Home
ಸುದ್ದಿಜಾಲ

ಬದಲಾಗಲಿದೆ ವಾಟ್ಸಾಪ್‌... ಇನ್ಮುಂದೆ ಹೊಸ ವಾಟ್ಸಾಪ್‌ ಹೇಗಿರಲಿದೆ ಗೊತ್ತಾ?

ವಾಟ್ಸಾಪ್‌ (Whatsapp) ಇಂದು ಎಲ್ಲರಿಗೂ ಅಗತ್ಯವಾದ ಮೆಸೆಜಿಂಗ್‌ ಪ್ಲಾಟ್‌ಫಾರ್ಮ್‌ ಆಗಿದೆ. ಈ ಮೂಲಕ ತ್ವರಿತವಾಗಿ ಬೇಕೆಂದರವ ಜೊತೆ ಸಂಪರ್ಕದಲ್ಲಿ ಇರಬಹುದಾಗಿದೆ. ಈ ನಡುವೆ ಆಗಾಗ್ಗೆ ಹೊಸ ಹೊಸ ಫೀಚರ್ಸ್‌ ಅನ್ನು ಸಹ ವಾಟ್ಸಾಪ್‌ ಪರಿಚಯಿಸುತ್ತಿದ್ದು, ಈ ಮೂಲಕ ಬಳಕೆದಾರರಿಗೆ ಉತ್ತಮ ಅನುಭವ ನೀಡುತ್ತಾ ಬರುತ್ತಿದೆ.

ಹೌದು, ವಾಟ್ಸಾಪ್‌ ಅನ್ನು ಇಂದು ಎಲ್ಲರೂ ಬಳಕೆ ಮಾಡುತ್ತಿದ್ದಾರೆ. ಅದರಲ್ಲೂ ಈ ಆಪ್‌ನಲ್ಲಿ ಹೆಚ್ಚಿನ ಭದ್ರತಾ ಫೀಚರ್ಸ್‌ ಇರುವುದರಿಂದ ಎಂತಹುದೇ ಖಾಸಗಿ ಮಾಹಿತಿಯನ್ನಾದರೂ ಈ ಮೂಲಕ ಹಂಚಿಕೊಳ್ಳಲಾಗುತ್ತದೆ. ಈ ಎಲ್ಲಾ ಬೆಳವಣಿಗೆ ನಡುವೆ ವಾಟ್ಸಾಪ್‌ ಹೊಸ ಐಕಾನ್‌ಗಳು, ಬಣ್ಣಗಳೊಂದಿಗೆ ಆಂಡ್ರಾಯ್ಡ್ ಬಳಕೆದಾರರಿಗೆ ಯುಐ ವಿನ್ಯಾಸವನ್ನು ಬದಲಾಯಿಸಲು ವಾಟ್ಸಾಪ್‌ ಸಜ್ಜಾಗಿದೆ ಎಂದು ತಿಳಿದುಬಂದಿದೆ. ಹಾಗಿದ್ರೆ, ಏನಿದು ಹೊಸ ವಿಚಾರ?, ಏನೆಲ್ಲಾ ಹೊಸತನ ವಾಟ್ಸಾಪ್‌ನಲ್ಲಿ ಇರಲಿದೆ ಎಂಬ ಬಗ್ಗೆ ತಿಳಿಸಿಕೊಡಲಾಗಿದೆ ಓದಿರಿ.

ಬದಲಾಗಲಿದೆ ವಾಟ್ಸಾಪ್‌... ಇನ್ಮುಂದೆ ಹೊಸ ವಾಟ್ಸಾಪ್‌ ಹೇಗಿರಲಿದೆ ಗೊತ್ತಾ?

