Home
ಸುದ್ದಿಜಾಲ

ಶೀಘ್ರದಲ್ಲೇ ವಾಟ್ಸಾಪ್‌ನಲ್ಲಿ ವಿಶೇಷ ಫೀಚರ್ಸ್‌; ಇದು ಎಲ್ಲರಿಗೂ ಅನುಕೂಲ!

ವಾಟ್ಸಾಪ್ ಪ್ರತಿ ಕ್ಷಣವೂ ತನ್ನ ಬಳಕೆದಾರರಿಗೆ ವಿಭಿನ್ನ ಅನುಭವ ನೀಡುವ ಆಲೋಚನೆಯಲ್ಲೇ ಇರುತ್ತದೆ. ಇದಕ್ಕೆ ನಿದರ್ಶನ ಎಂಬಂತೆ ಈಗಾಗಲೇ ಹಲವಾರು ಫೀಚರ್ಸ್‌ಗಳನ್ನು ಪರಿಚಯಿಸಲಾಗಿದ್ದು, ಈ ಮೂಲಕ ಬಳಕೆದಾರರು ವಾಟ್ಸಾಪ್‌ನಲ್ಲಿ ಇನ್ನಷ್ಟು ಸಮಯ ಕಳೆಯಲು ಮುಂದಾಗಿದ್ದಾರೆ. ಇದರ ನಡುವೆ ಮತ್ತೊಂದು ಹೊಸ ಫೀಚರ್ಸ್‌ ಲಭ್ಯವಾಗಲಿದೆ.

ಹೌದು, ವಾಟ್ಸಾಪ್‌ ಇದೀಗ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಅತ್ಯಂತ ಅಗತ್ಯವಾದ ಹಾಗೂ ವಾಟ್ಸಾಪ್‌ ಕರೆಯಲ್ಲಿ ಹೆಚ್ಚು ತಲ್ಲೀನವಾಗುವ ಜನರಿಗೆ ಅನುಕೂಲ ಆಗುವ ಫೀಚರ್ಸ್‌ ಒಂದನ್ನು ಘೋ‍ಷಣೆ ಮಾಡಿದೆ. ಈ ಮೂಲಕ ಅಪರಿಚಿತ ಕರೆ ಹಾಗೂ ಅನವಶ್ಯಕ ಕರೆಗಳಿಂದ ಮುಕ್ತಿ ಪಡೆಯಬಹುದು. ಹಾಗಿದ್ರೆ, ಈ ಹೊಸ ಫೀಚರ್ಸ್‌ ಹೆಸರೇನು?, ಬಳಕೆದಾರರಿಗೆ ಇದರಿಂದ ಆಗುವ ಪ್ರಯೋಜನ ಏನು? ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಶೀಘ್ರದಲ್ಲೇ ವಾಟ್ಸಾಪ್‌ನಲ್ಲಿ ವಿಶೇಷ ಫೀಚರ್ಸ್‌; ಇದು ಎಲ್ಲರಿಗೂ ಅನುಕೂಲ!

ಅನಾಮಿಕ ಕರೆಯನ್ನು ಮ್ಯೂಟ್‌ ಮಾಡಿ (silence unknown callers)

ನೀವು ವಾಟ್ಸಾಪ್‌ ನಲ್ಲಿ ಸ್ಪ್ಯಾಮ್ ಕರೆಗಳಿಂದ ಬೇಸತ್ತಿದ್ದೀರಾ?, ಅಥವಾ ಅಪರಿಚಿತ ಸಂಪರ್ಕಗಳಿಂದ ಬರುವ ಕರೆಗಳು ನಿಮಗೆ ಬೇಸರ ಉಂಟು ಮಾಡುತ್ತಿವೆಯೇ?. ಚಿಂತೆ ಬೇಡ ಇನ್ಮುಂದೆ ಇದಕ್ಕೆಲ್ಲಾ ಫುಲ್‌ಸ್ಟಾಪ್‌ ಇಡಬಹುದು. ಯಾಕೆಂದರೆ ಮೆಟಾ ಮಾಲೀಕತ್ವದ ವಾಟ್ಸಾಪ್‌ ಈ ಎಲ್ಲಾ ಅಪರಿಚಿತ ಸಂಖ್ಯೆಗಳು ಅಥವಾ ಸೇವ್‌ ಮಾಡಿರದ ಸಂಪರ್ಕಗಳಿಂದ ಬರುವ ಕರೆಗಳ ವಿರುದ್ಧ ಕ್ರಮ ಜರುಗಿಸುವ ಫೀಚರ್ಸ್‌ ಅನ್ನು ಪರಿಚಯಿಸುತ್ತಿದೆ. ಅಂದರೆ, ಅನಾಮಿಕ ಕರೆಯನ್ನು ಮ್ಯೂಟ್‌ ಮಾಡಬಹುದು

