ಕ್ರಾಸ್ ಮೆಸೇಜಿಂಗ್ ಫೀಚರ್ಸ್‌ ಅನ್ನು ಪರಿಚಯಿಸಲು ವಾಟ್ಸಾಪ್‌ ಸಿದ್ಧವಾಗಿದೆ. DMA ನಿರ್ದೇಶನಗಳಿಗೆ ಅನುಗುಣವಾಗಿ, ಮೆಟಾ ಮತ್ತು ಮೈಕ್ರೋಸಾಫ್ಟ್‌ ತಮ್ಮ ಸ್ವಂತ ಮೊಬೈಲ್ ಆಪ್‌ ಅನ್ನು ಅನ್ನು ನವೀಕರಿಸಲು ತಯಾರಿ ನಡೆಸುತ್ತಿವೆ ಎಂದು ತಿಳಿದುಬಂದಿದೆ. ಆಪಲ್‌ನ ಐಮೆಸೆಜ್, ಮೈಕ್ರೋಸಾಫ್ಟ್‌ನ ಬಿಂಗ್‌ ಸರ್ಚ್ ಎಂಜಿನ್ ಮತ್ತು ಎಡ್ಜ್ ಬ್ರೌಸರ್ ಈ ಮಾನದಂಡಗಳನ್ನು ಪೂರೈಸುತ್ತದೆಯೇ ಎಂದು ಯುರೋಪಿಯನ್ ಕಮಿಷನ್ ಪರಿಶೀಲನೆ ನಡೆಸುತ್ತಿದೆ.

Best Mobiles in India

English summary
This special feature is coming soon on WhatsApp. That means WhatsApp users will soon be able to send messages to users of other apps, WABetaInfo reports.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+