ಬದಲಾಗಲಿದೆ ವಾಟ್ಸಾಪ್?: ಮೆಟಾ ತನ್ನ ಜನಪ್ರಿಯ ಮೆಸೇಜಿಂಗ್ ಆಪ್‌ ಆಗಿರುವ ವಾಟ್ಸಾಪ್‌ಗೆ ಫೇಸ್ ಲಿಫ್ಟ್ ನೀಡಲು ಮುಂದಾಗಿದೆ ಎಂದು ತಿಳಿದುಬಂದಿದೆ. ವಾಟ್ಸಾಪ್‌ನ UI ನ ಒಟ್ಟಾರೆ ನೋಟವನ್ನು ಪರಿವರ್ತಿಸುವ ಇಂಟರ್ಫೇಸ್‌ನಲ್ಲಿನ ಬದಲಾವಣೆಗಳನ್ನು ಒಳಗೊಂಡಂತೆ ಕಂಪನಿಯು ಹೊಸ ಫೀಚರ್ಸ್‌ ಅನ್ನು ಅಭಿವೃದ್ಧಿಪಡಿಸುತ್ತಿದೆ ಎಂದು ವರದಿಯಾಗಿದೆ. ಈ ಸಂಬಂಧ Wabetainfo ವರದಿ ಮಾಡಿದೆ. ರದಿ ಪ್ರಕಾರ ಐಓಎಸ್‌ ಮತ್ತು ಆಂಡ್ರಾಯ್ಡ್‌ ಆಪ್‌ಗಳಿಗೆ ಬಳಕೆದಾರರ ಇಂಟರ್ಫೇಸ್ (UI) ಅನ್ನು ಸುಧಾರಿಸಲು ವಾಟ್ಸಾಪ್ ಕಾರ್ಯನಿರ್ವಹಿಸುತ್ತಿದೆಯಂತೆ.

ಇನ್ನು ವಾಟ್ಸಾಪ್ ತನ್ನ ಬಳಕೆದಾರ ಇಂಟರ್ಫೇಸ್ (UI) ಅನ್ನು ತಾಜಾ ಮತ್ತು ಆಧುನಿಕ ನೋಟವನ್ನು ನೀಡಲು ಪರಿಷ್ಕರಿಸುವ ಪ್ರಕ್ರಿಯೆಯಲ್ಲಿದೆ ಎಂದು ವರದಿಯಲ್ಲಿ ಉಲ್ಲೇಖ ಮಾಡಲಾಗಿದ್ದು, ಸದ್ಯದಲ್ಲಿಯೇ ತನ್ನ ಪ್ರಸ್ತುತ ಪರಿಚಿತ UI ನಿಂದ ನಿರ್ಗಮಿಸುತ್ತದೆ ಎಂದು ತಿಳಿಸಲಾಗಿದ್ದು, ಹೊಸ ಐಕಾನ್‌ಗಳು ಎಂಟ್ರಿ ಕೊಡಬಹುದು ಎನ್ನಲಾಗಿದೆ. ಜೊತೆಗೆ. ಲೈಟ್ ಮತ್ತು ಡಾರ್ಕ್ ಮೋಡ್‌ಗಳೆರಡಕ್ಕೂ ಪ್ರಧಾನವಾದ ಹಸಿರು ಬಣ್ಣದ ಥೀಮ್ ಮತ್ತು ಚಾಟ್ ಬಬಲ್ ಬಣ್ಣಗಳು ಮತ್ತು ಫ್ಲೋಟಿಂಗ್ ಆಕ್ಷನ್ ಬಟನ್‌ಗೆ ಬದಲಾವಣೆಗಳನ್ನು ಕಾಣಬಹುದು ಎಂದು ಹೇಳಲಾಗುತ್ತಿದೆ.

ಅದರಲ್ಲೂ ಹೊಸ ಇಂಟರ್ಫೇಸ್‌ನೊಂದಿಗೆ ವಾಟ್ಸಾಪ್‌ ಹಸಿರು ಬಣ್ಣವನ್ನು ತೆಗೆದುಹಾಕುವ ಬಗ್ಗೆಯೂ ಯೋಜಿಸಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಹೊಸ ಬಣ್ಣ ಇನ್ಮುಂದೆ ವಾಟ್ಸಾಪ್‌ನಲ್ಲಿ ಕಾಣಿಸಿಕೊಳ್ಳುತ್ತದೆ ಎಂದು ವರದಿಗಳಿಂದ ತಿಳಿದುಬಂದಿದೆ. ಅದರಲ್ಲೂ ವಿಶೇಷವಾಗಿ ಆಂಡ್ರಾಯ್ಡ್ ಬೀಟಾ ಆವೃತ್ತಿ 2.23.20.10 ನಲ್ಲಿ ಈ ನವೀಕರಣಗಳು ಟಾಪ್ ಬಾರ್‌ಗೆ ಬದಲಾವಣೆಗಳನ್ನು ಒಳಗೊಂಡಿವೆ ಎನ್ನಲಾಗಿದೆ.