ಇದರ ಬಳಕೆ ಹೇಗೆ?

ಆಂಡ್ರಾಯ್ಡ್‌ ಬಳಕೆದಾರರಿಗೆ ಈ ಫೀಚರ್ಸ್‌ ಲಭ್ಯವಾದ ನಂತರ ಅವರು ಆಪ್‌ನ ಸೆಟ್ಟಿಂಗ್‌ ವಿಭಾಗದಲ್ಲಿ 'ಅನಾಮಿಕ ಕರೆ ಮಾಡುವವರನ್ನು ಮ್ಯೂಟ್‌ ಮಾಡು' ಎಂಬ ಫೀಚರ್ಸ್‌ ಅನ್ನು ಪಡೆದುಕೊಳ್ಳಬಹುದು. ಇದರಲ್ಲಿ ಆನ್‌ ಹಾಗೂ ಆಫ್‌ ಎಂಬ ಆಯ್ಕೆಯನ್ನು ನೀಡಲಾಗಿದ್ದು, ನೀವು ಇದನ್ನು ಆಫ್‌ ಮಾಡಿದಾಗ ಯಾವುದೇ ಕಾರಣಕ್ಕೂ ನಿಮ್ಮ ಫೋನ್‌ಗೆ ಅನಾಮಿಕ ವಾಟ್ಸಾಪ್‌ ಕಾಲ್‌ ಬರುವುದಿಲ್ಲ. ಅದಾಗ್ಯೂ ನೋಟಿಫಿಕೇಶನ್‌ ಬಾರ್‌ನಲ್ಲಿನ ಕರೆಗಳ ಕುರಿತು ಬಳಕೆದಾರರು ಮಾಹಿತಿ ಪಡೆದುಕೊಳ್ಳಲು ಅವಕಾಶ ನೀಡಲಾಗುತ್ತದೆ.

ಎಂದಿನಿಂದ ಲಭ್ಯ?

ಇನ್ನು Wabetainfo ವರದಿ ಪ್ರಕಾರ ಈ ಫೀಚರ್ಸ್‌ ಪ್ರಸ್ತುತ ಆಂಡ್ರಾಯ್ಡ್‌ ಡಿವೈಸ್‌ಗಳಿಗೆ ಪರಿಚಯಿಸಲು ಮುಂದಾಗಿದ್ದು, ಅಭಿವೃದ್ಧಿ ಹಂತದಲ್ಲಿದೆ. ಹಾಗೆಯೇ ಶೀಘ್ರದಲ್ಲೇ ಪರೀಕ್ಷೆ ಉದ್ದೇಶಕ್ಕೆ ಲಭ್ಯವಾಗುವ ಸಾಧ್ಯತೆ ಇದೆ ಎಂದು ಉಲ್ಲೇಖಿಸಿದೆ. ಅಂದರೆ ಇನ್ನೇನು ಕೆಲವು ದಿನಗಳಲ್ಲಿ ಈ ಅನಾಮಿಕ ಕರೆಯನ್ನು ಮ್ಯೂಟ್‌ ಮಾಡಿ ಎಂಬ ಸೌಲಭ್ಯವನ್ನು ಬಳಕೆ ಮಾಡಿಕೊಳ್ಳಲು ನೀವು ಮುಂದಾಗಬಹುದು.

ಶೀಘ್ರದಲ್ಲೇ ವಾಟ್ಸಾಪ್‌ನಲ್ಲಿ ವಿಶೇಷ ಫೀಚರ್ಸ್‌; ಇದು ಎಲ್ಲರಿಗೂ ಅನುಕೂಲ!