iOS 23.19.1.72 ಅಪ್‌ಡೇಟ್‌ಗಾಗಿ ವಾಟ್ಸಾಪ್‌ ಬೀಟಾದ ಅಭಿವೃದ್ಧಿಯ ಸಮಯದಲ್ಲಿ ಇದೇ ರೀತಿಯ ಸುಧಾರಣೆಗಳನ್ನು ಗಮನಿಸಲಾಗಿದೆ ಎಂದು ವರದಿಯಿಂದ ತಿಳಿದುಬಂದಿದೆ. ಗಮನಾರ್ಹವಾಗಿ, ಈ UI ಬದಲಾವಣೆಗಳು ಇನ್ನೂ ಅಭಿವೃದ್ಧಿಯಲ್ಲಿರುವಾಗಲೇ ನವೀಕರಿಸಿದ UI ಯ ಅಧಿಕೃತ ಬಿಡುಗಡೆಯ ಮೊದಲು ವಾಟ್ಸಾಪ್‌ ಹೆಚ್ಚುವರಿ ಸುಧಾರಣೆಗಳನ್ನು ಪರಿಗಣಿಸುತ್ತಿರಬಹುದು ಎಂದು ವರದಿ ಸೂಚಿಸುತ್ತದೆ.

ಈ ನಡುವೆ ವಾಟ್ಸಾಪ್‌ ನಿರ್ದಿಷ್ಟವಾಗಿ ಹಳೆಯ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್‌ಗಳ ಬಳಕೆದಾರರನ್ನು ಗುರಿಯಾಗಿಟ್ಟುಕೊಂಡು ಎಚ್ಚರಿಕೆ ನೀಡಿದೆ. ಆಂಡ್ರಾಯ್ಡ್ ಓಎಸ್ ಆವೃತ್ತಿ 4.1 ಅಥವಾ ಅದಕ್ಕಿಂತ ಹಳೆಯದಾದ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ಬೆಂಬಲವನ್ನು ನಿಲ್ಲಿಸುವುದಾಗಿ ತಿಳಿಸಿದೆ. ಅಂದರೆ ಈ ಹಳೆಯ ಡಿವೈಸ್‌ಗಳನ್ನು ಹೊಂದಿರುವ ಬಳಕೆದಾರರು ಇನ್ನು ಮುಂದೆ ಆಪ್‌ಗಳಿಗಾಗಿ ನವೀಕರಣಗಳನ್ನು ಸ್ವೀಕರಿಸುವುದಿಲ್ಲ ಮತ್ತು ಶೀಘ್ರದಲ್ಲೇ ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ವಾಟ್ಸಾಪ್‌ ಅನ್ನು ಬಳಸಲು ಸಾಧ್ಯವಾಗುವುದಿಲ್ಲ.

ಬದಲಾಗಲಿದೆ ವಾಟ್ಸಾಪ್‌... ಇನ್ಮುಂದೆ ಹೊಸ ವಾಟ್ಸಾಪ್‌ ಹೇಗಿರಲಿದೆ ಗೊತ್ತಾ?

ಆಂಡ್ರಾಯ್ಡ್‌ ಓಎಸ್‌ ಆವೃತ್ತಿ 4.1 ಮತ್ತು ಅದಕ್ಕಿಂತ ಹಳೆಯದಾದ ಸ್ಮಾರ್ಟ್‌ಫೋನ್‌ಗಳಿಗೆ ಬೆಂಬಲದ ಅಂತ್ಯವು ಅಕ್ಟೋಬರ್ 24 ರ ನಂತರ ಜಾರಿಗೆ ಬರಲಿದೆ ಎಂದು ವಾಟ್ಸಾಪ್‌ ಹೇಳಿದೆ. ಈ ಡಿವೈಸ್‌ಗಳು ಇತ್ತೀಚಿನ ಭದ್ರತಾ ಅಪ್‌ಡೇಟ್‌ಗಳನ್ನು ಹೊಂದಿಲ್ಲದಿರಬಹುದು ಅಥವಾ ವಾಟ್ಸಾಪ್‌ ಅನ್ನು ಚಲಾಯಿಸಲು ಅಗತ್ಯವಿರುವ ಕಾರ್ಯವನ್ನು ಹೊಂದಿರದಿರಬಹುದು ಎಂದು ವಾಟ್ಸಾಪ್‌ನ ಅಧಿಕೃತ ಟಿಪ್ಪಣಿಯಲ್ಲಿ ಉಲ್ಲೇಖ ಮಾಡಲಾಗಿದೆ.

Best Mobiles in India

English summary
It is known that WhatsApp is all set to change the UI design for Android users with new icons, colors.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+