ಸ್ಪ್ಲಿಟ್ ಸ್ಕ್ರೀನ್ ಮೋಡ್‌ ಫೀಚರ್ಸ್‌

ಇದರ ನಡುವೆ ಕೆಲವು ದಿನಗಳ ಹಿಂದೆಯಷ್ಟೇ ವಾಟ್ಸಾಪ್‌ ಸ್ಪ್ಲಿಟ್ ಸ್ಕ್ರೀನ್ ಮೋಡ್‌ ಫೀಚರ್ಸ್‌ ಬಗ್ಗೆಯೂ ಘೋಷಣೆ ಮಾಡಿದೆ. ಈ ಮೂಲಕ ಟ್ಯಾಬ್ಲೆಟ್ ಬಳಕೆದಾರರು ಒಮ್ಮೆಲೆ ವಾಟ್ಸಾಪ್‌ ಸಂಬಂಧ ಎರಡು ಕೆಲಸಗಳನ್ನು ಮಾಡಬಹುದು. ಅಂದರೆ ಒಂದು ಕಡೆ ಚಾಟ್‌ ವಿಭಾಗವನ್ನು ತೆರೆದುಕೊಂಡು ಸಂವಹನ ನಡೆಸಬಹುದು, ಮತ್ತೊಂದು ಕಡೆ ಸ್ಟೇಟಸ್‌ ಅಥವಾ ಕರೆ ವಿಭಾಗದಲ್ಲಿ ಸಕ್ರಿಯವಾಗಬಹುದು.

ಇನ್ನು ಟ್ಯಾಬ್ಲೆಟ್ ಆವೃತ್ತಿಗಾಗಿ ಹೊಸ ಸ್ಪ್ಲಿಟ್ ವಿಂಡೋ ಫೀಚರ್ಸ್‌ ಅನ್ನು ಅಭಿವೃದ್ಧಿಪಡಿಸುತ್ತಿದೆ ಎಂದು Wabetainfo ತಿಳಿಸಿದ್ದು, ಪ್ರಸ್ತುತ ಈ ಫೀಚರ್ಸ್‌ ಟ್ಯಾಬ್ಲೆಟ್‌ಗಳಿಗಾಗಿ ಆಂಡ್ರಾಯ್ಡ್‌ ಬೀಟಾ ಆವೃತ್ತಿಯಲ್ಲಿ ಪರೀಕ್ಷೆಗಾಗಿ ಲಭ್ಯವಿದ್ದು, ಶೀಘ್ರದಲ್ಲೇ ಎಲ್ಲರಿಗೂ ಲಭ್ಯವಾಗಲಿದೆ ಎನ್ನಲಾಗಿದೆ. ಹಾಗೆಯೇ ಆಂಡ್ರಾಯ್ಡ್‌2.23.5.9 ನಲ್ಲಿ ಈ ಸೌಲಭ್ಯ ಲಭ್ಯವಿರಲಿದೆ ಎಂದು ವರದಿಯಾಗಿದೆ.

ಶೀಘ್ರದಲ್ಲೇ ವಾಟ್ಸಾಪ್‌ನಲ್ಲಿ ವಿಶೇಷ ಫೀಚರ್ಸ್‌; ಇದು ಎಲ್ಲರಿಗೂ ಅನುಕೂಲ!

ಈ ಫೀಚರ್ಸ್‌ ಆಂಡ್ರಾಯ್ಡ್‌ ಬಳಕೆದಾರರಿಗೆ ಲಭ್ಯವಾದ ನಂತರ ಟ್ಯಾಬ್ಲೆಟ್‌ನ ದೊಡ್ಡ ಡಿಸ್‌ಪ್ಲೇ ಬಳಕೆ ಮಾಡಿಕೊಂಡು ಏಕಕಾಲದಲ್ಲಿ ಬಹುಕಾರ್ಯವನ್ನು ಮಾಡಬಹುದು. ಇದು ಬಳಕೆದಾರರ ಸಮಯವನ್ನು ಉಳಿಸುವುದಲ್ಲದೇ, ವಿಶೇಷ ಅನುಭವವನ್ನು ನೀಡುತ್ತದೆ.

Best Mobiles in India

English summary
WhatsApp may introduced a feature called silence unknown callers, through which users can get rid of anonymous and spam calls.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+